ಶ್ರೀಲಂಕಾ ದೇಶಕ್ಕೆ ತೆರಳಲು ಮುಳಬಾಗಿಲು ತಾಲೂಕಿಂದ ಬ್ರಿಡ್ಜ್ ಕಟ್ಟಲಾಗ್ತಿದೆ; ಸಮೃದ್ಧಿ ಮಂಜುನಾಥ್ ವ್ಯಂಗ್ಯ

ಕ್ಷೇತ್ರದಲ್ಲಿನ  ಸಾವಿರಾರು ಜನರಿಗೆ ಇದುವರೆಗೆ ಪಿಂಚಣಿ ಹಣವನ್ನ ಸರ್ಕಾರ ನೀಡಿಲ್ಲ ಮೊದಲ ಆ ಹಣವನ್ನ ಬಿಡುಗಡೆ ಮಾಡಿಸಲಿ, ಸುಮ್ಮನೆ ರಾಜಕೀಯ ಉದ್ದೇಶದಿಂದ ಅನುದಾನ ಆಮಿಷವನ್ನ ಒಡ್ಡುಬೇಡಿ ಎಂದು ಸಮೃದ್ದಿ ಮಂಜುನಾಥ್ ಕಿಡಿಕಾರಿದ್ದಾರೆ.

news18-kannada
Updated:October 26, 2020, 11:44 AM IST
ಶ್ರೀಲಂಕಾ ದೇಶಕ್ಕೆ ತೆರಳಲು ಮುಳಬಾಗಿಲು ತಾಲೂಕಿಂದ ಬ್ರಿಡ್ಜ್ ಕಟ್ಟಲಾಗ್ತಿದೆ; ಸಮೃದ್ಧಿ ಮಂಜುನಾಥ್ ವ್ಯಂಗ್ಯ
ಸಮೃದ್ಧಿ ಮಂಜುನಾಥ್.
  • Share this:
ಕೋಲಾರ; ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್ ನಾಗೇಶ್, ಈಗ ಅಬಕಾರಿ ಸಚಿವರಾಗಿ ಹಾಗು ಕೋಲಾರ ಉಸ್ತುವಾರಿಯಾಗಿ ಕಾರ್ಯ ನಿರ್ವಹಣೆ ಮಾಡ್ತಿದ್ದಾರೆ, ಆದರೆ ಸಚಿವರಾಗಿ ಆಯ್ಕೆಯಾದ ನಂತರ, ಪಕ್ಷೇತರ ಶಾಸಕರಾಗಿ ಆಯ್ಕೆಯಾಗಲು ಶ್ರಮಿಸಿದವರನ್ನೆ ಕಡೆಗಣಿಸಿ, ವಯಕ್ತಿಕ ಲಾಭದ ಹಿಂದೆ ಸಚಿವರು ಹೋಗಿದ್ದಾರೆ ಎಂದು ಇತ್ತೀಚೆಗೆ ಹಲವು ನಾಯಕರು ಆರೋಪಿಸಿದ್ದರು, ಇನ್ನು ಮುಳಬಾಗಿಲು ಕ್ಷೇತ್ರದಿಂದ ಕೇವಲ 11 ದಿನಕ್ಕೆ ಶಾಸಕರಾಗಿ ಆಯ್ಕೆಯಾಗಿ,  ಈಗ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ಇವರು, ಮುಂದೆ ಮತ್ತೊಮ್ಮೆ ಪಕ್ಷೇತರ ಆಗಿಯೇ ವಿಧಾನಸಭೆ ಚುನಾವಣೆ ಎದುರಿಸೊ ಸಾಧ್ಯತೆಯಿದೆ, ಯಾಕೆಂದರೆ ಇತ್ತೀಚೆಗೆ ಸಚಿವ ನಾಗೇಶ್ ಜೆಡಿಎಸ್, ಕಾಂಗ್ರೆಸ್ ಮುಖಂಡರನ್ನ ತಮ್ಮ ಬಣಕ್ಕೆ ಸೇರಿಸುಕೊಳ್ಳುವ ಮೂಲಕ "ನಾಗೇಶ್ ಬಣವನ್ನ" ಸದ್ದಿಲ್ಲದೆ ಕಟ್ಟುತ್ತಿದ್ದಾರೆ, ಆದರೆ ಜೆಡಿಎಸ್ ನಾಯಕರನ್ನ ತಮ್ಮತ್ತ ಸೆಳೆಯುತ್ತಿರುವುದಕ್ಕೆ, ತಾಲೂಕು ಜೆಡಿಎಸ್ ನಾಯಕರು ಪತ್ರಿಕಾಗೋಷ್ಠಿ ನಡೆಸಿ ಕೆಂಡ ಕಾರಿದ್ದಾರೆ‌.

ಜೆಡಿಎಸ್ ಮುಖಂಡ ಸಮೃದ್ದಿ ಮಂಜುನಾಥ್ ಅವರ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ತಾಲೂಕು ಜೆಡಿಎಸ್ ಅಧ್ಯಕ್ಷ್ಯ ಕಾಡೇನಹಳ್ಳಿ ನಾಗರಾಜ್ ಹಾಗು ಜೆಡಿಎಸ್ ಮುಖಂಡ ಸಮೃದ್ದಿ ಮಂಜುನಾಥ್, ಸಚಿವರ ವಿರುದ್ದ ಗಧಾಪ್ರಹಾರವನ್ನೆ ನಡೆಸಿದ್ದಾರೆ, ಮುಳಬಾಗಿಲು ತಾಲೂಕಿನ ಹಲವು ಗ್ರಾಮಗಳಲ್ಲಿ ಸಂಚರಿಸುತ್ತಿರುವ ಸಚಿವರು, ತಾಲೂಕಿನಲ್ಲಿ ಜೆಡಿಎಸ್ ಪಕ್ಷವೇ ಇಲ್ಲ, ನಮ್ಮನ್ನ ಬೆಂಬಲಿಸಿ ಎಂದು ಹೇಳುತ್ತಾ, ಗ್ರಾಮಗಳಿಗೆ ಕೋಟಿ ಕೋಟಿ ಅನುದಾನವನ್ನು ಕೊಡಿಸುವುದಾಗಿ ಸುಳ್ಳು ಭರವಸೆ ನೀಡ್ತಿದ್ದಾರೆಂದು ಆರೋಪಿಸಿದ್ದಾರೆ.

ಕ್ಷೇತ್ರದಲ್ಲಿನ  ಸಾವಿರಾರು ಜನರಿಗೆ ಇದುವರೆಗೆ ಪಿಂಚಣಿ ಹಣವನ್ನ ಸರ್ಕಾರ ನೀಡಿಲ್ಲ ಮೊದಲ ಆ ಹಣವನ್ನ ಬಿಡುಗಡೆ ಮಾಡಿಸಲಿ, ಸುಮ್ಮನೆ ರಾಜಕೀಯ ಉದ್ದೇಶದಿಂದ ಅನುದಾನ ಆಮಿಷವನ್ನ ಒಡ್ಡುಬೇಡಿ ಎಂದು ಸಮೃದ್ದಿ ಮಂಜುನಾಥ್ ಕಿಡಿಕಾರಿದ್ದಾರೆ.

ನಮ್ಮದು ವಾನರ ಸೈನ್ಯ, ಶ್ರೀಲಂಕಾಕ್ಕೆ ಬ್ರಿಡ್ಜ್ ಕಟ್ಟೊ ಸಾಮರ್ಥ್ಯ ಇದೆ ಎಂದಿದ್ದ ಸಚಿವರಿಗೆ ಟಾಂಗ್ ಕೊಟ್ಟ ಸಮೃದ್ದಿ ಮಂಜುನಾಥ್:

ಮುಳಬಾಗಿಲು ತಾಲೂಕಿನಲ್ಲಿನ ಪ್ರತಿ ಸರ್ಕಾರಿ ಕಚೇರಿಯಲ್ಲು ಸಚಿವರಿಗೆ ಮಾಮೂಲಿ ವಸೂಲಿ ಹೋಗುತ್ತಿದೆ, ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಹೆಸರಲ್ಲಿ ದೊಡ್ಡ ಧಂದೆಯೇ ನಡೆಯುತ್ತಿದೆ, ಇದನ್ನು ಯಾರು ಪ್ರಶ್ನೆ ಮಾಡುತ್ತಿಲ್ಲ, ಸಚಿವರಿಂದ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ಶೂನ್ಯ, ಮಾಜಿ ಸಚಿವರಾದ ದಿ. ಆಲಂಗೂರು ಶ್ರೀನಿವಾಸ ಅವರು ನಡೆಸಿದ ಅಭಿವೃದ್ಧಿ ಕಾರ್ಯಗಳೇ ಇಂದಿಗು ಜೀವಂತವಾಗಿದೆ ಎಂದರು.

ಇನ್ನು ಇತ್ತೀಚೆಗೆ ಮುಳಬಾಗಿಲು ತಾಲೂಕಿನಲ್ಲಿ ಮಾತನಾಡುತ್ತಾ ಸಚಿವ ನಾಗೇಶ್ ಅವರು ನೀಡಿದ್ದ ಹೇಳಿಕೆಯ ವೈರಲ್ ಆಗಿತ್ತು, ರಾಜೇಂದ್ರಹಳ್ಳಿ ಗ್ರಾಮದಲ್ಲಿ ಮಾತನಾಡಿದ ಸಚಿವರು ನಮ್ಮ ಜೊತಿಯಿರುವ ನಾಯಕರು "ವಾನರ ಸೈ‌‌ನ್ಯವಿದ್ದಂತೆ" ರಾಮಾಯಣದಲ್ಲಿ ವಾನರ ಸೈನ್ಯ ಅಂದಿನ ಲಂಕಾಕ್ಕೆ   ಸೇತುವೆ ಕಟ್ಟಿದಂತೆ, ಇಂದು ನಮ್ಮ ವಾನರ ಸೈನ್ಯ ಶ್ರೀಲಂಕಾಕ್ಕು ಬೇಕಾದರು ಸೇತುವೆ ಕಟ್ಟುವಷ್ಟು ಸಾಮರ್ಥ್ಯ ಹೊಂದಿದ್ದಾರೆಂದು ಹೇಳಿದ್ದರು.

ಇದನ್ನೂ ಓದಿ : ಚಿಕ್ಕಬಳ್ಳಾಪುರ: ಭಾರೀ ಮಳೆಗೆ ಮನೆ ಕುಸಿದು ತಂದೆ-ಮಗ ಸಾವು, ತಾಯಿ-ಮಗಳು ಪ್ರಾಣಾಪಾಯದಿಂದ ಪಾರುಇದಕ್ಕೆ ವ್ಯಂಗ್ಯವಾಡಿದ‌ ಜೆಡಿಎಸ್ ಮುಖಂಡ ಸಮೃದ್ದಿ ಮಂಜುನಾಥ್, ಇನ್ನು ಮುಂದೆ ನಾವು ಶ್ರೀಲಂಕಾ ದೇಶಕ್ಕೆ ವಿಮಾನದಲ್ಲಿ ಹೋಗಬೇಕಿಲ್ಲ, ಮುಳಬಾಗಿಲು ತಾಲೂಕಿನಿಂದ ಮೇಲ್ಸೇತುವೆ ನಿರ್ಮಾಣ ಮಾಡ್ತಿದ್ದಾರೆ, ಕಾರು, ಬಸ್ಸಿನಲ್ಲೆ ಹೋಗಬಹುದು, ವಿಮಾನವೇ ಬೇಕಿಲ್ಲ ಎಂದು ವ್ಯಂಗ್ಯವಾಡಿದರು,  ಸಚಿವರ ಇಲ್ಲ ಸಲ್ಲದ ಹೇಳಿಕೆಗೆಳು ಅಸಂಬದ್ದವಾಗಿದ್ದು ಕ್ಷೇತ್ರದ ಅಭಿವೃದ್ಧಿಯು‌  ಹಾಗೆಯೇ ಹಿಂದುಳಿದಿದೆ ಎಂದು ಜೆಡಿಎಸ್ ಮುಖಂಡರು ತೀವ್ರ ವಾಗ್ದಾಳಿ ನಡೆಸಿದ್ದಾರೆ‌.

ಒಟ್ಟಿನಲ್ಲಿ ಪಕ್ಷೇತರ ಶಾಸಕರಾಗಿ ಗೆದ್ದ ನಂತರ ಎಚ್ ನಾಗೇಶ್ ಅವರಿಗೆ ಅದೃಷ್ಟ ಒಲಿದು ಬಂದಿದ್ದು, ಬಿಜೆಪಿ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿ ತವರು ಜಿಲ್ಲೆಯಲ್ಲೆ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡ್ತಿದ್ದಾರೆ, ಆದರೆ ಸಚಿವರ ವಿರುದ್ದ ಇತ್ತೀಚಿಗೆ ವರ್ಗಾವಣೆ ಧಂದೆ ಆರೋಪಗಳನ್ನ ವಿಪಕ್ಷಗಳ ನಾಯಕರು ಮಾಡಿದ್ದು, ನವೆಂಬರ್ 2 ರ ನಂತರ ಮತ್ತಷ್ಟು ಮಾಹಿತಿಯನ್ನ ದಾಖಲೆ ಸಮೇತ ನೀಡುವುದಾಗಿ ಜೆಡಿಎಸ್ ನಾಯಕ ಸಮೃದ್ದಿ ಮಂಜುನಾಥ್ ತಿಳಿಸಿದ್ದಾರೆ.
Published by: MAshok Kumar
First published: October 26, 2020, 11:44 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading