ಮೆಡಿಕಲ್ ಕಿಟ್ ಖರೀದಿಯಲ್ಲಿ ಅವ್ಯವಹಾರ ಆರೋಪ; ಸಿದ್ದರಾಮಯ್ಯನವರಿಗೆ ತಿರುಗೇಟು ಕೊಟ್ಟ ಜಗದೀಶ್ ಶೆಟ್ಟರ್

ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಕಾಯ್ದೆ-2002ಗೆ ಸಾಕಷ್ಟು ತಿದ್ದುಪಡಿ ತರುವ ಕೆಲಸ ಮಾಡಿದ್ದೇವೆ. ಕ್ಯಾಬಿನೆಟ್​ನಲ್ಲಿ ಅನುಮೋದನೆ ಆಗಬೇಕಿದೆ. ಈಗ ಅಧಿವೇಶನ ಇಲ್ಲದೆ ಇರುವುದರಿಂದ ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಈ ತಿದ್ದುಪಡಿ ಕಾಯ್ದೆ ಪ್ರಕಾರ ಕೈಗಾರಿಕಾ ಸ್ಥಾಪನೆ ಮಾಡುವ ಉದ್ದಿಮೆಗಳಿಗೆ ಅನುಕೂಲವಾಗಲಿದೆ.

news18-kannada
Updated:July 17, 2020, 2:49 PM IST
ಮೆಡಿಕಲ್ ಕಿಟ್ ಖರೀದಿಯಲ್ಲಿ ಅವ್ಯವಹಾರ ಆರೋಪ; ಸಿದ್ದರಾಮಯ್ಯನವರಿಗೆ ತಿರುಗೇಟು ಕೊಟ್ಟ ಜಗದೀಶ್ ಶೆಟ್ಟರ್
ಸಿದ್ದರಾಮಯ್ಯ -ಜಗದೀಶ್​ ಶೆಟ್ಟರ್​
  • Share this:
ಬಾಗಲಕೋಟೆ(ಜು.17): ಮಾಜಿ ಸಿಎಂ ಸಿದ್ದರಾಮಯ್ಯ ಮೆಡಿಕಲ್​ ಕಿಟ್ ಖರೀದಿಯಲ್ಲಿ 2500 ಕೋಟಿ ಅವ್ಯವಹಾರ ಆಗಿದೆ ಎಂದು ಹೇಳುತ್ತಿದ್ದಾರೆ. ಆದರೆ ವೈದ್ಯಕೀಯ ಕಿಟ್ ಖರೀದಿಗೆ ಈವರೆಗೆ 400ರಿಂದ 600 ಕೋಟಿ ಖರ್ಚಾಗಿದೆ. ಸಿದ್ದರಾಮ್ಯಯ ಅಂಕಿ ಸಂಖ್ಯೆ ಹೇಳುತ್ತಿರುವುದು 2500 ಕೋಟಿ ರೂ ಅವ್ಯವಹಾರ ಎಂದು. ಹಾಗಾದ್ರೆ ಸಿದ್ದರಾಮಯ್ಯ 2500 ಕೋಟಿ ಎಲ್ಲಿಂದ ತಂದರು, ಅವರೇ ಎಲ್ಲ ತರಬೇಕು ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್​ ಕಿಡಿಕಾರಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಸಿದ್ದರಾಮಯ್ಯ ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದಿನ ಸರ್ಕಾರ, ಸಿದ್ದರಾಮಯ್ಯ, ಕುಮಾರಸ್ವಾಮಿ ಹಾಗೂ ಮತ್ತೊಬ್ಬರಿಗೆ ನಾನು ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತೇನೆ. ಭೂಸುಧಾರಣಾ ಕಾಯ್ದೆ ಜಾರಿಯಾದ ಮೇಲೆ 79ಎ,ಬಿ  ಕಾಯ್ದೆ ಉಲ್ಲಂಘನೆ ಕೇಸ್ ಎಷ್ಟು? ಕಾಯ್ದೆ ಉಲ್ಲಂಘಿಸಿ ಸಾಬೀತಾಗಿ ಜಪ್ತಿ ಭೂಮಿ ಎಷ್ಟು? ಈವರೆಗೆ ಸರ್ಕಾರ ವಶಕ್ಕೆ ಪಡೆದ ಭೂಮಿ ಎಷ್ಟು? ಅದಕ್ಕೆ ಸಿದ್ದರಾಮಯ್ಯ ಉತ್ತರ ಕೊಡಲಿ ಎಂದು ತಾಕೀತು ಮಾಡಿದರು. ಮುಂದುವರೆದ ಅವರು, ಅದಕ್ಕೆ ಅವರ ಬಳಿ ಉತ್ತರ ಇಲ್ಲ ಎಂದರು.

ಇನ್ನು, ಇದೇ ವೇಳೆ ರಾಜ್ಯದಲ್ಲಿ 2020-2025ರ ಹೊಸ ಕೈಗಾರಿಕಾ ನೀತಿ ಜಾರಿಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಜಗದೀಶ್ ಶೆಟ್ಟರ್​ ಹೇಳಿದರು. ಈಗಾಗಲೇ ಹೊಸ ಕೈಗಾರಿಕಾ ನೀತಿ ಕರಡು ರೆಡಿಯಾಗಿದೆ. ಮುಂದಿನ ಕ್ಯಾಬಿನೆಟ್ ನಲ್ಲಿ ಹೊಸ ಕೈಗಾರಿಕಾ ನೀತಿ ಕರಡು ಮಂಡನೆ ಮಾಡಲಾಗುತ್ತದೆ. ಹೊಸ ಕೈಗಾರಿಕಾ ನೀತಿ ಕ್ಯಾಬಿನೆಟ್ ನಲ್ಲಿ ಅನುಮೋದನೆಯಾದರೆ, ಟೈಯರ್ 2, 3 ಸೀಟಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಹೇಳಿದರು.

ಹೆಚ್ಚು ಸೌಲಭ್ಯ, ಮೂಲಭೂತ ಸೌಕರ್ಯ ತೆರಿಗೆ ವಿನಾಯಿತಿ, ಸಬ್ಸಿಡಿ ಕೊಟ್ಟು ಹೆಚ್ಚು ಉದ್ದಿಮೆಗೆ ಪ್ರೋತ್ಸಾಹ ನೀಡಲಾಗುತ್ತದೆ. ಎಲ್ಲವೂ ಸರಳೀಕರಣವಾಗಿರಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಕೈಗಾರಿಕೆಗಳು ಬರಬೇಕಾದ್ರೆ ಭೂಮಿ, ನೀರು, ಮೂಲಸೌಕರ್ಯ ಸುಲಭವಾಗಿ ಸಿಗಲು ವ್ಯವಸ್ಥೆ ಮಾಡಬೇಕು ಎಂದರು.

ದೂರವಾಣಿ ಮೂಲಕ ಸಚಿನ್‌ ಪೈಲಟ್‌ಗೆ ಪಿ. ಚಿದಂಬರಂ ಸಲಹೆ: ಕಾಂಗ್ರೆಸ್‌ಗೆ ಮರುಳುವರೇ ರಾಜಸ್ಥಾನದ ಯುವ ನಾಯಕ?

ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಕಾಯ್ದೆ-2002ಗೆ ಸಾಕಷ್ಟು ತಿದ್ದುಪಡಿ ತರುವ ಕೆಲಸ ಮಾಡಿದ್ದೇವೆ. ಕ್ಯಾಬಿನೆಟ್​ನಲ್ಲಿ ಅನುಮೋದನೆ ಆಗಬೇಕಿದೆ. ಈಗ ಅಧಿವೇಶನ ಇಲ್ಲದೆ ಇರುವುದರಿಂದ ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಈ ತಿದ್ದುಪಡಿ ಕಾಯ್ದೆ ಪ್ರಕಾರ ಕೈಗಾರಿಕಾ ಸ್ಥಾಪನೆ ಮಾಡುವ ಉದ್ದಿಮೆಗಳಿಗೆ ಅನುಕೂಲವಾಗಲಿದೆ. ಹಿಂದೆ ಕೃಷಿ ಭೂಮಿಯನ್ನು ಕೃಷಿಯೇತರ ಮಾಡಲು 6ತಿಂಗಳ ಸಮಯ ತೆಗೆದುಕೊಳ್ಳುತಿತ್ತು. ಈ ತಿದ್ದುಪಡಿ ಕಾಯ್ದೆಯಿಂದ ಭೂಮಿ ಶೀಘ್ರವೇ ಸಿಕ್ಕು , ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಾಡಲು ಅವಕಾಶವಿದೆ ಎಂದು ಹೇಳಿದರು.

ಬೆಳಗಾವಿ ಸುವರ್ಣಸೌಧಕ್ಕೆ ಕಚೇರಿ ಸ್ಥಳಾಂತರಿಸಬೇಕೆಂಬ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಹೇಳಿಕೆಗೆ,  ಹಿಂದಿನ ಸರ್ಕಾರದವರು ಕೇವಲ ಹೇಳುತ್ತಿದ್ದರು. ಕುಮಾರಸ್ವಾಮಿ ಮೈತ್ರಿ ಸರ್ಕಾರ ಇದ್ದಾಗ ಬೆಳಗಾವಿಗೆ ಇಷ್ಟು ಕಚೇರಿ ಸ್ಥಳಾಂತರಿಸುತ್ತೇವೆ ಎಂದರು. ಕ್ಯಾಬಿನೆಟ್ ನಿರ್ಧಾರವಾಯ್ತು, ಆದರೆ ಒಂದು ಕಚೇರಿಯೂ ಸ್ಥಳಾಂತರವಾಗಲಿಲ್ಲ. ಬಿಎಸ್​ವೈ ನೇತೃತ್ವದಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕಚೇರಿ ಸ್ಥಳಾಂತರ ಕಾರ್ಯ ನಡೆದಿದೆ. ಇನ್ನೂ ಅದಕ್ಕೆ ಹೆಚ್ಚು ಒತ್ತು ಕೊಡುವ ಕೆಲಸ ಮಾಡುತ್ತೇವೆ ಎಂದರು.ಲಾಕ್ ಡೌನ್ ದಿಂದ ರಾಜ್ಯದಲ್ಲಿ ಕೈಗಾರಿಕೆ ಕ್ಷೇತ್ರಕ್ಕೆ ನಷ್ಟದ ವಿಚಾರವಾಗಿ, ಕೊರೋನಾ ಲಾಕ್ ಡೌನ್ ದಿಂದ 50ಸಾವಿರ ಕೋಟಿ ,1ಲಕ್ಷ ಕೋಟಿ ಲೆಕ್ಕಕ್ಕೆ ಸಿಗದಷ್ಟು ನಷ್ಟವಾಗಿದೆ. ಪ್ರಧಾನಿ ಮೋದಿ ವಿಶೇಷ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ನಲ್ಲಿ 3ಲಕ್ಷ ಕೋಟಿ ಕೈಗಾರಿಕೆಗೆ ಕೊಟ್ಟಿದ್ದಾರೆ.  ಇದರ ಪ್ರಯೋಜನವನ್ನು ನಮ್ಮ ರಾಜ್ಯದ ಕೈಗಾರಿಕೋದ್ಯಮಿಗಳು ಪಡೆಯುತ್ತಿದ್ದಾರೆ. ಕೈಗಾರಿಕೆಗಳಿಗೆ ಈಗಾಗಲೇ ಮಿನಿಮಮ್ ವಿದ್ಯುತ್ ಬಿಲ್ ವಿನಾಯಿತಿ ರಾಜ್ಯ ಸರ್ಕಾರ ನೀಡಿದೆ. ಕೈಗಾರಿಕೆಗಳು ಈಗ ಮತ್ತೆ ಪುನಶ್ಚೇತನವಾಗ್ತಿವೆ ಎಂದು ಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಸಚಿವ ಜಗದೀಶ್​ ಶೆಟ್ಟರ್ ಬಾಗಲಕೋಟೆ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದರು.  ಬಾಗಲಕೋಟೆ ಉದ್ಯಾನಗಿರಿಯ ತೋಟಗಾರಿಕೆ ವಿವಿ ಎದುರಿನಲ್ಲಿ ಕೈಗಾರಿಕಾ ಪ್ರದೇಶವಿದೆ. ಈ ಸಂದರ್ಭದಲ್ಲಿ ಕೈಗಾರಿಕೋದ್ಯಮಿಗಳೊಂದಿಗೆ ಸಚಿವ ಶೆಟ್ಟರ್ ಚರ್ಚೆ ನಡೆಸಿದರು. ಉದ್ದಿಮೆದಾರರು ಲಾಕ್​ಡೌನ್​ದಿಂದಾಗಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಹೇಳಿಕೊಂಡರು. ಕೈಗಾರಿಕಾ ಸಚಿವರ ಜೊತೆಗೆ ಶಾಸಕ ವೀರಣ್ಣ ಚರಂತಿಮಠ, ಸಂಸದ ಪಿ ಸಿ ಗದ್ದಿಗೌಡರ ಇದ್ದರು.
Published by: Latha CG
First published: July 17, 2020, 2:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading