Moral Policing: ನೈತಿಕ ಪೊಲೀಸ್ ಗಿರಿ ಆರೋಪಿಗಳನ್ನು ಠಾಣೆಯಿಂದ ಬಿಡಿಸಿದ ಮೂಡಬಿದಿರೆಯ ಬಿಜೆಪಿ ಶಾಸಕ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಅಲ್ಲಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ನಡೆಯುತ್ತಿದ್ದು, ನೈತಿಕ ಪೊಲೀಸ್ ಗಿರಿ ಮಾಡುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ಆರೋಪಿಗಳನ್ನು ಠಾಣೆಯಿಂದ ಬಿಡಿಸಿಕೊಂಡು ಬರುತ್ತಿರುವ ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್

ಆರೋಪಿಗಳನ್ನು ಠಾಣೆಯಿಂದ ಬಿಡಿಸಿಕೊಂಡು ಬರುತ್ತಿರುವ ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್

  • Share this:
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಗಳು (Moral Policing Cases In Dakshina Kannada District) ಹೆಚ್ಚಾಗುತ್ತಿವೆ. ಕಳೆದ ಒಂದು ತಿಂಗಳಿನಿಂದ ಆರು ನೈತಿಕ ಪೊಲೀಸ್ ಗಿರಿ ಪ್ರಕರಣಗಳು ನಡೆದಿದೆ. ಒಂದು ಕಡೆ ನೈತಿಕ ಪೊಲೀಸ್ ಗಿರಿ ಪ್ರಕರಣಗಳನ್ನು ಮಟ್ಟ ಹಾಕ್ತೀವಿ ಅಂತಾ ರಾಜ್ಯ ಸರ್ಕಾರ (Karnataka BJP Government) ಹೇಳುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ ಶಾಸಕರೇ ನೈತಿಕ ಪೊಲೀಸ್ ಗಿರಿಗೆ ಬೆಂಬಲ ನೀಡುತ್ತಿದ್ದಾರಾ ಎಂಬ ಅನುಮಾನ ಕಾಡಲು ಆರಂಭಿಸಿದೆ. ಯಾಕೆಂದರೆ ಮೂಡಬಿದಿರೆಯಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪದ ಮೇಲೆ ಬಂಧಿತರಾದ ಇಬ್ಬರು ಆರೋಪಿಗಳನ್ನು ಸ್ವತಃ ಮೂಡಬಿದಿರೆಯ ಶಾಸಕ ಉಮಾನಾಥ್ ಕೋಟ್ಯಾನ್ (Mudubidare BJP MLA Umanath Kotian) ಅವರು ಪೊಲೀಸ್ ಠಾಣೆಗೆ ಹೋಗಿ ಬಿಡಿಸಿಕೊಂಡು ಬಂದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಅಕ್ಟೋಬರ್ 9 ನೇಯ ತಾರೀಖು ಶನಿವಾರ ಸಂಜೆ ಮೂಡಬಿದಿರೆಯಲ್ಲಿ ಅನ್ಯಧರ್ಮದ ದಂಪತಿಯ ಜೊತೆಗೆ ಇಬ್ಬರು ಹಿಂದೂ ಯುವತಿಯರು ಕಾರ್ ನಲ್ಲಿ ಪ್ರಯಾಣಿಸುತ್ತಿರೋದನ್ನು ಏಳೆಂಟು ಜನ ಭಜರಂಗದಳದ ಕಾರ್ಯಕರ್ತರು ನೋಡಿದ್ದಾರೆ. ಬಳಿಕ ಕಾರನ್ನು ಅಡ್ಡಗಟ್ಟಿ ಯುವತಿಯರನ್ನು ಮತ್ತು ದಂಪತಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅಶ್ಲೀಲವಾಗಿ ಬೈಯ್ದು ಅಗೌರವದಿಂದ ನಡೆದುಕೊಂಡಿದ್ದಾರೆ.

ಈ ಬಗ್ಗೆ ಮೂಡಬಿದಿರೆ ಪೊಲೀಸರು ಇಬ್ಬರು ಭಜರಂಗದಳದ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದರು. ಭಜರಂಗದಳದ ಸಮಿತ್ ರಾಜ್ ಮತ್ತು ಸಂದೀಪ್ ಪೂಜಾರಿ ಯನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 354, 153A, 504 ಮತ್ತು 506ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದರು. ಆದರೆ ಪೊಲೀಸರು ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪಿಗಳನ್ನು ಬಂಧಿಸಿ ದಿನ ಕಳೆಯುವಷ್ಟರಲ್ಲಿ ಆರೋಪಿಗಳಿಗೆ ಜಾಮೀನು ನೀಡಲಾಗಿದೆ. ಮೂಡಬಿದಿರೆ ಪೊಲೀಸ್ ಠಾಣೆಗೆ ಹೋಗಿ ಸ್ವತಃ ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ಆರೋಪಿಗಳನ್ನು ಬಿಡಿಸಿಕೊಂಡು ಬಂದಿದ್ದಾರೆ. ಭಾನುವಾರ ರಾತ್ರಿ ಮೂಡಬಿದಿರೆಯ ಠಾಣೆಗೆ ಹೋಗಿ ಖುದ್ದು ಶಾಸಕ ಉಮಾನಾಥ್ ಕೋಟ್ಯಾನ್ ಆರೋಪಿಗಳನ್ನು ಬಿಡುಗಡೆಗೊಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸ್ಟೇಷನ್ ಒಳಗೆ ಶಾಸಕರು ಆರೋಪಿಗಳನ್ನು ಬಿಡಿಸಿಕೊಂಡು ಬರುವ ಪೋಟೋ ವೈರಲ್ ಆಗಿದೆ. ಹಿಂದೂ ಸಂಘಟನೆಗಳು ಶಾಸಕರ ನಡೆಯನ್ನು ಶ್ಲಾಘಿಸಿದರೆ ಕಾಂಗ್ರೆಸ್ ಟೀಕಾ ಪ್ರಹಾರವನ್ನು ಮಾಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ರಾತ್ರೋರಾತ್ರಿ ಠಾಣೆಗೆ ನುಗ್ಗಿ ಮೂಡಬಿದಿರೆಯಲ್ಲಿ ಅನೈತಿಕ ಪೊಲೀಸ್ ಗಿರಿ ಘಟನೆಯ ಆರೋಪಿಗಳನ್ನು ಕರೆ ತಂದಿದ್ದೇಕೆ? ಮಹಿಳೆಯ ಮೇಲೆ ದೌರ್ಜನ್ಯ ಎಸಗುವುದು, ಎಸಗಿದವರ ರಕ್ಷಣೆ ಗೆ ನಿಲ್ಲೋದು ಬಿಜೆಪಿಯ ಹಳೆಯ ಚಾಳಿ. ಕಾನೂನು ಸುವ್ಯವಸ್ಥೆ ಯ ಕುಸಿತಕ್ಕೆ ಮತ್ತು ಬಿಜೆಪಿ ಶಾಸಕರ ಈ ವರ್ತನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರಿಸಬೇಕೆಂದು"ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಆಗ್ರಹಿಸಿದೆ. ಆದರೆ ಈ ಆರೋಪವನ್ನು ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ನಿರಾಕರಿಸಿದ್ದಾರೆ. ಬಂಧಿತರಾದ ಕಾರ್ಯಕರ್ತರು. ಅವರು ನೈತಿಕ ಪೊಲೀಸ್ ಗಿರಿ ನಡೆಸಿಲ್ಲ. ಕಾರನ್ನು ತಡೆದು ಸೌಜನ್ಯಯುತವಾಗಿ ಪ್ರಶ್ನಿಸಿದ್ದಾರೆ ಮತ್ತು ಕಾರು ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಕಾರ್ಯಕರ್ತರ ಮೇಲೆ ಸುಳ್ಳು ದೂರನ್ನು ಕೊಟ್ಟು ಕೇಸ್ ಹಾಕಲಾಗಿದೆ. ಈ ಬಗ್ಗೆ ದೂರು ಕೇಳಿಬಂದ ಹಿನ್ನಲೆಯಲ್ಲಿ ಠಾಣೆಗೆ ಭೇಟಿ ನೀಡಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನು ಓದಿ: Honey Trap In Bengaluru: ಬೆಂಗಳೂರಿನಲ್ಲಿ ಟೆಕ್ಕಿ ಪರಿಚಯಿಸಿಕೊಂಡು ಮನೆಗೆ ಕರೆದುಕೊಂಡು ಹೋಗಿ ಹನಿಟ್ರ್ಯಾಪ್ ಮಾಡಿದ್ದ ಮಹಿಳೆ ಸೇರಿ ನಾಲ್ವರ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಅಲ್ಲಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ನಡೆಯುತ್ತಿದ್ದು, ನೈತಿಕ ಪೊಲೀಸ್ ಗಿರಿ ಮಾಡುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
Published by:HR Ramesh
First published: