ಚಿಕ್ಕೋಡಿ ಜಿಲ್ಲೆ ರಚನೆಗೆ ವರಸೆ ಬದಲಿಸಿದ ಬಿಜೆಪಿ ನಾಯಕರು; ಜಿಲ್ಲೆ ರಚನೆಗೆ ಹಿಂದೇಟು

ಈಗಾಗಲೇ ಚಿಕ್ಕೋಡಿ ಜಿಲ್ಲೆ ಆಗಲು ಎಲ್ಲಾ ಅರ್ಹತೆಯನ್ನು ಹೊಂದಿದೆ. ಜಿಲ್ಲಾ ಮಟ್ಟದ ಕಾರ್ಯಾಲಯಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಸರ್ಕಾರ ಮತ್ತು ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯ ಕನಸು ನನಸಾಗುತ್ತಿಲ್ಲ

ಚಿಕ್ಕೋಡಿ ಉಪ ವಿಭಾಗಾಧಿಕಾರಿ ಕಚೇರಿ

ಚಿಕ್ಕೋಡಿ ಉಪ ವಿಭಾಗಾಧಿಕಾರಿ ಕಚೇರಿ

  • Share this:
ಚಿಕ್ಕೋಡಿ(ಡಿಸೆಂಬರ್​.02): ಬಳ್ಳಾರಿ ಜಿಲ್ಲೆ ಇಬ್ಬಾಗವಾಗಿ ವಿಜಯನಗರ ಸ್ಥಾಪನೆಯ ಕುರಿತು ಬಳ್ಳಾರಿಯಲ್ಲಿ ಪರ ವಿರೋಧ ಚರ್ಚೆ ಆಗುತ್ತಿರುವುದು ಸಾಮಾನ್ಯ. ಆದರೆ, ಬಳ್ಳಾರಿ ಇಬ್ಬಾಗ ವಿಷಯದಲ್ಲಿ ಸಚಿವ ಆನಂದ್ ಸಿಂಗ್ ನಡೆದುಕೊಂಡ ರೀತಿಯ ಬಗ್ಗೆ ಕುಂದಾನಗರಿ ಬೆಳಗಾವಿಯಲ್ಲಿ ಚರ್ಚೆಗಳು ಶುರುವಾಗಿವೆ. ವಿಜಯನಗರ ಜಿಲ್ಲೆಗೆ ಸರ್ಕಾರ ಹಸಿರು ನಿಶಾನೆ ನೀಡುತ್ತಿದ್ದಂತೆ ಚಿಕ್ಕೋಡಿ ಜಿಲ್ಲೆ ರಚನೆ ಮಾಡುವಂತೆ ಹೋರಾಟಗಾರರು ಮತ್ತೊಮ್ಮೆ ಹೋರಾಟಕ್ಕೆ ಸಜ್ಜಾಗುತ್ತಿದ್ದಂತೆ ಇತ್ತ ಜಿಲ್ಲೆ ಮಾಡುವ ಭರವಸೆ ನೀಡಿ ಈಗ ಜಿಲ್ಲೆ ಮಾಡಿ ಅಂದ್ರೆ ಇಲ್ಲದ ಕಾರಣಗಳನ್ನು ನೀಡಿ ಬಿಜೆಪಿ ನಾಯಕರು ಹಿಂದೇಟು ಹಾಕುತ್ತಿದ್ದಾರೆ. ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿ ರಾಜ್ಯದಲ್ಲಿ ಅತಿ ದೊಡ್ಡ ಜಿಲ್ಲೆ ಎನ್ನುವ ಹೆಗ್ಗಳಿಕೆ ಹೊಂದಿದಂತಹ ಜಿಲ್ಲೆ 18 ವಿಧಾನಸಭಾ ಎರಡು ಲೋಕಸಭಾ ಕ್ಷೇತ್ರ ಹೊಂದಿರುವ ಜಿಲ್ಲೆ 250 ಕಿಲೋ ಮೀಟರ್‌ ವ್ಯಾಪ್ತಿಯನ್ನ ಹೊಂದಿದೆ ಆಡಳಿತ ದೃಷ್ಟಿಯಿಂದ ಜಿಲ್ಲೆ ವಿಭಜನೆ ಮಾಡಬೇಕು ಎನ್ನುವ ಕೂಗು ಕಳೆದ 20 ವರ್ಷಗಳಿಂದ ಇದೆ.

ಜಿಲ್ಲೆಗಾಗಿ ಹಲವು ಬಾರಿ ಹೋರಾಟಗಳು ನಡೆದಿವೆ ಹಲವು ರಾಜಕೀಯ ನಾಯಕರು ಸಹ ತಮ್ಮ ಹಿತಾಸಕ್ತಿಗಾಗಿ ಚುನಾವಣೆ ಬಂದತಹ ಸಂದರ್ಭದಲ್ಲಿ ಜಿಲ್ಲೆ ಮಾಡುವ ಭರವಸೆ ನೀಡಿ ಚುನಾವಣೆ ಬಳಿಕ ಮರೆತು ಬಿಡುತ್ತಾರೆ. ಆದರೆ, ಜಿಲ್ಲೆಯ ಕನಸು ಮಾತ್ರ 20 ವರ್ಷಗಳಿಂದಲು ಕನಸಾಗಿಯೆ ಉಳಿದಿದೆ.

ಈಗಾಗಲೇ ಚಿಕ್ಕೋಡಿ ಜಿಲ್ಲೆ ಆಗಲು ಎಲ್ಲಾ ಅರ್ಹತೆಯನ್ನು ಹೊಂದಿದ ಕ್ಷೇತ್ರವಾಗಿದೆ. ಎಲ್ಲಾ ಜಿಲ್ಲಾ ಮಟ್ಟದ ಕಾರ್ಯಾಲಯಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಸರ್ಕಾರ ಮತ್ತು ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯ ಕನಸು ನನಸಾಗುತ್ತಿಲ್ಲ. ಹಾಗಾಗಿ ಜಿಲ್ಲಾ ಹೋರಾಟ ಸಮಿತಿ ಸದಸ್ಯರು ಮತ್ತೋಮ್ಮೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಇನ್ನು ಹೋರಾಟದ ಭಾಗ ಒಂದೆಡೆ ಆದರೆ ಇತ್ತ ಚುನಾವಣೆ ಸಂದರ್ಭದಲ್ಲಿ ಮಾತು ಕೊಟ್ಟು ಈಗ ಹೊಸ ವರಸೆಯನ್ನ ಜಿಲ್ಲೆಯ ನಾಯಕರು ಎತ್ತಿದ್ದಾರೆ. ಜಿಲ್ಲೆ ವಿಭಜನೆ ಕುರಿತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೋಳಿ ಪ್ರತಿಕ್ರಿಯೆ ನೀಡಿದ್ದು, ಗೋಕಾಕ್ ಹಾಗೂ ಚಿಕ್ಕೋಡಿ ಜಿಲ್ಲೆ ಮಾಡಲು ನಮ್ಮದು ಸಹ ಸಹಮತಿ ಇದೆ. ಆದರೆ, ಕೆಲವು ತೊಡಕುಗಳು ಸಮಸ್ಯೆ ಆಗಿವೆ ಜಿಲ್ಲೆಯನ್ನ ವಿಭಜನೆ ಮಾಡುವು ಅಷ್ಟು ಸುಲಭವಲ್ಲ. ಮಹಾಜನ್ ವರದಿಯನ್ನ ನೋಡಬೇಕು ಜೊತೆಗೆ ಕನ್ನಡಪರ ಸಂಘಟನೆಗಳನ್ನ ವಿಶ್ವಾಸಕ್ಕೆ ಪಡೆಯಬೇಕು. ಬೆಳಗಾವಿಯ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಕೂಡ ನಡೆಯುತ್ತಿದೆ. ವಿಜಯನಗರದ ವಿಚಾರವೆ ಬೇರೆ ನಮ್ಮ ಜಿಲ್ಲೆಯ ವಿಚಾರವೇ ಬೇರೆ ಹಾಗಾಗಿ ಜಿಲ್ಲೆ ಮಾಡುವುದು ಅಷ್ಟು ಸುಲಭವಲ್ಲ ಎಂದಿದ್ದಾರೆ.

ಇದನ್ನೂ ಓದಿ : ಬೆಂಗಳೂರಲ್ಲಿ ರೈತರು, ಕನ್ನಡ ಹೋರಾಟಗಾರರ ಪ್ರತಿಭಟನೆ; ಕರ ಏರಿಕೆ ವಿರುದ್ಧ ಆಪ್ ಚಳವಳಿ

ಇನ್ನು ಚುನಾವಣೆ ವೇಳೆ ನೀಡಿಸ ಭರವಸೆ ಬಗ್ಗೆ ಕೇಳಿದ್ರೆ ನಾನು ಆವಾಗ ಬಿಜೆಪಿಯಲ್ಲಿ ಇರಲಿಲ್ಲಾ ಯಾರು ಭರವಸೆ ಕೊಟ್ಟಿದ್ದಾರೊ ಅವರನ್ನೆ ಕೇಳಿ ಎನ್ನುವ ಮೂಲಕ ತಮ್ಮ ವರಸೆಯನ್ನೆ ಬದಲಿಸಿದ್ದಾರೆ.

ಒಟ್ಟಿನಲ್ಲಿ ಚುನಾವಣೆಗಳು ಬಂದಾಗ ಎಲ್ಲಿಲ್ಲದ ಸುಳ್ಳು ಭರವಸೆಗಳನ್ನ ನೀಡುತ್ತಾರೆ. ಭರವಸೆಗಳು ನೀಡುವ ಸಂದರ್ಭದಲ್ಲಿ ಇಲ್ಲದ ತೊಡಕುಗಳು ಈಗ ಯಾಕೆ ಬರುತ್ತವೆ. ರಾಜಕೀಯ ನಾಯಕರಿಗೆ ಜಿಲ್ಲೆ ಒಡೆಯುವುದು ಮನಸ್ಸು ಇಲ್ಲ. ಇದೆ ಕಾರಣಕ್ಕಾಗಿ ಇಲ್ಲ ಸಲ್ಲದ ನೆಪಗಳನ್ನ ಹೇಳಿ ಜಾರಿಕೊಳ್ಳುತ್ತಿದ್ದಾರೆ ಎಂದು ಹೋರಾಟಗಾರು ಕಿಡಿ ಕಾರಿದ್ದಾರೆ.
Published by:G Hareeshkumar
First published: