HOME » NEWS » District » BOMBAY SPECIAL EXPRESS TRAIN HAD TO COME UDUPI MAK

ಕೊರೋನಾ ಸಂಕಷ್ಟದ ನಡುವೆ ಉಡುಪಿಗೆ ಬಂತು ಬಾಂಬೆ ಸ್ಪೆಷಲ್‌ ಎಕ್ಸ್ ಪ್ರೆಸ್ ರೈಲು

ಮುಂಬೈ ಎರ್ನಾಕುಲಂ ಮಾರ್ಗದ ಲೋಕಮಾನ್ಯ ತಿಲಕ್ ಎಕ್ಸ್ ಪ್ರೆಸ್ ರೈಲಿನಲ್ಲಿ 150ಮಂದಿ ಗುರುವಾರ ಮಹಾರಾಷ್ಟ್ರದಿಂದ ಆಗಮಿಸಿದ್ದಾರೆ. ಇವರೆಲ್ಲರ ಮಾಹಿತಿ ಪಡೆದು ಸೀಲ್ ಹಾಕಿ  ಜಿಲ್ಲಾಡಳಿತ ಸೂಚಿಸಿದ ಆಯಾಯಾ ತಾಲೂಕಿನ ಕ್ವಾರಂಟೈನ್ ಸ್ಥಳಕ್ಕೆ ಕಳುಹಿಸಲಾಗಿದೆ.

news18-kannada
Updated:June 5, 2020, 7:11 AM IST
ಕೊರೋನಾ ಸಂಕಷ್ಟದ ನಡುವೆ ಉಡುಪಿಗೆ ಬಂತು ಬಾಂಬೆ ಸ್ಪೆಷಲ್‌ ಎಕ್ಸ್ ಪ್ರೆಸ್ ರೈಲು
ಉಡುಪಿಗೆ ಬಂದಿರುವ ಮಹಾರಾಷ್ಟ್ರ ಎಕ್ಸ್‌ಪ್ರೆಸ್‌ ರೈಲು.
  • Share this:
ಉಡುಪಿ; ಜಿಲ್ಲೆಯಲ್ಲಿ ಮುಂಬೈ ಲಿಂಕ್ ನಿಂದ ಕೊರೋನಾ ಪಾಸಿಟಿವ್ ಪ್ರಕರಣಗಳು ದಿನೇ ದಿನೇ ಸ್ಪೋಟಗೊಳ್ಳುತ್ತಿವೆ. ಈಗಾಗಲೇ ಮಹಾರಾಷ್ಟ್ರದಿಂದ ಬಂದಂತಹ  7ಸಾವಿರ ಮಂದಿಯಲ್ಲಿನ 400ಮಂದಿಗೆ ಕೊರೋನಾ ಇರೋದು ಧೃಡಪಟ್ಟಿದೆ. ಈ ಸಂಕಷ್ಟದ ನಡುವೆ ಮುಂಬೈನಿಂದ ಮೊದಲ ರೈಲು ಉಡುಪಿಗೆ ಆಗಮಿಸಿದ್ದು ಜನರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ. 

ಮುಂಬೈ ಎರ್ನಾಕುಲಂ ಮಾರ್ಗದ ಲೋಕಮಾನ್ಯ ತಿಲಕ್ ಎಕ್ಸ್ ಪ್ರೆಸ್ ರೈಲಿನಲ್ಲಿ 150ಮಂದಿ ಗುರುವಾರ ಮಹಾರಾಷ್ಟ್ರದಿಂದ ಆಗಮಿಸಿದ್ದಾರೆ. ಇವರೆಲ್ಲರ ಮಾಹಿತಿ ಪಡೆದು ಸೀಲ್ ಹಾಕಿ  ಜಿಲ್ಲಾಡಳಿತ ಸೂಚಿಸಿದ ಆಯಾಯಾ ತಾಲೂಕಿನ ಕ್ವಾರಂಟೈನ್ ಸ್ಥಳಕ್ಕೆ ಕಳುಹಿಸಲಾಗಿದೆ.

ಇನ್ನು ಮಹಾರಾಷ್ಟ್ರದಿಂದ ಆಗಮಿಸುವವರನ್ನ ಕ್ವಾರಂಟೈನ್ ಮಾಡೋದಕ್ಕೆ ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಬಾಂಬೆಯಿಂದ ಬಂದು ರೈಲ್ವೆ ನಿಲ್ದಾಣದಲ್ಲಿ‌ ಇಳಿದ ಮಹಿಳೆಯೊಬ್ಬರು ಆಕ್ರೋಶ ಹೊರಹಾಕಿ, ‌ ನಾವು ಮಾಸ್ಕ್ , ಸ್ಯಾನಿಟೈಸ್ ಬಳಸಿ ಸಾಮಾಜಿಕ ಅಂತರದಲ್ಲಿ ಆಗಮಿಸಿದ್ರೂ ಕ್ವಾರಂಟೈನ್ ಮಾಡಿ ಶಿಕ್ಷೆ ಏಕೆ?  ನಾವು ದುಡಿಯಲು ಮುಂಬೈ ಹೋದವರೆ ಹೊರತು ಪಾಕಿಸ್ತಾನದವರಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ : Lunar Eclipse 2020; ನಾಳೆ ಸಂಭವಿಸಲಿರುವ ಚಂದ್ರ ಗ್ರಹಣದ ಸಂದರ್ಭದಲ್ಲಿ ಏನು ಮಾಡಬೇಕು? ಏನನ್ನು ತಪ್ಪಿಸಬೇಕು?
Youtube Video
First published: June 5, 2020, 7:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories