HOME » NEWS » District » BODYBUILDING ASPIRANT MURDERED IN CHIKKAMAGALURU VCTV SNVS

ಸ್ನೇಹಿತನ ಸೋದರಿಗೆ ಮೆಸೇಜ್ ಮಾಡುತ್ತಿದ್ದವನಿಗೆ ವಾರ್ನಿಂಗ್ ಕೊಡಲು ಹೋಗಿ ಕೊಲೆಯಾದ ಬಾಡಿ ಬಿಲ್ಡರ್

ಪೈಲ್ವಾನ್ ಆಗುವ ಆಸೆ ಇಟ್ಟುಕೊಂಡು ದೈಹಿಕ ಕಸರತ್ತಿನಲ್ಲಿ ನಿರತನಾಗಿದ್ದ 22 ವರ್ಷದ ಮನೋಜ್ ಚಿಕ್ಕಮಗಳೂರಿನಲ್ಲಿ ಕೊಲೆಯಾಗಿ ಹೋಗಿದ್ದಾನೆ. ಹುಡುಗಿಯ ವಿಚಾರಕ್ಕೆ ಈತನ ಹತ್ಯೆಯಾಗಿರುವುದು ತಿಳಿದುಬಂದಿದೆ.

news18-kannada
Updated:April 10, 2021, 11:33 AM IST
ಸ್ನೇಹಿತನ ಸೋದರಿಗೆ ಮೆಸೇಜ್ ಮಾಡುತ್ತಿದ್ದವನಿಗೆ ವಾರ್ನಿಂಗ್ ಕೊಡಲು ಹೋಗಿ ಕೊಲೆಯಾದ ಬಾಡಿ ಬಿಲ್ಡರ್
ಮನೋಜ್
  • Share this:
ಚಿಕ್ಕಮಗಳೂರು: ಮಿಸ್ಟರ್ ಚಿಕ್ಕಮಗಳೂರು ಆಗಬೇಕು ಅನ್ನೋ ಕನಸು ಕಂಡಿದ್ದ ಬಾಡಿ ಬಿಲ್ಡರ್ ಯುವಕನೊಬ್ಬ ಕ್ಷುಲಕ ಕಾರಣಕ್ಕೆ ಕೊಲೆಯಾಗಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಇಲ್ಲಿಯ ಅಯ್ಯಪ್ಪ ನಗರದಲ್ಲಿ 22 ವರ್ಷದ ಮನೋಜ್ ಮೃತಪಟ್ಟಿದ್ದಾನೆ. ತನ್ನ ಬದುಕಿನ ಯಾತ್ರೆಯನ್ನ ಮುಗಿಸಿರೋ ಮನೋಜ್ ತಾನೊಬ್ಬ ಪೈಲ್ವಾನ್ ಆಗೋ ಕನಸು ಕಂಡಿದ್ದವನು. ಮಿಸ್ಟರ್ ಚಿಕ್ಕಮಗಳೂರು ಆಗಬೇಕು ಅಂತಾ ಬೆಂಗಳೂರಿನಿಂದ ಕೆಲಸ ಬಿಟ್ಟು ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೇ ಚಿಕ್ಕಮಗಳೂರಿಗೆ ಹಿಂದಿರುಗಿದ್ದ. ಅದೇ ಉತ್ಸಾಹ, ಹುಮ್ಮಸ್ಸಿನಿಂದ ದಿನನಿತ್ಯ ಕಸರತ್ತು ಕೂಡ ನಡೆಸುತ್ತಿದ್ದ.

ಸ್ನೇಹಜೀವಿಯೂ ಆಗಿದ್ದ ಮನೋಜ್​ಗೆ ದೊಡ್ಡ ಸ್ನೇಹ ಬಳಗವಿತ್ತು. ಹೀಗಾಗಿಯೇ ಗೆಳೆಯರ ಏನೇ ಸಮಸ್ಯೆಗೆ ನಾನಿದ್ದೇನೆ ಎಂದು ಸದಾ ಮುಂದೆ ಇರುತ್ತಿದ್ದ. ಮೊನ್ನೆ ಕೂಡ ತನ್ನ ಸ್ನೇಹಿತನ ಸಹೋದರಿಗೆ ಇನ್ಯಾರೋ ಹುಡುಗ ಮೆಸೇಜ್ ಮಾಡ್ತಿದ್ದಾನೆ ಅನ್ನೋ ವಿಚಾರ ಗೊತ್ತಾಗಿದೆ. ಆ ಕೂಡಲೇ, ಬುಧವಾರದಂದು ಆ ಗೆಳೆಯನನ್ನ ಕರೆದುಕೊಂಡು ಮೆಸೇಜ್ ಮಾಡುತ್ತಿದ್ದವನಿಗೆ ವಾರ್ನಿಂಗ್ ಕೊಡಲು ಹೋದಾಗ ಮಾರಾಮಾರಿ ನಡೆದಿದೆ. ಅಲ್ಲಿ ಮಾತಿಗೆ ಮಾತು ಬೆಳೆದಿದೆ. ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಮನೋಜ್ ಮೇಲೆ ಮನಸೋ ಇಚ್ಛೆ ಅಟ್ಯಾಕ್ ಮಾಡಿದ ಎದುರಾಳಿ ತಂಡದ ಯುವಕರು ಸ್ಥಳದಿಂದ ಪರಾರಿಯಾಗಿದ್ದಾರೆ.

ಮೂರು ದಿನಗಳ ಹಿಂದೆ ನಡೆದಿದ್ದ ಆ ಮಾರಾಮಾರಿಯಲ್ಲಿ ಮನೋಜ್ ತಲೆಗೆ ಕಬ್ಬಿಣದ ರಾಡ್​ನಿಂದ ಬಲವಾಗಿ ಹೊಡೆದು ಹಲ್ಲೆ ಮಾಡಲಾಗಿತ್ತು. ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಕರೆದುಕೊಂಡು ಹೋದರೂ ಮನೋಜ್​ನನ್ನ ಬದುಕಿಸಲು ಸಾಧ್ಯವಾಗಲಿಲ್ಲ. ತಲೆಗೆ ಬಲವಾದ ಪೆಟ್ಟು ಆಗಿದ್ರಿಂದ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿನ್ನೆ ಕೊನೆಯುಸಿರೆಳೆದು ಬಿಟ್ಟಿದ್ದಾನೆ. ಮನೋಜ್ ಶವವನ್ನ ತವರಿಗೆ ತಂದಾಗ ಪೋಷಕರ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.

ಇದನ್ನೂ ಓದಿ: ಮಸ್ಕಿ ಉಪಚುನಾವಣೆ ಅಖಾಡಕ್ಕೆ ಸಿಎಂ ಯಡಿಯೂರಪ್ಪ; ದಲಿತ ಕೇರಿಯಲ್ಲಿ ಭರ್ಜರಿ ಸ್ವಾಗತ

ಅಷ್ಟಕ್ಕೂ ಮನೋಜ್ ಕೊಲೆಯಾಗಿದ್ದು ಒಂದು ಹುಡುಗಿ ವಿಚಾರಕ್ಕೆ ಅನ್ನೋದೇ ಇಲ್ಲಿ ವಿಪರ್ಯಾಸ. ಯಾವಾಗ ಚಿಕಿತ್ಸೆ ಫಲಕಾರಿಯಾಗದೇ ಮನೋಜ್ ಸಾವನ್ನಪ್ಪಿದನೋ ಆಗ ಆರೋಪಿಗಳನ್ನ ಬಂಧಿಸುವಂತೆ ಪೋಲೀಸರ ಮೇಲೆ ಒತ್ತಡ ಹೆಚ್ಚಾಯಿತು. ಅನ್ಯಧರ್ಮದ ಯುವಕರು ಹಿಂದೂ ಕಾರ್ಯಕರ್ತನನ್ನ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತು. ಬೇಕೇ ಬೇಕು, ನ್ಯಾಯ ಬೇಕು ಅನ್ನೋ ಕೂಗು ನಗರಾದ್ಯಂತ ಮಾರ್ದನಿಸಿತು. ಕೂಡಲೇ ಆರೋಪಿಗಳನ್ನ ಬಂಧಿಸಬೇಕೆಂದು ಚಿಕ್ಕಮಗಳೂರು ಬಂದ್​ಗೆ ಕರೆ ಕೊಡಲಾಯಿತು. ಜನರು ಜಮಾವಣೆ ಆಗುತ್ತಲೇ ಅಲರ್ಟ್ ಆದ ಪೋಲೀಸರು, ಪರಿಸ್ಥಿತಿಯನ್ನ ಕೈ ಮೀರದಂತೆ ನೋಡಿಕೊಂಡರು. ಸದ್ಯ ಇಬ್ಬರು ಆರೋಪಿಗಳನ್ನ ಬಂಧಿಸಿರುವ ಪೋಲೀಸರು, ಉಳಿದ ಆರೋಪಿಗಳಿಗಾಗಿ ಬಲೆಬೀಸಿದ್ದಾರೆ. ಒಟ್ಟಾರೆ ತನ್ನದಲ್ಲದ ಸಮಸ್ಯೆಯನ್ನ ಮೈಮೇಲೆ ಎಳೆದುಕೊಂಡ ಮಸಲ್ ಮ್ಯಾನ್ ಬಾರದೂರಿಗೆ ಮರಳಿ ಪಯಣಿಸಿದ್ದು ಮಾತ್ರ ನಿಜಕ್ಕೂ ವಿಪರ್ಯಾಸ.

ವರದಿ: ವೀರೇಶ್ ಹೆಚ್ ಜಿ
Published by: Vijayasarthy SN
First published: April 10, 2021, 11:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories