Brundha Urs: ಮಂಗಳೂರಿನ ದೇವರ ಹೊಂಡದಲ್ಲಿ ಬಿಕಿನಿ ನಾರಿ ಬೃಂದಾ ಅರಸ್ ಹಾಟ್ ಫೋಟೋಶೂಟ್; ಸ್ಥಳೀಯರ ಆಕ್ರೋಶ

ಸಾಕ್ಷಾತ್ ಶಿವ ಸ್ನಾನ ಮಾಡುತ್ತಿದ್ದನೆಂದು ನಂಬಲಾದ ಹಾಗೂ ಸ್ಥಳೀಯರು ಬಹಳ ಪವಿತ್ರಭಾವನೆಯಿಂದ ಕಾಣುವ ಸುಳ್ಯದ ದೇವರಹೊಂಡದಲ್ಲಿ ಅರೆಬೆತ್ತಲೆ ಮಾಡೆಲ್​ಗಳ ಫೋಟೋಶೂಟ್ ನಡೆದಿದೆ. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

news18-kannada
Updated:October 30, 2020, 9:19 AM IST
Brundha Urs: ಮಂಗಳೂರಿನ ದೇವರ ಹೊಂಡದಲ್ಲಿ ಬಿಕಿನಿ ನಾರಿ ಬೃಂದಾ ಅರಸ್ ಹಾಟ್ ಫೋಟೋಶೂಟ್; ಸ್ಥಳೀಯರ ಆಕ್ರೋಶ
ಸುಳ್ಯ ಬಳಿಯ ತೋಡಿಕಾನ ಫಾಲ್ಸ್ ಅಕಾ ದೇವರ ಹೊಂಡ ಜಲಪಾತದಲ್ಲಿ ಹಾಟ್ ಫೋಟೋಶೂಟ್
  • Share this:
ಮಂಗಳೂರು: ಅದು 13 ನೇ ಶತಮಾನದ ಐತಿಹಾಸಿಕ ಸ್ಥಳ. ದಟ್ಟಾರಣ್ಯದ ಮಧ್ಯದಲ್ಲಿ ಸಾಕ್ಷಾತ್ ಮಹದೇವಾ ಮಲ್ಲಿಕಾರ್ಜುನನ ರೂಪದಲ್ಲಿ ಅಲ್ಲಿ ನೆಲೆ ನಿಂತಿದ್ದಾನೆ ಅನ್ನೊ ಐತಿಹ್ಯ ಅಲ್ಲಿಯದ್ದು. ಇದೇ ದೇವಸ್ಥಾನದ ಬಳಿ ಇರುವ ಜಲಪಾತದಲ್ಲಿ ಸಾಕ್ಷತ್ ಶಿವ ಮಿಂದೇಳುತ್ತಿದ್ದ ಅನ್ನೊ ಐತಿಹ್ಯ ಕೂಡ ಇದೆ. ಆದ್ರೆ ಬೆಂಗಳೂರಿನಿಂದ ಹೋದ ಬಿಕಿನಿ ಸುಂದರಿಯರು ಆ ಪವಿತ್ರ ಸ್ಥಳದಲ್ಲಿ ಬಿಕಿನಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಬೃಂದಾ ಅರಸ್ ಹಾಗೂ ಮತ್ತೊಬ್ಬ ಮಾಡೆಲ್ ಅವರ ವರ್ತನೆ ವಿರುದ್ಧ ಕಿಡಿ ಕಾರಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದಲ್ಲಿರುವ ಫಾಲ್ಸ್ ಅನ್ನು ಸ್ಥಳೀಯರು ದೇವರಹೊಂಡ ಎಂದೇ ಕರೆಯುತ್ತಾರೆ. ಈ ಗ್ರಾಮದಲ್ಲಿ 13 ಶತಮಾನದ ಇತಿಹಾಸವಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನವಿದೆ. ಇಲ್ಲಿ ನೆಲೆಸಿರೋ ಪರಮಾತ್ಮ ಇಲ್ಲಿಂದ 2 ಕಿಲೋಮೀಟರ್ ದೂರದಲ್ಲಿರೋ ಈ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದ ಅನ್ನೋ ಐತಿಹ್ಯ ಇದೆ.

Brundha Urs
Brundha Urs


ಅದಕ್ಕೆ ಈಗ ದೇವರಹೊಂಡ ಅಂತಾ ಹೆಸರಿನಿಂದ ಜನರು ಕರೆಯುತ್ತಾರೆ. ಇಲ್ಲಿ ವರ್ಷಕ್ಕೆ ಏಳೆಂಟು ಭಾರೀ ವಿಶೇಷ ದಿನಗಳಲ್ಲಿ ಇಲ್ಲಿನ ದೇವರಹೊಂಡದಿಂದ ತೀರ್ಥವನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಾರೆ. ಈ ಸ್ಥಳದಲ್ಲಿ ಸ್ಥಳೀಯರು ನೀರಿಗೆ ಇಳಿಯೋದಿಲ್ಲ. ಅಷ್ಟು ಪವಿತ್ರ ಬಾವನೆಯಿಂದ ಇಲ್ಲಿನ ಪರಿಶುದ್ಧತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಆದ್ರೆ ಬೆಂಗಳೂರಿನ ಮಾಡೆಲ್​ಗಳಾದ ಬೃಂದಾ ಅರಸ್ ಹಾಗೂ ಮತ್ತೊಬ್ಬ ಮಾಡೆಲ್ ಸೇರಿಕೊಂಡು ಬಿಕಿನಿಯಲ್ಲಿ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ಇದು ಸ್ಥಳೀಯರ ವಿರೋಧಕ್ಕೆ ಕಾರಣವಾಗಿದೆ.

Brundha Urs
Brundha Urs


ಈ ಬಿಕನಿ ಶೂಟಿಂಗ್ ನಡೆದ ಸ್ಥಳದಲ್ಲಿ ಸುತ್ತಮುತ್ತ ಮನೆಗಳಿವೆ. ಆದರೂ ಕೂಡ ಹೀಗೆ ಅರೆಬೆತ್ತಲಾಗಿ ಓಡಾಡಿ ಸ್ಥಳೀಯರಿಗೆ ಮುಜುಗರವನ್ನುಂಟು ಮಾಡಿದ್ದಾರೆ ಅಂತಾ ಆರೋಪಿಸಿದ್ದಾರೆ. ಅಲ್ಲದೇ ಸ್ಥಳೀಯರು ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಗೆ ದೂರು ಕೂಡ ನೀಡಿದ್ದಾರೆ. ಆದ್ರೆ ಈ ವಿಚಾರ ದೇವಸ್ಥಾನದ ಆಡಳಿತ ಮಂಡಳಿಗೂ ಕೂಡ ಗೊತ್ತಿಲ್ವಂತೆ. ಈ ವಿಚಾರ ಗೊತ್ತಾದ ಬಳಿಕ ಈ ಬಗ್ಗೆ ಆಡಳಿತ ಮಂಡಳಿ ಸುಳ್ಯ ತಹಶಿಲ್ದಾರ್ ಗೆ ಮತ್ತು ಅರಣ್ಯ ಇಲಾಖೆಗೆ ದೂರು ನೀಡುವ ನಿರ್ಧಾರ ಮಾಡಿದ್ದಾರೆ.

Photoshoot at Devara honda
ದೇವರಹೊಂಡದಲ್ಲಿ ನಡೆದ ಫೋಟೋಶೂಟ್
ಹೇಳಿ ಕೇಳಿ ಇದು ಅರಣ್ಯ ಪ್ರದೇಶ. ಹೀಗೆ ನಿರ್ಜನ ಪ್ರದೇಶದಲ್ಲಿ ಎರಡ್ಮೂರು ಜನರು ಅರೆಬೆತ್ತಲಾಗಿದ್ರೆ ಅವರಿಗೂ ಕೂಡ ಅಪಾಯ ಎದುರಾಗುವ ಸಾದ್ಯತೆಗಳಿರುತ್ತೆ. ಇಂತಹ ಫೋಟೊ ಶೂಟ್​ಗಳನ್ನು ಬೀಚ್​ಗಳಲ್ಲಿ ಅಥವಾ ಇನ್​ಡೋರ್​ನಲ್ಲಿ ಶೂಟ್ ಮಾಡಿದರೆ ಉತ್ತಮವಾಗಿರುತ್ತೆ. ಇಂತಹ ಸ್ಥಳದ ಐತಿಹ್ಯವನ್ನು ಅರಿಯದೇ ಈ ರೀತಿ ಫೋಟೊ ಶೂಟ್ ಮಾಡಿದ್ದು ಸ್ಥಳೀಯರ ಪವಿತ್ರತೆಗೆ ಧಕ್ಕೆ ತಂದಂತಾಗಿದೆ.

ವರದಿ: ಕಿಶನ್ ಕುಮಾರ್
Published by: Vijayasarthy SN
First published: October 30, 2020, 7:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading