ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಪರವಾದ ಅಲೆ ಎದ್ದಿದೆ : ಬಿ ವೈ ವಿಜಯೇಂದ್ರ

ಕ್ಷೇತ್ರದ ಮತದಾರರಲ್ಲಿ ಬದಲಾವಣೆ ಗಾಳಿ ಬೀಸಿದೆ. ನಾವು ಅಭಿವೃದ್ಧಿ ಆಧಾರದಲ್ಲಿ ಶಿರಾ ಉಪ ಚುನಾವಣೆ ಗೆಲುವು ಸಾಧಿಸುತ್ತೇವೆ ಎಂದು ಹೇಳಿದರು

news18-kannada
Updated:October 22, 2020, 11:09 PM IST
ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಪರವಾದ ಅಲೆ ಎದ್ದಿದೆ : ಬಿ ವೈ ವಿಜಯೇಂದ್ರ
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ
  • Share this:
ಚಿತ್ರದುರ್ಗ(ಅಕ್ಟೋಬರ್​. 22): ಎಲ್ಲಾ ಸಮುದಾಯದ ಮತದಾರರು ಬಿಜೆಪಿ ಬೆಂಬಲಿಸುತ್ತಿರುವುದು ವಿರೋಧ ಪಕ್ಷದವರ ನಿದ್ದೆಗೆಡಿಸಿದೆ. ಶಿರಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಗೆಲ್ಲಲು ಕಮಲ ಅರಳಿಸಲು ಸಾಧ್ಯವಿದೆ. ಅಭಿವೃದ್ದಿಯ ಆಧಾರದಲ್ಲಿ ಚುನಾವಣೆ ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ. ಮಾದಾರ ಚನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿದ ಬಿ ವೈ ವಿಜಯೇಂದ್ರ ಅವರು ಬಸವ ಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಆಶಿರ್ವಾದ ಪಡೆದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಉಪಚುನಾವಣೆ ಬಗ್ಗೆ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಅಶ್ವತನಾರಾಯಣ, ಶಾಸಕ ಸುರೇಶ್ ಗೌಡ ಹಾಗೂ ವಿಧಾನ ಪರಿಷತ್​ ಸದಸ್ಯ ರವಿಕುಮಾರ್​ ಅವರು ಶಪಥ ಮಾಡಿದ್ದಾರೆ. ಹಾಗಾಗಿ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ‌ ಮೊದಲ‌ ಬಾರಿಗೆ ಗೆಲ್ಲುವುದಕ್ಕೆ, ಕಮಲ ಅರಳಿಸಲು ಸಾಧ್ಯವಿದೆ. ಅದ್ದರಿಂದ ನಮಗೆ ವಿಶ್ವಾಸವಿದೆ ಎಂದರು.

ಕ್ಷೇತ್ರದ ಮತದಾರರಲ್ಲಿ ಬದಲಾವಣೆ ಗಾಳಿ ಬೀಸಿದೆ. ನಾವು ಅಭಿವೃದ್ಧಿ ಆಧಾರದಲ್ಲಿ ಶಿರಾ ಉಪ ಚುನಾವಣೆ ಗೆಲುವು ಸಾಧಿಸುತ್ತೇವೆ ಎಂದು ಹೇಳಿದರು.

ಇನ್ನೂ ವಿಜಯೇಂದ್ರ ಅಕ್ರಮ ಹಣ ಸುರಿದು ಚುನಾವಣೆ ನಡೆಸುತ್ತಿದ್ದಾರೆ ಎಂಬ ಹೆಚ್​ಡಿ ಕುಮಾರಸ್ವಾಮಿ ಆರೋಪಕ್ಕೆ  ಪ್ರತಿಕ್ರಿಯೆ ನೀಡಿದ ಅವರು, ವಿರೋಧ ಪಕ್ಷದವರು ಈ ರೀತಿ ಹೇಳುವುದು ಸಹಜ, ಅವರು  ಹತಾಶೆಯಿಂದ ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ವಿರೋಧ ಪಕ್ಷದವರು ಈಗಾಗಲೇ ಸೋಲು ಒಪ್ಪಿಕೊಂಡಿದ್ದಾರೆ ಎಂದರು

ಆ ಕ್ಷೇತ್ರದಲ್ಲಿ ಬಿಜೆಪಿ ಪರವಾಗಿರುವ ವಾತಾವರಣದ ಅಲೆ ಎದ್ದಿದೆ. ಅಷ್ಟೆ ಅಲ್ಲದೇ ಸುನಾಮಿ ರೀತಿಯಲ್ಲಿ ಕ್ಷೇತ್ರದ ಮತದಾರರು ಬಿಜೆಪಿ ಬೆಂಬಲಿಸುತ್ತಿದ್ದಾರೆ. ಎಲ್ಲಾ ಸಮುದಾಯಗಳ ಮತದಾರರು ಬಿಜೆಪಿ ಬೆಂಬಲಿಸಿರುವುದು ವಿರೋಧ ಪಕ್ಷದವರ ನಿದ್ದೆಗೆಡಿಸಿದೆ. ಇದರ ಜೊತೆಯಲ್ಲಿ ನಾನು ಅಭಿವೃದ್ದಿಯ ಆದರದಲ್ಲಿ ಕ್ಷೇತ್ರದ ಮತದಾರರ ಮನಸ್ಸನ್ನ ಪರಿವರ್ತನೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ : ಕೊರೋನಾ ಸೋಂಕಿತ ಮೃತಪಟ್ಟ 16 ತಾಸು ಬಳಿಕವು ವೈರಸ್ ಜೀವಂತ: ವಿಧಿ ವಿಜ್ಞಾನ ತಜ್ಞ ದಿನೇಶ್ ರಾವ್

ಯಾರು ಏನು ಬೇಕಾದರೂ ಹೇಳಲಿ ರಾಜ್ಯದ ಜನತೆಗೆ ಗೊತ್ತಿದೆ, ನಾನು ಯುವ ಮೋರ್ಚ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೆನೆ, ಕೆಆರ್. ಪೇಟೆ ಚುನಾವಣೆ ಗೆದ್ದು, ಈಗ ಪಕ್ಷದ ಉಪಾಧ್ಯಕ್ಷನಾಗಿ ಎಲ್ಲರ ಸಹಕಾರದಿಂದ ಚುನಾವಣೆ  ಎದುರುಸುತ್ತಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.
ಇನ್ನೂ ಸಿಎಂ ಬಿಎಸ್ ಯಡಿಯೂರಪ್ಪನವರು ಮೇಲಿನವರಿಗೆ ಸಾಕಾಗಿದೆ ಎಂದಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆಗೆ ನೋ ಕಾಮೆಂಟ್ಸ್ ಎಂದಿದ್ದೂ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸಿಎಂ ಯಡಿಯೂರಪ್ಪನವರು ಪೂರ್ಣ ಕಾಲಾವಧಿ ಮುಗಿಸುತ್ತಾರೆ ಅಂತ ಹೇಳಿದ್ದಾರೆ ಎಂದು ಹೇಳಿದ್ದಾರೆ.
Published by: G Hareeshkumar
First published: October 22, 2020, 10:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading