• Home
  • »
  • News
  • »
  • district
  • »
  • ಡಿ ಕೆ ಶಿವಕುಮಾರ್ ಒಬ್ಬ ಕಳ್ಳ, ಅವರ ಫೋನ್ ನಾವ್ಯಾಕೆ ಟ್ಯಾಪ್ ಮಾಡೋಣ ; ಸಿ.ಪಿ.ಯೋಗೇಶ್ವರ್

ಡಿ ಕೆ ಶಿವಕುಮಾರ್ ಒಬ್ಬ ಕಳ್ಳ, ಅವರ ಫೋನ್ ನಾವ್ಯಾಕೆ ಟ್ಯಾಪ್ ಮಾಡೋಣ ; ಸಿ.ಪಿ.ಯೋಗೇಶ್ವರ್

ವಿಧಾನಪರಿಷತ್​ ಸದಸ್ಯ ಸಿ ಪಿ ಯೋಗೇಶ್ವರ್​

ವಿಧಾನಪರಿಷತ್​ ಸದಸ್ಯ ಸಿ ಪಿ ಯೋಗೇಶ್ವರ್​

ಜನರ ಗಮನವನ್ನು ಬೇರೆ ಕಡೆ ಸೆಳೆಯುವ ಪ್ರಯತ್ನವನ್ನ ಡಿಕೆ ಶಿವಕುಮಾರ್​ ಅವರು ಮಾಡುತ್ತಿದ್ದಾರೆ. ಯಾವ ಉದ್ದೇಶಕ್ಕಾಗಿ ಅವರ ಫೋನ್ ಟ್ಯಾಪ್ ಮಾಡಬೇಕು. ಅದೊಂದು ಸುಳ್ಳು ಆರೋಪ 

  • Share this:

ರಾಮನಗರ(ಆಗಸ್ಟ್​ 24): ಅವರೇ ಕಳ್ಳ, ಇನ್ನೊಬ್ಬರ ಮೇಲೆ ಆರೋಪ ಮಾಡುವುದು ಏನಿದೆ. ಅವರ ಫೋನ್ ಕದ್ದಾಲಿಕೆ ಮಾಡಿ ಯಾವ ರಾಜ್ಯ ಗೆಲ್ಲಬೇಕು. ಅವರೇ ಟ್ಯಾಪಿಂಗ್ ಮಾಡಿಸಿ ನನ್ನ ಮೇಲೆಯೇ ಈ ಹಿಂದೆ ಫೋನ್ ಕದ್ದಾಲಿಕೆ ಆರೋಪ ಮಾಡಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ದ ವಿಧಾನ ಪರಿಷತ್​ ಸದಸ್ಯ ಸಿ ಪಿ ಯೋಗೇಶ್ವರ್​ ತಿರುಗೇಟು ನೀಡಿದ್ದಾರೆ. 


ಚನ್ನಪಟ್ಟಣ ತಾಲೂಕು ಪಂಚಾಯತ್​ನಲ್ಲಿ ಪಿಡಿಒಗಳ ಸಭೆ ನಂತರ ಮಾತನಾಡಿದ ಅವರು ಜನರ ಗಮನವನ್ನು ಬೇರೆ ಕಡೆ ಸೆಳೆಯುವ ಪ್ರಯತ್ನವನ್ನ ಡಿಕೆ ಶಿವಕುಮಾರ್​ ಅವರು ಮಾಡುತ್ತಿದ್ದಾರೆ. ಯಾವ ಉದ್ದೇಶಕ್ಕಾಗಿ ಅವರ ಫೋನ್ ಟ್ಯಾಪ್ ಮಾಡಬೇಕು. ಅದೊಂದು ಸುಳ್ಳು ಆರೋಪ  ಮಾಡಿದ್ದರು ಎಂದು ಹೇಳಿದರು.


ನನ್ನ ಫೋನ್ ಟ್ಯಾಪಿಂಗ್ ಆಗುತ್ತಿದೆ. ಇಲ್ಲಿಯವರೆಗೆ ಚೆನ್ನಾಗಿತ್ತು, ಇವತ್ತು ಬೆಳಗ್ಗೆಯಿಂದ ಫೋನ್​ ಕರೆಗಳು ಬರುತ್ತಿಲ್ಲ. ಇವತ್ತು ಇದರ ಬಗ್ಗೆ ದೂರು ಕೊಡುತ್ತೇನೆ. ನಮ್ಮ ಸುದರ್ಶನ್ ನನಗೆ 25 ಬಾರಿ ಕಾಲ್ ಮಾಡಿದ್ದಾರೆ. ಆದರೆ ಒಮ್ಮೆಯೂ ನನಗೆ ಕಾಲ್ ಬಂದಿಲ್ಲ. ನನ್ನ ಫೋನ್ ಕದ್ದಾಲಿಕೆ ಮಾಡುತ್ತಿರುವುದು ನೂರಕ್ಕೆ ನೂರರಷ್ಟು ಸತ್ಯ. ಈ ಹಿಂದೆಯೂ ನನ್ನ ಫೋನ್ ಟ್ಯಾಪಿಂಗ್ ಆಗಿತ್ತು, ಈಗ ಮತ್ತೆ ಆಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದರು.


ಇನ್ನು ಚನ್ನಪಟ್ಟಣ ಅಭಿವೃದ್ಧಿಗೆ ಬಿಜೆಪಿ ಸರ್ಕಾರದಲ್ಲಿ ಅನುದಾನಗಳನ್ನ ತಡೆ ಹಿಡಿಯಲಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಸಿಪಿವೈ ಲೇವಡಿ ಮಾಡಿದರು. ಆ ರೀತಿ ಯಾವುದೇ ಅನುದಾನ ತಡೆಯಾಗಿದ್ದರೆ ನಾನು ಗಮನಹರಿಸುತ್ತೇನೆ. ಕುಮಾರಸ್ವಾಮಿಯವರು ಶಕ್ತಿಯುಳ್ಳವರು, ಅವರೇ ಬಿಜೆಪಿ ಸರ್ಕಾರದ ಜೊತೆಗೆ ಒಳ್ಳೆಯ ಹೊಂದಾಣಿಕೆ ಇದೆ ಎಂದು ಹೇಳುತ್ತಾರೆ. ಮುಂದೆ ಚನ್ನಪಟ್ಟಣಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡುತ್ತಾರೆ ಎಂದು ಹೆಚ್.ಡಿ.ಕುಮಾರಸ್ವಾಮಿಗೆ ಸಿಪಿ ಯೋಗೇಶ್ವರ್​ ತಿರುಗೇಟು ನೀಡಿದರು.


ಇದನ್ನೂ ಓದಿ : Bangalore Violence: ಪೊಲೀಸ್ ಠಾಣೆ ಧ್ವಂಸಗೊಳಿಸಿದ ಗಲಭೆಕೋರರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ; UAPA ಅಡಿ ಪ್ರಕರಣ ದಾಖಲು


ಕನಕಪುರಕ್ಕೆ ಹೆಚ್ಚಿನ ಹಣ ತೆಗೆದುಕೊಂಡು ಹೋಗುತ್ತಾರೆ. ಆದರೆ, ಉಳಿದ ರಾಮನಗರ, ಚನ್ನಪಟ್ಟಣ, ಮಾಗಡಿಗೆ ನರೇಗಾ ಹಣವೇ ಸಿಗಲ್ಲ. ಕೇಂದ್ರದಿಂದ ಹಣ ಬಿಡುಗಡೆಯಾಗುತ್ತಿದ್ದಂತೆ ಎಲ್ಲವು ಸಹ ಕನಕಪುರಕ್ಕೆ ಶಿಫ್ಟ್ ಆಗುತ್ತಿತ್ತು. ಆದರೆ ಈಗ ಅದೆಲ್ಲವೂ ಸರಿಯಾಗಬೇಕಿದೆ. ಎಲ್ಲಾ ತಾಲೂಕಿಗೂ ಅನುದಾನದ ಹಂಚಿಕೆಯ ಅನುಪಾತ ಸರಿಯಾಗಬೇಕು ಎಂದು ಚನ್ನಪಟ್ಟಣ ಕ್ಷೇತ್ರದ ನರೇಗಾ ಬಿಲ್ ನಲ್ಲಿ ವ್ಯತ್ಯಾಸವಾಗಿರುವ ಬಗ್ಗೆ ಸಂಸದ ಡಿ.ಕೆ.ಸುರೇಶ್ ಹೆಸರೇಳದೆ ತಿರುಗೇಟು ನೀಡಿದರು.ಇನ್ನು ಇದೇ ವೇಳೆ ಚನ್ನಪಟ್ಟಣದ ಜನತೆ ಬಗ್ಗೆ ಮಾತನಾಡಿ, ಜನ ನನಗೆ ಕೈಕೊಟ್ಟರೂ ಪಕ್ಷ ಕೈಹಿಡಿದಿದೆ. ನನಗೆ ಎಂಎಲ್​​ಸಿ ಮಾಡಿದ್ದಕ್ಕೆ ಖುಷಿ ಇದೆ. ಮಂತ್ರಿ ಸ್ಥಾನ ನೀಡುವುದು ಪಕ್ಷಕ್ಕೆ ಬಿಟ್ಟಿದ್ದು, ಎಂಎಲ್​ಸಿ ಮಾಡಿದಕ್ಕೆ ಧನ್ಯವಾದ ಹೇಳಲು ದೆಹಲಿಗೆ ಹೋಗಿದ್ದೆ ಎಂದು
ಹೇಳಿದರು.

Published by:G Hareeshkumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು