ಕೊಳ್ಳೇಗಾಲದಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಬಾಲಕಿಯ ಪೋಷಕರು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಸರ್ಕಲ್ ಇನ್ಸ್​​ಪೆಕ್ಟರ್ ಶ್ರೀಕಾಂತ್ ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿ ವೇಣುಗೋಪಾಲನನ್ನು ಬಂಧಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಚಾಮರಾಜನಗರ(ನವೆಂಬರ್ 05 ): ಏನೂ ಅರಿಯದ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ. ಕೊಳ್ಳೇಗಾಲ ಪಟ್ಟಣದ ಮಂಜುನಾಥನಗರದಲ್ಲಿ ಐದು ವರ್ಷದ ಬಾಲಕಿಯನ್ನು ಅದೇ ಬಡಾವಣೆಯ ವೇಣುಗೋಪಾಲ ಎಂಬ 55 ವರ್ಷದ ವ್ಯಕ್ತಿ ಪುಸಲಾಯಿಸಿ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರವೆಸಗಿದ್ದಾನೆ. ಎದುರು ಮನೆಯಿಂದ ಪ್ರತಿ ದಿನ ಆಟವಾಡಲು ಬರುತ್ತಿದ್ದ ಮುಗ್ಧ ಬಾಲಕಿಯ ಮೇಲೆ ಕಾಮುಕ ದೃಷ್ಟಿ ಬೀರಿದ ವೇಣುಗೋಪಾಲ್ ಯಾರು ಇಲ್ಲದ ಸಮಯದಲ್ಲಿ ಬಾಲಕಿಯನ್ನು ಮನೆಯೊಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ

ಈ ಘಟನೆ ಕಳೆದ ಸೋಮವಾರವೇ ನಡೆದಿದೆ ಎನ್ನಲಾಗಿದೆ. ಆದರೆ, ಇಂದು ತನ್ನ ಗುಪ್ತಾಂಗ ನೋವಾಗುತ್ತಿದೆ ಎಂದು ಬಾಲಕಿ ತನ್ನ ತಾಯಿಗೆ ತೋರಿಸಿದ್ದಾಳೆ. ಅನುಮಾನ ಬಂದು ಬಾಲಕಿಯನ್ನು ವಿಚಾರಿಸಲಾಗಿದ್ದು, ಎದುರು ಮನೆಯ ವ್ಯಕ್ತಿ ತನ್ನ ಮೇಲೆ ನಡೆಸಿದ ಕೃತ್ಯವನ್ನು ತಾಯಿಗೆ ತಿಳಿಸಿದ್ದಾಳೆ.

ಇದನ್ನೂ ಓದಿ : ರಮೇಶ್ ಸಂಗಾ ವಿರುದ್ಧ ಕ್ರಮ ಕೈಗೊಳ್ಳದ ಡಿಸಿ, ಸಿಇಒ ಬಳೆ ತೊಟ್ಟುಕೊಳ್ಳಲಿ: ಆಂದೋಲಶ್ರೀ ವಿವಾದಾತ್ಮಕ ಹೇಳಿಕೆ

ಈ ಹಿನ್ನಲೆಯಲ್ಲಿ ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಿಸಲಾಗಿದ್ದು ಅತ್ಯಾಚಾರ ಎಸಗಿರುವುದು ದೃಢಪಟ್ಟಿದೆ. ನಂತರ ಬಾಲಕಿಯ ಪೋಷಕರು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಸರ್ಕಲ್ ಇನ್ಸ್​​ಪೆಕ್ಟರ್ ಶ್ರೀಕಾಂತ್ ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿ ವೇಣುಗೋಪಾಲನನ್ನು ಬಂಧಿಸಿದ್ದಾರೆ.
Published by:G Hareeshkumar
First published: