HOME » NEWS » District » BJP POLITICAL CALCULATION BEHIND PSSK SUGAR FACTORY MAK

ನಿರಾಣಿ ಷುಗರ್ಸ್ ತೆಕ್ಕೆಗೆ ಪಾಂಡವಪುರದ PSSK ಸಕ್ಕರೆ ಕಾರ್ಖಾನೆ; 40 ವರ್ಷಗಳ ಗುತ್ತಿಗೆಯ ಹಿಂದಿದೆ ರಾಜಕೀಯ ಲೆಕ್ಕಾಚಾರ

ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್.ಪೇಟೆ ತಾಲೂಕಿ ಭಾಗದ ಕಬ್ಬು ಬೆಳೆಗಾರ ರೈತರಿಗೆ ಪಾಲಿಗೆ ಒಂದು ಕಾಲದಲ್ಲಿ ಈ ಕಾರ್ಖಾನೆ ಜೀವನಾಡಿಯಾಗಿತ್ತು. ಆದರೆ, ಸರಿಯಾದ ನಿರ್ವಹಣೆ ಇಲ್ಲದ ಕಾರಣ ನಷ್ಟಕ್ಕೊಳಗಾಗಿ ಮುಚ್ಚಲಾಗಿತ್ತು. ಪರಿಣಾಮ ಈ ಭಾಗದ ಕಬ್ಬು ಬೆಳೆಗಾರ ರೈತರು ತಮ್ಮ ಕಬ್ಬು ಸಾಗಿಸಲಾಗದೆ ಪ್ರತಿವರ್ಷ ಸಂಕಷ್ಟಕ್ಕೆ ಸಿಲುಕುವಂತಾಗಿತ್ತು.

news18-kannada
Updated:June 6, 2020, 2:51 PM IST
ನಿರಾಣಿ ಷುಗರ್ಸ್ ತೆಕ್ಕೆಗೆ ಪಾಂಡವಪುರದ PSSK ಸಕ್ಕರೆ ಕಾರ್ಖಾನೆ; 40 ವರ್ಷಗಳ ಗುತ್ತಿಗೆಯ ಹಿಂದಿದೆ ರಾಜಕೀಯ ಲೆಕ್ಕಾಚಾರ
ನಿರಾಣಿ ಶುಗರ್ಸ್‌ ಪಾಲಾಗಿರುವ PSSK ಸಕ್ಕರೆ ಕಾರ್ಖಾನೆ.
  • Share this:
ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿರುವ PSSK ಸಕ್ಕರೆ ಕಾರ್ಖಾನೆ ರಾಜ್ಯದ ಸಹಕಾರಿ ಕ್ಷೇತ್ರದ ಏಕೈಕ ಕಾರ್ಖಾನೆಯಾಗಿ ಹೆಸರಾಗಿತ್ತು. ಆದರೆ, ಕಳೆದ ನಾಲ್ಕು ವರ್ಷಗಳ ಹಿಂದೆ ನಷ್ಟದ ಸುಳಿಗೆ ಸಿಲುಕಿದ್ದ‌ ಕಾರಣ ನೀಡಿ ಈ ಕಾರ್ಖಾನೆಯನ್ನು ಮುಚ್ಚಲಾಗಿತ್ತು.  ಪಾಂಡವಪುರದ ಈ PSSK ಸಕ್ಕರೆ ಕಾರ್ಖಾನೆಯನ್ನು ಇದೀಗ ಪುನಶ್ಚೇತನಗೊಳಿಸಲು ಮುಂದಾಗಿರುವ ಸರ್ಕಾರ ಪುನಶ್ಚೇತನದ ಹೆಸರಲ್ಲಿ ಮಾಜಿ ಸಚಿವ ಮುರುಗೇಶ್‌ ನಿರಾಣಿ ಮಾಲೀಕತ್ವದ ನಿರಾಣಿ ಷುಗರ್ಸ್ ಗೆ 40 ವರ್ಷಗಳ ಕಾಲ ಗುತ್ತಿಗೆಗೆ ನೀಡಿದೆ.

ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್.ಪೇಟೆ ತಾಲೂಕಿ ಭಾಗದ ಕಬ್ಬು ಬೆಳೆಗಾರ ರೈತರಿಗೆ ಪಾಲಿಗೆ ಒಂದು ಕಾಲದಲ್ಲಿ ಈ ಕಾರ್ಖಾನೆ ಜೀವನಾಡಿಯಾಗಿತ್ತು. ಆದರೆ, ಸರಿಯಾದ ನಿರ್ವಹಣೆ ಇಲ್ಲದ ಕಾರಣ ನಷ್ಟಕ್ಕೊಳಗಾಗಿ ಮುಚ್ಚಲಾಗಿತ್ತು. ಪರಿಣಾಮ ಈ ಭಾಗದ ಕಬ್ಬು ಬೆಳೆಗಾರ ರೈತರು ತಮ್ಮ ಕಬ್ಬು ಸಾಗಿಸಲಾಗದೆ ಪ್ರತಿವರ್ಷ ಸಂಕಷ್ಟಕ್ಕೆ ಸಿಲುಕುವಂತಾಗಿತ್ತು.

ಈ ಭಾಗದ ಸುಮಾರು 4 ಲಕ್ಷ ಹೆಕ್ಟೇ ರ್ ಭೂಮಿಯಲ್ಲಿ ಕಬ್ಬು ಬೆಳೆಯಲಾಗುತ್ತದೆ. ಆದರೆ, PSSK ಸಕ್ಕರೆ ಕಾರ್ಖಾನೆ ಮುಚ್ಚಲ್ಪಟ್ಟಿದ್ದರಿಂದ ರೈತರು ಬೇರೆ ವಿಧಿ ಇಲ್ಲದೆ ತಾವು ಬೆಳೆದ ಕಬ್ಬನ್ನು ಬೇರೆ ಬೇರೆ ಕಾರ್ಖಾನೆಗೆ ಸಾಗಿಸಲು ಪರದಾಡಿ ನಷ್ಟ ಅನುಭವಿಸುತ್ತಿದ್ದರು. ಹೀಗಾಗಿ ಈ ಕಾರ್ಖಾನೆಯ ಅಭಿವೃದ್ದಿಗೆ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಆದರೆ, ವಿಶೇಷ ಪ್ಯಾಕೇಜ್‌ ಘೋಷಣೆಗೆ ಮುಂದಾಗದ ಸರ್ಕಾರ ಇದೀಗ ಈ ಕಾರ್ಖಾನೆಯನ್ನೇ ಖಾಸಗಿ ವಲಯಕ್ಕೆ 40 ಗುತ್ತಿಗೆ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಗುತ್ತಿಗೆ ಹಿಂದಿದೆಯಾ ರಾಜಕೀಯ ಲೆಕ್ಕಾಚಾರ:

PSSK ಸಕ್ಕರೆ ಕಾರ್ಖಾನೆಯನ್ನು ಇಷ್ಟು ದೀರ್ಘ ಅವಧಿಗೆ ಗುತ್ತಿಗೆ ನೀಡಿರುವುದರ ಹಿಂದೆ ರಾಜಕೀಯ ಲೆಕ್ಕಾಚಾರ ಇದೆ ಎನ್ನಲಾಗುತ್ತಿದೆ. ಏಕೆಂದರೆ ಮುರುಗೇಶ್‌ ನಿರಾಣಿ ಬಿಜೆಪಿ ಪಕ್ಷದ ಪ್ರಬಲ ಲಿಂಗಾಯತ ನಾಯಕ. ಹೀಗಾಗಿ ಸಚಿವ ಸ್ಥಾನದ ಆಕಾಂಕ್ಷಿಯೂ ಹೌದು. ಆದರೆ, ಅವರಿಗೆ ಸಚಿವ ಸ್ಥಾನ ನೀಡದಿರುವ ಕಾರಣ ಅವರು ಸಿಎಂ ಮೇಲೆ ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಒಂದು ಕಾಲದ ಸಿ.ಎಂ ಆಪ್ತರಾಗಿದ್ದ ಮಾಜಿ ಸಚಿವ  ಮುರುಗೇಶ್ ನಿರಾಣಿಯ ಬಂಡಾಯ ಶಮನ ಮಾಡುವ ಉದ್ದೇಶದಿಂದಾಗಿ ಖುದ್ದು ಸಿಎಂ ಬಿ.ಎಸ್‌. ಯಡಿಯೂರಪ್ಪ PSSK ಕಾರ್ಖಾನೆಯನ್ನು 40 ವರ್ಷಗಳ ದೀರ್ಘ ಅವಧಿಗೆ ಗುತ್ತಿಗೆಗೆ ನೀಡಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.

ಸ್ಥಗಿತ ಗೊಂಡಿದ್ದ  ಮಂಡ್ಯ  ಮೈಶುಗರ್  ಮೇಲೆ ಕಣ್ಣಿಟ್ಟಿದ್ದ ನಿರಾಣಿಗೆ ಮೈಶುಗರ್ ಕೈತಪ್ಪಿದ್ದರಿಂದ ಅದರ ಬದಲು  PSSK ಗುತ್ತಿಗೆ ನೀಡುವ ಮೂಲಕ ಬಂಡಾಯ ಶಮನ ಮಾಡಲಾಗಿದೆ. ಒಟ್ಟಿನಲ್ಲಿ ಬಿಜೆಪಿ ಬಂಡಾಯ ಶಮನ ಮಾಡುವುದಕ್ಕಾಗಿ ಸಹಕಾರಿ ಕ್ಷೇತ್ರದ ಏಕೈಕ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಶುಗರ್ಸ್‌‌ಗೆ ದಾರೆ ಎರೆಯಲಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆಗಳು ಈಗಾಗಲೇ ಶುರುವಾಗಿದೆ. ಆದರೆ, ಸರ್ಕಾರ ಮಾತ್ರ PSSK ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದ ಖುಷಿಯಲ್ಲಿದೆ.ಇದನ್ನೂ ಓದಿ : Dawood Ibrahim - ದಾವೂದ್ ಇಬ್ರಾಹಿಂಗೆ ಕೊರೋನಾ ಸೋಂಕು ನಿಜವಾ? ಅವರ ಸಹೋದರ ಏನಂತಾರೆ?
First published: June 6, 2020, 2:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading