HOME » NEWS » District » BLACK FUNGUS CASES AN ENTRY INTO THE GADAG DISTRICT MINISTER CC PATIL CLARIFIES MAK

Black Fungus: ಗದಗ ಜಿಲ್ಲೆಗೂ ಎಂಟ್ರಿ ಕೊಟ್ಟ ಬ್ಲಾಕ್ ಫಂಗಸ್; ಸಚಿವ ಸಿ.ಸಿ.ಪಾಟೀಲ್ ಸ್ಪಷ್ಟನೆ..!

ಗದಗ ಜಿಲ್ಲೆಯಲ್ಲಿ ನಿತ್ಯವೂ 15-18 ಸೋಂಕಿತರು ಸಾವನ್ನಪ್ಪುತ್ತಿದ್ದಾರೆ ಎಂದು ಕಾಂಗ್ರೆಸ್‌ ಶಾಸಕ ಎಚ್.ಕೆ ಪಾಟೀಲ್ ಆರೋಪ‌ಕ್ಕೆ ಗದಗನಲ್ಲಿ ಸಚಿವ ಸಿ.ಸಿ‌. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

news18-kannada
Updated:May 18, 2021, 7:08 AM IST
Black Fungus: ಗದಗ ಜಿಲ್ಲೆಗೂ ಎಂಟ್ರಿ ಕೊಟ್ಟ ಬ್ಲಾಕ್ ಫಂಗಸ್; ಸಚಿವ ಸಿ.ಸಿ.ಪಾಟೀಲ್ ಸ್ಪಷ್ಟನೆ..!
ಬ್ಲಾಕ್​ ಫಂಗಸ್ ವೈರಸ್.
  • Share this:
ಗದಗ: ಜಿಲ್ಲೆಗೂ ಬ್ಲಾಕ್ ಫಂಗಸ್ ರೋಗ ಕಾಲಿಟ್ಟಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್ ಸ್ಪಷ್ಟ ಪಡಿಸಿದ್ದಾರೆ. ಸೋಮವಾರ ಬ್ಲಾಕ್ ಫಂಗಸ್ ನ ಎರಡು ಕೇಸ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದು ಸರ್ಕಾರದ ಮಾರ್ಗಸೂಚಿ ಪ್ರಕಾರ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ಗದಗ ಜಿಲ್ಲೆ ಲಾಕ್ ಡೌನ್ ವಿಚಾರವಾಗಿ ಮಾತನಾಡಿದ ಸಚಿವ ಸಿಸಿ ಪಾಟೀಲ್, "ಪಾಸಿಟಿವಿಟಿ ಇಳಿಕೆ ಪ್ರಮಾಣ ನೋಡಿ ಜಿಲ್ಲೆಯ ಲಾಕ್​ಡೌನ್ ಕುರಿತು ನಿರ್ಧಾರ ಕೈಗೊಳಲಾಗುವುದು. ಬೇರೆಡೆ ದುಡಿಯಲು ಹೋದವರು ವಾಪಸ್ ಬಂದ ನಂತರ ಪಾಸಿಟಿವಿಟಿ ಹೆಚ್ಚಾಗಿದೆ. ಹೋಂ ಐಸೋಲೇಷನ್ ನಲ್ಲಿರುವವರು ಮನೆಯಲ್ಲಿಯೆರ ಇರಬೇಕು.ಅಂಥವರು ಓಡಾಡುವುದರಿಂದ ಪಾಸಿಟೀವ್ ಹೆಚ್ಚಾಗುತ್ತಿದೆ. ಸುಧಾರಣೆ ಮಾಡಿಕೊಳ್ಳಲಿಲ್ಲದಿದ್ದರೆ, ಅವರನ್ನು ಕೇರ್ ಸೆಂಟರ್ ಗೆ ಅಡ್ಮಿಟ್ ಮಾಡ್ತೀವಿ" ಎಂದಿದ್ದಾರೆ.

ಇನ್ನು ಕಾಂಗ್ರೇಸ್ ಶಾಸಕ ಎಚ್ ಕೆ ಪಾಟೀಲ್ ಮೇಲೆ ಸಚಿವ ಸಿ.ಸಿ. ಪಾಟೀಲ್ ವಾಗ್ದಾಳಿ ನಡೆಸಿದರು. ಪಿಎಂ ಕೇರ್ ವೆಂಟೆಲೇಟರ್ ಡಬ್ಬಾ ಎಂದು ಶಾಸಕ ಎಚ್ ಕೆ ಪಾಟೀಲ್ ಈ ಹಿಂದೆಯೇ ತೆಗಳಿದ್ದರು. ಪಿಎಂ ಕೇರ್ ವೆಂಟಿಲೇಟರ್ ಡಬ್ಬಾ ಎನ್ನುವ ಮೂಲಕ ವ್ಯವಸ್ಥೆ ಬುಡಮೇಲು ಮಾಡಲು ಯತ್ನಸಿದ್ದಾರೆ. ಮಾಜಿ ಸಚಿವರ ಈ ವರ್ತನೆಗೆ ಕಿಡಿಕಾರಿರುವ ಸಿ.ಸಿ. ಪಾಟೀಲ್, "ಅವ್ಯವಸ್ಥೆ ಇದ್ದರೆ ಅದನ್ನು ಸರಿಪಡಿಸಲು ಸಲಹೆ ನೀಡಲಿ. ಅದು ಬಿಟ್ಟು ಟೀಕೆ ಮಾಡುವುದು ಬೇಡ .ಎಲ್ಲರೂ ಸೇರಿ ಕೋವಿಡ್ ವಿರುದ್ಧ ಹೋರಾಡಬೇಕಿದೆ. ನಿನ್ನೆ ಮಾಡಿದ ಸುದ್ದಿಗೋಷ್ಠಿ ಅವರ ಸ್ವಂತ ಬುದ್ದಿಯಿಂದ ಮಾಡಿದ್ದಲ್ಲ ಎನಿಸುತ್ತಿದೆ. ಈ ಬಗೆಯ ಸುದ್ದಿಗೋಷ್ಠಿ ಮೂಲಕ ಜನರ ದಾರಿ ತಪ್ಪಿಸುವುದು ಬೇಡ" ಎಂದಿದ್ದಾರೆ.

ಗದಗ ಜಿಲ್ಲೆಯಲ್ಲಿ ನಿತ್ಯವೂ 15-18 ಸೋಂಕಿತರು ಸಾವನ್ನಪ್ಪುತ್ತಿದ್ದಾರೆ ಎಂದು ಕಾಂಗ್ರೆಸ್‌ ಶಾಸಕ ಎಚ್.ಕೆ ಪಾಟೀಲ್ ಆರೋಪ‌ಕ್ಕೆ ಗದಗನಲ್ಲಿ ಸಚಿವ ಸಿ.ಸಿ‌. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು. ಸಾವು ಸಂಭವಿಸುತ್ತಿರೋದು ನಿಜ. ಚಿಕಿತ್ಸೆ ನೀಡಿದ ಎಲ್ಲ ರೋಗಿಗಳು ಗುಣಮುಖ ಆಗ್ತಾರಂತಲ್ಲ. ಜನ್ರು ತೀವ್ರ ಉಸಿರಾಟ ತೊಂದರೆಯಾದಾಗ ಬರ್ತಾರೆ. ಕಾಂಗ್ರೆಸ್ ಕೆಲಸ ಇದೇ ರೀತಿ ಆರೋಪ ಮಾಡೋದು ಎಂದರು.

ಇದನ್ನೂ ಓದಿ: ಹೆಚ್ಚು ಮಾತನಾಡಿದರೇ ಯೋಗಿ ಸರ್ಕಾರ ನನ್ನ ವಿರುದ್ಧವೂ ದೇಶದ್ರೋಹ ಪ್ರಕರಣ ದಾಖಲಿಸುತ್ತದೆ: ಬಿಜೆಪಿ ಶಾಸಕನ ಆತಂಕ!

ರಾಜಕೀಯ ಜಂಜಾಟ ಸೋಂಕಿತರ ಕಿವಿಗೆ ಬಿದ್ರೆ ಧೈರ್ಯ ಕಳೆದುಕೊಳ್ಳುತ್ತಾರೆ. ಇನ್ನು ಹುಲಕೋಟಿ ಆಸ್ಪತ್ರೆಯಲ್ಲಿ ಜನ್ರು ಸತ್ತಿಲ್ವಾ ಅಂತ ಎಚ್.ಕೆ ಪಾಟೀಲ್ ಪ್ರಶ್ನೆ ಮಾಡಿದ್ರು. ಹುಲಕೋಟಿ ಆಸ್ಪತ್ರೆಯಿಂದ ಜಿಮ್ಸ್ ಆಸ್ಪತ್ರೆಗೆ ಎಷ್ಟು ರೋಗಿಗಳು ಬಂದಿದ್ದಾರೆ ಅಂತ ಎಚ್ಕೆ ಪಾಟೀಲ್ ಹೇಳಬೇಕು ಎಂದ್ರು. ಇನ್ನು ಸಿದ್ದರಾಮಯ್ಯ ಮನೆಯಿಂದ ಸಂದೇಶ ಬಂದಿದೆ ಅಂತ ಹೇಳಿ ಗದಗ ಜಿಲ್ಲೆಯ ಜನ್ರ ದಾರಿ ತಪ್ಪಿಸಬೇಡಿ.
Youtube Video

50 ವೆಂಟಿಲೇಟರ್ ಬಂದ್ರೂ 25 ಬಂದಿವೆ ಅಂತಾರೆ ಇಷ್ಟು ಸಣ್ಣತನವೇ ಸ್ವಾಮಿ ಅಂತ ಗರಂ ಆದ್ರು. ಇನ್ನು ಜಿಲ್ಲೆಯಲ್ಲಿ ಕೀಳಮಟ್ಟದ ರಾಜಕಾರಣ ಮಾಡೋದು ಬೇಡ ನಾವು ಬೆಂಗಳೂರನಲ್ಲಿ ಹೋಗಿ ಸಚಿವ ಸಿ.ಸಿ.ಪಾಟೀಲ್ ರಾಜಕಾರಣ ಮಾಡುತ್ತೇನೆ ಎಂದರು. ಇನ್ನು ಎಚ್ ಕೆ ಪಾಟೀಲ್ ಅವರಿಗೆ ನೀವು ನಿಮ್ಮ ರಾಜಕಾರಣ ಮಾಡಿ ಇಲ್ಲಿ ಇಬ್ಬರು ಹೊಂದಾಣಿಕೆ ಮಾಡಿಕೊಂಡು ಜನ್ರ ಆರೋಗ್ಯದ ಮೇಲೆ ಗಮನಹರಿಸೋಣ ಎಂದರು.(ವರದಿ: ಸಂತೋಷ ಕೊಣ್ಣೂರ, ಗದಗ)
Published by: MAshok Kumar
First published: May 18, 2021, 7:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories