HOME » NEWS » District » BJP MLA RAJU GOWDA DEMAND TO GOVT WILL DECLARED SPECIAL PACKAGE FOR POOR PEOPLE RHHSN NMGP

ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಸಿಎಂ ಲಾಕ್​ಡೌನ್ ವಿಸ್ತರಿಸಲಿ: ಬಿಜೆಪಿ ಶಾಸಕ ರಾಜುಗೌಡ ಆಗ್ರಹ

ಈಗಾಗಲೇ ರಾಜಕೀಯ ಮುಖಂಡರು ಎರಡು ಡೋಸ್ ಲಸಿಕೆ ಪಡೆದಿದ್ದಿರಿ. ಸಾರ್ವಜನಿಕರು ಎರಡು ಡೋಸ್ ಲಸಿಕೆ ಪಡೆಯದಿದ್ದರೆ ಕಷ್ಟವಾಗುತ್ತದೆ. ನಮ್ಮ ಸರಕಾರ ಎಲ್ಲಾ ಕಡೆ ಲಸಿಕೆ ಸಿಗುವಂತಹ ಕೆಲಸ ಮಾಡಬೇಕು ಎಂದು ಬಿಜೆಪಿ ಶಾಸಕ ರಾಜುಗೌಡ ಅವರು ಹೇಳಿದರು.

news18-kannada
Updated:May 17, 2021, 8:31 PM IST
ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಸಿಎಂ ಲಾಕ್​ಡೌನ್ ವಿಸ್ತರಿಸಲಿ: ಬಿಜೆಪಿ ಶಾಸಕ ರಾಜುಗೌಡ ಆಗ್ರಹ
ಶಾಸಕ ರಾಜುಗೌಡ
  • Share this:
ಯಾದಗಿರಿ: ಕೊರೋನಾ ಎರಡನೇ ಅಲೆಯಿಂದ ಈಗ ರಾಜ್ಯವೇ ತತ್ತರಿಸಿದ್ದು, ಬಡವರು, ರೈತರು, ಕಾರ್ಮಿಕ ವರ್ಗ ಈಗ ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಕೈಯಲ್ಲಿ ಹಣವಿಲ್ಲದೇ ಊಟಕ್ಕಾಗಿ ಪರದಾಡುವಂತಾಗಿದೆ. ಅದೇ ರೀತಿ ಯಾದಗಿರಿ ಜಿಲ್ಲೆಯ ಸುರಪುರ, ಹುಣಸಗಿ, ಕಕ್ಕೆರಾ, ಕೊಡೇಕಲ್, ಕೆಂಭಾವಿ, ಶಹಾಪುರ, ಗುರುಮಠಕಲ್, ವಡಗೇರಾ, ಯಾದಗಿರಿ ಸೇರಿದಂತೆ ಮೊದಲಾದ ಭಾಗದ ಬಡವರು, ಕಾರ್ಮಿಕರು, ರೈತರು ಲಾಕ್​ಡೌನ್​ನಿಂದ ಕೈಯಲ್ಲಿ ಹಣವಿಲ್ಲದೇ ಕಂಗಲಾಗಿದ್ದಾರೆ‌. ನಿತ್ಯವೂ ದುಡಿದು ಕಾರ್ಮಿಕರು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆದರೆ, ಲಾಕ್ ಡೌನ್ ನಿಂದ ಕೆಲಸ ಸಿಗದೇ ಕಾರ್ಮಿಕರ ಕೈಯಲ್ಲಿ ಹಣವಿಲ್ಲದೇ ಕಂಗಲಾಗಿದ್ದಾರೆ‌. ಹೀಗಾಗಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಬಡವರಿಗೆ ಆರ್ಥಿಕವಾಗಿ ಸಹಾಯವಾಗುವ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿ ಎಂದು  ಸುರಪುರ ಬಿಜೆಪಿ ಶಾಸಕ ರಾಜುಗೌಡ ಸ್ವತಃ ಅವರ ಪಕ್ಷದ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಕೊರೋನಾ ಸೋಂಕಿಗೆ ಕಡಿವಾಣ ಹಾಕಲು ರಾಜ್ಯ ಸರಕಾರ ಲಾಕ್​ಡೌನ್ ಜಾರಿಗೆ ಮಾಡಿದೆ. ಆದರೆ, ಬಡವರ ಬಗ್ಗೆ ಕಾಳಜಿ ವಹಿಸಿಲ್ಲ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬಡವರಿಗೆ, ಕಾರ್ಮಿಕರಿಗೆ, ರೈತರಿಗೆ ವಿಶೇಷ ಆರ್ಥಿಕ ಸಹಾಯ ನೀಡುವ ಪ್ಯಾಕೇಜ್ ಘೋಷಣೆ ಮಾಡಿ ಬಡವರಿಗೆ ನೆರವಾಗಬೇಕು. ವಿಶೇಷ ಪ್ಯಾಕೆಜ್ ಘೋಷಣೆ ಮಾಡಿ ಸಿಎಂ ಅವರು ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡಬೇಕು ಎಂದು ರಾಜುಗೌಡ ಒತ್ತಾಯ ಮಾಡಿದ್ದಾರೆ.

‌‌ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿವೆ. ಸಚಿವರಾದ ಬಸವರಾಜ ಬೊಮ್ಮಾಯಿ, ಆರ್.ಅಶೋಕ ಹಾಗೂ ಉಳಿದ ಸಚಿವರು ಬೆಂಗಳೂರು ಬಿಟ್ಟು ಕೊರೋನಾ ಪ್ರಕರಣಗಳು ಹೆಚ್ಚಿರುವ ಜಿಲ್ಲೆಗೆ ಭೇಟಿ ನೀಡುವ ಕೆಲಸ ಮಾಡಬೇಕು. ಹಳ್ಳಿಯಲ್ಲಿ ಈಗ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತಿದ್ದು, ಹಳ್ಳಿಯಲ್ಲಿ ಕೊರೋನಾಗೆ ಕಡಿವಾಣ ಹಾಕಲು ಸರಕಾರ ಕಟ್ಟುನಿಟ್ಟಿನ ಲಾಕ್ ಡೌನ್ ಕ್ರಮಕೈಗೊಳ್ಳಬೇಕು. ಕಠಿಣವಾದ ಲಾಕ್ ಡೌನ್ ಜಾರಿಗೆ ತರಬೇಕು, ಸರಕಾರಕ್ಕೆ ಎಷ್ಟೇ ಆರ್ಥಿಕ ತೊಂದರೆಯಾದರೂ ಪರವಾಗಿಲ್ಲ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಶಾಸಕ ರಾಜುಗೌಡ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಇದನ್ನು ಓದಿ: Black Fungus: ಬ್ಲ್ಯಾಕ್ ಫಂಗಸ್ ಸೋಂಕು ಬಂದರೆ ಸರ್ಕಾರಕ್ಕೆ ಮಾಹಿತಿ ನೀಡಿ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಒಂದೇ ವೇದಿಕೆಯಲ್ಲಿ ಬಂದು ಲಸಿಕೆ ಪಡೆಯಲು ಜನರಿಗೆ ಮನವಿ ಮಾಡಿ...!

ಕೊರೋನಾ ಲಸಿಕೆ ಪಡೆಯುವ ಆರಂಭ ಹಂತದಲ್ಲಿ ವಿರೋಧ ಪಕ್ಷದವರು ಲಸಿಕೆ ಬಗ್ಗೆ ಇಲ್ಲದ ಗೊಂದಲ ಸೃಷ್ಟಿ ಮಾಡಿದ್ದರು. ಅಂದು ಗೊಂದಲದಿಂದ ಜನರು ಕೊರೋನಾ ಲಸಿಕೆ ಪಡೆಯಲು ಹಿಂದೇಟು ಹಾಕಿದರು. ಆದರೆ, ಈಗ ಲಸಿಕೆ ಪಡೆಯಲು ಜನರು ಮುಗಿ ಬೀಳುತ್ತಿದ್ದು, ಈಗ ಲಸಿಕೆ ಸಿಗುತ್ತಿಲ್ಲ‌‌. ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು  ದಯವಿಟ್ಟು ತಾವು ನಾಲ್ಕು ಜನ ಒಂದೇ ವೇದಿಕೆಯಲ್ಲಿ ಬಂದು ಜನರಿಗೆ ಲಸಿಕೆ ಪಡೆಯುವ ಬಗ್ಗೆ ಜನರಿಗೆ ಜಾಗೃತಿ ಮಾಡಿಸಬೇಕು. ವಿರೋಧ ಪಕ್ಷದವರು ಈಗಾಗಲೇ ಲಸಿಕೆ ಬಗ್ಗೆ ಗೊಂದಲದ ಹೇಳಿಕೆ ಕೊಟ್ಟ ಹಿನ್ನೆಲೆಯಲ್ಲಿ ಲಸಿಕೆ ಪಡೆಯುವ ಬಗ್ಗೆ ಜನರಲ್ಲಿ ಗೊಂದಲವಾಗಿದೆ. ನಾಲ್ಕು ಜನ ನಾಯಕರು ಒಂದೇ ವೇದಿಕೆಯಲ್ಲಿ ಬಂದು ಎಲ್ಲರೂ ಲಸಿಕೆ ತೆಗೆದುಕೊಳ್ಳಲು ಮನವಿ ಮಾಡಬೇಕು ಎಂದು ಶಾಸಕ ರಾಜುಗೌಡ ಅವರು ಸಲಹೆ ನೀಡಿದರು.
Youtube Video
ಈಗಾಗಲೇ ರಾಜಕೀಯ ಮುಖಂಡರು ಎರಡು ಡೋಸ್ ಲಸಿಕೆ ಪಡೆದಿದ್ದಿರಿ. ಸಾರ್ವಜನಿಕರು ಎರಡು ಡೋಸ್ ಲಸಿಕೆ ಪಡೆಯದಿದ್ದರೆ ಕಷ್ಟವಾಗುತ್ತದೆ. ನಮ್ಮ ಸರಕಾರ ಎಲ್ಲಾ ಕಡೆ ಲಸಿಕೆ ಸಿಗುವಂತಹ ಕೆಲಸ ಮಾಡಬೇಕು ಎಂದು ಬಿಜೆಪಿ ಶಾಸಕ ರಾಜುಗೌಡ ಅವರು ಹೇಳಿದರು.
Published by: HR Ramesh
First published: May 17, 2021, 8:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories