ಬಿಜೆಪಿ ದಲಿತ ವಿರೋಧಿ ಅಲ್ಲ ಎಂಬ ಸತ್ಯ ಜನರಿಗೆ ಅರಿವಾಗಿದೆ ; ಛಲವಾದಿ ನಾರಾಯಣಸ್ವಾಮಿ

ಬಿಜೆಪಿ ಅಂಬೇಡ್ಕರ್ ಅವರನ್ನು ಯಾವಾಗಲೂ ಗೌರವಿಸುತ್ತಾ ಬಂದಿದೆ. ಆದರೆ, ಕಾಂಗ್ರೆಸ್ ನವರು ಕೇವಲ ಮತ ಬ್ಯಾಂಕ್​​ ಓಲೈಕೆ ಮಾಡಿಕೊಂಡು ಬರುತ್ತಿದ್ದಾರೆ ಎಂದು ದೂರಿದರು.

news18-kannada
Updated:September 8, 2020, 8:17 PM IST
ಬಿಜೆಪಿ ದಲಿತ ವಿರೋಧಿ ಅಲ್ಲ ಎಂಬ ಸತ್ಯ ಜನರಿಗೆ ಅರಿವಾಗಿದೆ ; ಛಲವಾದಿ ನಾರಾಯಣಸ್ವಾಮಿ
ಬಿಜೆಪಿ ಎಸ್ ಸಿ  ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ  ಛಲವಾದಿ ನಾರಾಯಣಸ್ವಾಮಿ
  • Share this:
ಶಿವಮೊಗ್ಗ(ಸೆಪ್ಟೆಂಬರ್​. 08): ಬಿಜೆಪಿ ದಲಿತ ವಿರೋಧಿ ಅಲ್ಲ ಎಂಬ ಸತ್ಯ ಜನರಿಗೆ ಅರಿವಾಗಿದೆ ಎಂದು ಬಿಜೆಪಿ ಎಸ್ ಸಿ  ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ  ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.  ಕಾಂಗ್ರೆಸ್  ಪಕ್ಷ ತಲಾ ತಲಾಂತರದಿಂದ ದಲಿತರ ಪರವಾಗಿರುವ ಪಕ್ಷ ಎಂದು ಸುಳ್ಳು ಹೇಳುತ್ತಲೇ ಬಂದಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ದಲಿತ ವಿರೋಧಿ ಎಂದು ಕಾಂಗ್ರೆಸ್ ಪಕ್ಷ ಗೂಬೆ ಕೂರಿಸುತ್ತಲೇ ಇದೆ.  ಆದರೆ, ಜನರಿಗೆ ಈಗ ಸತ್ಯ ಗೊತ್ತಾಗಿದೆ.  ಕಾಂಗ್ರೆಸ್ಗೆ ದಲಿತರ ಮೇಲೆ ಇರುವ ಪ್ರೀತಿ ಕೇವಲ ಮೊಸಳೆ ಕಣ್ಣೀರು ಅಷ್ಟೇ ಎಂದು ತಿಳಿಸಿದರು. ದೇಶದಲ್ಲಿ ಮೀಸಲಾತಿಯನ್ನು ಜಾರಿಗೊಳಿಸಿರುವುದು ತಾನೇ ಎಂದು ಕೊಂಡು ಕಾಂಗ್ರೆಸ್ ಪಕ್ಷ ಬರುತ್ತಿದೆ. ಆದರೆ ಮೀಸಲಾತಿ ಜಾರಿಯಾಗಿದ್ದು ಡಾ.ಬಿ.ಆರ್.ಅಂಬೇಡ್ಕರ್ ರವರ ಹೋರಾಟದ ಫಲದಿಂದಾಗಿ ಎಂದಿದ್ದಾರೆ. ಈಗ ದೇಶದಲ್ಲೇ ಜನರಿಗೆ ಬಿಜೆಪಿಯ ಬಗ್ಗೆ ಒಲವು ಮೂಡಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಅನ್ನು ಮೂಲೆಗುಂಪು ಮಾಡಲಾಗಿದೆ. ಬಿಜೆಪಿ ದಲಿತ ವಿರೋಧಿ ಅಲ್ಲ ಎಂಬ ಸತ್ಯ ಜನರಿಗೆ ಅರಿವಾಗಿದೆ,  ಹೀಗಾಗಿ ದಲಿತರೆಲ್ಲರೂ ಬಿಜೆಪಿಯನ್ನು ತಬ್ಬಿಕೊಳ್ಳುತ್ತಿದ್ದಾರೆ. ಈ ಕಾಂಗ್ರೆಸ್ ಪಕ್ಷದವರ ಮಿಥ್ಯದ ಆರೋಪವನ್ನು ಸುಳ್ಳುಗೊಳಿಸಲೆಂದೇ ದಲಿತರನ್ನು ಸಂಘಟನೆ ಮಾಡುವ ಹೊಣೆಯನ್ನು ತಾವು ಹೊತ್ತುಕೊಂಡಿದ್ದೇನೆ. ಬಿಜೆಪಿ ಎಲ್ಲ ಸಮುದಾಯಗಳನ್ನು ಸೇರಿಸಿ ಭವ್ಯ ಭಾರತ ನಿರ್ಮಾಣದತ್ತ ಸಾಗುತ್ತಿದೆ ಎಂದರು.

ಬಿಜೆಪಿ ಅಂಬೇಡ್ಕರ್ ಅವರನ್ನು ಯಾವಾಗಲೂ ಗೌರವಿಸುತ್ತಾ ಬಂದಿದೆ. ಆದರೆ, ಕಾಂಗ್ರೆಸ್ ನವರು ಕೇವಲ ಮತ ಬ್ಯಾಂಕ್​​ ಓಲೈಕೆ ಮಾಡಿಕೊಂಡು ಬರುತ್ತಿದ್ದಾರೆ ಎಂದು ದೂರಿದರು.

ಇದನ್ನೂ ಓದಿ : ಬೀದರ್ : ಆರು ತಿಂಗಳಿನಿಂದ ವೇತನ ಸಿಗದೇ ಹೊರಗುತ್ತಿಗೆ ನೌಕರರ ಪರದಾಟ

ಕಾಂಗ್ರೆಸ್ ಪಕ್ಷ ದೇಶದಲ್ಲಿ ವಿನಾಶದತ್ತ ಸಾಗುತ್ತಿದೆ. ಅವರ ಜೊತೆಗೆ ದಲಿತರು ಇಲ್ಲ, ಕಾಂಗ್ರೆಸ್ ಗೆ ದಲಿತರ ಬಗ್ಗೆ ಯಾವ ಅನುಕಂಪವೂ ಇಲ್ಲ ಎಂದು ಆರೋಪಿಸಿದರು. ಬಿಜೆಪಿಯ ಶಕ್ತಿ ಹೆಚ್ಚುತ್ತಾ ಹೋಗುತ್ತಿದೆ, ಇಂದು ಬಿಜೆಪಿ ದೇಶದಲ್ಲಿ ಶೇ.53ರಷ್ಟು ಮತ ಪಡೆಯುತ್ತಿರುವ ಬಹುದೊಡ್ಡ ಪಕ್ಷವಾಗಿದೆ ಎಂದರು.

ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದೆ. ಈ ಕಾರಣದಿಂದಲೇ ದಲಿತರೆಲ್ಲರೂ ಬಿಜೆಪಿಗೆ ಬನ್ನಿ ಎಂಬ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ದಲಿತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಸೇರಿಸಿಕೊಳ್ಳುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
Published by: G Hareeshkumar
First published: September 8, 2020, 8:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading