Sindagi By ELection: ಸಿಂದಗಿ ಉಪಚುನಾವಣೆ ಘೋಷಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ; ಪಕ್ಷದ ನಾಯಕರ ವಿರುದ್ಧ ಸಂಸದ ಜಿಗಜಿಣಗಿ ಬೇಸರ!

Sindagi By ELection ನಾನು ಕಾರ್ಯಕರ್ತರ ಜೊತೆಗೆ ಕಾರ್ಯಕರ್ತನಾಗಿ ಇರ್ತಿನಿ ಎಂದು ನೊಂದುಕೊಂಡು ಮಾತನಾಡಿದರು. ನಾನು ಬೇಡವಾಗಿದ್ದರೆ ನೇರವಾಗಿ ಬೇಡ ಅಂತಾ ಹೇಳಲಿ ಎಂದು ಬಿಜೆಪಿ ಪ್ರಬಲ ದಲಿತ ನಾಯಕರಾಗಿರುವ ಸಂಸದ ರಮೇಶ ಜಿಗಜಿಣಗಿ ಹೇಳುವ ಮೂಲಕ ಬಿಜೆಪಿ ನಾಯಕರಲ್ಲಿ ಗೊಂದಲ ಉಂಟು ಮಾಡಿದ್ದಾರೆ.

ಸಂಸದ ರಮೇಶ ಜಿಗಜಿಣಗಿ

ಸಂಸದ ರಮೇಶ ಜಿಗಜಿಣಗಿ

  • Share this:
    ರಾಜ್ಯದ 2 ಕ್ಷೇತ್ರಗಳ ಉಪಚುನಾವಣೆ ದಿನಾಂಕ ಘೋಷಣೆಯಾಗಿದೆ. ಹಾನಗಲ್ (Hanagal) ಹಾಗೂ ಸಿಂದಗಿ ಕ್ಷೇತ್ರಗಳ (Sindagi) ಉಪ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡಿದೆ. ಅಕ್ಟೋಬರ್ 30ರಂದು ಈ ಎರಡು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ನವೆಂಬರ್ 2ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಬಿಜೆಪಿ ಶಾಸಕ ಸಿ.ಎಂ.ಉದಾಸಿ ನಿಧನದಿಂದಾಗಿ ಹಾವೇರಿಯ ಹಾನಗಲ್ ಕ್ಷೇತ್ರ ತೆರವಾಗಿತ್ತು. ಇತ್ತ ಜೆಡಿಎಸ್ ಶಾಸಕ ಎಂ. ಸಿ. ಮನಗೂಳಿ (M C Managooli) ನಿಧನದಿಂದಾಗಿ ವಿಜಯಪುರದ ಸಿಂದಗಿ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಈ ಹಿಂದೆ ಉಪ ಚುನಾವಣೆಯ (By election) ದಿನಾಂಕ ಘೋಷಣೆಯಾದಿದ್ದರೂ ಮೂರು ಪಕ್ಷಗಳು ಉಪ ಸಮರಕ್ಕೆ ಮುಂಚಿನಿಂದಲೂ ಕಸರತ್ತು ನಡೆಸಿಕೊಂಡು ಬಂದಿವೆ. ಇದೀಗ ಉಪಚುನಾವಣೆ ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ಚಟುವಟಿಕೆಗಳು (Political Developments) ಮತ್ತಷ್ಟು ಗರಿಗೆದರಿವೆ.

    ಏತನ್ಮಧ್ಯೆ ವಿಜಯಪುರದ ಸಿಂದಗಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ಘೋಷಣೆ ಬೆನ್ನಲ್ಲೆ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಬಿಜೆಪಿ ನಾಯಕರ ವಿರುದ್ಧ ಕೇಂದ್ರದ ಮಾಜಿ ಸಚಿವ, ಹಾಲಿ ಸಂಸದ ರಮೇಶ ಜಿಗಜಿಣಗಿ ಅಸಮಾಧಾನ ಹೊರಹಾಕಿದ್ದಾರೆ. ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ವೇದಿಕೆ ಮೇಲೆಯೇ ರಮೇಶ ಜಿಗಜಿಣಗಿ ಅಸಮಧಾನ ಸ್ಪೋಟಗೊಂಡಿದೆ. ಪಕ್ಷ ನನ್ನನ್ನು ಯಾಕೆ ಬಳಸಿಕೊಳ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ ಜಿಗಜಿಣಗಿ, ರಾಜ್ಯಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಎದುರು ಅಸಮಾಧಾನ ಹೊರಹಾಕಿದ್ದಾರೆ.

    ನನ್ನ ಅಭಿಪ್ರಾಯ ಪಕ್ಷದ ವರಿಷ್ಠರಿಗೆ ತಿಳಿಸಲೇಬೇಕು ಎಂದು ವೇದಿಕೆ ಮೇಲೆಯೇ ಆಗ್ರಹಿಸಿದ ರಮೇಶ ಜಿಗಜಿಣಗಿ ಅವರು, ನೀನೊಬ್ಬ ಲೋಕಸಭಾ ಸದಸ್ಯನಾಗಿ ಜವಾಬ್ದಾರಿ ಕೆಲಸ ಮಾಡು ಅಂತಾ ಯಾವೊಬ್ಬ ನಾಯಕನೂ ನನಗ ಅಂದಿಲ್ಲ. ನಾನು ಪಕ್ಷಕ್ಕೆ ಬಂದು ಇಷ್ಟು ವರ್ಷವಾದರೂ ಯಾವ ನಾಯಕನೂ ನನಗೆ ಜವಾಬ್ದಾರಿ ನೀಡಿಲ್ಲ ಎಂದು ಹೇಳುವ ಮೂಲಕ ಸಿಂದಗಿ ಚುನಾವಣೆ ಘೋಷಣೆ ಬೆನ್ನಲ್ಲೆ ಬಿಜೆಪಿಯಲ್ಲಿ ಗೊಂದಲಕ್ಕೆ ನಾಂದಿ ಹಾಡಿದ್ದಾರೆ.

    ಪಕ್ಷದಲ್ಲಿ ನನಗೆ ನೋವಾಗ್ತಿದೆ ಎಂದು ವೇದಿಕೆಯಲ್ಲೇ ಅಸಮಾಧಾನ ಹೊರಹಾಕಿದ ಜಿಗಜಿಣಗಿ, 17 ವರ್ಷವಾಯ್ತು ಪಕ್ಷಕ್ಕೆ ಬಂದು. ಜವಾಬ್ದಾರಿಯಿಂದ ಕೆಲಸ ಮಾಡು ಅಂತಾ ನಾಯಕರು ಹೇಳಿಲ್ಲ. ಆದರೂ ಎಲ್ಲವನ್ನು ಸಹಿಸಿಕೊಂಡು ಬಂದಿದ್ದೀನಿ. ನಾನು ಪಕ್ಷವನ್ನ ಕೆಳಗಿಟ್ಟು ಎಂದು ಮಾತಾಡಿಲ್ಲ, ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ನನಗೂ ವಯಸ್ಸಾಗಿದೆ. ನಾನು ಕಾರ್ಯಕರ್ತರ ಜೊತೆಗೆ ಕಾರ್ಯಕರ್ತನಾಗಿ ಇರ್ತಿನಿ ಎಂದು ನೊಂದುಕೊಂಡು ಮಾತನಾಡಿದರು. ನಾನು ಬೇಡವಾಗಿದ್ದರೆ ನೇರವಾಗಿ ಬೇಡ ಅಂತಾ ಹೇಳಲಿ ಎಂದು ಬಿಜೆಪಿ ಪ್ರಬಲ ದಲಿತ ನಾಯಕರಾಗಿರುವ ಸಂಸದ ರಮೇಶ ಜಿಗಜಿಣಗಿ ಹೇಳುವ ಮೂಲಕ ಬಿಜೆಪಿ ನಾಯಕರಲ್ಲಿ ಗೊಂದಲ ಉಂಟು ಮಾಡಿದ್ದಾರೆ.

    ಇದನ್ನು ಓದಿ: Karnataka Byelection: ಹಾನಗಲ್, ಸಿಂದಗಿ ಬೈ ಎಲೆಕ್ಷನ್ ಡೇಟ್ ಅನೌನ್ಸ್, ಅ. 30ಕ್ಕೆ ಮತದಾನ ನ. 2ಕ್ಕೆ ರಿಸಲ್ಟ್!

    ಅಭ್ಯರ್ಥಿ ಘೋಷಿಸಿರುವ ಕಾಂಗ್ರೆಸ್

    ಇನ್ನು ವಿಜಯಪುರ ಜಿಲ್ಲೆಯ ಸಿಂದಗಿ ಬೈಎಲೆಕ್ಷನ್​ನಲ್ಲಿ ಕಾಂಗ್ರೆಸ್​, ಶಾಸಕ ಎಂ. ಸಿ. ಮನಗೂಳಿ ಅವರ ಪುತ್ರ ಅಶೋಕ್ ಮನಗೂಳಿ ಅವರನ್ನು 'ಕೈ' ಅಭ್ಯರ್ಥಿಯಾಗಿ ಈ ಹಿಂದೆಯೇ ಘೋಷಣೆ ಮಾಡಿತ್ತು. ಸಿಂದಗಿ ಜೆಡಿಎಸ್ ಶಾಸಕರಾಗಿದ್ದ ಎಂಸಿ ಮನಗೂಳಿ ನಿಧನದ ಬಳಿಕ, ಅವರ ಪುತ್ರ ಅಶೋಕ್ ಮನಗೂಳಿ ಅವರಿಗೆ ಜೆಡಿಎಸ್ ಟಿಕೆಟ್ ಫಿಕ್ಸ್ ಎಂದು ಹೇಳಲಾಗಿತ್ತು. ಆದರೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಇದರಿಂದ ಬೇಸರಗೊಂಡ ಅಶೋಕ ಮನಗೂಳಿ ಮಾರ್ಚ್ 9ರಂದು ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡಿದ್ದರು. ಇನ್ನೂ ಬಿಜೆಪಿ ಹಾಗೂ ಜೆಡಿಸ್​ ಇಲ್ಲಿಯವರೆಗೆ ಅಭ್ಯರ್ಥಿ ಬಗ್ಗೆ ಯಾವುದೇ ಸುಳಿವು ನೀಡಿಲ್ಲ. ಇತ್ತ ಅಶೋಕ ಮನಗೂಳಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವುದು 'ದಳಪತಿ'ಗಳ ಕಣ್ಣು ಕೆಂಪು ಮಾಡಿದಂತಾಗಿದೆ. ಹೀಗಾಗಿ ಯಾವ ಕಾರ್ಯತಂತ್ರಕ್ಕೆ ಜೆಡಿಎಸ್ ಮೊರೆ ಹೋಗುತ್ತೆ ಅಂತ ಕಾದುನೋಡಬೇಕಿದೆ.
    Published by:HR Ramesh
    First published: