HOME » NEWS » District » BJP TO BUILD BASE IN RAMANAGAR DISTRICT SAYS M RUDRESH ATVR MAK

ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಕಟ್ಟಲಾಗುತ್ತದೆ : ಎಂ.ರುದ್ರೇಶ್

ರಾಜ್ಯ ಬಿಜೆಪಿ ಸರ್ಕಾರ, ಸಿಎಂ ಯಡಿಯೂರಪ್ಪನವರು ನನಗೆ ಕೆ.ಆರ್.ಐ.ಡಿ.ಎಲ್ ನಿಗಮದ ಅಧ್ಯಕ್ಷನಾಗಿಯೂ ಸ್ಥಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ರಾಮನಗರ ಜಿಲ್ಲೆಗೂ ಸಹ ನನ್ನ ಅಧಿಕಾರದಲ್ಲಿ ಹೆಚ್ಚಿನ ಕೆಲಸಕಾರ್ಯ ಮಾಡಲಾಗುತ್ತದೆ ಎಂದು ಎಂ ರುದ್ರೇಶ್ ಭರವಸೆ ನೀಡಿದ್ದಾರೆ.

news18-kannada
Updated:December 18, 2020, 10:03 AM IST
ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಕಟ್ಟಲಾಗುತ್ತದೆ : ಎಂ.ರುದ್ರೇಶ್
ಎಂ. ರುದ್ರೇಶ್.
  • Share this:
ರಾಮನಗರ: ಜಿಲ್ಲೆಯ ಬಿಜೆಪಿ ಪಕ್ಷದ ಜವಾಬ್ದಾರಿ ತೆಗೆದುಕೊಳ್ಳಲು ಪಕ್ಷ ಈ ಹಿಂದೆ ಅವಕಾಶ ಮಾಡಿಕೊಟ್ಟಿತ್ತು. ನಾನು ಸಹ ಅಚ್ಚುಕಟ್ಟಾಗಿ ನನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದೆ. ಮುಂದೆಯೂ ಸಹ ರಾಮನಗರ ಜಿಲ್ಲೆಯಲ್ಲಿ ಪಕ್ಷವನ್ನ ಸದೃಢವಾಗಿ ಕಟ್ಟಿಬೆಳೆಸಲು ಸಿದ್ಧನಿದ್ದೇನೆ ಎಂದು ನೂತನ ಕೆ.ಆರ್.ಐ.ಡಿ.ಎಲ್ ಅಧ್ಯಕ್ಷ ಎಂ.ರುದ್ರೇಶ್ ಸುದ್ದಿಗೋಷ್ಟಿ ನಡೆಸಿ ತಿಳಿಸಿದ್ದಾರೆ. ಇನ್ನು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರುದ್ರೇಶ್, "ರಾಜ್ಯ ಬಿಜೆಪಿ ಸರ್ಕಾರ, ಸಿಎಂ ಯಡಿಯೂರಪ್ಪನವರು ನನಗೆ ಕೆ.ಆರ್.ಐ.ಡಿ.ಎಲ್ ನಿಗಮದ ಅಧ್ಯಕ್ಷನಾಗಿಯೂ ಸ್ಥಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ರಾಮನಗರ ಜಿಲ್ಲೆಗೂ ಸಹ ನನ್ನ ಅಧಿಕಾರದಲ್ಲಿ ಹೆಚ್ಚಿನ ಕೆಲಸಕಾರ್ಯ ಮಾಡಲಾಗುತ್ತದೆ" ಎಂದು ಭರವಸೆ ನೀಡಿದ್ದಾರೆ.

ಇನ್ನು ನಮ್ಮ ನಿಮಗದಿಂದ ರಾಮನಗರ ಜಿಲ್ಲೆಯಿಂದ 3, ಚಾಮರಾಜನಗರದಿಂದ 4, ಶಿವಮೊಗ್ಗದಿಂದ 1 ಒಟ್ಟು 8 ಸರ್ಕಾರಿ ಶಾಲೆಗಳನ್ನ ದತ್ತು ಪಡೆಯಲಾಗುತ್ತದೆ. ಪ್ರಮುಖವಾಗಿ ಗಡಿಭಾಗದಲ್ಲಿ ಯಾವುದೇ ಸೌಲಭ್ಯಗಳಿಲ್ಲದ ಶಾಲೆಗಳನ್ನ ದತ್ತು ಪಡೆದುಕೊಳ್ಳಲಾಗುತ್ತದೆ. ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಯಾವ ರೀತಿಯ ಸೌಲಭ್ಯಗಳು ಸಿಗುತ್ತದೆಯೋ, ಅಂತಹದ್ದೇ ಸೌಲಭ್ಯವನ್ನ ನಾವು ಸರ್ಕಾರಿ ಶಾಲೆಯ ಮಕ್ಕಳಿಗೆ ಕೊಡಲು ಚಿಂತನೆ ನಡೆಸಿದ್ದೇವೆಂದು ರುದ್ರೇಶ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಇದನ್ನೂ ಓದಿ : Amit Shah: ಬಂಗಾಳದಲ್ಲಿ ರಂಗೇರಿದ ಚುನಾವಣಾ ಕಣ; ಕೇಂದ್ರ ಗೃಹ ಸಚಿವ ಅಮಿತ್​ ಶಾ ರಿಂದ ಭಾನುವಾರ ರೋಡ್​ ಶೋ

ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಸ್ಥಾನ;

ಈ ಬಾರಿ ರಾಮನಗರ ಜಿಲ್ಲೆಯಲ್ಲಿಯೇ ಬಿಜೆಪಿ ಪಕ್ಷಕ್ಕೆ ಗ್ರಾ.ಪಂ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಸಿಗಲಿವೆ. ಈ ಹಿಂದೆ ಬಿಜೆಪಿ ಜಿಲ್ಲಾ ಅಧ್ಯಕ್ಷನಾಗಿದ್ದಾಗ ಜಿಲ್ಲೆಯಲ್ಲಿ ಪಕ್ಷವನ್ನ ಸಂಘಟನೆ ಮಾಡಿದ್ದೆವು. ಈಗಲೂ ಸಹ ಪಕ್ಷವನ್ನ ಬೇರುಮಟ್ಟದಿಂದ ಕಟ್ಟಲಾಗುತ್ತಿದೆ. ಗ್ರಾ.ಪಂ ಜೊತೆಗೆ ತಾ.ಪಂ, ಜಿ.ಪಂ ಚುನಾವಣೆಯಲ್ಲಿಯೂ ಸಹ ಉತ್ತಮವಾಗಿ ಸಂಘಟನೆ ಮಾಡಲಾಗುತ್ತದೆ. ಇನ್ನು ಕೆ.ಆರ್.ಐ.ಡಿ.ಎಲ್ ನಿಗಮದಿಂದಲೂ ಸಹ ಜಿಲ್ಲೆಗೆ ಹೆಚ್ಚಿನ ಅನುದಾನ ತರಲಾಗುತ್ತದೆ. ಜಿಲ್ಲೆಯಲ್ಲಿ ಹೆಚ್ಚಿನ ಕೆಲಸಕಾರ್ಯ ಮಾಡಲಾಗುತ್ತದೆ ಎಂದು ರುದ್ರೇಶ್ ತಿಳಿಸಿದ್ದಾರೆ.

(ವರದಿ - ಎ.ಟಿ ವೆಂಕಟೇಶ್​)
Published by: MAshok Kumar
First published: December 18, 2020, 9:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories