ಜೆಡಿಎಸ್ ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರ; ಬಹುಮತವಿದ್ದರೂ ಕಮಲದೆದುರು ಮಂಡಿಯೂರಿದ ತೆನೆಯೊತ್ತ ಮಹಿಳೆ

12 ಸ್ಥಾನಗಳಲ್ಲಿ ಜೆಡಿಎಸ್ ನ ಸದಸ್ಯರಿದ್ದರೂ ಸಹ ಕೇವಲ 1 ಸ್ಥಾನ ಗೆದ್ದಿರುವ ಬಿಜೆಪಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿರುವುದು ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಇದು ಮುಂದಿನ ದಿನಗಳಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿಗೆ ನಾಂದಿಯಾಗಲಿದೆ ಎಂಬ ಅಭಿಪ್ರಾಯಗಳು ಅಲ್ಲಲ್ಲಿ ಕೇಳಿ ಬರುತ್ತಿದೆ. ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಡಿ.ಕೆ.ಸಹೋದರರಿಗೆ ಟಾಂಗ್ ಕೊಡುವ ತಂತ್ರವೂ ಇದಾಗಿದೆ ಎನ್ನಲಾಗಿದೆ.

ಮಾಗಡಿ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ಬಿಜೆಪಿಯ ಭಾಗ್ಯಮ್ಮ.

ಮಾಗಡಿ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ಬಿಜೆಪಿಯ ಭಾಗ್ಯಮ್ಮ.

  • Share this:
ರಾಮನಗರ (ಮಾಗಡಿ): ಜೆಡಿಎಸ್ - ಬಿಜೆಪಿ ಮೈತ್ರಿ ಪರ್ವ ಪ್ರಾರಂಭ ಎನ್ನುವ ಸೂಚನೆ ಮಾಗಡಿ ಪುರಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ರಾಮನಗರ ಜಿಲ್ಲೆ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಪುರಸಭೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಒಟ್ಟು 23 ಸ್ಥಾನಗಳಲ್ಲಿ ಜೆಡಿಎಸ್ - 12 ಕಾಂಗ್ರೆಸ್ - 10 ಬಿಜೆಪಿ - 1 ಸ್ಥಾನ ಗಳಿಸಿತ್ತು. ಆದರೆ ಜೆಡಿಎಸ್ ಗೆ ಬೆಂಬಲವಿದ್ದರೂ ಸಹ ಶಾಸಕ ಎ.ಮಂಜು ಬಿಜೆಪಿಗೆ ಬೆಂಬಲ ನೀಡುವ ಮೂಲಕ ಬಿಜೆಪಿಯ ಭಾಗ್ಯಮ್ಮ ಎಂಬುವರು ಮಾಗಡಿ ಪುರಸಭೆಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಸಮಾಧಾನ ಪಟ್ಟಿತ್ತು. ಜೆಡಿಎಸ್ ಗೆ ಬಹುಮತವಿದ್ದರೂ ಸಹ ಕೆಲ ಜೆಡಿಎಸ್ ಸದಸ್ಯರೇ ಕಾಂಗ್ರೆಸ್ ಗೆ ಸಪೋರ್ಟ್ ಮಾಡಿದ್ದರು. ಈ ಹಿನ್ನೆಲೆ ಕ್ಷೇತ್ರದಲ್ಲಿ ಜೆಡಿಎಸ್ ಅಧಿಕಾರದಲ್ಲಿದ್ದು ಕಾಂಗ್ರೆಸ್ ಪಕ್ಷ ಪುರಸಭೆಯ ಅಧಿಕಾರ ಹಿಡಿದರೆ ಪಕ್ಷಕ್ಕೆ ವರ್ಚಸ್ ಕಡಿಮೆಯಾಗಲಿದೆ ಎಂದು ಶಾಸಕ ಎ.ಮಂಜು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: ಭಾರೀ ಕುತೂಹಲ ಮೂಡಿಸಿರುವ ಬಿಹಾರ ಫಲಿತಾಂಶ; ನಿತೀಶ್, ಬಿಜೆಪಿಗೆ ನಿರ್ಣಾಯಕ!

ಇನ್ನು ಈ ಬಗ್ಗೆ ಮಾತನಾಡಿದ ಶಾಸಕ ಎ.ಮಂಜು ಹೆಚ್.ಡಿ.ಕುಮಾರಸ್ವಾಮಿಯವರ ಸೂಚನೆಯಂತೆ ನಾವು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇವೆ. ಮಾಗಡಿ  ಅಭಿವೃದ್ಧಿ ದೃಷ್ಟಿಯಿಂದ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು. ಇನ್ನು ಬಿಜೆಪಿ ಮುಖಂಡ ಎ.ಎಚ್.ಬಸವರಾಜ್ ಮಾತನಾಡಿ ನಾವು 23 ಸ್ಥಾನಗಳಲ್ಲಿ ಕೇವಲ 1 ಸ್ಥಾನ ಗೆದ್ದು ಮೂರನೇ ಸ್ಥಾನದಲ್ಲಿದ್ದೆವು. ಆದರೆ ಜೆಡಿಎಸ್ ನವರು ನಮ್ಮ ಜೊತೆಗೆ ಮೈತ್ರಿ ಮಾಡಿಕೊಂಡು ನಮಗೆ ಅಧ್ಯಕ್ಷ ಸ್ಥಾನ ಬಿಟ್ಡುಕೊಟ್ಟಿದ್ದಾರೆಂದು ತಿಳಿಸಿದರು.

ಭವಿಷ್ಯದಲ್ಲಿ ಇದು ಜೆಡಿಎಸ್ ಗೆ ಮಾರಕ

ಮಾಗಡಿ ಪುರಸಭೆಯಲ್ಲಿ ಅಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ಬಿಟ್ಟು ಕೊಟ್ಟಿರುವ ಜೆಡಿಎಸ್ ಗೆ ಭವಿಷ್ಯದ ದಿನಗಳಲ್ಲಿ ಕಷ್ಟದ ಸಂದರ್ಭಗಳು ಎದುರಾಗುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ. ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿರುವ ಶಾಸಕರಿದ್ದು, ಜೊತೆಗೆ 12 ಸ್ಥಾನಗಳಲ್ಲಿ ಜೆಡಿಎಸ್ ನ ಸದಸ್ಯರಿದ್ದರೂ ಸಹ ಕೇವಲ 1 ಸ್ಥಾನ ಗೆದ್ದಿರುವ ಬಿಜೆಪಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿರುವುದು ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಇದು ಮುಂದಿನ ದಿನಗಳಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿಗೆ ನಾಂದಿಯಾಗಲಿದೆ ಎಂಬ ಅಭಿಪ್ರಾಯಗಳು ಅಲ್ಲಲ್ಲಿ ಕೇಳಿ ಬರುತ್ತಿದೆ. ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಡಿ.ಕೆ.ಸಹೋದರರಿಗೆ ಟಾಂಗ್ ಕೊಡುವ ತಂತ್ರವೂ ಇದಾಗಿದೆ ಎನ್ನಲಾಗಿದೆ.

ವರದಿ : ಎ.ಟಿ.ವೆಂಕಟೇಶ್
Published by:HR Ramesh
First published: