ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲವರ್ಧನೆಗೆ ಬಿಜೆಪಿ ಪ್ಲಾನ್; ಮಂಡ್ಯದಲ್ಲಿ ಐತಿಹಾಸಿಕ ಹೆಜ್ಜೆ

ಮಂಡ್ಯದಲ್ಲಿ ಮೊತ್ತ ಮೊದಲ ಬಾರಿಗೆ ಬಿಜೆಪಿಯ ರಾಜ್ಯ ಪದಾಧಿಕಾರಿಗಳ ಸಭೆ ನಡೆಯಲಿದೆ. ಹಳೆ ಮೈಸೂರು ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಬಿಜೆಪಿ ಈ ತಂತ್ರ ಅನುಸರಿಸಿದೆ.

ಬಿಜೆಪಿ ಪದಾಧಿಕಾರಿಗಳ ಸಭೆ

ಬಿಜೆಪಿ ಪದಾಧಿಕಾರಿಗಳ ಸಭೆ

 • Share this:
  ಮಂಡ್ಯ: ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಸ್ಥಾಪನೆಗೆ ಮಾಸ್ಟರ್ ಪ್ಲಾನ್ ರೆಡಿ ಮಾಡ್ತಿದೆ. ಹಿಗಾಗಿ ಸಕ್ಕರೆನಾಡು ಮಂಡ್ಯದಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಆಗಸ್ಟ್ 25 ರಂದು ರಾಜ್ಯ ಕಾರ್ಯಕಾರಿಣಿ ಸಭೆ ಹಮ್ಮಿಕೊಂಡಿದೆ. ಈ ಸಭೆಗೆ ಬಿಜೆಪಿ ಪಕ್ಷದ ಹಲವು ದಿಗ್ಗಜರ ಆಗಮಿಸುವ ಸಾಧ್ಯತೆ ಕೂಡ ಇದೆ. ಹೌದು, ಸ್ವಾತಂತ್ರ್ಯ ಬಂದ ನಂತರದಿಂದ ಕಳೆದ ವಿಧಾನಸಭಾ ಉಪಚುನಾವಣೆ ವರೆಗೂ ಸಕ್ಕರನಾಡಿನ ಜನತೆಗೆ ಬಿಜೆಪಿ ಅಂದ್ರೆ ಸಾಕು ಅದ್ಯಾಕೋ ಮೂಗು ಮುರೀತಿದ್ರು. ಆದ್ರೆ ಕಳೆದ ಉಪ ಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕೆಆರ್ ಪೇಟೆ ಕ್ಷೇತ್ರದಲ್ಲಿ ಕೆಸಿ ನಾರಾಯಣಗೌಡ ಅವರನ್ನ ಆಯ್ಕೆ ಮಾಡುವ ಮೂಲಕ ಬಿಜೆಪಿಗೆ ಜೈ ಎಂದಿದ್ದರು. ಹೀಗಾಗಿ ಬಿಜೆಪಿ ಕೂಡ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಮಾಸ್ಟರ್ ಪ್ಲಾನ್ ಸಿದ್ದಪಡಿಸ್ತಿದೆ.

  ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲವರ್ಧನೆಗೆ ಬಿಜೆಪಿ ಪ್ಲಾನ್ ಸಿದ್ದಪಡಿಸಲು ಮುಂದಾಗ್ತಿದೆ. ಹೀಗಾಗಿ ಪಕ್ಷದ ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ಪ್ರಮುಖ ನಾಯಕರುಗಳವರೆಗೆ ಒಂದಷ್ಟು ಪಕ್ಷದ ಸಿದ್ದಾಂತ ಹಾಗೂ ಪಕ್ಷ ಸಂಘಟನೆ ಬಗ್ಗೆ ತರಬೇತಿ ನೀಡಲು ಮುಂದಾಗ್ತಿದೆ. ಹಿಗಾಗಿ ಸಕ್ಕರೆನಾಡು ಮಂಡ್ಯದಲ್ಲಿ ಮೊದಲ ಬಾರಿಗೆ ರಾಜ್ಯ ಕಾರ್ಯಕಾರಿಣಿ ಸಭೆ ಹಮ್ಮಿಕೊಳ್ಳಲಾಗಿದೆ. ಇಂದು (ಆಗಸ್ಟ್ 25) ಮಂಡ್ಯದಲ್ಲಿ ನಡೆಯುವ ಪದಾಧಿಕಾರಿಗಳ ಸಭೆಗೆ ರಾಜ್ಯದ ಪ್ರಮುಖ ನಾಯಕರುಗಳು ಆಗಮಿಸುವ ನಿರಿಕ್ಷೆ ಇದ್ದು, ಸಿ.ಟಿ ರವಿ ಮತ್ತು ನಳಿನ್ ಕುಮಾರ್ ಕಟೀಲ್ ಬರುವುದಹ ನಿಶ್ಚಿತವಾಗಿದೆ.

  ಇದನ್ನೂ ಓದಿ: Basavaraj Bommai: ಇಂದು ಹೈಕಮಾಂಡ್​ ಭೇಟಿ ಮಾಡಲಿರುವ ಸಿಎಂ ಬೊಮ್ಮಾಯಿ; ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ

  ಝಡ್​ಪಿ ಮತ್ತು ಟಿಪಿ ಚುನಾವಣೆ ಬಗ್ಗೆ ಸಭೆಯಲ್ಲಿ ರಣತಂತ್ರ ಎಣೆಯುವ ಸಾಧ್ಯತೆ

  ಇನ್ನು ಜಿಲ್ಲಾಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಸಮೀಪಿಸುತ್ತಿದೆ. ಹಿಗಾಗಿ ಸಭೆಯಲ್ಲಿ ಚುನಾವಣೆ ಬಗ್ಗೆ ಚೆರ್ಚೆ ನಡೆಯಲಿದ್ದು, ತಳಮಟ್ಟದ ಕಾರ್ಯಕರ್ತರು ಚುನಾವಣೆಯಲ್ಲಿ ಯಾವ ರೀತಿ ಕೆಲಸ ಮಾಟಬೇಕು ಅನ್ನೊದರ ಬಗ್ಗೆ ಕೂಡ ಚೆರ್ಚೆ ನಡೆಯುವ ಸಾಧ್ಯತೆ ಇದೆ.‌ ಹಳೆ ಮೈಸೂರು ಭಾಗದಲ್ಲಿ ಶತಾಯ ಗತಾಯ ಕಮಲ ಅರಳಿಸಲು ಸಿದ್ದತೆ ಮಾಡಿಕೊಳ್ತಿರೋ ಬಿಜೆಪಿ, ಮಂಡ್ಯದಲ್ಲಿ ಇವತ್ತಿನ ಕಾರ್ಯಕ್ರಮಕ್ಕೆ ಖಾಸಗಿ ಸಮುದಾಯ ಭವನದಲ್ಲಿ ಸಿದ್ದತೆಗಳನ್ನ ಮಾಡಿಕೊಳ್ತಿದೆ. ಹೀಗಾಗಿ ನಿನ್ನೆ ಸ್ಥಳೀಯ ಬಿಜೆಪಿ ನಾಯಕರು ನಗರದ ಸುಮರವಿ ಸಮುದಾಯ ಭವನಕ್ಕೆ ಭೇಟಿ ನೀಡಿ, ಸಿದ್ದತೆಗಳ ಬಗ್ಗೆ ಮಾಹಿತಿ ಪಡೆದುಕೊಂಡ್ರು. ಈ ಸಂದರ್ಭ ಡಿಸಿಸಿ ಬ್ಯಾಂಕಿನ ಉಮೇಶ್, ಸಿದ್ದರಾಮಯ್ಯ ಸೇರಿದಂತೆ ಅನೇಕರು ಹಾಜರಿದ್ದರು.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

  ವರದಿ: ಸುನೀಲ್ ಗೌಡ
  Published by:Vijayasarthy SN
  First published: