• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಲಂಚಾವತಾರ, ಡೆಲಿವರಿಗೆ ಹಣದ ಬೇಡಿಕೆ; ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಬಲಿ

ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಲಂಚಾವತಾರ, ಡೆಲಿವರಿಗೆ ಹಣದ ಬೇಡಿಕೆ; ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಬಲಿ

ಅಥಣಿ ಆಸ್ಪತ್ರೆ.

ಅಥಣಿ ಆಸ್ಪತ್ರೆ.

ಇಲ್ಲಿನ ವೈದ್ಯರು ಮಾತ್ರ ಹಣ ಇಲ್ಲದೆ ಹೆರಿಗೆ ಮಾಡಿಸುತ್ತಿಲ್ಲಾ ಎನ್ನುವ ಮಾತುಗಳು ಕೇಳಿ ಬಂದಿವೆ. ಸಾಮಾನ್ಯ ಹೆರಿಗೆಗೆ ಅಂತಾ ಹೋದಾಗ ವೈದ್ಯರು ನೇರವಾಗಿ 2 ರಿಂದ 3  ಸಾವಿರ ಹಣಕ್ಕೆ ಬೇಡಿಕೆ ಇಟ್ಟು ಹೆರಿಗೆ ಮಾಡಲು ಒಪ್ಪುತ್ತಾರೆ. ಇಲ್ಲದೆ ಹೋದರೆ ಏನಾದರು ಸಮಸ್ಯೆ ಹೇಳಿ ಖಾಸಗಿ ಆಸ್ಪತ್ರೆಗೆ ಹೋಗಿ ಇಲ್ಲಾ ಜಿಲ್ಲಾ ಆಸ್ಪತ್ರೆ ಹೋಗಿ ಎಂದು ಹೇಳುತ್ತಾರೆ ಎಂಬ ಆರೋಪವಿದೆ.

ಮುಂದೆ ಓದಿ ...
  • Share this:

ಅಥಣಿ; ಸರಕಾರಿ ಆಸ್ಪತ್ರೆಗಳು ಬಡವರ ಪಾಲಿಗೆ ಸಂಜೀವಿನಿ ಇದ್ದ ಹಾಗೆ ಸರಕಾರಿ ಆಸ್ಪತ್ರೆಗೆ ಬರುವವರು ಬಹುತೇಕ ಬಡ ಕುಟುಂಬದ ಜನ ಹಾಗೂ ನಿರ್ಗತಿಕ ಜನ ಹಾಗಂತ ಸರ್ಕಾರ ಜನರಿಗೆ ಒಳ್ಳೆ ಸೇವೆ ನೀಡುವ ಉದ್ದೇಶದಿಂದ ಪರಿಣಿತ ವೈದ್ಯರಿಗೆ ಲಕ್ಷಾಂತರ ಸಂಬಳ ನೀಡಿ ಸೇವೆ ನೀಡುವಂತೆ ನಿಯೋಜನೆ ಮಾಡಿದೆ ಆದ್ರೆ ವೈದ್ಯರ ಹಣದ ಆಸೆಗೆ ಬಡವರಿಗೆ ಸಿಗಬೇಕಾದ ಉಚಿಚ ಸೇವೆಗಳು ಸಿಗುತ್ತಿಲ್ಲಾ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗೆ ತೆರಳರಿದರೆ ಬಡವರಿಂದ ಹಣ ಪಡೆದು ಚಿಕಿತ್ಸೆ ನೀಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಹೌದು ಇಂತಹ ಆರೋಪಗಳು ಕೇಳಿ ಬಂದಿದ್ದು ಬೆಳಗಾವಿ ಜಿಲ್ಲೆಯ ಅಥಣಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ, ಅಥಣಿ ರಾಜ್ಯದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ತವರು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಅಥಣಿ ಬೆಳಗಾವಿ ಜಿಲ್ಲಾ ಕೇಂದ್ರದಿಂದ 160 ಕಿಲೋಮೀಟರ್ ದೂರದಲ್ಲಿರುವ ಕೊನೆಯ ತಾಲೂಕು ಕೇಂದ್ರವಾಗಿದೆ ಇಲ್ಲಿರುವ ಬಹುತೇಕ ಜನ ಅಥಣಿಯ ಸರಕಾರಿ ಆಸ್ಪತ್ರೆಯನ್ನೆ ಅವಲಂಬಿಸಿದ್ದಾರೆ.


ಅದರಲ್ಲೂ ಹೆರಿಗೆ ವಿಚಾರ ಬಂದಾಗ ಬಡವರ ಪಾಲಿಗೆ ಇದೊಂದೆ ಆಸ್ಪತ್ರೆಯಾಗಿದೆ. ಆದ್ರೆ ಇಲ್ಲಿನ ವೈದ್ಯರು ಮಾತ್ರ ಹಣ ಇಲ್ಲದೆ ಹೆರಿಗೆ ಮಾಡಿಸುತ್ತಿಲ್ಲಾ ಎನ್ನುವ ಮಾತುಗಳು ಕೇಳಿ ಬಂದಿವೆ. ಸಾಮಾನ್ಯ ಹೆರಿಗೆಗೆ ಅಂತಾ ಹೋದಾಗ ವೈದ್ಯರು ನೇರವಾಗಿ 2 ರಿಂದ 3  ಸಾವಿರ ಹಣಕ್ಕೆ ಬೇಡಿಕೆ ಇಟ್ಟು ಹೆರಿಗೆ ಮಾಡಲು ಒಪ್ಪುತ್ತಾರೆ ಇಲ್ಲದೆ ಹೋದರೆ ಏನಾದರು ಸಮಸ್ಯೆ ಹೇಳಿ ಖಾಸಗಿ ಆಸ್ಪತ್ರೆಗೆ ಹೋಗಿ ಇಲ್ಲಾ ಜಿಲ್ಲಾ ಆಸ್ಪತ್ರೆ ಹೋಗಿ ಎಂದು ಹೇಳುತ್ತಾರೆ. ಇನ್ನು ಒಂದು ವೇಳೆ ಸಿಜರೀನ ಮಾಡಬೇಕು ಅಂದ್ರು ಅಷ್ಟೇ 8 ರಿಂದ 10 ಸಾವಿರ ಹಣಕ್ಕೆ ಬೇಡಿಕೆ ಇಡುತ್ತಾರೆ ಎಂದು ಜನ ಆರೋಪಿಸಿದ್ದಾರೆ.


ಇನ್ನು ಖಾಸಗಿ ಆಸ್ಪತ್ರೆಗಳಿಗೆ ತೆರಳಿದರೆ ಒಂದು ಸೀಜರಿನ್ ಮಾಡಿಸಬೇಕು ಅಂದ್ರೆ ಕನಿಷ್ಠ 45 ಸಾವಿರ ಹಣ ಕಟ್ಟಬೇಕಾಗುತ್ತದೆ ಹಾಗಾಗಿ ಅನಿವಾರ್ಯವಾಗಿ ಹಣ ಕೊಟ್ಟು ಇಲ್ಲಿಯೇ ಸೀಜರಿನ ಮಾಡಿಸುವ ಪರಿಸ್ಥಿತಿ ಬಂದಿದೆ. ಒಂದು ವೇಳೆ ಹಣ ನೀಡಲು ಒಪ್ಪದೆ ಇದ್ರೆ ನಮ್ಮ ಬಳಿ ಸರಿಯಾದ ವ್ಯವಸ್ಥೆ ಇಲ್ಲಾ. ಬಿಪಿ ಜಾಸ್ತಿ ಆಗಿದೆ ಅರವಳಿಕೆ ವೈದ್ಯರು ಇಲ್ಲಾ ಎಂದು ಕುಂಟು ನೆಪ ಹೇಳಿ ನೀವು ಬೇರೆಡೆಗೆ ಹೋಗಿ ಎಂದು ಹೇಳುತ್ತಾರೆ ಎಂದು ಆಸ್ಪತ್ರೆಗೆ ಬಂದ ಜನ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.


ವೈದ್ಯರ ನಿರ್ಲಕ್ಷ್ಯ ಮಗು ಸಾವು ಆರೋಪ;


ಕಳೆದ ಎರಡು ದಿನಗಳ ಹಿಂದೆ ತಾಲೂಕಿನ ಹುಲಗಬಾಳ ಗ್ರಾಮದ ಮಹಿಳೆಯೊಬ್ಬರು ಹೆರಿಗೆಗೆ ಬಂದ ವೇಳೆ ನಾರ್ಮಲ್ ಡೆಲಿವರಿ ಆಗುತ್ತೆ ಅಂದಿದ್ದ ಸಿಬ್ಬಂದಿ ನಂತರದಲ್ಲಿ ಸೀಜರ್ ಮಾಡಲು ಮುಂದಾಗಿದ್ರು. ಆದ್ರೆ ಕರ್ತವ್ಯ ನಿರತ ವೈದ್ಯರು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಮಗು ಸಾವನ್ನಪ್ಪಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.


ಮೊದಲಿಗೆ ನಾರ್ಮಲ್ ಡೆಲಿವರಿ ಮಾಡಲು ಯತ್ನಿಸಿದ್ದ ಸಿಬ್ಬಂಗಳು ಬಳಿಕ  ತಜ್ಞ ವೈದರಿಗೆ ನಾರ್ಮಲ್ ಡೆಲಿವರಿ ಆಗದ ಕುರಿತು ಮಾಹಿತಿ ನೀಡಿದ್ರು ಆದ್ರೆ ವೈದ್ಯರು ಮಾತ್ರ ಸಮಯಕ್ಕೆ ಸರಿಯಾಗಿ ಬಾರದ ಹಿನ್ನಲೆ ಮಗು ಹುಟ್ಟುವ ಮುನ್ನವೆ ಡೆಲಿವರಿ ಸಮಯದಲ್ಲೆ ಅಸುನೀಗಿದೆ.


ಇದನ್ನೂ ಓದಿ : ಬಿಹಾರದಲ್ಲಿ ಎನ್​ಕೌಂಟರ್​; ಮೂವರು ಮಾವೋವಾದಿಗಳ ಹತ್ಯೆ


ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು;


ಇನ್ನು ಇಷ್ಟೆಲ್ಲಾ ಸಮಸ್ಯೆಗಳು ಇಲ್ಲಿ ಇದ್ರು ಸಹ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲಾ. ಇಂತಹ ಘಟಕಗಳು ಪದೆ ಪದೆ ಮರುಕಳಿಸಿದ್ರು ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳು ಮತ್ತು ಅಥಣಿ ತಾಲ್ಲೂಕು ಆಸ್ಪತ್ರೆ ಆಡಳಿತ ಸಿಬ್ಬಂದಿ ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ. ಅಲ್ಲದೆ ಇಲ್ಲಿನ ಬಹುತೇಕ ಸಿಬ್ಬಂದಿಗಳು ಮನಸ್ಸಿಗೆ ಬಂದಾಗ ಕೆಲಸಕ್ಕೆ ಚಕ್ಕರ ಹಾಕಿ ಹೊರಗಡೆ ಹೋಗುತ್ತಾರೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.


ಒಟ್ಟಿನಲ್ಲಿ ಸ್ವತಃ ಉಪ ಮುಖ್ಯಮಂತ್ರಿಗಳ ತವರಲ್ಲೆ ಇಂತಹ ಪರಿಸ್ಥಿತಿ ಆದ್ರೆ ಇನ್ನುಳಿದ ಕಡೆ ಹೇಗಿರಬೇಕು ಎಂಬುದು ಪ್ರಶ್ನೆಯಾಗಿದೆ. ಇನ್ನಾದರು ಜನ ಪ್ರತಿನಿಧಿಗಳು ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಬಡವರಿಗೆ ಉಚಿತ ಚಿಕಿತ್ಸೆ ಸಿಗುವ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ.

Published by:MAshok Kumar
First published: