• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಶೆಟ್ಟರ್ ಆಪ್ತ..!

ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಶೆಟ್ಟರ್ ಆಪ್ತ..!

ನಿಯಮ ಉಲ್ಲಂಘಿಸಿ ಸಮಾರಂಭ

ನಿಯಮ ಉಲ್ಲಂಘಿಸಿ ಸಮಾರಂಭ

ಮೇ 18 ರಿಂದ 24 ನೇ ತಾರೀಖಿನವರೆಗೂ ಯಾವುದೇ ಸಭೆ-ಸಮಾರಂಭಗಳು ಮಾಡಬಾರದೆಂದು ಧಾರವಾಡ ಜಿಲ್ಲಾಡಳಿತ ಆದೇಶ ನೀಡಿದೆ. ಅಲ್ಲದೆ ಮದುವೆಗಳನ್ನೂ ನಿಷೇಧಿಸಿದೆ. ಆದರೆ ಇದೆಲ್ಲವನ್ನೂ ಬಿಜೆಪಿ ಮುಖಂಡರು‌ ಗಾಳಿಗೆ ತೂರಿದ್ದಾರೆ.

  • Share this:

ಹುಬ್ಬಳ್ಳಿ: ಅವಳಿ ನಗರಿಯಲ್ಲಿ ಸಾಮಾನ್ಯ ಜನರಿಗೊಂದು ನ್ಯಾಯ, ಜನಪ್ರತಿನಿಧಿಗಳಿಗೆ ಇನ್ನೊಂದು ನ್ಯಾಯ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಸಚಿವ ಜಗದೀಶ್ ಶೆಟ್ಟರ್ ಆಪ್ತ ಹಾಗೂ ಬಿಜೆಪಿ ಮುಖಂಡ ಆಗಿರುವ ಮಲ್ಲಿಕಾರ್ಜುನ ಸಾಹುಕಾರ್ ಕೋವಿಡ್ ನಿಯಮವನ್ನು ಗಾಳಿಗೆ ತೂರಿದ್ದಾರೆ. ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಸಾಹುಕಾರ್ ತಮ್ಮ 25ನೇ ಮದುವೆ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನೂ ಕಾಪಾಡಿಕೊಂಡಿಲ್ಲ. ನಿಯಮಗಳ ಉಲ್ಲಂಘಿಸಿ ಅದ್ಧೂರಿಯಾಗಿ ವಿವಾಹ ವಾರ್ಷಿಕೋತ್ಸವ ಸಮಾರಂಭ ಮಾಡಿದ್ದಾರೆ.


ಮೇ 18 ರಿಂದ 24 ನೇ ತಾರೀಖಿನವರೆಗೂ ಯಾವುದೇ ಸಭೆ-ಸಮಾರಂಭಗಳು ಮಾಡಬಾರದೆಂದು ಧಾರವಾಡ ಜಿಲ್ಲಾಡಳಿತ ಆದೇಶ ನೀಡಿದೆ. ಅಲ್ಲದೆ ಮದುವೆಗಳನ್ನೂ ನಿಷೇಧಿಸಿದೆ. ಆದರೆ ಇದೆಲ್ಲವನ್ನೂ ಬಿಜೆಪಿ ಮುಖಂಡರು‌ ಗಾಳಿಗೆ ತೂರಿದ್ದಾರೆ. ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪ್ರಾಧಿಕಾರದ ಅಧ್ಯಕ್ಷರು ಮಾಸ್ಕ್ ಹಾಕಿಕೊಳ್ಳುದನ್ನೇ ಮರೆತಿದ್ದರು. ಸರ್ಕಾರ ನಡೆಸುವ ಜನಪ್ರತಿನಿಧಿಗಳ ಆಪ್ತರು, ಜವಾಬ್ದಾರಿಯುತ ವ್ಯಕ್ತಿಗಳೇ ಈ ರೀತಿ ಮಾಡಿದ್ರೆ, ಕೋವಿಡ್ ತಡೆಗಟ್ಟುವವರು ಯಾರು ಎನ್ನೋ ಪ್ರಶ್ನೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ ವೈರಲ್ ಬೆನ್ನಲ್ಲೇ ಬಿಜೆಪಿ ಮುಖಂಡರ ವಿರುದ್ಧ ಧಾರವಾಡ ಜಿಲ್ಲೆಯ ಜನ‌ರ ಆಕ್ರೋಶ ವ್ಯಕ್ತವಾಗಿದೆ.


ಕೋವಿಡ್ ವಾರ್ಡ್ ನಲ್ಲಿಯೇ ಮೊಬೈಲ್ ಕದ್ದ ಚಾಲಾಕಿ


ಕೋವಿಡ್ ಸೆಂಟರ್‌ನಲ್ಲಿಯೇ ಕಳ್ಳತನವಾದ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಕೋವಿಡ್ ಸೆಂಟರ್ ಕಳ್ಳತನ ನಡೆದಿದೆ. ಕಳ್ಳತನ ಮಾಡಿರುವ ದೃಶ್ಯ, ಕಳ್ಳನ ಸಂಪೂರ್ಣ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಅಟೆಂಡರ್ ಸೋಗಿನಲ್ಲಿ ಬಂದು ಮೊಬೈಲ್ ಕಳ್ಳತನ ಮಾಡಿದ್ದಾನೆ.ಕಿಮ್ಸ್ ಸಿಬ್ಬಂದಿಯ ಐವತ್ತು ಸಾವಿರ ಬೆಲೆಯುಳ್ಳ ಮೊಬೈಲ್ ಕಳ್ಳತನ ಮಾಡಲಾಗಿದೆ. ತಮ್ಮ ಪ್ರಾಣವನ್ನ ಪಣಕಿಟ್ಟು ಚಿಕಿತ್ಸೆ ನೀಡುತ್ತಿರುವ ಕಿಮ್ಸ್ ಸಿಬ್ಬಂದಿ. ಇಂತಹ ಕೊರೋನ ವಾರಿಯರ್‌ ದ್ದೆ ಮೊಬೈಲ್ ಬಿಡದ ಕಳ್ಳತನ ಮಾಡಲಾಗಿದೆ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಬೆಲ್ಲದ್


ಜಾತಿ, ಧರ್ಮ, ರಾಜ್ಯ ರಾಜ್ಯಗಳ ನಡುವೆ ಕಾಂಗ್ರೆಸ್ ಸೌಹಾರ್ದತೆ ಹಾಳು ಮಾಡ್ತಿದೆ. ಒಡೆದಾಳೋ ನೀತಿ ಅನುಸರಿಸಿ ಕಾಂಗ್ರೆಸ್ ಅಧೋಗತಿಗೆ ಹೋಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಆರೋಪಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮತನಾಡಿದ ಬೆಲ್ಲದ್, ಕೋವಿಡ್ ಸಂಕಷ್ಟದ ಸಂದರ್ಭಸಲ್ಲಿ ಟೂಲ್ ಕಿಟ್ ಬಿಡುಗಡೆ ಮಾಡಿ ತಪ್ಪು ಸಂದೇಶ ಹಬ್ಬಿಸೋ ಕೆಲಸ ಕಾಂಗ್ರೆಸ್ ಪಕ್ಷದಿಂದ ನಡೆದಿದೆ. ಟೂಲ್ ಕಿಟ್ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನ ಮಾಡಲಾಗ್ತಿದೆ. ಕಾಂಗ್ರೆಸ್ ನಿಂದ ದೇಶದ್ರೋಹದ ಕೆಲಸ ನಡೆದಿದೆ. ಟೂಲ್ ಕಿಟ್ ಮಾರ್ಗಸೂಚಿ ಅನ್ವಯ ಷಡ್ಯಂತ್ರ ನಡೆದಿದೆ ಎಂದು ಕಿಡಿಕಾರಿದ್ದಾರೆ.


ಇದನ್ನೂ ಓದಿ : White Fungus: ಬ್ಲ್ಯಾಕ್ ಫಂಗಸ್ ಬೆನ್ನಲ್ಲೇ ವೈಟ್ ಫಂಗಸ್ ಪತ್ತೆ; ಅತ್ಯಂತ ಅಪಾಯಕಾರಿಯಾದ ಇದರ ಲಕ್ಷಣಗಳೇನು?


ಸಂಕಷ್ಟದ ಸಮಯದಲ್ಲಿ ರಚನಾತ್ಮಕ ಸಲಹೆ ಕೊಡೋದನ್ನು ಬಿಟ್ಟು ಇಂತಹ ಕೆಲಸಕ್ಕೆ ಕೈಹಾಕಿರೋದು ಸರಿಯಲ್ಲ. ಚೀನಾದಲ್ಲಿ ಹುಟ್ಟಿದ ವೈರಸ್ ನ್ನು ಭಾರತದ, ಮೋದಿ ವೈರಸ್ ಎಂದು ಬಿಂಬಿಸಲು ಕಾಂಗ್ರೆಸ್ ಹೊರಟಿದೆ. ಅಧಿಕಾರದ ಹಪಾಹಪಿಯಿಂದ ಟೂಲ್ ಕಿಟ್ ಷಡ್ಯಂತ್ರ ನಡೆಸಿದೆ ಎಂದು ಅರವಿಂದ ಬೆಲ್ಲದ ಆರೋಪಿಸಿದ್ದಾರೆ.


ಆದರೆ ಕೋವಿಡ್ ಸಂಕಷ್ಟದಲ್ಲಿ ಬಿಜೆಪಿ ಸರ್ಕಾರದ ಬೆಂಬಲಕ್ಕೆ ನಿಂತಿದೆ. ಬಿಜೆಪಿ ಯಿಂದ 1200 ಕ್ಕೂ ಹೆಚ್ಚು ರಕ್ತದಾನ ಶಿಬಿರಗಳು ನಡೆದಿವೆ. ಬಿಜೆಪಿಯಿಂದ ಸಹಾಯವಾಣಿ, ಉಚಿತ ಆ್ಯಂಬುಲೆನ್ಸ್ ಸೇವೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ 250 ಕೊರೋನಾ ಸಹಾಯ ಕೇಂದ್ರ ಆರಂಭಿಸಲಾಗಿದೆ. ಆದ್ರೆ ಕಾಂಗ್ರೆಸ್ ಪಕ್ಷ ಹತಾಶೆಯಿಂದ ಪಿತೂರಿ ಮಾಡ್ತಿದೆ. ಕೋವ್ಯಾಕ್ಸಿನ್, ಕೋವಿಶೀಲ್ಡ್ ವ್ಯಾಕ್ಸಿನ್ ಬಂದಾಗಲೂ ಅಪ ಪ್ರಚಾರ ಮಾಡಿತು. ದೇಶ ವಿರೋಧಿ ಕೆಲಸ ಮಾಡೋದನ್ನ ಬಿಟ್ಟು ಕೋವಿಡ್ ಕಾರ್ಯಕ್ಕೆ ಕೈ ಜೋಡಿಸಬೇಕೆಂದು ಬೆಲ್ಲದ ಆಗ್ರಹಿಸಿದ್ದಾರೆ.

First published: