ಮೂರು ದಿನಗಳ ಹಿಂದೆ ಕಿಡ್ನಾಪ್ ಆಗಿದ್ದ ಬಾಲಕನ ಬರ್ಬರ ಹತ್ಯೆ: ಹಣಕ್ಕಾಗಿ ಪರಿಚಯದವರಿಂದಲೆ ಕೊಲೆ ಶಂಕೆ!

ಅನುಮಾನಗೊಂಡ ಪೊಲೀಸರು ಮಹಮದ್ ಜಾವೀದ್ ಶೇಕ್ ಪೂರ್ವಪರ ಕೆದಕಿದಾಗ ಅಸಲಿ ಕಹಾನಿ ಬಯಲಿಗೆ ಬರುತ್ತದೆ.  ವೃತ್ತಿಯಲ್ಲಿ ಸಿಸಿ ಕ್ಯಾಮರಾ ಟೆಕ್ನಿಷಿಯನ್ ಆದ ಜಾವೀದ್ ಶೇಕ್ ಮೂಲತಃ ಛತ್ತೀಸ್ಗಢದವನು.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಆನೇಕಲ್ : ಆತ ಹತ್ತು ವರ್ಷ ವಯಸ್ಸಿನ ಪುಟ್ಟ ಬಾಲಕ. ಐವರು ಮಕ್ಕಳಲ್ಲಿ ಆತ ಅಪ್ಪ ಅಮ್ಮನ ಅಚ್ಚುಮೆಚ್ಚಿನ ಮಗ. ಇದ್ದಕ್ಕಿದ್ದಂತೆ ಮೂರು ದಿನಗಳ ಹಿಂದೆ ಮನೆ ಬಳಿಯಿಂದ ಬಾಲಕ ಕಣ್ಮರೆಯಾಗುತ್ತಾನೆ. ಸುತ್ತಮುತ್ತ ಹುಡುಕಾಡಿದರು ಬಾಲಕ ಮಾತ್ರ ಪತ್ತೆಯಾಗಿರುವುದಿಲ್ಲ. ಇದರ ನಡುವೆ ಅನಾಮಿಕನೊಬ್ಬ ನಿಮ್ಮ ಮಗನನ್ನು ಕಿಡ್ನಾಪ್ ಮಾಡಿದ್ದು,  ಜೀವಂತವಾಗಿ ಮರಳಿಸಬೇಕಾದರೆ 25 ಲಕ್ಷಕ್ಕೆ ನೀಡಬೇಕು ಎಂದು ಬೇಡಿಕೆಯಿಡುತ್ತಾನೆ. ಆತಂಕಗೊಂಡ ಬಾಲಕನ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕಿಡ್ನಾಪರ್ಸ್ಗಾಗಿ ಬಲೆ ಬೀಸಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಬಾಲಕನನ್ನು ಕೊಂದು ಹಂತಕರು ಪರಾರಿಯಾಗಿದ್ದಾರೆ.

ಹೌದು ಹೀಗೆ ಕಿಡ್ನಾಪರ್ಸ್ ನಿಂದ ಅತ್ಯಂತ ಬರ್ಬರವಾಗಿ ಕೊಲೆಯಾಗಿ ಹೋಗಿರುವ ಬಾಲಕನ ಹೆಸರು ಮೊಹಮದ್ ಅಸೀಪ್. ಬೆಂಗಳೂರು ಹೊರವಲಯ ಬೆಂಗಳೂರು ದಕ್ಷಣ ತಾಲ್ಲೂಕಿನ ಶಿಕಾರಿಪಾಳ್ಯ ನಿವಾಸಿಯಾದ ಈತ ಅಬ್ಬಾಸ್  ಮತ್ತು ಶರ್ಜಾನ್ ದಂಪತಿಯ ಐವರು ಮಕ್ಕಳಲ್ಲಿ ಮುದ್ದಿನ ಮಗ. ಎಂದಿನಂತೆ ಸ್ನೇಹಿತರೊಂದಿಗೆ ಆಟವಾಡಿಕೊಂಡಿದ್ದ ಅಸಿಪ್ ಇದ್ದಕ್ಕಿದ್ದಂತೆ ಕಳೆದ ಶುಕ್ರವಾರ ಕಾಣೆಯಾಗಿದ್ದಾನೆ. ಆತಂಕಗೊಂಡ ಪೋಷಕರು ಸಂಬಂಧಿಕರು, ಸ್ನೇಹಿತರ ಮನೆ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹುಡುಕಾಡಿದರು ಬಾಲಕ ಮಾತ್ರ ಪತ್ತೆಯಾಗುವುದಿಲ್ಲ.

ರಾತ್ರಿ 11 ಗಂಟೆ ಸುಮಾರಿಗೆ ಬಾಲಕನ ತಂದೆ ಪೋನ್ ನಂಬರಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ನಾವು ನಿಮ್ಮ ಮಗನನ್ನು ಕಿಡ್ನಾಪ್ ಮಾಡಿದ್ದು, ಇಪ್ಪತ್ತೈದು ಲಕ್ಷ ನೀಡಿದರೆ ಜೀವಂತವಾಗಿ ಮರಳಿ ಕಳುಹಿಸುತ್ತೆವೆ. ಇಲ್ಲವಾದರೆ ನಿಮ್ಮ ಮಗನನ್ನು ಕೊಂದು ಬಿಡುತ್ತೆವೆ ಎಂದು ಹೆದರಿಸುತ್ತಾನೆ.  ಆತಂಕಗೊಂಡ ಬಾಲಕನ ಪೋಷಕರು ಮಗನ ಕಿಡ್ನಾಪ್ ಬಗ್ಗೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು‌ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಹೆಬ್ಬಗೋಡಿ ಪೊಲೀಸರು ಕಿಡ್ನಾಪರ್ಸ್ ತಲಾಷೆಗೆ ಇಳಿಯುತ್ತಾರೆ.

ಬಾಲಕನ ಮನೆ ಸುತ್ತಮುತ್ತಲಿನ ಸಿಸಿ ಕ್ಯಾಮರಾಗಳ ಪರಿಶೀಲನೆ ಮತ್ತು ಶಂಕಿತ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ. ಆದ್ರೆ ಪೊಲೀಸರಿಗೆ ಯಾವುದೇ ಸುಳಿವು ಲಭ್ಯವಾಗು ವುದಿಲ್ಲ. ಇನ್ನೂ ಪೋಲಿಸರು ಬಾಲಕನ ಪತ್ತೆ ಕಾರ್ಯ ಚುರುಕುಗೊಳಿಸು ತ್ತಿದ್ದಂತೆ ಪೊಲೀಸರ ಜೊತೆಯಲ್ಲಿಯೇ ಇದ್ದು,  ಸಿಸಿ ಕ್ಯಾಮರಾಗಳ ಪರಿಶೀಲನೆಗೆ ನೆರವು ನೀಡುತ್ತಿದ್ದ ಮಹಮದ್ ಜಾವೀದ್ ಶೇಕ್ ಎಂಬ ಯುವಕನ ನಂಬರ್ ಸ್ವಿಚ್ಡ್ ಅಫ್ ಆಗುತ್ತದೆ. ಮಾತ್ರವಲ್ಲದೆ ಯುವಕ ನಾಪತ್ತೆಯಾಗುತ್ತಾನೆ. ಅನುಮಾನಗೊಂಡ ಪೊಲೀಸರು ಮಹಮದ್ ಜಾವೀದ್ ಶೇಕ್ ಪೂರ್ವಪರ ಕೆದಕಿದಾಗ ಅಸಲಿ ಕಹಾನಿ ಬಯಲಿಗೆ ಬರುತ್ತದೆ.  ವೃತ್ತಿಯಲ್ಲಿ ಸಿಸಿ ಕ್ಯಾಮರಾ ಟೆಕ್ನಿಷಿಯನ್ ಆದ ಜಾವೀದ್ ಶೇಕ್ ಮೂಲತಃ ಛತ್ತೀಸ್ಗಢದವನು.

ಇದನ್ನೂ ಓದಿ: Development Index: ಅಭಿವೃದ್ಧಿ ಸೂಕ್ಯಾಂಕದಲ್ಲಿ ಮತ್ತೆ ಎರಡು ಸ್ಥಾನ ಕುಸಿದ ಭಾರತ: ಬಾಂಗ್ಲಾ, ನೇಪಾಳ ಶ್ರೀಲಂಕಾ, ಭೂತಾನ್‍ಗಳಿಗಿಂತ ಹಿಂದೆ!

ಇನ್ನೊಂದು ತಿಂಗಳಲ್ಲಿ ನಿಶ್ಚಯವಾಗಿರುವ ತನ್ನ ಮದುವೆಗೆ ಹಣ ಹೊಂದಿಸುವ ಸಲುವಾಗಿ ಶಿಕಾರಿಪಾಳ್ಯದ ಮಾವನ ಮನೆಗೆ ಬಂದಿದ್ದಾನೆ. ಕೊರೊನಾ ಹೆಚ್ಚಾದ ಹಿನ್ನೆಲೆ ಲಾಕ್ ಡೌನ್ ಇದ್ದುದ್ದರಿಂದ ಎಲ್ಲಿಯು ಕೆಲಸ ಸಿಗದೇ ಹಣ ಸಂಪಾದನೆ ಮಾಡಲು ಸಾಧ್ಯವಾಗಿರಲಿಲ್ಲ. ಕೊನೆಗೆ ತನ್ನ ಮಾವ ಬಾಡಿಗೆಗೆ ಇದ್ದ ಮನೆ ಮಾಲೀಕನ ಮಗನನ್ನು ಕಿಡ್ನಾಪ್ ಮಾಡಿ ಜಿಗಣಿ ಸಮೀಪದ ನಂಜಾಪುರ ಬಳಿಯ ಬಡಾವಣೆಯೊಂದರ ಶೇಡ್ನಲ್ಲಿ ಕೂಡಿ ಹಾಕಿದ್ದಾನೆ. ಬಳಿಕ ಛತ್ತೀಸ್ಗಢನಿಂದ ತನ್ನ ಸ್ನೇಹಿತನ ಮೂಲಕ ಹಣಕ್ಕೆ ಬೇಡಿಕೆಯಿಡಿಸುತ್ತಾನೆ.

ಇದನ್ನೂ ಓದಿ: Terrorist Attack| ಜಮ್ಮು ಕಾಶ್ಮೀರ: ಸೈನಿಕರ ವಾಹನದ ಮೇಲೆ ಭಯೋತ್ಪಾದಕರಿಂದ ಗ್ರೆನೇಡ್ ದಾಳಿ: 7 ಮಂದಿಗೆ ಗಾಯ

ಕಿಡ್ನಾಪ್ ವಿಚಾರ ಪೊಲೀಸರಿಗೆ ತಿಳಿಯುತ್ತಿದ್ದಂತೆ ಬಾಲಕನ್ನು ಕೊಂದು ಪರಾರಿಯಾಗಿ ರುವ ವಿಚಾರ ಪೊಲೀಸರ ತನಿಖೆ ವೇಳೆ ತಿಳಿಯುತ್ತದೆ ಎಂದು ಮೃತ ಬಾಲಕನ ಸಂಬಂಧಿ ಸಯ್ಯದ್ ಸಾಧಿಕ್ ತಿಳಿಸಿದ್ದಾರೆ. ಅಂದಹಾಗೆ ಆರೋಪಿ ಸುಳಿವು ನೀಡಿದ್ನಾ ಮೃತ ಬಾಲಕನ ಸ್ನೇಹಿತಾ...? ಹೌದು ಮೊಹಮದ್ ಅಸಿಪ್ ಕಿಡ್ನಾಪ್ಗೂ ಮೊದಲು ಮೃತ ಬಾಲಕನ ಸ್ನೇಹಿತ ಇರ್ಫಾನ್ ನನ್ನು ಕಿಡ್ನಾಪ್ ಮಾಡಿದ್ದ ಜಾವೀದ್ ಶೇಕ್ ನಿರ್ಜನ ಬಡಾವಣೆಯ ಶೇಡ್ಗೆ ಕರೆದೊಯ್ದು ಚಾಕುವಿನಿಂದ ತಿವಿಯಲು ಮುಂದಾಗಿದ್ದ ಎನ್ನಲಾಗಿದೆ. ಈ ವೇಳೆ ಬಾಲಕ ಇರ್ಫಾನ್ ಜೋರಾಗಿ ಚಿರಾಡಿದ್ದಾನೆ.

ಸಮೀಪದಲ್ಲಿಯೇ ಕುರಿಗಾಹಿಗಳು ಇರುವುದನ್ನು ಗಮನಿಸಿ ಮರಳಿ ವಾಪಸ್ ಮನೆಗೆ ಕರೆ ತಂದಿದ್ದು, ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಸಿದ ಎಂದು ಬಾಲಕ ಇರ್ಫಾನ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಬಾಲಕನ ಮಾಹಿತಿ ಆಧರಿಸಿ ಸ್ಥಳ ಪರಿಶೀಲನೆ ನಡೆಸಿದಾಗ ಬಾಲಕ ಅಸೀಪ್ ಬರ್ಬರವಾಗಿ ಕೊಲೆಯಾಗಿರುವುದು ಪತ್ತೆಯಾಗಿದೆ. ಬಾಲಕನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದು, ಇಡೀ ಶೇಡ್ ರಕ್ತಸಿಕ್ತವಾಗಿದೆ.  ಒಟ್ನಲ್ಲಿ ಬಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಬ್ಬಗೋಡಿ ಪೊಲೀಸರು ಹಲವು ಅಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು, ಶಂಕಿತ ಆರೋಪಿ ಜಾವೀದ್ ಶೇಕ್ ಗಾಗಿ ಶೋಧ ಮುಂದುವರಿಸಿದ್ದಾರೆ.

(ವರದಿ : ಆದೂರು ಚಂದ್ರು)
Published by:MAshok Kumar
First published: