2ನೇ ಅವಧಿಯ ಸಾಧನೆ ಬಗ್ಗೆ ಮೋದಿ ದೇಶದ ಪ್ರತಿಯೊಬ್ಬರಿಗೂ ಪತ್ರ ಬರೆಯುತ್ತಾರೆ; ನಳೀನ್ ಕುಮಾರ್ ಕಟೀಲ್

ವಿರೋಧ ಪಕ್ಷಗಳಿಗೆ ಟೀಕೆ ಮಾಡುವುದಕ್ಕೆ ಸರಿಯಾದ ವಿಷಯ ಇಲ್ಲ. ವಲಸೆ ಕಾರ್ಮಿಕರನ್ನ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ನಾವು ವಲಸೆ ಕಾರ್ಮಿಕರ ರಕ್ಷಣೆಗೆ ಎಲ್ಲ ರೀತಿಯ ಕ್ರಮಕೊಂಡಿದ್ದೇವೆ. ನಾವು ತೆಗೆದುಕೊಂಡ ಕ್ರಮಗಳಿಗೆ ಸ್ವತಹ ವಿರೋಧ ಪಕ್ಷಗಳೇ ಅಭಿನಂದನೆ ಸಲ್ಲಿಸಿವೆ. ಇದೀಗ ಟೀಕೆ ಮಾಡುವುದಕ್ಕೆ ಅಸ್ತ್ರ ಇಲ್ಲ ಅಂತ ಚಿಲ್ಲರೆ ರಾಜಕಾರಣ ಮಾಡುತ್ತಿವೆ ಎಂದು ವಿರೋಧ‌ ಪಕ್ಷಗಳ ವಿರುದ್ಧ ಕಿಡಿಕಾರಿದರು.

news18-kannada
Updated:June 1, 2020, 2:10 PM IST
2ನೇ ಅವಧಿಯ ಸಾಧನೆ ಬಗ್ಗೆ ಮೋದಿ ದೇಶದ ಪ್ರತಿಯೊಬ್ಬರಿಗೂ ಪತ್ರ ಬರೆಯುತ್ತಾರೆ; ನಳೀನ್ ಕುಮಾರ್ ಕಟೀಲ್
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
  • Share this:
ಮೈಸೂರು(ಜೂ.01): ಕಪ್ಪು ಚುಕ್ಕೆ‌ ಇಲ್ಲದ ಆಡಳಿತ ಮೋದಿ ಸರ್ಕಾರದ ಸಾಧನೆ. ಎರಡನೇ ಅವಧಿಯ ಸಾಧನೆ ಬಗ್ಗೆ ಮೋದಿ  ದೇಶದ ಪ್ರತಿಯೊಬ್ಬರಿಗೂ ಪತ್ರ ಬರೆಯುತ್ತಾರೆ. ಪ್ರತಿಯೊಬ್ಬ ಮತದಾರನ ಜೊತೆ ಮೋದಿಯೇ ಮಾತನಾಡುತ್ತಾರೆ. ಪತ್ರದ ಮುಕೇನ ದೇಶದ ಜನತೆಗೆ ಕೃತಜ್ಞತೆ ಸಲ್ಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್​ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯ ಕಾರ್ಯವೈಖರಿಯ ಬಗ್ಗೆ ಪ್ರಸ್ತಾಪಿಸಿದರು. ಪೌರತ್ವ ಕಾಯ್ದೆ ಕೋವಿಡ್​-19 ನಿಯಂತ್ರಣ, 20 ಲಕ್ಷ ಕೋಟಿ ಪ್ಯಾಕೇಜ್​ ಬಗ್ಗೆ ಪ್ರಸ್ತಾಪ ಮಾಡಿದರು. ಪೌರತ್ವ ಬಯಸಿ ಬಂದವರಿಗೆ ಪೌರತ್ವ ಕೊಡುವ ಕೆಲಸ‌ವನ್ನು ನಾವು ಮಾಡಿದ್ದೇವೆ. ಇದು ನಮ್ಮ ಸರ್ಕಾರದ ಅತ್ಯುತ್ತಮ ಕೆಲಸ. ನಾವು ಜಮ್ಮು ಕಾಶ್ಮೀರದಲ್ಲಿ ಕಟ್ಟು ನಿಟ್ಟು ಮಾಡಿದ ಬಳಿಕ ಯಾರೂ ಸಹ ಇಲ್ಲಿಗೆ ಬಂದಿಲ್ಲ. ಬಂದು ಬಾಂಬ್‌ ಇಡುವ ಕೆಲಸ‌ ಮಾಡಿಲ್ಲ. ಈ‌ ಮೊದಲು ವಿಜ್ಞಾನ ಭವನಕ್ಕೆ ಬಂದು ಬಾಂಬ್ ಇಡುವ ಕೆಲಸ ಆಗಿತ್ತು. ಕೇರಳಕ್ಕೆ ಬಂದು ಬಾಂಬ್ ಇಡುವ ಕೆಲಸ ಮಾಡಿದ್ದಾರೆ. ಇದೀಗ ಒಂದೇ ಒಂದು ಬಾಂಬ್ ಇಡುವ ಕೆಲಸ‌ ಆಗಿಲ್ಲ. ಇದೆಲ್ಲವೂ ನಮ್ಮ ಸರ್ಕಾರದ ಕಾರ್ಯವೈಖರಿ ಎಂದು ಹಾಡಿ ಹೊಗಳಿದರು.

ಮುಂದುವರೆದ ಅವರು, 20 ಲಕ್ಷ ಕೋಟಿ ಹಣವನ್ನು ದೇಶಕ್ಕೆ ನೀಡಲಾಗಿದೆ. ಆತ್ಮನಿರ್ಭರ್ ಯೋಜನೆ ಮೂಲಕ ಜನರ ಜೊತೆ ನಾವು ಇದ್ದೇವೆ. ತಳವಾರ, ಪರಿವಾರ ಸಮುದಾಯಕ್ಕೂ ಅನುಕೂಲ‌ ಮಾಡಿಕೊಟ್ಟಿದೆ. ಎಲ್ಲಾ ವಿಚಾರದಲ್ಲೂ ನಾವು ಕಪ್ಪು ಚುಕ್ಕಿ ಇಲ್ಲದೆ ಕೆಲಸ ಮಾಡಿದ್ದೇವೆ. ಕೇಂದ್ರದ ಜೊತೆಗೆ ರಾಜ್ಯದಲ್ಲಿಯೂ ಅತ್ಯುತ್ತಮ ಕೆಲಸ ಆಗಿದೆ ಎಂದು ಹೇಳುವ ಮೂಲಕ ಕೇಂದ್ರದಲ್ಲಿ ಬಿಜೆಪಿ  ಒಂದು ವರ್ಷ ಪೂರೈಸಿದ ಬಗ್ಗೆ ಮೋದಿಯನ್ನು ಶ್ಲಾಘಿಸಿದರು.

ಇದೇ ವೇಳೆ ಬಿಜೆಪಿ ಸರ್ಕಾರ ಸುಭದ್ರವಾಗಿದೆ,  ಇಲ್ಲಿ ಅಸಮಾಧಾನಿತರು ಇಲ್ಲ ಎಂದು ಸ್ಪಷ್ಟನೆ ನೀಡಿದರು. ನಮ್ಮ ಸರ್ಕಾರ ಸುಭದ್ರವಾಗಿದೆ. ಹೊರಗಿನಿಂದ ಕರೆದುಕೊಂಡು ಸರ್ಕಾರ ಮಾಡುವ ಅಗತ್ಯವಿಲ್ಲ. ನಮ್ಮ ಬಿಜೆಪಿ ನಾಯಕರು ಪ್ರತ್ಯೇಕ ಸಭೆ ಮಾಡಿಲ್ಲ.
ಅವರು ಊಟಕ್ಕೆ ಸೇರಿ ರೊಟ್ಟಿ ತಿಂದಿದ್ದಾರೆ. ನಾನು ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ್ದೇನೆ. ಎಲ್ಲರೂ ಅಭಿವೃದ್ಧಿ ದೃಷ್ಟಿಯಿಂದ ಸಭೆ ಸೇರಿದ್ದೇವೆ ಅಂತ ಹೇಳಿದ್ದಾರೆ‌. ಹಾಗಾಗಿ ಅವರ ಸಭೆ ಬಗ್ಗೆ ಹೆಚ್ಚು ಚರ್ಚೆ ಬೇಡ ಎಂದು ಮುಂದೆ ನಡೆದರು.

Coronavirus India: ದೇಶದಲ್ಲಿ ಒಂದೇ ದಿನ 8 ಸಾವಿರಕ್ಕೂ‌ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆ, ಏಳನೇ ಸ್ಥಾನಕ್ಕೆ ಜಿಗಿದ ಭಾರತ

ಇನ್ನು, ಇದೇ ಸಮಯದಲ್ಲಿ ವಿರೋಧ ಪಕ್ಷಗಳ ವಿರುದ್ಧ ಕಟೀಲ್​ ತೀವ್ರ ವಾಗ್ದಾಳಿ ನಡೆಸಿದರು. ವಿರೋಧ ಪಕ್ಷಗಳು ಚಿಲ್ಲರೆ ರಾಜಕಾರಣ ಮಾಡಿದ್ದಾರೆ. ಇದು ಚಿಲ್ಲರೆ ರಾಜಕಾರಣ ಮಾಡುವ ಸಮಯವಲ್ಲ. ವಿರೋಧ ಪಕ್ಷಗಳಿಗೆ ಟೀಕೆ ಮಾಡುವುದಕ್ಕೆ ಸರಿಯಾದ ವಿಷಯ ಇಲ್ಲ. ವಲಸೆ ಕಾರ್ಮಿಕರನ್ನ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ನಾವು ವಲಸೆ ಕಾರ್ಮಿಕರ ರಕ್ಷಣೆಗೆ ಎಲ್ಲ ರೀತಿಯ ಕ್ರಮಕೊಂಡಿದ್ದೇವೆ. ನಾವು ತೆಗೆದುಕೊಂಡ ಕ್ರಮಗಳಿಗೆ ಸ್ವತಹ ವಿರೋಧ ಪಕ್ಷಗಳೇ ಅಭಿನಂದನೆ ಸಲ್ಲಿಸಿವೆ. ಇದೀಗ ಟೀಕೆ ಮಾಡುವುದಕ್ಕೆ ಅಸ್ತ್ರ ಇಲ್ಲ ಅಂತ ಚಿಲ್ಲರೆ ರಾಜಕಾರಣ ಮಾಡುತ್ತಿವೆ ಎಂದು ವಿರೋಧ‌ ಪಕ್ಷಗಳ ವಿರುದ್ಧ ಕಿಡಿಕಾರಿದರು.ಸಿಎಂ ಬಿಎಸ್​ವೈ ವಿರುದ್ಧ ಯಾವುದೇ ಅಸಮಾಧಾನ ಇಲ್ಲ ಎಂದು ಕಟೀಲ್ ಸ್ಪಷ್ಟನೆ ನೀಡಿದರು. ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕ. ಅವರು ನಮ್ಮ‌ನಾಯಕರು ಆಗಿರುವುದರಿಂದಲೇ ಅವರನ್ನು ಸಿಎಂ ಮಾಡಿರೋದು. ಯಡಿಯೂರಪ್ಪ ವಿರುದ್ದ ಯಾವುದೇ ಅಸಮಾಧಾನ ಇಲ್ಲ. ರಾಜ್ಯದಲ್ಲಿ ಉತ್ತಮ ಆಡಳಿತ ಇದೆ. ಬಿಎಸ್‌ವೈ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಯಡಿಯೂರಪ್ಪ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂಬ ಆರೋಪ ವಿಚಾರವಾಗಿ, ಅಪ್ಪ ಸಿಎಂ ಆದ ತಕ್ಷಣ ಅವರ ಮಕ್ಕಳು ಸಾರ್ವಜನಿಕ ಜೀವನದಲ್ಲಿ ಇರಬಾರದು ಅಂತೇನಿಲ್ಲ. ಯಡಿಯೂರಪ್ಪನವರ ಮಗ ಜನರಿಂದ ಆಯ್ಕೆಯಾಗಿದ್ದಾರೆ. ಮತ್ತೊಬ್ಬ ಮಗ ಪಕ್ಷದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಯಡಿಯೂರಪ್ಪನವರ ಕುಟುಂಬದಲ್ಲಿ ರಾಜಕಾರಣ ಇಲ್ಲ. ಬಿಜೆಪಿಯಲ್ಲಿ ಅಧಿಕಾರಕ್ಕಾಗಿ ಯಾರೂ ಕುಟುಂಬ ರಾಜಕಾರಣ ಮಾಡುವುದಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಭಾಗಿಯಾದ ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ರಾಮದಾಸ್, ನಾಗೇಂದ್ರ ಹರ್ಷವರ್ಧನ್ ಭಾಗಿಯಾಗಿದ್ದರು.

 
First published: June 1, 2020, 1:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading