ಪಂಚಮಸಾಲಿಗಳ ಶಾಪ ತಟ್ಟಿದ್ದಕ್ಕೆ ಯಡಿಯೂರಪ್ಪ ಸಿಎಂ ಸ್ಥಾನ ಕಳೆದುಕೊಂಡರು; ವಿಜಯಾನಂದ ಕಾಶಪ್ಪನವರ್

ಯಡಿಯೂರಪ್ಪನವರಿಗೆ ಪಂಚಮಸಾಲಿ ಸಮುದಾಯದ ಹಿರಿಯರ ಪಾಪ ಹತ್ತಿತು, ಬೊಮ್ಮಾಯಿ ಸಾಥ್ ಕೊಟ್ಟಿದ್ದಕ್ಕೆ ಪುಣ್ಯಾ ಬಂತು ಎಂದು ಮಾಜಿ ಶಾಸಕ ಮತ್ತು ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್​ ಹೇಳಿಕೆ ನೀಡಿದ್ದಾರೆ.

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್.

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್.

 • Share this:
  ಬಾಗಲಕೋಟೆ (ಆಗಸ್ಟ್​ 22); ಪಂಚಮಸಾಲಿ ಲಿಂಗಾಯತರ ಶಾಪ ತಟ್ಟಿದ್ದರಿಂದಾ ಗಿಯೇ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ತಮ್ಮ ಸಿಎಂ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಇನ್ನೂ ಬಸವರಾಜ ಬೊಮ್ಮಾಯಿ ಸಾಥ್ ನೀಡಿದ್ದಕ್ಕೆ ಪುಣ್ಯ ಬಂದು ಅವರು ಅನಿರೀಕ್ಷಿತವಾಗಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದಾರೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್​ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಂದು ಬಾಗಲಕೋಟೆಯ ಕೂಡಲಸಂಗಮದಲ್ಲಿ ನಡೆದ ಪಂಚಮಸಾಲಿ ಸಮುದಾಯದ ಮುಖಂಡರ ಸಭೆಯಲ್ಲಿ ಈ ಬಗ್ಗೆ ಮಾತನಾಡಿ ರುವ ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ವಿಜಯಾನಂದ ಕಾಶಪ್ಪನವರ್, "ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಆಗ್ರಹಿ ಕಳೆದ ಹಲವು ದಿನಗಳಿಂದ ದೊಡ್ಡ ಹೋರಾಟ ನಡೆಯುತ್ತಿದೆ. ಆದರೆ, ಬಿ.ಎಸ್. ಯಡಿಯೂರಪ್ಪ ಈ ಹೋರಾಟವನ್ನು ಹತ್ತಿಕ್ಕಲು ಮುಂದಾಗಿದ್ದರು.

  ಆದರೆ, ​ಈ ಹೋರಾಟಕ್ಕೆ ಯಾವುದೇ ಧಕ್ಕೆ ಬರದಂತೆ, ಸರ್ಕಾರದ ಪ್ರತಿನಿಧಿಯಾಗಿ ಮಧ್ಯಸ್ಥಿಕೆ ವಹಿಸಿ ಬೊಮ್ಮಾಯಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದ್ದರು. ಅದಕ್ಕೆ ನಮ್ಮ ಪೂಜ್ಯರಿಗೆ, ನಿಮ್ಮ ಆಶೀರ್ವಾದ ಪಡೆದು ಮುಖ್ಯಮಂತ್ರಿ ಆಗಿದ್ದೇನೆ ಅಂತ ಬೊಮ್ಮಾಯಿ ಹೇಳಿದ್ದರು. ಯಡಿಯೂರಪ್ಪನವರು ಮೀಸಲಾತಿ ಕೊಡುವುದಿಲ್ಲ ಅಂತ ವಿಧಾನಸೌಧದಲ್ಲಿ ಹೇಳಿದ ಕಾರಣಕ್ಕೆ ನಾವು ಅವರ ಪ್ರತಿಕೃತಿ ದಹನ ಮಾಡಿದ್ವಿ, ನಾನು ಸಹ ಶಾಪ ಹಾಕಿದ್ದೆ.

  ಮೀಸಲಾತಿ ಹೋರಾಟದ ವೇಳೆ ನಮ್ಮ ಪೂಜ್ಯರು ಬಿಸಿಲು, ಗಾಳಿ ಮಳೆಯಲ್ಲಿ ಹೋರಾಟ ಮಾಡ್ತಿದಾರೆ ನಿಮಗೆ ಕಣ್ಣು ಕಾಣಲ್ವಾ? ನೀವು ಮೀಸಲಾತಿ ಕೊಡದಿದ್ದರೆ ನಿಮಗೆ ಪಾಪ ಹತ್ತುತ್ತೇ ಅಂತ ನಾವು ಶಪಿಸಿದ್ದೆವು. ಆ ಪಾಪ ಹತ್ತಿ ಬಿ.ಎಸ್. ಯಡಿಯೂರಪ್ಪ ಇದೀಗ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಯಡಿಯೂರಪ್ಪ ನವರಿಗೆ ಪಾಪ ಹತ್ತಿತು, ಬೊಮ್ಮಾಯಿ ಸಾಥ್ ಕೊಟ್ಟಿದ್ದಕ್ಕೆ ಪುಣ್ಯಾ ಬಂತು" ಎಂದು ವಿಜಯಾನಂದ ಕಾಶಪ್ಪನವರ್​ ತಿಳಿಸಿದ್ದಾರೆ.

  ಇದನ್ನೂ ಓದಿ: Afghanistan Crisis| ಅಫ್ಘನ್​ನಿಂದ ಮತ್ತಷ್ಟು ಭಾರತೀಯರ ರಕ್ಷಣೆ; 7 ಮಂದಿ ಕನ್ನಡಿಗರು ತಾಯ್ನಾಡಿಗೆ ವಾಪಸ್

  ಇನ್ನೂ 2ಎ ಮೀಸಲಾತಿ ಬಗ್ಗೆ ಮಾತನಾಡಿರುವ ವಿಜಯಾನಂದ ಕಾಶಪ್ಪನವರ್, "ಮುಖ್ಯಮಂತ್ರಿ ಬೊಮ್ಮಾಯಿ ಅವರು ಮೊನ್ನೆ ಕೂಡ ಒಳ್ಳೆಯ ಭಾವನೆ ವ್ಯಕ್ತಪಡಿಸಿದ್ದಾರೆ. ಮೀಸಲಾತಿ ಕೊಡುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ. ಹೀಗಾಗಿ ಶೀಘ್ರದಲ್ಲೇ ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಗುವ ವಿಶ್ವಾಸ ಇದೆ" ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

  ಕಳೆದ ಮಾರ್ಚ್​ ತಿಂಗಳಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯ 2A ಮೀಸಲಾತಿಗೆ ಆಗ್ರಹಿಸಿ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಮುಂದಾಗಿತ್ತು. ಸತತ 23 ದಿನಗಳ ಕಾಲ ಉತ್ತರ ಕರ್ನಾಟಕದಿಂದ 712 ಕಿಲೋ ಮೀಟರ್ ಪಾದಯಾತ್ರೆ ಮಾಡಿ ಬೆಂಗಳೂರಿಗೆ ಬಂದು ಸೇರಿತ್ತು. ಆದರೆ, ಆ ಸಮಯದಲ್ಲಿ ವಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತುಕತೆಯಿಂದಾಗಿ ಹೋರಾಟಕ್ಕೆ ತಾತ್ಕಾಲಿಕ ತೆರೆ ಬಿದ್ದಿತ್ತು.

  ಇದನ್ನೂ ಓದಿ: Murder Case| ಮಂಡ್ಯ; ಹತ್ತು ವರ್ಷ ಜೈಲು ಶಿಕ್ಷೆ ಅನುಭವಿಸಿ ಮನೆಗೆ ಮರಳಿ ಹೆಂಡತಿಯ ಕತ್ತು ಸೀಳಿದ ಪಾಪಿ ಗಂಡ!

  ಅಂದಿನ ಸಿಎಂ ಯಡಿಯೂರಪ್ಪ ಅಧಿವೇಶನದಲ್ಲೇ ಮೀಸಲಾತಿ ಬೇಡಿಕೆ ಈಡೇರಿಸಲು ಬದ್ಧ, ಸಮಯಾವಕಾಶ ಕೊಡಿ ಅಂತ ಕೇಳಿಕೊಂಡ ಹಿನ್ನೆಲೆ ಪಂಚಮಸಾಲಿ ಹೋರಾಟಗಾರರು ಆರು ತಿಂಗಳ ಗುಡುವು ಕೊಟ್ಟು ಹೋರಾಟದಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿದ್ದರು. ಆದರೆ, ಇದೀಗ ಆ ಆರು ತಿಂಗಳ ಗಡುವು ಮುಗಿಯುವ ಹಂತಕ್ಕೆ ಬಂದಿದ್ದು, ಇದೀಗ ಮತ್ತೊಮ್ಮೆ ಪಂಚಮಸಾಲಿ ಸಮುದಾಯದ ನಾಯಕರು ಮೀಸಲಾತಿ ಕೂಗನ್ನು ಮುಂದಿಟ್ಟಿದ್ದಾರೆ.  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: