Tamarind Fight: ಅಣ್ಣ-ತಮ್ಮನ ಮಧ್ಯೆ ಹುಳಿ ಹಿಂಡಿದ ಹುಣಸೆ..! ಭಾರೀ ಜಗಳ, ಪರಸ್ಪರ ಹಲ್ಲೆ

ಹುಣಸೆ ಹಣ್ಣುಗಳು ಬಿಡಿಸುವ ವಿಚಾರಕ್ಕೆ ಸಹೋದರರ ನಡುವೆ ಗಲಾಟೆ...!ಅಣ್ಣನಿಗೆ ಹಿಗ್ಗಾ‌ ಮುಗ್ಗಾ ಥಳಿಸಿದ ತಮ್ಮ...!ಯಾದಗಿರಿ: ಆ ಸಹೋದರರು ಕಷ್ಟ ಕಾಲಕ್ಕೆ ಒಬ್ಬರಿಗೊಬ್ಬರು ನೆರವಾಗುತ್ತಿದ್ದರು ಆದರೆ,ಆ ಒಂದು ಮರವೇ ಈಗ ಇಬ್ಬರನ್ನು ಜಟಾಪಟಿ ನಡೆಸುವಂತೆ ಮಾಡಿದೆ.ಹೊಲದಲ್ಲಿದ್ದ ಹುಣಸೆ ಮರವೇ ಈಗ ಸಹೋದರರ ನಡುವೆ ಕಿಚ್ಚು ಹಚ್ಚಿತಾ

ಹುಣಸೆ

ಹುಣಸೆ

  • Share this:
ಯಾದಗಿರಿ(ಫೆ.22): ಆ ಸಹೋದರರು ಕಷ್ಟ ಕಾಲಕ್ಕೆ ಒಬ್ಬರಿಗೊಬ್ಬರು ನೆರವಾಗುತ್ತಿದ್ದರು. ಆದರೆ ಆ ಒಂದು ಮರವೇ ಈಗ ಇಬ್ಬರನ್ನು ಜಟಾಪಟಿ ನಡೆಸುವಂತೆ ಮಾಡಿದೆ. ಹೊಲದಲ್ಲಿದ್ದ ಹುಣಸೆ ಮರವೇ (Tamarind Tree) ಈಗ ಸಹೋದರರ ನಡುವೆ ಕಿಚ್ಚು ಹಚ್ಚಿಸಿದಂತಾಗಿದೆ. ಯಾದಗಿರಿ (Yadgiri) ಜಿಲ್ಲೆಯ ಗುರುಮಠಕಲ್ ತಾಲೂಕಿನ ವಂಕಸಂಬ್ರ ಗ್ರಾಮದಲ್ಲಿ ಸಹೋದರಾದ ಪೀರ್ ಖಾನ್ ಹಾಗೂ ಖಾಜಾಹುಷೇನ್ ಒಬ್ಬರಿಗೊಬ್ಬರು ಕಷ್ಟಕ್ಕೆ ಸಹಾಯವಾಗುತ್ತಿದ್ದರು. ಆದರೆ,ಈಗ ಜಮೀನಿನಲ್ಲಿರುವ ಹುಣಸೆ ಮರದ ಕಾರಣಕ್ಕೆ ಹುಣಸೆ ಹಣ್ಣುಗಳನ್ನು ಬಿಡಿಸುವ ವಿಚಾರಕ್ಕೆ ಸಹೋದರರ ನಡುವೆ ಕಲಹಕ್ಕೆ ಕಾರಣವಾಗಿದೆ. ಪೀರ್ ಖಾನ್ ನ ಪುತ್ರಿಯಾದ ಶಕೀರ್ ಬೇಗಂ ಹೆಸರಿನಲ್ಲಿದ್ದ ಜಮೀನಿನ ಪೀರ್ ಖಾನ್ ಅವರ ಪಾಲಿಗೆ ಹುಣಸೆ ಮರವು ಬಂದಿದೆ. ಬೃಹತ್ ಆದ ಹುಣಸೆ ಮರವು ಈಗ ಮರದಲ್ಲಿ ಹುಣಸೆ ಕಾಯಿ (Tamarind) ಹೆಚ್ಚಿನ ಪ್ರಮಾಣದಲ್ಲಿ ಆದ ಹಿನ್ನೆಲೆ ಹುಣಸೆ ಹಣ್ಣುಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ.

ಹುಣಸೆ ಹಣ್ಣು ಅಂದ್ರೆ ಎಲ್ಲರ ಬಾಯಿಯಲ್ಲಿ ನೀರು ತರಿಸುತ್ತದೆ. ಆದರೆ ,ಇಲ್ಲಿ ಹುಣಸೆ ಹಣ್ಣು  ಈಗ ರಕ್ತ ತರಿಸಿದೆ. ಪೀರ್ ಖಾನ್ ಅವರ ತಮ್ಮನಾದ ಖಾಜಾಹುಷೇನ್ ಹಾಗೂ ಆತನ ಪುತ್ರ ಹಬೀಬ್ ಹುಣಸೆ ಹಣ್ಣುಗಳನ್ನು ಬಿಡಿಸುತ್ತಿದ್ದರು. ಆದರೆ, ವೇಳೆ ಮಾಹಿತಿ ಅರಿತು ಪೀರ್ ಖಾನ್ ಜಮೀನಿಗೆ ಬಂದು ನನ್ನ ಪಾಲಿಗೆ ಬಂದ ಹುಣಸೆ ಮರದಿಂದ ಯಾಕೆ ನೀವು ಬಿಡಿಸುತ್ತಿದ್ದಿರಿ ಕಳೆದ ವರ್ಷ ಕೂಡ ನೀವೆ ಬಿಡಿಸುಕೊಂಡು ಹೋಗಿದ್ದಿರಿ ಎಂದು ಮಾತು ಶುರುವಾಗಿದೆ.

ದೊಣ್ಣೆ ಹಿಡಿದು ಹಿಗ್ಗಾಮುಗ್ಗ ಥಳಿಸಿದ

ನಾನು ಹುಣಸೆ ಮರಕ್ಕೆ ನೀರು ಹಾಕಿ ಕಷ್ಟಪಟ್ಟು ಬೆಳೆಸಿದ್ದೆನೆ. ನೀವು ಎಲ್ಲವು ಹುಣಸೆ ಹಣ್ಣುಗಳನ್ನು  ತೆಗೆದುಕೊಂಡು ಹೋದರೆ ಹೇಗೆ ಮಾಡಬೇಕೆಂದು ಕೇಳಿದಕ್ಕೆ ಅಕ್ರೋಶಗೊಂಡ  ಖಾಜಾಹುಷೇನ್ ಹಾಗೂ ಆತನ ಪುತ್ರ ಹಬೀಬ್ ಇಬ್ಬರು ದೊಣ್ಣೆಯಿಂದ ಪೀರ್ ಖಾನ್ ಮೇಲೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ (Attacked). ಗಂಭೀರ ಗಾಯಗೊಂಡ ಪೀರ್ ಖಾನ್ ರಾಯಚೂರುನ ರಿಮ್ಸ್ ಆಸ್ಪತ್ರೆಗೆ ದಾಖಲಾಗಿ ಅಗತ್ಯ ಚಿಕಿತ್ಸೆ (Treatment) ಪಡೆಯುತ್ತಿದ್ದಾನೆ.

ಇದನ್ನೂ ಓದಿ: ಜುಟ್ಟು ಹಿಡಿದು ಜಗಳವಾಡಿದ ಮಹಿಳೆಯರ ಕಂಡು ದಂಗಾದ ಪ್ರಾಣಿಗಳು

ಈ ಬಗ್ಗೆ ಗಾಯಗೊಂಡ ಪೀರ್ ಸಾಬ್ ಮಾತನಾಡಿ, ಹೊಲದಲ್ಲಿ ಹುಣಸೆ ಮರವಿದ್ದು  ನನಗೆ ಸೇರಿದ್ದ ಹುಣಸೆ ಮರಗಳಿಂದ ನಮ್ಮ ತಮ್ಮ ಹಾಗೂ ಆತನ‌ ಮಗ ಹುಣಸೆ ಹಣ್ಣುಗಳನ್ನು ತೆಗೆಯುತ್ತಿದ್ದರು. ಇದಕ್ಕೆ ನಾನು ಈ ಮರ ನನಗೆ ಸೇರಿದ್ದು ಪ್ರತಿ ವರ್ಷ ನೀವು ಹುಣಸೆ ಹಣ್ಣುಗಳನ್ನು ತೆಗದರೆ ಹೇಗೆ ಈ ಬಾರಿ ಕೂಡ ನೀವೆ ಬಿಡಿಸದರೆ ಹೇಗೆ ಎಂದು ಕೇಳಿದರೆ ನನಗೆ ಮನಸ್ಸಿಗೆ ಬಂದ ಹಾಗೆ ಹೊಡೆದಿದ್ದಾರೆ ಎಂದಿದ್ದಾರೆ.

ಮೂರು ಹುಣಸೆ ಗಿಡದಿಂದ ಜಗಳ ಶುರು

ಮೂರು ಹುಣಸೆ ಗಿಡದ ವಿಚಾರಕ್ಕೆ ಹಲ್ಲೆ ಮಾಡಿದ್ದಾರೆ. ಎರಡು ವರ್ಷದಿಂದ ಹೀಗೆ ಮಾಡುತ್ತಿದ್ದಾರೆ. ಈ ಹಿಂದೆ ನಿನ್ನೆ ಮೇಲೆ ಹಲ್ಲೆ ಮಾಡಿದರು. ಆದರೆ, ನಮ್ಮ ತಮ್ಮನೆ ಇದ್ದಾನೆಂದು ಸುಮ್ಮನಿದ್ದು ತಮ್ಮನಿಗೆ ಬುದ್ದಿ ಮಾತು ಹೇಳಿದ್ದೆ. ಆದರೆ, ಈಗ ನನಗೆ ಹೊಡೆದಿದ್ದಾನೆಂದು ಪೀರ್ ಸಾಬ್ ಹೇಳಿದ್ದಾರೆ.

ಇದನ್ನೂ ಓದಿ: ಹುಡುಗಿಗಾಗಿ ವಿದ್ಯಾರ್ಥಿಗಳ ಹೊಡೆದಾಟ; ಪ್ರೀತಿಗಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ..!

ಸೈದಾಪುರ ಪೊಲೀಸ್ ಠಾಣೆಯಲ್ಲಿ (Police Station) ಈ ಕುರಿತು ಪ್ರಕರಣ ದಾಖಲಾಗಿದೆ.
ಒಬ್ಬರಿಗೊಬ್ಬರು ಪ್ರಿತಿಯಿಂದ ಸಮಸ್ಯೆ ಬಗೆಹರಿಸಿಕೊಂಡು ಇರಬೇಕಿತ್ತು.ಆದರೆ, ಹುಣಸೆ ಮರದ ವಿಚಾರಕ್ಕೆ ಗಲಾಟೆ ನಡೆಸಿಕೊಂಡು ಸಹೋದರರು ಈಗ ಪರಸ್ಪರ ವೈಷಮ್ಯ ಬೆಳೆಸಿಕೊಂಡಂತಾಗಿದೆ.
Published by:Divya D
First published: