ಶಿವಮೊಗ್ಗ(ಜೂ.21): ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ. ಈ ಹಿನ್ನೆಲೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಯೋಗ ದಿನಾಚರಣೆಯನ್ನು ಆಚರಿಸಿದರು. ತಮ್ಮ ಹೆಂಡತಿ, ಮಗ, ಸೊಸೆ ಹಾಗೂ ಮೊಮ್ಮಕ್ಕಳ ಜೊತೆ ಈಶ್ವರಪ್ಪ ಯೋಗಾಸನ ಮಾಡಿದರು. ಮನೆಯಲ್ಲಿ ಯೋಗ ದಿನಾಚರಣೆ ಆಚರಿಸಿ ಎಲ್ಲರಿಗೂ ಯೋಗ ದಿನಾಚರಣೆಯ ಶುಭಾಶಯ ಕೋರಿದರು.
ಈ ವೇಳೆ ಮಾತನಾಡಿದ ಅವರು, ಯೋಗ ಭಾರತೀಯ ಸಂಸ್ಕೃತಿಯ ಪ್ರತೀಕ. ಯೋಗ ಇಂದು ಇಡೀ ವಿಶ್ವವನ್ನೇ ಒಂದು ಮಾಡಿದೆ
. ಭಾರತದ ಕಲೆಯಾದ ಈ ಯೋಗದ ದಿನವನ್ನು ವಿಶ್ವಯೋಗ ದಿನವಾಗಿ ಮಾಡಿರುವುದು ನಮಗೆಲ್ಲ ಹೆಮ್ಮೆ ಸಂತಿಯಾಗಿದೆ ಎಂದರು.
ಪ್ರತಿ ನಿತ್ಯ ಯೋಗ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗುತ್ತೇವೆ. ಆರೋಗ್ಯಕ್ಕೂ ಯೋಗ ಕ್ಷೇಮ. ಪ್ರತಿಯೊಬ್ಬರು ಯೋಗ ಮಾಡುವ ಮೂಲಕ ಆರೋಗ್ಯವಾಗಿರಿ ಎಂದು ಸಲಹೆ ನೀಡಿದರು.
International Yoga Day: ಯೋಗ ಮಾಡುವ ಮೂಲಕ ವಿಶ್ವ ಯೋಗ ದಿನಾಚರಣೆಯ ಶುಭಾಶಯ ತಿಳಿಸಿದ ಮಾಜಿ ಪ್ರಧಾನಿ ದೇವೇಗೌಡ
ಎಲ್ಲೆಡೆ ಕೊರೊನಾ ಹಬ್ಬಿರುವ ಹಿನ್ನೆಲೆ ನಮ್ಮ ಪ್ರಧಾನಿ ಮಂತ್ರಿಗಳು ಮನೆ ಮನೆಯಲ್ಲೇ ಯೋಗ ಮಾಡಿ ಎಂದು ಕರೆ ನೀಡಿದ್ದರು. ಪ್ರಧಾನ ಮಂತ್ರಿಗಳ ಕರೆಗೆ ಒಗೊಟ್ಟು ದೇಶದ ಜನರು ತಮ್ಮ ತಮ್ಮ ಮನೆಗಳಲ್ಲೇ ಯೋಗ ದಿನಾಚರಣೆ ಆಚರಿಸುತ್ತಿದ್ದಾರೆ ಎಂದರು.
ಶಾಲೆಗಳಲ್ಲಿ ಯೋಗ ತರಗತಿ ಆರಂಭಿಸುವ ಬಗ್ಗೆ ನಾಳೆ ಬೆಂಗಳೂರಿನಲ್ಲಿ ಶಿಕ್ಷಣ ಸಚಿವರ ಜೊತೆ ಮಾತನಾಡುತ್ತೇನೆ ಎಂದರು. ಶಿವಮೊಗ್ಗ ಜಿಲ್ಲೆಯ ಪ್ರತಿ ಜೂನಿಯರ್ ಕಾಲೇಜು ಹಾಗೂ ಪ್ರೌಢ ಶಾಲೆಗಳಲ್ಲಿ ಯೋಗ ತರಗತಿಗಳನ್ನು ಪ್ರಾರಂಭಿಸುವ ಬಗ್ಗೆ ಚರ್ಚೆ ನಡೆಸುತ್ತೇನೆ. ಈ ತಿರ್ಮಾನವನ್ನು ನಾಳೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಶಾಲೆಗಳಲ್ಲಿ ಇರುವಂತ ದೈಹಿಕ ಶಿಕ್ಷಕರು ಯೋಗವನ್ನು ಮಕ್ಕಳಿಗೆ ಹೇಳಿ ಕೊಡಲಿದ್ದಾರೆ. ದೈಹಿಕ ಶಿಕ್ಷಕರಿಗೂ ಅವಶ್ಯವಿದ್ದಲ್ಲಿ, ಯೋಗ ಪಟುಗಳಿಂದ, ಯೋಗ ಕೇಂದ್ರಗಳಿಂದ ತರಬೇತಿ ಕೊಡಿಸಲಾಗುತ್ತದೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ