ಕಾರವಾರದ ಉಳಗಾ ಗ್ರಾಮದ ಸೇತುವೆ ಮೇಲಿನ ಸಂಚಾರದ ಕನಸಿಗೆ ಕೊರೋನಾ ಅಡ್ಡಗಾಲು; ಕಾಮಗಾರಿ ಸಂಪೂರ್ಣ ಸ್ಥಗಿತ

ಸ್ಥಳೀಯ ರಾಜಕೀಯ ಕಚ್ಚಾಟ ಕೊರೋನಾ ಮಹಾಮಾರಿಯ ರಣಕೇಕೆಯ ನಡುವೆ ಎರಡು ವರ್ಷದಲ್ಲಿ ಮುಗಿದು ಲೋಕಾರ್ಪಣೆ ಆಗಬೇಕಿದ್ದ ಸೇತುವೆ ಇನ್ನು ಮುಗಿದಿಲ್ಲ. ಮುಂದೆ ಬೇಗ ಕಾಮಗಾರಿ ಪುನರಾರಂಭವಾಗಿ ದೋಣಿ ಸಂಚಾರಕ್ಕೆ ಪುಲ್ ಸ್ಟಾಪ್ ಬೀಳಲಿದೆಯೇ ಎಂಬುದನ್ನು ಕಾದು ನೋಡಬೇಕು. 

news18-kannada
Updated:August 2, 2020, 5:25 PM IST
ಕಾರವಾರದ ಉಳಗಾ ಗ್ರಾಮದ ಸೇತುವೆ ಮೇಲಿನ ಸಂಚಾರದ ಕನಸಿಗೆ ಕೊರೋನಾ ಅಡ್ಡಗಾಲು; ಕಾಮಗಾರಿ ಸಂಪೂರ್ಣ ಸ್ಥಗಿತ
ಅರ್ಧಕ್ಕೆ ಸ್ಥಗಿತಗೊಂಡಿರುವ ಸೇತುವೆ ಕಾಮಗಾರಿ.
  • Share this:
ಕಾರವಾರ; ಕಾರವಾರ ತಾಲೂಕಿನ ಕೇರವಡ್ಡಿ ಉಳಗಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಎರಡೇ ವರ್ಷದಲ್ಲಿ ನಿರ್ಮಾಣವಾಗಿ ಗ್ರಾಮದಿಂದ ಗ್ರಾಮಕ್ಕೆ ಸಂಚಾರಕ್ಕೆ ಮುಕ್ತವಾಗಬೇಕಿತ್ತು. ಆದರೆ, ಈಗ ಸೇತುವೆ ‌ಕಾಮಗಾರಿ ಸಂಪೂರ್ಣ ಸ್ಥಗಿತವಾಗಿದ್ದು, ಇಲ್ಲಿನ ‌ಜನ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ನೂರಾರು ವರ್ಷದ ಕನಸು ನನಸಾಯ್ತು ಎಂದು ಆ ಗ್ರಾಮದ ಜನರು ಸಂತೋಷದಿಂದ ಇದ್ದರು. ನದಿಯಲ್ಲಿ ದೋಣಿ ಸಂಚಾರಕ್ಕೆ ಬ್ರೇಕ್ ಬೀಳುತ್ತಲ್ಲ ಎಂದು ಹರ್ಷ ವ್ಯಕ್ತಪಡಿಸಿದ್ದರು. ಆದರೆ ಈಗ ಕಳೆದ ಒಂದು ವರ್ಷದಿಂದ ಆ ನದಿಗೆ ನಿರ್ಮಾಣದ ಹಂತದಲ್ಲಿ ಇದ್ದ ಸೇತುವೆ ಕಾಮಗಾರಿ ಸ್ಥಗಿತವಾಗಿದ್ದು ಎರಡೇ ವರ್ಷದಲ್ಲಿ ಮುಗಿಯಬೇಕಿದ್ದ ಸೇತುವೆ ಕಾಮಗಾರಿಗೆ ಜಡ್ಡು ಹಿಡಿದಿದೆ.

ಇದು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ ಕಾರವಾರ ತಾಲೂಕಿನ ಕೇರವಡ್ಡಿ_ಉಳಗಾ ಗ್ರಾಮದ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿಯ ನೋಟ. ಈ ಗ್ರಾಮದ ನಡುವೆ ಕಾಳಿ ನದಿ ಹರಿಯುತ್ತಿದ್ದು, ಎರಡು ಗ್ರಾಮದ ಸಂಪರ್ಕಕ್ಕೆ ಕಾಳಿ ನದಿ ಅಡ್ಡಲಾಗಿದೆ. ಇದರಿಂದ ಇಲ್ಲಿನ ಜನ ನೂರಾರು ವರ್ಷದಿಂದ ದೋಣಿಯೇ ಇವರ ಸಂಚಾರದ ವಾಹನವಾಗಿತ್ತು. ದೋಣಿ ಮೂಲಕವೇ ಸಂಚಾರ ಮಾಡಿ ತಮ್ಮ ದೈನಂದಿನ‌ ಉದ್ಯೋಗಕ್ಕೆ ವಿವಿಧ ಅಗತ್ಯ ಕಾರ್ಯಕ್ಕೆ ಹೋಗಿ ಬರುತ್ತಿದ್ದಾರೆ. ಕಳೆದ ಹತ್ತಾರು ವರ್ಷದಲ್ಲಿ ಹತ್ತಾರು ಹೋರಾಟದ ಮೂಲಕ ಈ ಎರಡು ಗ್ರಾಮಕ್ಕೆ ಸಂಪರ್ಕ ಕೊಂಡಿಯಾಗಿ ಕಳೆದ ಸಿದ್ದರಾಮಯ್ಯನವರ ಸರಕಾರದಲ್ಲಿ ಇಲ್ಲಿ ಸೇತುವೆ ಮಂಜೂರು ಆಯಿತು.

ಎರಡು ಕೋಟಿ ವೆಚ್ಚದ ಸೇತುವೆ ನಿರ್ಮಾಣ ಕಾರ್ಯಕ್ಕೆ ಕೊನೆಗೂ ಕಳೆದ ಒಂದೂವರೆ ವರ್ಷದ ಹಿಂದೆ  ಚಾಲನೆ ಸಿಕ್ಕಿತ್ತು. ಕಾಮಗಾರಿಯೂ ಆರಂಭವಾಗಿ ಆರಂಭದಲ್ಲಿ ವೇಗದಲ್ಲೇ ಸಾಗಿತ್ತು. ಆದರೆ ಈಗ ಬರೋಬ್ಬರಿ ಒಂದು ವರ್ಷ ದಿಂದ ಸೇತುವೆ ಕಾಮಗಾರಿ ಸಂಪೂರ್ಣ ಸ್ಥಗಿತವಾಗಿದೆ. ಗುತ್ತಿಗೆ ಪಡೆದ ಡಿ,ಆರ್, ಎನ್ ಕಂಪನಿ ಕಾಮಗಾರಿ ಸ್ಥಗಿತಗೊಳಿಸಿದೆ. ಈಗಾಗಲೇ ಕಳೆದ ನಾಲ್ಕು ತಿಂಗಳಿಂದ ಕೊರೋನಾ ಮಹಾಮಾರಿಗೆ ಬೆಚ್ಚಿಬಿದ್ದ ಹೊರ ರಾಜ್ಯದ ಕಾರ್ಮಿಕರು ತಮ್ಮ ತವರು ಸೇರಿಕೊಂಡಿದ್ದು ಕಾಮಗಾರಿ ಸ್ಥಗಿತವಾಗಲು ಇದೊಂದು ಕಾರಣವಾಗಿದೆ. ಎಲ್ಲವೂ ಸುಗಮ ದಾರಿಯಲ್ಲಿ ಹೋಗುತ್ತಿರುವಾಗಲೆ ಕೆಲವೊಂದು ಕಂಠಕ ಎದುರಾಗಿ ಸೇತುವೆ ಕಾಮಗಾರಿ ಸ್ಥಗಿತವಾಗಿದೆ.

ಇನ್ನೂ ಈ ಸೇತುವೆ ಕಾಮಗಾರಿ ಆರಂಭದಲ್ಲಿ ಸ್ಥಳೀಯ ಕ್ಷೇತ್ರದ ರಾಜಕೀಯ ಲೇಪನ ಆಗಿದೆ ಎಂಬ ವಿಷಯವಾಗಿ  ಹಾಲಿ ಮತ್ತು ಮಾಜಿ ಶಾಸಕ ನಡುವೆ ವಾಕ್ಸಮರ ಕೂಡಾ ನಡೆದಿತ್ತು. ಈ ಘಟನೆಗಳು ಕ್ಷೇತ್ರದಲ್ಲಿ ಪ್ರಗತಿಯಲ್ಲಿರುವಾಗಲೇ ಗುತ್ತಿಗೆ ಪಡೆದ ಕಂಪನಿ ಈ ಸೇತುವೆ ಕಾಮಗಾರಿಯನ್ನೇ ಸ್ಥಗಿತ ಮಾಡಿದ್ದು, ಇಲ್ಲಿನ ಜನ್ರ ಆಕ್ರೋಷಕ್ಕೆ ಕಾರಣವಾಗಿತ್ತು. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಡೆಯುತ್ತಿದ್ದ ಕಚ್ಚಾಟದಲ್ಲಿ ಎರಡು ಗ್ರಾಮದ ಜನರು ಸಂಕಷ್ಟಕ್ಕೆ ಸಿಲುಕುವಂತಾಯಿತು. ಆ ಬಳಿಕ ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಈಗ ಕಾಮಗಾರಿ ಸ್ಥಗಿತವಾಗಲು ಕಾರಣ ಎಂದು ಇಲ್ಲಿನ ಮಾಜಿ ಶಾಸಕರ ಅಭಿಪ್ರಾಯವಾಗಿದೆ.

ಇದನ್ನು ಓದಿ: News 18 Impact | ಆನ್​ಲೈನ್ ಶಿಕ್ಷಣಕ್ಕಾಗಿ ತಾಳಿ ಅಡವಿಟ್ಟ ತಾಯಿಯ ಕುಟುಂಬಕ್ಕೆ ನೆರವಿನ ಮಹಾಪೂರ
ಒಟ್ಟಾರೆ ಸ್ಥಳೀಯ ರಾಜಕೀಯ ಕಚ್ಚಾಟ ಕೊರೋನಾ ಮಹಾಮಾರಿಯ ರಣಕೇಕೆಯ ನಡುವೆ ಎರಡು ವರ್ಷದಲ್ಲಿ ಮುಗಿದು ಲೋಕಾರ್ಪಣೆ ಆಗಬೇಕಿದ್ದ ಸೇತುವೆ ಇನ್ನು ಮುಗಿದಿಲ್ಲ. ಮುಂದೆ ಬೇಗ ಕಾಮಗಾರಿ ಪುನರಾರಂಭವಾಗಿ ದೋಣಿ ಸಂಚಾರಕ್ಕೆ ಪುಲ್ ಸ್ಟಾಪ್ ಬೀಳಲಿದೆಯೇ ಎಂಬುದನ್ನು ಕಾದು ನೋಡಬೇಕು.
Published by: HR Ramesh
First published: August 2, 2020, 5:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading