ವೆಂಕಟರೆಡ್ಡಿ ಮುದ್ನಾಳಗೆ ಬುಲಾವ್ ಕೊಟ್ಟ ಯತ್ನಾಳ್; ಕೊರೋನಾ ಸಂಕಷ್ಟದಲ್ಲಿ ರಾಜಕೀಯ ಬೇಕಿತ್ತಾ ಎಂದ ಶಾಸಕ

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಶಾಸಕ ವೆಂಕಟರೆಡ್ಡಿ ಮುದ್ನಾಳ ಮಾತನಾಡಿ, ನನಗೂ ಸಭೆಗೆ ಬರಲು ಹೇಳಿದ್ದರು. ಆದರೆ, ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಿಗೆ ಬರುತ್ತಿರುವ ಹಿನ್ನಲೆ ತುರ್ತು ಕೆಲಸ ನಿಮಿತ್ತ ಹೋಗಲು ಸಾಧ್ಯವಾಗಿಲ್ಲ. ಆದರೆ, ಕೊರೋನಾ ಸಂಕಷ್ಟದಲ್ಲಿ ರಾಜಕೀಯ ಮಾತನಾಡದೇ ಎಲ್ಲ ಶಾಸಕರು ಕೋವಿಡ್​ ‌ಮುಕ್ತಿ ಮಾಡಲು ಪಣತೊಡುವ ಜೊತೆ ಕೋವಿಡ್ ಪೀಡಿತರು ಗುಣಮುಖವಾಗುವ ಬಗ್ಗೆ ಚಿಂತೆ ಮಾಡಬೇಕಾಗಿದೆ ಎಂದರು.

news18-kannada
Updated:May 29, 2020, 7:52 PM IST
ವೆಂಕಟರೆಡ್ಡಿ ಮುದ್ನಾಳಗೆ ಬುಲಾವ್ ಕೊಟ್ಟ ಯತ್ನಾಳ್; ಕೊರೋನಾ ಸಂಕಷ್ಟದಲ್ಲಿ ರಾಜಕೀಯ ಬೇಕಿತ್ತಾ ಎಂದ ಶಾಸಕ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ
  • Share this:
ಯಾದಗಿರಿ(ಮೇ 29): ಅತೃಪ್ತ ಶಾಸಕರು ಸಭೆ ನಡೆಸಿರುವ ವಿಚಾರ ಈಗ ರಾಜಕೀಯದಲ್ಲಿ ಮತ್ತೆ ಸಂಚಲನ ಮೂಡಿಸಿದೆ. ಬಿಜೆಪಿ ವಲಯದಲ್ಲಿ ಮತ್ತೆ ರಾಜಕೀಯ ಕಿತ್ತಾಟದ ಗರಿಗೆದರಿದೆಯಾ? ಎಂಬುದು ಈಗ ರಾಜಕೀಯ ಅಂಗಳದಲ್ಲಿ ಚರ್ಚೆಯಾಗುತ್ತಿದೆ.

ಕೊರೋನಾಗೆ ಈಗ ವಿಶ್ವವೇ ನಲುಗಿ ಹೋಗಿದೆ ಅದರಲ್ಲಿ ರಾಜ್ಯದಲ್ಲಿ ಕೂಡ ಕೊರೋನಾ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ರಾಜ್ಯದ ಜನ ಕೊರೋನಾದಿಂದ ಕಂಗಲಾಗಿದ್ದಾರೆ. ವಲಸೆ ಕಾರ್ಮಿಕರಂತೂ ಈಗ ಪ್ರತಿದಿನ ಕಣ್ಣೀರು ಹಾಕುವಂತಾಗಿದೆ. ಆದರೆ, ಕೊರೋನಾ ಸಂಕಷ್ಟಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ. ರಾಜ್ಯದ ಜನರು ಕೊರೋನಾ ಕಂಟಕಕ್ಕೆ ತತ್ತರಿಸಿ ಹೋಗಿದ್ದಾರೆ. ಕೆಲ ರಾಜಕೀಯ ನಾಯಕರು ಕುರ್ಚಿಗಾಗಿ ತೆರೆ ಮೆರೆಯ ಕಸರತ್ತು ನಡೆಸುತ್ತಿದ್ದಾರೆ.

ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಉತ್ತರ ಕರ್ನಾಟಕ ಭಾಗದ ಅತೃಪ್ತ ಶಾಸಕರ ಸಭೆ ನಡೆದಿದೆ. ಇದು ಈಗ ಬಿಜೆಪಿ ವಲಯದಲ್ಲಿ ತಲ್ಲಣ ಮೂಡಿಸಿದೆ.

ಸಭೆಯಲ್ಲಿ ಅಭಿವೃದ್ಧಿ ಪರ ಹಾಗೂ ಮತ್ತೆನಾದರು ರಾಜಕೀಯ ಚರ್ಚೆಗಳು ನಡೆದಿದ್ದಾವೋ ಏನೋ ಆದರೆ, ಸಿಎಂ ಬಿಎಸ್ ಯಡಿಯೂರಪ್ಪಗೆ ಇದು ಈಗ ಟೆನ್ಶನ್​​ಗೆ ಕಾರಣವಾಗಿದೆ.

ಶಾಸಕ ಯತ್ನಾಳ್​ ಅವರಿಂದ ಶಾಸಕ ಮುದ್ನಾಳಗೆ ಬಂದಿತ್ತು ಬುಲಾವ್..!

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಯಾದಗಿರಿ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರಿಗೆ ಕರೆ ಮಾಡಿ ಸಭೆಗೆ ಆಗಮಿಸಬೇಕೆಂದು ಕರೆ ಮಾಡಿದ್ದರು. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಈ ವಿಷಯ ಚರ್ಚೆ ಮಾಡೋಣ ಎಂದು ಹೇಳಿದ್ದರಂತೆ ಶಾಸಕ ವೆಂಕಟರೆಡ್ಡಿ. ಅವರಿಗೆ ಯತ್ನಾಳ ಅವರು ಪೋನ್ ಕರೆ ಮಾಡಿದರು ಸಭೆಗೆ ತೆರಳದೆ ಯಾದಗಿರಿ ಜಿಲ್ಲೆಯಲ್ಲಿ ನಿತ್ಯವು ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರ ಜೊತೆ ಕೋವಿಡ್ ವಿಚಾರವಾಗಿ ಕ್ಷೇತ್ರದ ತುರ್ತು ಕೆಲಸ ಕಾರ್ಯ ಇರುವ ಕಾರಣ ಹೇಳಿ ಸಭೆಗೆ ಹೋಗಿಲ್ಲವಂತೆ.

ಜೂನ್ 1ರಿಂದ ದೇವಸ್ಥಾನಗಳು ಓಪನ್; ಲಾಕ್​ಡೌನ್​ನಿಂದ ಕೊನೆಗೂ ದೇವರಿಗೆ ಮುಕ್ತಿಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಶಾಸಕ ವೆಂಕಟರೆಡ್ಡಿ ಮುದ್ನಾಳ ಮಾತನಾಡಿ, ನನಗೂ ಸಭೆಗೆ ಬರಲು ಹೇಳಿದ್ದರು. ಆದರೆ, ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಿಗೆ ಬರುತ್ತಿರುವ ಹಿನ್ನಲೆ ತುರ್ತು ಕೆಲಸ ನಿಮಿತ್ತ ಹೋಗಲು ಸಾಧ್ಯವಾಗಿಲ್ಲ. ಆದರೆ, ಕೊರೋನಾ ಸಂಕಷ್ಟದಲ್ಲಿ ರಾಜಕೀಯ ಮಾತನಾಡದೇ ಎಲ್ಲ ಶಾಸಕರು ಕೋವಿಡ್​ ‌ಮುಕ್ತಿ ಮಾಡಲು ಪಣತೊಡುವ ಜೊತೆ ಕೋವಿಡ್ ಪೀಡಿತರು ಗುಣಮುಖವಾಗುವ ಬಗ್ಗೆ ಚಿಂತೆ ಮಾಡಬೇಕಾಗಿದೆ ಎಂದರು.

ಸಚಿವ ಸ್ಥಾನ, ರಾಜ್ಯ ಸಭೆ ಹಾಗೂ ಇನ್ನಿತರ ಸ್ಥಾನದ ವಿಚಾರದ ಬಗ್ಗೆ ರಾಜಕೀಯ ಸಭೆ ಸದ್ಯಕ್ಕೆ ನಡೆಸಲು ಸರಿ ಅನಿಸಲ್ಲ. ಯಾಕೆಂದರೆ ಜನ ಕೊರೋನಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎರಡು ತಿಂಗಳ ನಂತರ ಇದರ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಹತ್ತಿರ ಹೋಗಿ ಚರ್ಚೆ ಮಾಡಬಹುದು ಸದ್ಯಕ್ಕೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜೊತೆ ಕೊರೊನಾ ಮುಕ್ತಿ ಮಾಡುವ ಕೆಲಸ ಮಾಡಬೇಕಿದೆ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಕಿವಿ ಮಾತು ಹೇಳಿದ್ದಾರೆ.

(ವರದಿ: ನಾಗಪ್ಪ ಮಾಲಿಪಾಟೀಲ)
First published: May 29, 2020, 7:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading