ಯಾವ ಮೀಸಲು ಸ್ಥಾನ ನಿಗದಿಯಾದರೂ ಬಿಜೆಪಿಗೆ ಹಾಸನ ನಗರಸಭೆ ಅಧಿಕಾರ ; ಶಾಸಕ ಪ್ರೀತಮ್ ಗೌಡ

ಬೇರೆಯವರ ರೀತಿಯ ದುರಂಕಾರ ನನಗಿಲ್ಲ. ಅಭಿವೃದ್ಧಿ ಮಾಡುತ್ತಾ ಹೋಗುತ್ತಿರುವೆ ಅಷ್ಟೆ. ಹಾಸನಕ್ಕೆ ಯಾವ ರೀತಿ ವ್ಯವಸ್ಥಿತವಾಗಿ ಏನು ಮಾಡಬೇಕೋ ಅದನ್ನು ಮಾಡಿದ್ದೇನೆ.

 ಶಾಸಕ ಪ್ರೀತಮ್ ಗೌಡ

ಶಾಸಕ ಪ್ರೀತಮ್ ಗೌಡ

  • Share this:
ಹಾಸನ (ಅಕ್ಟೋಬರ್​. 08): ಯಾವ ಸಮುದಾಯದ ಮೀಸಲು ಸ್ಥಾನ ನಿಗದಿಯಾದರೂ ಮೊದಲ ಬಾರಿಗೆ ಬಿಜೆಪಿ ಹಾಸನ ನಗರಸಭೆ ಅಧ್ಯಕ್ಷ ಸ್ಥಾನ ಅಲಂಕರಿಸಲಿದೆ ಎಂದು ಶಾಸಕ ಪ್ರೀತಮ್ ಗೌಡ ಭವಿಷ್ಯ ನುಡಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ನಗರಸಭೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ. ಮೊದಲ ಬಾರಿಗೆ ಬಿಜೆಪಿಯ ಸದಸ್ಯರು ಅಧ್ಯಕ್ಷರಾಗಲಿದ್ದಾರೆ. ಯಾವುದೇ ಸಮುದಾಯಕ್ಕೆ ಮೀಸಲು ನಿಗದಿ ಮಾಡಿದರೂ ಬಿಜೆಪಿಗೆ ಅಧಿಕಾರ ಸಿಗುವುದಾಗಿ ಹೇಳಿದರು. ಹಾಸನ ನಗರಪಾಲಿಕೆ ಮಾಡಲು ಈ ಹಿಂದೆ ಹೆಚ್ ಡಿ ಕುಮಾರಸ್ವಾಮಿ ಸರ್ಕಾರ ಆದೇಶಿಸಿತ್ತು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದ್ದರು. ರೇವಣ್ಣರ ಮಾತಿಗೆ ಪ್ರತಿಕ್ರಿಯಿಸಿದ ಪ್ರೀತಮ್ ಗೌಡ ಹಳೇಬೀಡು, ಬೇಲೂರು ದೇವಾಲಯ ಹಾಗೂ ಶ್ರವಣಬೆಳಗೊಳದ ಗೊಮ್ಮಟೇಶ್ವರನ ಮೂರ್ತಿಯನ್ನು ನಾನೇ ಕಟ್ಟಿದ್ದು ಅಂತಾರೆ ಎಂದು ವ್ಯಂಗ್ಯವಾಡಿದರು. ಮಾಜಿ ಸಚಿವ ಹೆಚ್ ಡಿ ರೇವಣ್ಣನವರು ಹಾಸನ ನಗರಸಭೆಯನ್ನು ನಗರಪಾಲಿಕೆ ಮಾಡಲು ಹೊರಟಿದ್ದರು, ಅದು ರಿಜೆಕ್ಟ್ ಆಗಿದೆ. ಅವರು ಪ್ರಭಾವಿ ಆಗಿದ್ದರೂ ನಗರಪಾಲಿಕೆ ಮಾಡಲು ಆಗಿರಲಿಲ್ಲ, ನಾನು ಸಾಮಾನ್ಯ ಶಾಸಕನಾಗಿ ಮಾಡಿದ್ದೇನೆ ಎಂದರು.

2021ರ ಜನಗಣತಿ ಪ್ರಕಾರ ವರದಿ ಬಂದ ಬಳಿಕ ನಗರಪಾಲಿಕೆಯೇ ಅಥವಾ ಮಹಾ ನಗರಪಾಲಿಕೆಯೇ ಎಂಬುದು ಗೊತ್ತಾಗಲಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಮಾತಿಗೆ ತಿರುಗೇಟು ನೀಡಿದರು.

ಬೇರೆಯವರ ರೀತಿಯ ದುರಂಕಾರ ನನಗಿಲ್ಲ. ಅಭಿವೃದ್ಧಿ ಮಾಡುತ್ತಾ ಹೋಗುತ್ತಿರುವೆ ಅಷ್ಟೆ. ಹಾಸನಕ್ಕೆ ಯಾವ ರೀತಿ ವ್ಯವಸ್ಥಿತವಾಗಿ ಏನು ಮಾಡಬೇಕೋ ಅದನ್ನು ಮಾಡಿದ್ದೇನೆ. ಕುಡಿಯುವ ನೀರು, ಯುಜಿಡಿಗೆ ಮುಕ್ತಿ, ರಸ್ತೆ ಅಭಿವೃದ್ಧಿಯಾಗಲಿದೆ. ಬಿಲ್ಡಿಂಗ್ ಕಟ್ಟಿದರಷ್ಟೇ ಅಭಿವೃದ್ಧಿಯಲ್ಲ. ರಸ್ತೆ, ನೀರು, ಯುಜಿಡಿಯೂ ಮುಖ್ಯ ಎಂದರು.

​ನಗರಕ್ಕೆ ಅಮೃತ್ ಯೋಜನೆ ಮಾಡಲು ಪ್ರಧಾನಿ ನರೇಂದ್ರ ಮೋದಿಯವರು ಮಾಡಬೇಕಿತ್ತು. 25 ಗ್ರಾಮ ನಗರಸಭೆಗೆ ಸೇರಿಸಲು ಸಿಎಂ ಬಿ ಎಸ್ ಯಡಿಯೂರಪ್ಪನವರು ಬರಬೇಕಾಯ್ತು. ಹಿಂದೆ ಅಧಿಕಾರ ನಡೆಸಿದ್ದವರು ಏಕೆ ಮಾಡಲಿಲ್ಲ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕನಸು ಯಾರು ಬೇಕಾದರು ಕಾಣುತ್ತಾರೆ. ಆದರೆ, ಸಾಕಾರಗೊಳಿಸುವ ಬದ್ಧತೆ ಬೇಕು. ಹಾಸನಕ್ಕೆ ರೇವಣ್ಣ ಕೊಡುಗೆ ಏನು ಎಂಬುದನ್ನು ಹೇಳಲಿ ಎಂದು ಪ್ರಶ್ನೆಸಿದರು.

ನಗರಸಭೆಗೆ 25 ಗ್ರಾಮಗಳ ಸೇರ್ಪಡೆಗೆ ಜಿಒ ಆಗಿದೆ. 165 ಕೋಟಿಗೆ ಮಂಜೂರಾತಿ ಸಿಕ್ಕಿದ್ದು, ಯುಜಿಡಿ ಕಾಮಗಾರಿ ಶೀಘ್ರ ಆರಂಭವಾಗಲಿದೆ. ಅಮೃತ್ ಯೋಜನೆ ಬರುವ ಫೆಬ್ರವರಿಗೆ ಕಾರ್ಯಗತವಾಗಲಿದೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ ಹೊಸ ಬಡಾವಣೆ ನಿರ್ಮಾಣ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ತಿಂಗಳಾಂತ್ಯದಲ್ಲಿ ರೈತರೊಂದಿಗೆ ಒಡಂಬಡಿಕೆಯಾಗಲಿದೆ ಎಂದರು.

ಶಿರಾ, ಆರ್.ಆರ್.ನಗರ ಫಲಿತಾಂಶ ನಂತರ ಸಂಪುಟ ವಿಸ್ತರಣೆಯಾಗಲಿದೆ. ಸಚಿವನಾಗಿ ಬರುತ್ತೇನೆ ಶಾಸಕನಾಗಿ ಬಂದು ಮಾತನಾಡುತ್ತಾನೋ ಚುನಾವಣೆ ಬಳಿಕ ಮಾತನಾಡುತ್ತೇನೆ. ಬಿಜೆಪಿ ಬಗ್ಗೆ ಜೆಡಿಎಸ್ ಸಾಫ್ಟ್ ಕಾರ್ನರ್ ಆದ್ರೆ ಸ್ವಾಗತ ಮಾಡುವೆ ಎಂದು ಹೇಳಿದರು.

ಇದನ್ನೂ ಓದಿ : ಬಿಜೆಪಿ ಸೇರ್ಪಡೆ ಕೇವಲ ಊಹಾಪೋಹ - ನನ್ನ ಜನರನ್ನ ಕೇಳಿಯೇ ನಿರ್ಧಾರ ತೆಗೆದುಕೊಳ್ತೇನೆ ; ವಿನಯ್ ಕುಲಕರ್ಣಿ

ರೈಲ್ವೆ ಮೇಲ್ಸೇತುವೆ ಕಾಮಗಾರಿ ಮಾಡಲು ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿದೆ. ಡಿಸೆಂಬರ್ 31ರ ಒಳಗೆ ಎಲ್ಲಾ ಪ್ರಕರಣವನ್ನ ಮುಗಿಸಿ ಮುಂದಿನ ಅಕ್ಟೋಬರ್ ಒಳಗೆ ಸೇತುವೆ ನಿರ್ಮಾಣವಾಗಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ನನ್ನ ಮಾತನ್ನು ರೆಕಾರ್ಡ್ ಮಾಡಿ ಇಟ್ಟುಕೊಳ್ಳಿ ಎಂದರು.


ನನಗೂ ಇಬ್ಬರು ಮಕ್ಕಳಿದ್ದಾರೆ. ಶಾಲೆಗೆ ಮಕ್ಕಳು ಹೋಗುವ ಬಗ್ಗೆ ನಾನೋಬ್ಬ ಪೋಷಕನಾಗಿ ಶಾಲೆ ಆರಂಭವಾಗುವುದು ಬೇಡ ಎನ್ನುತ್ತೇನೆ. ಶಾಸಕನಾಗಿ ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ನಾನು ಬದ್ಧನಾಗಿರುತ್ತೇನೆ ಎಂದರು.
Published by:G Hareeshkumar
First published: