ವಿಧಾನ ಪರಿಷತ್ ಸ್ಥಾನಕ್ಕೆ ಯತ್ನಿಸಿದ ಈರಣ್ಣ ಕಡಾಡಿಗೆ ರಾಜ್ಯಸಭೆ ಪ್ರವೇಶದ ಭಾಗ್ಯ ನೀಡಿದ ಬಿಜೆಪಿ ವರಿಷ್ಠರು..!

ವಿಧಾನ ಪರಿಷತ್ ಪ್ರವೇಶಿಸಲು ಯತ್ನಿಸಿದ ಈರಣ್ಣ ಕಡಾಡಿಗೆ ಬಿಜೆಪಿ ವರಿಷ್ಠರು ದೊಡ್ಡ ಗಿಫ್ಟ್ ನೀಡದ್ದಾರೆ. ರಾಜ್ಯಸಭೆಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಮೂಲಕ ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆಯುವ ಕೆಲಸವನ್ನು ಬಿಜೆಪಿ ಹೈಕಮಾಂಡ್ ಮಾಡಿದೆ

ರಾಜ್ಯಸಭಾ ಬಿಜೆಪಿ ಅಭ್ಯರ್ಥಿ ಈರಣ್ಣ ಕಡಾಡಿ

ರಾಜ್ಯಸಭಾ ಬಿಜೆಪಿ ಅಭ್ಯರ್ಥಿ ಈರಣ್ಣ ಕಡಾಡಿ

  • Share this:
ಬೆಳಗಾವಿ(ಜೂ. 08): ಬೆಳಗಾವಿಯ ಘಟಾನುಘಟಿ ಬಿಜೆಪಿ ನಾಯಕರಿಗೆ ಇಂದು ಬಿಜೆಪಿ ವರಿಷ್ಠರು ದೊಡ್ಡ ಶಾಕ್ ನೀಡಿದ್ದಾರೆ. ರಾಜ್ಯಸಭೆಗೆ ಪೈಪೋಟಿ ನಡೆಸಿದ್ದ ರಮೇಶ ಕತ್ತಿ ಹಾಗೂ ಪ್ರಭಾಕರ ಕೋರೆಗೆ ರಾಜಕೀಯವಾಗಿ ದೊಡ್ಡ ಪೆಟ್ಟು ನೀಡಿದ್ದು. ಪಕ್ಷದ ನಿಷ್ಠಾವಂತ ಕಾರ್ಯಕರ್ತ ಈರಣ್ಣ ಕಡಾಡಿಗೆ ಬಿಜೆಪಿ ರಾಜ್ಯಸಭೆ ಟಿಕೆಟ್ ನೀಡಿದೆ. ಈ ಮೂಲಕ ಬೆಳಗಾವಿಯಲ್ಲಿ ಹೊಸ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.

ಬೆಳಗಾವಿ ವಿಭಾಗದ ಪ್ರಭಾರಿಯಾಗಿದ್ದ ಈರಣ್ಣ ಕಡಾಡಿ ಹಲವು ಹಲವು ವರ್ಷಗಳಿಂದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ. ಎರಡು ಸಲ ವಿಧಾನ ಪರಿಷತ್ ಸದಸ್ಯನಾಗುವ ಬಯಕೆಯನ್ನು ಈರಣ್ಣ ಕಡಾಡಿ ವ್ಯಕ್ತ ಪಡಿಸಿದ್ದರು. ಕೆಲ ದಿನಗಳ ಹಿಂದಷ್ಟೆ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಸಹ ವಿಚಾರದಲ್ಲಿ ಈರಣ್ಣ ಕಡಾಡಿ ಭೇಟಿಯಾಗಿದ್ದರು. ಆದರೆ, ಉಪಚುನಾವಣೆಯಲ್ಲಿ ಸೋತ ಹಲವರಿಗೆ ಅವಕಾಶ ಕಲ್ಪಿಸಬೇಕಿದೆ ನೊಡೋಣ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದರು.

ವಿಧಾನ ಪರಿಷತ್ ಪ್ರವೇಶಿಸಲು ಯತ್ನಿಸಿದ ಈರಣ್ಣ ಕಡಾಡಿಗೆ ಬಿಜೆಪಿ ವರಿಷ್ಠರು ದೊಡ್ಡ ಗಿಫ್ಟ್ ನೀಡದ್ದಾರೆ. ರಾಜ್ಯಸಭೆಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಮೂಲಕ ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆಯುವ ಕೆಲಸವನ್ನು ಬಿಜೆಪಿ ಹೈಕಮಾಂಡ್ ಮಾಡಿದೆ. ಬಿಜೆಪಿ ವರಿಷ್ಠರ ನಿರ್ಧಾರದಿಂದ ಪಕ್ಷದ ನಿಷ್ಠವಂತರಿಗೆ ಸಂತೋಷವಾಗಿದ್ದು, ಇನ್ನೂ ರಾಜ್ಯಸಭೆಯ ಕನಸ್ಸು ಕಂಡಿದ್ದ ಕೋರೆ ಹಾಗೂ ಕತ್ತಿಗೆ ಶಾಕ್ ಆಗಿದೆ.

ಈರಣ್ಣ ಕಡಾಡಿ 1989ರಿಂದ ಬಿಜೆಪಿ ಪಕ್ಷದಲ್ಲಿ ಸಕ್ರೀಯ ಕಾರ್ಯಕರ್ತರಾಗಿ ಕೆಲಸ ಮಾಡಿದ್ದರು. ಅರಭಾವಿ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ರಾಜಕೀಯ ಜೀವನ ಆರಂಭಿಸಿದ ಕಡಾಡಿ. ನಂತರ ಗೋಕಾಕ್ ತಾಲೂಕಿನ ಬಿಜೆಪಿ ಅಧ್ಯಕ್ಷರಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆ ಕೆಲಸ ಮಾಡಿದ್ದರು. ಜತೆಗೆ 1994ರಲ್ಲಿ ಅರಭಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿ ಎಸ್ ಕೌಜಲಗಿ ವಿರುದ್ಧ ಸ್ಪರ್ಧಿಸಿ ಸೋತ್ತಿದ್ದರು.

2010ರಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಈರಣ್ಣ ಕಡಾಡಿ ಸೇವೆ ಸಲ್ಲಿಸಿದ್ದು. ಬೆಳಗಾವಿ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡಿ, ಸದ್ಯ ಬೆಳಗಾವಿ ವಿಭಾಗದ ಬಿಜೆಪಿ ಪ್ರಭಾರಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅರಭಾವಿ ಹಾಗೂ ಗೋಕಾಕ್ ಕ್ಷೇತ್ರದಲ್ಲಿ ತಮ್ಮದೇ ಆದ ರಾಜಕೀಯ ಪ್ರಭಾವವನ್ನು ಬೆಳೆಸಿಕೊಂಡಿದ್ದಾರೆ.

ಗೋಕಾಕ್ ಹಾಗೂ ಅರಭಾವಿ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಶಾಸಕರಾಗಿ ಆಯ್ಕೆಯಾಗಿದ್ದು. ಈ ಕ್ಷೇತ್ರದಲ್ಲಿ ಪರ್ಯಾಯ ನಾಯಕ ಬೆಳೆಯಲು ಬಿಡುವುದಿಲ್ಲ ಎಂಬ ರಾಜಕೀಯ ಲೆಕ್ಕಚಾರ ಬೆಳಗಾವಿ ಜಿಲ್ಲೆಯಲ್ಲಿ ಇತ್ತು. ಸದ್ಯ ಬಿಜೆಪಿ ವರಿಷ್ಠರು ಎಲ್ಲದಕ್ಕೂ ತೆರೆ ಎಳೆದಿದ್ದು, ಈರಣ್ಣ ಕಡಾಡಿಯನ್ನು ರಾಜ್ಯಸಭೆಗೆ ಅಭ್ಯರ್ಥಿ ಮಾಡುವ  ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಇದನ್ನೂ ಓದಿ : ರಾಜ್ಯಸಭೆ ಚುನಾವಣೆ: ಕಾಂಗ್ರೆಸ್​ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆ

ಸದ್ಯ ಈರಣ್ಣ ಕಡಾಡಿ ಆಯ್ಕೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅನೇಕ ರಾಜಕೀಯ ಚರ್ಚೆಗಳು ಆರಂಭವಾಗಿವೆ. ಇದು ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ ಎಂಬುದು ಕಾದು ನೋಡಬೇಕಿದೆ. ಜಿಲ್ಲೆಯಲ್ಲಿ ಸದ್ಯ ಪ್ರಭಾಕರ ಕೋರೆ ಹಾಗೂ ರಮೇಶ್ ಕತ್ತಿ ರಾಜ್ಯಸಭೆ ಪ್ರವೇಶಿಸುವ ಕನಸು ಭಗ್ನಗೊಂಡಿದೆ.
First published: