ಚನ್ನಪಟ್ಟಣ: ಬೊಂಬೆನಾಡು ಚನ್ನಪಟ್ಟಣ ಕ್ಷೇತ್ರದ ರಾಜಕಾರಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅದರಲ್ಲೂ ಕ್ಷೇತ್ರದ ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ ಬಿಜೆಪಿ ಪಕ್ಷದಿಂದ MLC ಆಗ್ತಿದ್ದಂತೆ ಕ್ಷೇತ್ರದಲ್ಲಿ ಬಿಜೆಪಿ ಸದೃಢವಾಗಿ ಬೆಳೆಯುತ್ತಿದೆ. ಆದರೆ ಯೋಗೇಶ್ವರ್ ಆ್ಯಕ್ಟಿವ್ ಆಗುತ್ತಿರುವಂತೆಯೇ ಕ್ಷೇತ್ರದ ಹಾಲಿ ಶಾಸಕ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮಂಕಾಗುತ್ತಿದ್ದಾರೆ.
ಅಧಿಕಾರವಿಲ್ಲದೇ ಕೊಂಚ ಹಿನ್ನಡೆ ಅನುಭವಿಸಿದ್ದ ಯೋಗೇಶ್ವರ್ ಹಾಗೂ ಬೆಂಬಲಿಗರು MLC ಸ್ಥಾನ ಸಿಗುತ್ತಿದ್ದಂತೆ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಮಾಡ್ತಿದ್ದಾರೆ. ಯೋಗೇಶ್ವರ್ ಸಹ ಸಕ್ರಿಯವಾಗಿ ಚನ್ನಪಟ್ಟಣ ಸೇರಿದಂತೆ ಜಿಲ್ಲೆಯಾದ್ಯಂತ ಪಕ್ಷ ಸಂಘಟನೆಗೆ ಆಂತರಿಕವಾಗಿ ಚಾಲನೆ ನೀಡಿದ್ದಾರೆ. ಜೊತೆಗೆ ತನ್ನ ಸ್ವಂತ ಕ್ಷೇತ್ರದಲ್ಲಿ ಬೆಂಬಲಿಗರು, ಕಾರ್ಯಕರ್ತರ ಜೊತೆಗೆ ಪಕ್ಷ ಸಂಘಟನೆಯ ಬಗ್ಗೆ ಚರ್ಚೆ ನಡೆಸುತ್ತ ಮುನ್ನುಗ್ಗುತ್ತಿದ್ದಾರೆ. ಜೊತೆಗೆ ಅಧಿಕಾರಿಗಳ ಸಭೆ ನಡೆಸುತ್ತ ಸಕ್ರಿಯರಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಡ್ರಗ್ಸ್ ಮಾಫಿಯಾ; ಸ್ಯಾಂಡಲ್ವುಡ್ನ 20 ನಟ-ನಟಿಯರ ಪಟ್ಟಿ ಸಿದ್ಧಪಡಿಸಿದ ಎನ್ಸಿಬಿ
ಯೋಗೇಶ್ವರ್ಗೆ MLC ಪಟ್ಟ; ರಾಮನಗರ, ಮಂಡ್ಯ ಭಾಗದಲ್ಲಿ ಬಿಜೆಪಿಗೆ ಪುಷ್ಟಿ:
ಸಿ.ಪಿ.ಯೋಗೇಶ್ವರ್ ಕೇವಲ ಒಬ್ಬ ರಾಜಕಾರಣಿ ಅಲ್ಲದೇ ಸಿನಿಮಾ ಕ್ಷೇತ್ರದಲ್ಲಿಯೂ ಇದ್ದವರು. ಇದರ ಜೊತೆಗೆ ಚನ್ನಪಟ್ಟಣದಲ್ಲಿ ಮಾಡಿದ ನೀರಾವರಿ ಯೋಜನೆ ಅವರ ರಾಜಕೀಯ ಬದುಕಲ್ಲಿ ಮಹತ್ವದ ಸಾಧನೆ ಎನ್ನಬಹುದು. ಈಗ ಕೇವಲ MLC ಆಗಿರುವ ಯೋಗೇಶ್ವರ್ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತ ಕಾಲಕಳೆಯುತ್ತಿದ್ದಾರೆ. ಕ್ಷೇತ್ರದ ಕಾರ್ಯಕರ್ತರು, ಬೆಂಬಲಿಗರ ಮನೆಗಳಿಗೆ ಭೇಟಿ ಕೊಟ್ಟು ಚರ್ಚೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಪಕ್ಕದ ಮಂಡ್ಯ ಜಿಲ್ಲೆಗೂ ಆಗಾಗ ಭೇಟಿ ಕೊಡುತ್ತಿರುವ ಯೋಗೇಶ್ವರ್ ಅಲ್ಲಿನ ಬಿಜೆಪಿ ಕಾರ್ಯರ್ತರನ್ನು ಭೇಟಿ ಮಾಡ್ತಿದ್ದಾರೆ. ಇದರ ಬೆನ್ನಲ್ಲೇ ಯೋಗೇಶ್ವರ್ ಅವರಿಗೆ ಮಂತ್ರಿ ಸ್ಥಾನ ಕೊಡಬೇಕೆಂದು ಅವರ ಅಭಿಮಾನಿಗಳು, ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಯೋಗೇಶ್ವರ್ ಸಚಿವರಾಗ್ತಾರೆ ಎಂಬ ಮಾಹಿತಿಯೂ ಸಹ ಇದೆ.
ಇದನ್ನೂ ಓದಿ: ಕೊರೋನಾ ಸೈಡ್ ಎಫೆಕ್ಟ್: ಆನ್ಲೈನ್ ತರಗತಿಗಳಿಂದ ಮಕ್ಕಳ ದೃಷ್ಟಿಗೇ ಕಂಟಕ
ಬೊಂಬೆನಾಡು ಮರೆತ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ:
ಒಂದೆಡೆ ಸಿ.ಪಿ. ಯೋಗೇಶ್ವರ್ ಚನ್ನಪಟ್ಟಣ ಕ್ಷೇತ್ರದಲ್ಲಿ ಹವಾ ಎಬ್ಬಿಸುತ್ತಿದ್ದಾರೆ. ಆದರೆ ಕ್ಷೇತ್ರದ ಹಾಲಿ ಶಾಸಕ ಹೆಚ್.ಡಿ. ಕುಮಾರಸ್ವಾಮಿ ಮಾತ್ರ ಕಳೆದ 2 - 3 ತಿಂಗಳಿಂದ ಕ್ಷೇತ್ರದ ಕಡೆಗೆ ಮುಖ ಮಾಡಿಲ್ಲ. ಆದರೆ ಈ ನಡುವೆ ಕ್ಷೇತ್ರದ ಅಭಿವೃದ್ಧಿಗಾಗಿ ಸಿಎಂ ಯಡಿಯೂರಪ್ಪನವರಿಂದ 104 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಜೊತೆಗೆ ಚನ್ನಪಟ್ಟಣದಲ್ಲೇ ನಿರ್ಮಾಣವಾಗುವ ಹೈಟೆಕ್ ರೇಷ್ಮೆ ಮಾರ್ಕೆಟ್ಗೆ 50 ಕೋಟಿ ಅನುದಾನ ಬಿಡುಗಡೆಯಾಗಿದೆ. ಆದರೆ ತಮ್ಮನ್ನೇ ನಂಬಿರುವ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರ ಕೈಗೆ ಕುಮಾರಸ್ವಾಮಿ ಸಿಗದಿರುವ ಬಗ್ಗೆ ಸ್ವತಃ ಜೆಡಿಎಸ್ ಪಕ್ಷದಲ್ಲೇ ಅಸಮಾಧಾನದ ಬೆಂಕಿ ಉರಿಯುತ್ತಿದೆ. ಇದಕ್ಕೆ ಸಾಕ್ಷಿ ಯೋಗೇಶ್ವರ್ ಹುಟ್ಟುಹಬ್ಬಕ್ಕೆ ಜೆಡಿಎಸ್ನ ಕಟ್ಟಾ ಬೆಂಬಲಿಗ ಎನ್ನುತ್ತಿದ್ದವರೇ ಶುಭಾಶಯ ಕೋರಿರುವುದು. ಇನ್ನು ಹೆಚ್ಡಿಕೆ ಚನ್ನಪಟ್ಟಣಕ್ಕೆ ಬರದಿರುವ ಬಗ್ಗೆ ಜೆಡಿಎಸ್ ಮುಖಂಡರನ್ನ ಪ್ರಶ್ನೆ ಮಾಡಿದರೆ ಅದಕ್ಕೆ ಉತ್ತರ ಕೊರೋನಾ.
ಇದನ್ನೂ ಓದಿ: ತುರುವೇಕೆರೆಯಲ್ಲಿ ಬಿಜೆಪಿ V/S ಜೆಡಿಎಸ್: ಹಾಲಿ ಮತ್ತು ಮಾಜಿ ಶಾಸಕರ ನಡುವೆ ಫೈಟ್; 144 ಸೆಕ್ಷನ್
ಒಟ್ಡಾರೆ, ಚನ್ನಪಟ್ಟಣದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಶಾಸಕರಾಗಿದ್ದರೂ ಸಹ ಸಿ.ಪಿ. ಯೋಗೇಶ್ವರ್ ಹವಾ ಮಾತ್ರ ಜೋರಾಗಿ ಎದ್ದಿದೆ. ಜೊತೆಗೆ ಯೋಗೇಶ್ವರ್ ಸಕ್ರಿಯವಾಗಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯ ಜೊತೆಗೆ ತನ್ನ ಬೆಂಬಲಿಗರು, ಕಾರ್ಯಕರ್ತರನ್ನು ಭೇಟಿ ಮಾಡುತ್ತ ತನ್ನ ಕೋಟೆಯನ್ನ ಬಿಗಿ ಮಾಡುತ್ತಿದ್ದಾರೆ.
ವರದಿ: ಎ.ಟಿ. ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ