• Home
  • »
  • News
  • »
  • district
  • »
  • ನನಗೆ ನಿಗಮ ಮಂಡಳಿ ಘೋಷಿಸಿ ಅವಮಾನ: ಚಿತ್ರದುರ್ಗದ ಶಾಸಕ ಜಿಹೆಚ್ ತಿಪ್ಪಾರೆಡ್ಡಿ

ನನಗೆ ನಿಗಮ ಮಂಡಳಿ ಘೋಷಿಸಿ ಅವಮಾನ: ಚಿತ್ರದುರ್ಗದ ಶಾಸಕ ಜಿಹೆಚ್ ತಿಪ್ಪಾರೆಡ್ಡಿ

ಶಾಸಕ ಜಿ.ಹೆಚ್​.ತಿಪ್ಪಾರೆಡ್ಡಿ

ಶಾಸಕ ಜಿ.ಹೆಚ್​.ತಿಪ್ಪಾರೆಡ್ಡಿ

ಜೆಹೆಚ್ ಪಟೇಲರ ಸರ್ಕಾರಲ್ಲಿ ನನ್ನ ಕರೆದು ಗೃಹ ಮಂಡಳಿ ನೀಡಿದ್ದರು. ಹಿರಿಯ ರಾಜಕಾರಣಿಗಳಲ್ಲಿ ಹೆಚ್ಚು ಬಾರಿ ಗೆದ್ದಿರುವರಲ್ಲಿ ನಾನೂ ಒಬ್ಬ. ನನಗೆ ಸಚಿವ ಸ್ಥಾನ ನೀಡಿ ಎಂದು ಸಾಕಷ್ಟು ಬಾರಿ ಮನವಿ ಮಾಡಿದ್ದೇನೆ. ಆದರೆ ನಿಗಮ ಮಂಡಳಿ ನೀಡಿರುವುದು ನನಗೆ ಮಾಡಿರುವ ಅವಮಾನ ಎಂದಿದ್ದಾರೆ ತಿಪ್ಪಾರೆಡ್ಡಿ.

ಮುಂದೆ ಓದಿ ...
  • Share this:

ಚಿತ್ರದುರ್ಗ: ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ನನಗೆ ಕೇವಲ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಘೋಣೆ ಮಾಡಿ ಅವಮಾನ ಮಾಡಿದ್ದಾರೆ. ಜೆಹೆಚ್ ಪಟೇಲರ ಸರ್ಕಾರದಲ್ಲಿ ಗೃಹ ಮಂಡಳಿ ಅಧ್ಯಕ್ಷ ಆಗಿದ್ದವನು ನಾನು. ನನಗೆ ಇದು ನೋವಿನ ಸಂಗತಿ ಎಂದು ಚಿತ್ರದುರ್ಗ ಬಿಜೆಪಿ ಹಿರಿಯ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ರಾಜ್ಯ ಸರ್ಕಾರದ ನಾಯಕರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಇಂದಿಗೆ ಸಾರ್ಥಕದ ಒಂದು ವರ್ಷಪೂರೈಸಿದೆ. ಆದರೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಕ್ಷಣದಿಂದಲೂ ಸಚಿವ ಸ್ಥಾನದ ಆಕಾಂಕ್ಷಿಗಳು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಬೇಡಿಕೆಯನ್ನ ವ್ಯಕ್ತಪಡಿಸುತ್ತಲೇ ಇದ್ದಾರೆ. ಆದರೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲು ಕಾರಣವಾದ ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಂದು ಅನರ್ಹ ಶಾಸಕರ ಹಣೆ ಪಟ್ಟಿ ಕಟ್ಟಿಕೊಂಡಿದ್ದವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡುವ ಅನಿವಾರ್ಯತೆ ಇತ್ತು. ಅದ್ದರಿಂದಲೇ ರಾಜ್ಯದಲ್ಲಿ ಉಪ ಚುನಾವಣೆಯಲ್ಲಿ ಆ ಅನರ್ಹ ಶಾಸಕರು ಗೆದ್ದ ಕೂಡಲೇ ಅವರನ್ನ ಮಂತ್ರಿ ಸ್ಥಾನ ನೀಡಿ ಕೊಟ್ಟ ಮಾತಿನಂತೆ ನಡೆದಿದ್ದೇವೆ ಅಂತ ಅನ್ನಿಸಿಕೊಂಡಿದ್ದರು. ಆದ್ರೆ ಉಳಿದ ಸಚಿವ ಸ್ಥಾನಗಳಿಗೆ ಹಿರಿಯ ಶಾಸಕರ ಟೀಮ್ ಆಗಾಗ ಪ್ರಯತ್ನ ಪಡುತ್ತಿತ್ತು. ಅಷ್ಟೇ ಅಲ್ಲದೆ ಕೇಂದ್ರ ಹಾಗೂ ಹಿರಿಯ ರಾಜ್ಯದ ಮುಖಂಡರನ್ನ ಭೇಟಿ ಮಾಡಿ ನ್ಯಾಯ ಕೊಡಿ ಅನ್ನ ಆಶಾಭಾವದ ಮಾತುಗಳ ಮೂಲಕ ಮನವಿ ಕೂಡಾ ಮಾಡಿದ್ದರು.


ಹೀಗೆ ಸರ್ಕಾರ ರಚನೆಯಾಗಿ ವರ್ಷ ಕಳೆಯುತ್ತ ಬಂದರೂ ಸಚಿವಸ್ಥಾನಕ್ಕಾಗಿ ಸರ್ಕಾರಕ್ಕೆ ಬಂಡಾಯದ ಬಿಸಿ ತಾಕುತ್ತಲೇ ಇತ್ತು. ಇದನ್ನ ಶಮನ ಮಾಡುವ ಉದ್ದೇಶಕ್ಕೋ ಏನೋ ರಾಜ್ಯದ ಮುಖ್ಯಮಂತ್ರಿಯಾಗಿ ಬಿಎಸ್ ಯಡಿಯೂರಪ್ಪ ಅಧಿಕಾರ ವಹಿಸಿಕೊಂಡ ವರ್ಷ ತುಂಬಿದ ಸಂತಸದಲ್ಲಿ ಹಿರಿಯ ಶಾಸಕರು, ಆಪ್ತರನ್ನೂ ಒಳಗೊಂಡಂತೆ 24 ಜನ ಶಾಸಕರಿಗೆ ನಿಗಮ ಮಂಡಳಿ ಘೋಷಣೆ ಮಾಡಿಬಿಟ್ಟಿದ್ದಾರೆ. ಈ ಘೋಷಣೆ ಆಗುತ್ತಿದ್ದಂತೆ ರಾಜ್ಯ ಸರ್ಕಾರದ ಸಚಿವ ಸಂಪುಟದ ಕನಸು ಕಾಣುತ್ತಿದ್ದ ಶಾಸಕರುಗಳು ಸರ್ಕಾರ ಹಾಗೂ ಸಿಎಂ ವಿರುದ್ದ ಬೇಸರ ಹೊರಹಾಕಿದ್ದಾರೆ. ಅದರಲ್ಲೂ ಬಿಜೆಪಿ ಪಕ್ಷದ ಕೆಲವೇ ಕೆಲವು ಹಿರಿಯ ಶಾಸಕರ ಪಟ್ಟಿಯಲ್ಲಿರುವ ಚಿತ್ರದುರ್ಗದ ಶಾಸಕ ಜಿಹೆಚ್. ತಿಪ್ಪಾರೆಡ್ಡಿ ಅವರಂತೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಕೊರೋನಾ ಸೋಂಕಿತರಿಗೆ ಹಣ ವಾಪಸ್ ನೀಡಿದ ಬೆಂಗಳೂರಿನ ಖಾಸಗಿ ಆಸ್ಪತ್ರೆ


ಚಿತ್ರದುರ್ಗ ನಗರದ ಪ್ರವಾಸಿ  ಮಂದಿರದಲ್ಲಿ ನಿಗಮ ಮಂಡಳಿ ಆಯ್ಕೆ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ನಿಗಮ ಮಂಡಳಿ ನೀಡಿರುವುದು ಮಾಧ್ಯಮಗಳಲ್ಲಿ ಬರುತ್ತಿದೆ. ಇದು ನನಗೆ ನೋವಿನ ಸಂಗತಿ ಎಂದಿದ್ದಾರೆ.


ಜೆಹೆಚ್ ಪಟೇಲರ ಸರ್ಕಾರಲ್ಲಿ ನನ್ನ ಕರೆದು ಗೃಹ ಮಂಡಳಿ ನೀಡಿದ್ದರು. ಹಿರಿಯ ರಾಜಕಾರಣಿಗಳಲ್ಲಿ ಹೆಚ್ಚು ಬಾರಿ ಗೆದ್ದಿರುವರಲ್ಲಿ ನಾನೂ ಒಬ್ಬ. ನನಗೆ ಸಚಿವ ಸ್ಥಾನ ನೀಡಿ ಎಂದು ಸಾಕಷ್ಟು ಬಾರಿ‌ ರಾಜ್ಯದ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ್ದೇನೆ. ಆದರೆ ಸಚಿವಸ್ಥಾನದ ಆಕಾಂಕ್ಷಿಯಾದ ನನಗೆ ಇವತ್ತು ನಿಗಮ ಮಂಡಳಿ ನೀಡಿರುವುದು ನನಗೆ ಮಾಡಿರುವ ಅವಮಾನ. ಇದರಿಂದ ನನ್ನ ಮನಸ್ಸಿಗೆ ಬಹಳ ನೋವಾಗಿದೆ. ನನಗೆ ಈ ತರದ ಪ್ರತಿಫಲ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನನಗೆ ಅವಮಾನ ಆಗಿರುವಾಗ ಈ ನಿಗಮ ಮಂಡಳಿ ವಹಿಸಿಕೊಳ್ಳುವ ಪ್ರಶ್ನೆ ಇಲ್ಲ ಎಂದು ಅವರು ನಿನ್ನೆ ಸುದ್ದಿಗೋಷ್ಠಿ ನಡೆಸಿ ಬೇಸರ ತೋರ್ಪಡಿಸಿಕೊಂಡಿದ್ದಾರೆ.


ಇದನ್ನೂ ಓದಿ: ಕೊರೋನಾ ‌ಕಡಿವಾಣಕ್ಕೆ ಮಂಡ್ಯ ವೈದ್ಯನ ವಿನೂತನ‌ ಪ್ರಯೋಗ


ನನ್ನ ಮತ  ಕ್ಷೇತ್ರದ ಜನರು ನನಗೆ ಮತ ಹಾಕಿ ಗೆಲ್ಲಿಸಿದ್ದಾರೆ. ಇನ್ನೂ‌ ಮೂರು ವರ್ಷ ಕ್ಷೇತ್ರದ ಅಭಿವೃದ್ದಿಗಾಗಿ ಪ್ರಾಮಾಣಿ ಪ್ರಯತ್ನ ಮಾಡುತ್ತೇನೆ ಎಂದಿರುವ ಅವರು, ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುವ ನನಗೆ ಬಹಳ ಬೇಸರವಾಗಿದೆ. ರಾಜಕೀಯಕ್ಕೆ ಬಂದಿದ್ದೇ ತಪ್ಪು ಎನಿಸಿದೆ. ಆದರೆ ಇಲ್ಲಿ ನಮ್ಮ‌ ಅನಿಸಿಕೆಗಳನ್ನ ಹೇಳಬಹುದೇ ಹೊರತು ಕೊಡುವವರು ಅವರೇ ಎಂದು ರಾಜ್ಯ ಸರ್ಕಾರದತ್ತ ಬೊಟ್ಟು ಮಾಡಿದ್ದಾರೆ.


ವರದಿ: ವಿನಾಯಕ ತೊಡರನಾಳ್

Published by:Vijayasarthy SN
First published: