HOME » NEWS » District » BLIND GIRL VAIN ATTEMPT TO MEET CM BS YEDIYURAPPA SHM SNVS

ಕೆಲಸ ಸಿಗಲ್ಲ, ಭಿಕ್ಷೆಗೆ ಬಿಡಲ್ಲ, ಏನು ಮಾಡಣ? ಸಿಎಂ ಕಾಣಲು ಹಠಕ್ಕೆ ಬಿದ್ದ ದೃಷ್ಟಿಚೇತನ ಯುವತಿ

ನಾನು ಮುಖ್ಯಮಂತ್ರಿಗಳನ್ನ ಭೇಟಿ ಆಗಲೇಬೇಕು ಎಂದು ಆಸೆಯಿಂದ ಬಂದ ಅಂಧ ಯುವತಿ ಅದು ಸಾಧ್ಯವಾಗದೇ ಹತಾಶೆಯಲ್ಲಿ ರಸ್ತೆ ಮಧ್ಯೆ ನಿಂತ ಘಟನೆ ಸಿಎಂ ಗೃಹ ಕಚೇರಿ ಕೃಷ್ಣಾ ಬಳಿ ಬುಧವಾರ ನಡೆದಿದೆ.

news18-kannada
Updated:December 2, 2020, 1:12 PM IST
ಕೆಲಸ ಸಿಗಲ್ಲ, ಭಿಕ್ಷೆಗೆ ಬಿಡಲ್ಲ, ಏನು ಮಾಡಣ? ಸಿಎಂ ಕಾಣಲು ಹಠಕ್ಕೆ ಬಿದ್ದ ದೃಷ್ಟಿಚೇತನ ಯುವತಿ
ಬೆಂಗಳೂರಿನಲ್ಲಿ ಸಿಎಂ ಭೇಟಿಗೆ ಯತ್ನಿಸಿದ ಅಂಧ ಯುವತಿ
  • Share this:
ಬೆಂಗಳೂರು(ಡಿ. 02): ಮುಖ್ಯಮಂತ್ರಿಗಳ ಬಳಿ ಕಷ್ಟ ಹೇಳಿಕೊಳ್ಳಲು ಸಾಧ್ಯವಾಗದೆ ನಿರಾಸೆಗೊಂಡು ದೃಷ್ಟಿಚೇತನದ ಯುವತಿಯೊಬ್ಬಳು ರಸ್ತೆ ಮಧ್ಯೆಯೇ ನಿಂತು ಅತ್ತ ಘಟನೆ ಸಿಎಂ ಗೃಹ ಕಚೇರಿ ಕೃಷ್ಣಾ ಬಳಿ ನಡೆದಿದೆ. ಸಿಎಂ ಯಡಿಯೂರಪ್ಪ ಅವರನ್ನ ನೋಡಲು ಕೃಷ್ಣಾ ಬಳಿ ಈ ಯುವತಿ ಬಂದು ಬಹಳ ಹೊತ್ತು ಕಾದು ಕುಳಿತಿದ್ದಳು. ಆದರೆ, ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಸಿಎಂ ಪೂರ್ಣ ಬ್ಯುಸಿ ಆಗಿದ್ದರಿಂದ ಪೊಲೀಸರು ಈ ಯುವತಿ ಭೇಟಿಗೆ ಅವಕಾಶ ಕೊಡಲಿಲ್ಲ. ಇದರಿಂದ ಬೇಸತ್ತ ಆ ದೃಷ್ಟಿ ಚೇತನದ ಹುಡುಗಿ ರಸ್ತೆ ಮಧ್ಯೆ ಹೋಗಿ ನಿಂತುಕೊಂಡಿದ್ದಾಳೆ.

ನಮಗೆ ಕೆಲಸ ಸಿಗಲ್ಲ. ಭಿಕ್ಷೆ ಬೇಡಲು ಪೊಲೀಸರು ಬಿಡಲ್ಲ. ನಾವು ಏನು ಮಾಡೋಣ ಎಂದು ರಸ್ತೆ ಮಧ್ಯೆಯೇ ಆ ಯುವತಿ ರತ್ನಮ್ಮ ಅಳಲು ತೋಡಿಕೊಂಡಿದ್ದಾಳೆ. ಈ ದೃಶ್ಯ ನಡೆಯುತ್ತಿರುವಂತೆಯೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಏನು ಮಾಡಬೇಕೆಂದು ತಿಳಿಯದೇ ವಾಹನ ನಿಲ್ಲಿಸಿ ಮೂಕ ಪ್ರೇಕ್ಷಕರಾಗಿ ನೋಡುವಂತಾಗಿತ್ತು. ಟ್ರಾಫಿಕ್ ಜಾಮ್ ಆಗುತ್ತಿದ್ದಂತೆಯೇ ಪೊಲೀಸರು ರತ್ನಮ್ಮಳ ಮನವೊಲಿಸಿ ರಸ್ತೆ ಬದಿಗೆ ಕರೆದೊಯ್ದರು. ಪೊಲೀಸರ ಬಳಿ ತನ್ನ ಕಷ್ಟ ಹೇಳಿಕೊಂಡ ಆಕೆ ತಾನು ಮುಖ್ಯಮಂತ್ರಿಗಳನ್ನ ಭೇಟಿ ಆಗಲೇಬೇಕು ಎಂದು ಹಠ ಹಿಡಿಯುತ್ತಾಳೆ. ನಂತರ ಪೊಲೀಸರು ಆ ಯುವತಿಯನ್ನು ಕೃಷ್ಣಾ ಒಳಗೆ ಕರೆದುಕೊಂಡು ಹೋಗುತ್ತಾರೆ.

ಇದನ್ನೂ ಓದಿ: ಫೇಕ್ ನ್ಯೂಸ್ ಎಂದು ಹೇಳಿ ಸುಳ್ಳು ಟ್ವೀಟ್: ಬಿಜೆಪಿ ಐಟಿ ಸೆಲ್ ಮುಖ್ಯಸ್ಥನ ಟ್ಯಾಗ್ ಮಾಡಿದ ಟ್ವಿಟ್ಟರ್

ಸಂಪುಟ ವಿಸ್ತರಣೆ, ಆಂತರಿಕ ಬಂಡಾಯ, ಪ್ರತಿಭಟನೆಗಳ ಬಿಸಿ ಇತ್ಯಾದಿಗಳಿಂದ ಕಂಗೆಟ್ಟಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಈ ಅಮಾಯಕ ದೃಷ್ಟಿ ಚೇತನ ಯುವತಿಯ ಕಷ್ಟ ಕೇಳಲು ಸಮಯ ವ್ಯಯಿಸುತ್ತಾರಾ ಕಾದು ನೋಡಬೇಕು.

ವರದಿ: ಸಂಜಯ್ ಎಂ ಹುಣಸನಹಳ್ಳಿ
Published by: Vijayasarthy SN
First published: December 2, 2020, 1:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories