ಭಾರತ್ ಬಂದ್ ಪಂಜಾಬ್ ರಾಜ್ಯದ ಏಜೆಂಟ್​ಗಳ ಪ್ರಾಯೋಜಿತ ಪ್ರತಿಭಟನೆ: ಬಿಜೆಪಿ ಸಂಸದ ಮುನಿಸ್ವಾಮಿ

ಪಂಜಾಬ್ ರಾಜ್ಯದ ಕೆಲ ಏಜೆಂಟರು ಕೇರಳದ ಕೆಲ ಮುಖಂಡರ ಜೊತೆಗೆ ಷಡ್ಯಂತ್ರ ರೂಪಿಸಿ, ರೈತರನ್ನ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪಂಜಾಬ್​ನ ನಿಜವಾದ ಲಕ್ಷಾಂತರ ರೈತರಿಗೆ ತಪ್ಪು ಮಾಹಿತಿ ನೀಡಿ ಪ್ರತಿಭಟನೆಗೆ ಕರೆತರಲಾಗಿದೆ ಎಂದು ಕೋಲಾರದ ಬಿಜೆಪಿ ಸಂಸದ ವಾಗ್ದಾಳಿ ನಡೆಸಿದ್ದಾರೆ.

ಎಸ್ ಮುನಿಸ್ವಾಮಿ

ಎಸ್ ಮುನಿಸ್ವಾಮಿ

  • Share this:
ಕೋಲಾರ(ಡಿ. 09): ದೆಹಲಿಯಲ್ಲಿ ಕೃಷಿ ಕಾಯ್ದೆಗಳನ್ನ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ದ ನಡೆಯುತ್ತಿರುವ ರೈತರ ಹೋರಾಟವನ್ನು ದಳ್ಳಾಳಿಗಳ ಪ್ರತಿಭಟನೆ ಎಂದು ಕೋಲಾರ ಸಂಸದ ಎಸ್ ಮುನಿಸ್ವಾಮಿ ತಳ್ಳಿಹಾಕಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಸಂಸದರು, ಭಾರತ್ ಬಂದ್ ಕರೆ ಕೇವಲ ಪ್ರಾಯೋಜಿತವಾಗಿದೆ. ಬಂದ್ ಯಶಸ್ವಿಯಾಗಿಲ್ಲ ಎಂದರು.

ರೈತರು ಸ್ವತಂತ್ರವಾಗಿ ಜೀವನ ನಡೆಸಬೇಕೆಂದು ಕೃಷಿ ಕಾಯ್ದೆಯನ್ನ ಕಳೆದ ವರ್ಷ ಮಂಡಿಸಲಾಗಿದೆ. ಇದರಿಂದ ದಳ್ಳಾಳಿಗಳಿಗೆ ಸಂಕಷ್ಟವಾಗಲಿದೆ. ಹೀಗಾಗಿ‌ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆಗಳು ನಡೆಸಲಾಗುತ್ತಿದೆ. ಅಂತಹವರಿಗೆ ಕಾಂಗ್ರೆಸ್ ಸಹ ಬೆಂಬಲ ನೀಡಿದ್ದು, ಪತನದ ಅಂಚಿನಲ್ಲಿದ್ದರೂ ಕಾಂಗ್ರೆಸ್ ಪಕ್ಷ ದುರುದ್ದೇಶ ಹೊಂದಿದೆ ಎಂದರು.

ಪಂಜಾಬ್ ರಾಜ್ಯದ ಕೆಲ ಏಜೆಂಟರು ಕೇರಳದ ಕೆಲ ಮುಖಂಡರ ಜೊತೆಗೆ ಷಡ್ಯಂತ್ರ ರೂಪಿಸಿ, ರೈತರನ್ನ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪಂಜಾಬ್ ರಾಜ್ಯದಲ್ಲಿನ ನಿಜವಾದ ಲಕ್ಷಾಂತರ ರೈತರಿಗೆ ತಪ್ಪು ಮಾಹಿತಿ ನೀಡಿ ಪ್ರತಿಭಟನೆಗೆ ಕರೆತರಲಾಗಿದೆ. ಅವರ ಹಿಂದೆ ಕೋಟ್ಯಾಧಿಪತಿಗಳಾದ ಮಾರುಕಟ್ಟೆ ದಳ್ಳಾಳಿಗಳು ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ‌ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣ ಮಾಡುವ ಉದ್ದೇಶವನ್ನು ಇರಿಸಿಕೊಂಡು ಕಾಯ್ದೆಗಳನ್ನ ಮಂಡಿಸಿದ್ದು ರೈತರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲು ಮುಂದಾಗಿದೆ. ಇದನ್ನ ವಿರೋಧ ಪಕ್ಷ ಕಾಂಗ್ರೆಸ್ ಸಹಿಸದೆ ಅಪಪ್ರಚಾರ ಮಾಡುತ್ತಿದೆ ಎಂದವರು ಟೀಕಿಸಿದರು.

ಇದನ್ನೂ ಓದಿ: ಊರು ತುಂಬಾ ಇರೋರು ಕುರುಬರೇ, ಆದರೆ ಗ್ರಾಪಂ ಚುನಾವಣೆ ಮೀಸಲಾತಿಯಲ್ಲಿ ಈಶ್ವರಪ್ಪ ಅನ್ಯಾಯ ಮಾಡಿದರು; ಗ್ರಾಮಸ್ಥರ ಆಕ್ರೋಶ!

‘ಕ್ರಾಸ್ ಎಂಬ ಪದವನ್ನ ಸಿದ್ದರಾಮಯ್ಯ ಅವರು ಮುಂದೆ ಬಳಸಬಾರದು’:

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಹೇಳಿಕೆ ನೀಡುವಾಗ, "ಕ್ರಾಸ್" ಎನ್ನುವ ಪದವನ್ನ ಬಳಸಿದ್ದರು. ಹೀಗಾಗಿ ಆ ಪದವನ್ನ ಬಳಸದಂತೆ ಮುನಿಸ್ವಾಮಿ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ನೂತನವಾಗಿ ಸರ್ಕಾರ ಲವ್ ಜಿಹಾದ್ ಕಾನೂನು ಜಾರಿಗೆ ತರಲು ಪ್ರಯತ್ನ ಆರಂಭಿಸಿದ್ದು, ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸುವ ಸಾಧ್ಯತೆಯಿದೆ. ಲವ್ ಜಿಹಾದ್ ವಿಚಾರವಾಗಿ ಪ್ರತಿಕ್ರಿಯೆ ನೀಡುವಾಗ ಸಿದ್ದರಾಮಯ್ಯ ಅವರು, "ಕ್ರಾಸ್" ಎನ್ನುವ ಪದವನ್ನ ಬಳಸಿದ್ದರು. ಆದರೆ ಅದು ಪ್ರಾಣಿಗಳ ವಿಚಾರದಲ್ಲಿ ಬಳಸುವ ಪದವಾಗಿದ್ದು, ಮತ್ತೊಮ್ಮೆ ಹಾಗೆ ಹೇಳದಿರಿ ಎಂದು ಸಂಸದ ಮುನಿಸ್ವಾಮಿ ಕಿವಿಮಾತು ಹೇಳಿದರು.

ಇನ್ನು ದೇಶದಲ್ಲಿ ಗೋಹತ್ಯೆ ನಿಷೇದ ಆಗಬೇಕಿದೆ ಎಂದು ಸಂಸದ ಮುನಿಸ್ವಾಮಿ ಆಗ್ರಹ ಮಾಡಿದ್ದು, ಲವ್ ಜಿಹಾದ್ ಕಾನೂನು ಶೀಘ್ರದಲ್ಲೇ ಜಾರಿಯಾಗಲಿದೆ. ಚುನಾವಣೆಯಲ್ಲಿ ಯಾರನ್ನೋ ಓಲೈಸಲು ರಾಜಕೀಯ ಮಾಡಬಾರದು ಎಂದು ಅಭಿಪ್ರಾಯಪಟ್ಟರು.

ವರದಿ: ರಘುರಾಜ್
Published by:Vijayasarthy SN
First published: