HOME » NEWS » District » BJP MP SHOBHA KARANDLAJE MOCKS AT KODIHALLI CHANDRASHEKHAR VCTV HK

ಕೋಡಿಹಳ್ಳಿ ಚಂದ್ರಶೇಖರ್​​ ಗೂ ಸಾರಿಗೆ ಸಂಸ್ಥೆಗೂ ಏನ್ ಸಂಬಂಧ: ಸಂಸದೆ ಶೋಭಾ ಕರಂದ್ಲಾಜೆ ಕಿಡಿ

ಕೋಡಿಹಳ್ಳಿ ಚಂದ್ರಶೇಖರ್ ರೈತರ ಬಗ್ಗೆ ಹೋರಾಟ ಮಾಡುವ ಬಗ್ಗೆ ನಮಗೆ ಗೌರವ ಇದೆ, ಇವತ್ತು ಸಾರಿಗೆ ನೌಕರರನ್ನ ಲೀಡ್ ಮಾಡುತ್ತಿರುವುದು ಸಂಶಯಕ್ಕೆ ಉಂಟುಮಾಡುತ್ತಿದೆ, ಇದು ಕಾಂಗ್ರೆಸ್ ಪ್ರೇರಿತವಾಗಿ ನಡೆಯುತ್ತಿದ್ದೀಯಾ ಎನ್ನುವ ಅನುಮಾನ ಮೂಡಿದೆ

news18-kannada
Updated:December 14, 2020, 5:15 PM IST
ಕೋಡಿಹಳ್ಳಿ ಚಂದ್ರಶೇಖರ್​​ ಗೂ ಸಾರಿಗೆ ಸಂಸ್ಥೆಗೂ ಏನ್ ಸಂಬಂಧ: ಸಂಸದೆ ಶೋಭಾ ಕರಂದ್ಲಾಜೆ ಕಿಡಿ
ಸಂಸದೆ ಶೋಭಾ ಕರಂದ್ಲಾಜೆ
  • Share this:
ಚಿಕ್ಕಮಗಳೂರು(ಡಿಸೆಂಬರ್​.14): ಕೋಡಿಹಳ್ಳಿ ಚಂದ್ರಶೇಖರ್ ಗೂ ಸಾರಿಗೆ ಸಂಸ್ಥೆಗೂ ಎನು ಸಂಬಂಧ, ಸಾರಿಗೆ ನೌಕರರ ಹೋರಾಟದಲ್ಲಿ ಖಾಸಗಿ ವ್ಯಕ್ತಿ ಬೇಡಿಕೆ ಇಡುತ್ತಾರೆ ಅಂದ್ರೆ ಎಲ್ಲವೂ ಸಂಶಯಕ್ಕೆ ದಾರಿಕೊಡುತ್ತಿದೆ. ಕೋಡಿಹಳ್ಳಿ ನೇತೃತ್ವದ ಬಗ್ಗೆ ಸಾರಿಗೆ ನೌಕರರು ಯೋಚನೆ ಮಾಡಬೇಕು, ಕೋಡಿಹಳ್ಳಿ ಚಂದ್ರಶೇಖರ್ ಹೋರಾಟದಲ್ಲಿ ರಾಜಕೀಯ ವಾಸನೆ ಇದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಕಿಡಿ ಕಾರಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ಕೋಡಿಹಳ್ಳಿ ಅವರ ಹೋರಾಟದಲ್ಲಿ ರಾಜಕೀಯ ವಾಸನೆ ಇದೆ, ಇದರ ಹಿಂದೆ ಕಾಂಗ್ರೆಸ್ ಇರುವ ಭಯ ಹಾಗೂ ಸಂಶಯ ನನಗೆ ವ್ಯಕ್ತವಾಗುತ್ತಿದೆ. ಕಳೆದ ವಾರ ಕೋಡಿಹಳ್ಳಿ ಚಂದ್ರಶೇಖರ್ ರೈತರ ಬಿಲ್ ಹಿಡಿದುಕೊಂಡು ಹೋರಾಟಕ್ಕೆ ಬಂದವರು, ಇದಕ್ಕೆ ಕಾಂಗ್ರೆಸ್ಸಿಗರು ಬೆಂಬಲ ಕೊಟ್ಟಿದ್ದರು ಎಂದು ತಿಳಿಸಿದರು.

ರೈತ ಹೋರಾಟಗಾರರು ನೌಕರರ ಹೋರಾಟಕ್ಕೆ ಬಂದಿದ್ದಾರೆ. ಅಂದರೆ ಯಾವುದೋ ರಾಜಕೀಯ ಪಕ್ಷ ಅವರನ್ನ ನಿಯಂತ್ರಿಸುತ್ತಿರುವ ಸಂಶಯ ಉಂಟಾಗಿದೆ. ಕೋಡಿಹಳ್ಳಿ ಚಂದ್ರಶೇಖರ್ ಅವರು ರೈತರ ಬಗ್ಗೆ ಹೋರಾಟ ಮಾಡುವ ಬಗ್ಗೆ ನಮಗೆ ಗೌರವ ಇದೆ, ಇವತ್ತು ಸಾರಿಗೆ ನೌಕರರನ್ನ ಲೀಡ್ ಮಾಡುತ್ತಿರುವುದು ಸಂಶಯಕ್ಕೆ ಉಂಟುಮಾಡುತ್ತಿದೆ, ಇದು ಕಾಂಗ್ರೆಸ್ ಪ್ರೇರಿತವಾಗಿ ನಡೆಯುತ್ತಿದ್ದೀಯಾ ಎನ್ನುವ  ಅನುಮಾನ ಮೂಡಿದೆ ಎಂದರು.

ಇನ್ನು ಇದೇ ವೇಳೆ ಸಾರಿಗೆ ನೌಕಕರ ಬಗ್ಗೆ ಮಾತನಾಡಿ, ಸಾರಿಗೆ ನೌಕರರು ದಾರಿ ತಪ್ಪಬಾರದು, ಸರ್ಕಾರ ಸಾರಿಗೆ ನೌಕರರ ಜೊತೆಗಿದೆ, ಸಾರಿಗೆ ನೌಕರರ 8 ಬೇಡಿಕೆಯನ್ನ ಈಡೇರಿಸಿದೆ, ಜನರು ಸಂಕಷ್ಟದಲ್ಲಿದ್ದಾರೆ. ಸಾರಿಗೆ ನೌಕಕರ ಮುಷ್ಕರದಿಂದ ಬಡವರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ತೊಂದರೆಯಾಗುತ್ತಿದೆ. ಜನರು ಅವರವರ ಮನೆಗೆ ತೆರಳಲು ಕಷ್ಟಪಡುತ್ತಿದ್ದಾರೆ. ನೌಕರರು ಈ ರೀತಿ ಪಟ್ಟು ಹಿಡಿಯುವುದು ಒಳ್ಳೆಯದಲ್ಲ  ಎಂದು ತಿಳಿಸಿದರು.

ಇದನ್ನೂ ಓದಿ : ಕೋಡಿಹಳ್ಳಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ: ಸಚಿವೆ ಶಶಿಕಲಾ ಜೊಲ್ಲೆ ಆಕ್ರೋಶ

ನಿಗಮ ಲಾಭದಿಂದ ನಡೆದ್ರೆ ನೌಕರರಿಗೆ ಅನುಕೂಲವಾಗುತ್ತೆ. ಲಾಕ್ ಡೌನ್ ವೇಳೆ ಬಸ್ ಗಳು ಓಡಾಡದಿದ್ದರು ನಿಗಮ ಅವರಿಗೆ ಸಂಬಳ ನೀಡಿದೆ. ಇಂತಹ ಸಂದರ್ಭದಲ್ಲಿ ನೌಕಕರು ಕೆಲಸಕ್ಕೆ ಹಾಜರಾಗಬೇಕು ಎಂದು ತಿಳಿಸಿದರು.
Youtube Video

ನೀವು ನೇರವಾಗಿ ಸಿಎಂ ಹಾಗೂ ಸಚಿವರ ಜೊತೆ ಮಾತಾನಾಡಬಹುದು, ನಿಮ್ಮಗೊಂದು ಬದುಕಿದೆ, ಕೆಲಸಕ್ಕೆ ಬನ್ನಿ ಎಂದು ಸಾರಿಗೆ ನೌಕಕರಿಗೆ ಶೋಭಾ ಕರಂದ್ಲಾಜೆ ಮನವಿ ಮಾಡಿದರು. ಇನ್ನು ನಿಮ್ಮನ್ನ ನಂಬಿಕೊಂಡು ನಿಮ್ಮ ಕುಟುಂಬ ಇದೆ, ಸಾರಿಗೆ ನಿಗಮ ನಷ್ಟ ವಾದ್ರೆ ನಿಮಗೆ ತೊಂದರೆಯಾಗುತ್ತೆ ಹಾಗಾಗಿ ಈ ಕೂಡಲೇ ಎಲ್ಲರೂ ಕೆಲಸಕ್ಕೆ ಹಾಜರಾಗಿ ಎಂದರು.
Published by: G Hareeshkumar
First published: December 14, 2020, 5:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories