• Home
  • »
  • News
  • »
  • district
  • »
  • Sira By Election : ಉಪಚುನಾವಣೆಗೆ ಮುನ್ನವೇ ಕಾವೇರಿದ ರಾಜಕೀಯ; ಶಿರಾ ಕ್ಷೇತ್ರದಲ್ಲಿ ಖಾತೆ ತೆರೆಯಲು ಬಿಜೆಪಿ ಸಿದ್ಧತೆ

Sira By Election : ಉಪಚುನಾವಣೆಗೆ ಮುನ್ನವೇ ಕಾವೇರಿದ ರಾಜಕೀಯ; ಶಿರಾ ಕ್ಷೇತ್ರದಲ್ಲಿ ಖಾತೆ ತೆರೆಯಲು ಬಿಜೆಪಿ ಸಿದ್ಧತೆ

ಶಿರಾ ಪಟ್ಟಣ

ಶಿರಾ ಪಟ್ಟಣ

ಉಪ ಚುನಾವಣೆ ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರ ಈಗ ಹಣ ಬಿಡುಗಡೆ ಮಾಡುತ್ತಿರುವುದು ಚುನಾವಣೆ ತಂತ್ರ ಹೊರತು ಜನರ ಮೇಲಿನ ಕಾಳಜಿ ಅಲ್ಲಾ ಎಂದು ಪ್ರತಿಪಕ್ಷದವರು ಆರೋಪಿಸುತ್ತಿದ್ದಾರೆ.

  • Share this:

ತುಮಕೂರು(ಸೆಪ್ಟೆಂಬರ್ 09): ಶಿರಾ ಕ್ಷೇತ್ರದ ಉಪ ಚುನಾವಣೆ ಘೋಷಣೆ ಆಗುವ ಮುನ್ನವೇ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಆಡಳಿತರೂಢ ಬಿಜೆಪಿ ಕೆ.ಆರ್. ಪೇಟೆ ಕ್ಷೇತ್ರದಲ್ಲಿ ಖಾತೆ ತೆರೆದಂತೆ ಶಿರಾದಲ್ಲೂ ಖಾತೆ ತೆರೆಯಲು ಹವಣಿಸುತ್ತಿದೆ. ಇದರ ಭಾಗವಾಗಿ ಕ್ಷೇತ್ರಕ್ಕೆ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಮತದಾರರನ್ನು ಸೆಳೆಯುತ್ತಿದೆ. ಶಿರಾ ಕ್ಷೇತ್ರದ 50 ಹಳ್ಳಿಗಳ 60 ಕ್ಕೂ ಹೆಚ್ಚು ದೇವಸ್ಥಾನಗಳಿಗೆ ಸುಮಾರು 2.5 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿ ಚುನಾವಣಾ ತಂತ್ರವನ್ನು ಮಾಡುತ್ತಿದೆ. ಜೆಡಿಎಸ್ ಶಾಸಕ ಸತ್ಯನಾರಾಯಣ ನಿಧನದಿಂದಾಗಿ ತೆರವಾದ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಉಪ ಚುನಾವಣೆ ನಡೆಯುವ ಸಾಧ್ಯತೆ ಇದೆ. ಚುನಾವಣೆ ಘೋಷಣೆ ಆಗುವ ಮುನ್ನವೇ ರಾಜಕೀಯ ಪಕ್ಷಗಳು ಫೀಲ್ಡಿಗಿಳಿದು ಪಕ್ಷ ಸಂಘಟನೆ, ಪರೋಕ್ಷ ಪ್ರಚಾರ ಆರಂಭಿಸಿವೆ. ಆದರೆ, ಆಡಳಿತ ಪಕ್ಷ ಬಿಜೆಪಿ ಮಾತ್ರ ಶಿರಾ ಕ್ಷೇತ್ರದಲ್ಲಿ ಖಾತೆ ತೆರೆದು ಕೆ.ಆರ್.ಪೇಟೆಯಂತೆ ಇತಿಹಾಸ ನಿರ್ಮಿಸಲು ಹೊರಟಂತಿದೆ.


ಶಿರಾ ಕ್ಷೇತ್ರ ವ್ಯಾಪ್ತಿಯ 50 ಹಳ್ಳಿಗಳ 60 ಕ್ಕೂ ಹೆಚ್ಚು ದೇವಸ್ಥಾನಳಿಗೆ ಬರೊಬ್ಬರಿ 2.5 ಕೋಟಿ ರೂಪಾಯಿ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಈಗಾಗಲೇ ಮೊದಲ ಕಂತಿನಲ್ಲಿ 70 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ಇನ್ನುಳಿದ ಅನುದಾನ ದೊರೆತಿದ್ದು, ಇನ್ನೇನು ಬಿಡುಗಡೆ ಮಾಡಬೇಕಿದೆ. ಇದರ ಜೊತೆ ಊರು ಗೊಲ್ಲ ಜನಾಂಗ, ಕಾಡು ಗೊಲ್ಲ ಜನಾಂಗ ಈ ಭಾಗದಲ್ಲಿ ಹೆಚ್ಚು ಇದ್ದಾರೆ. ವಸತಿ ಇಲ್ಲದ ಈ ಜನಾಂಗದವರಿಗೆ ಸುಮಾರು 30 ಸಾವಿರಕ್ಕೂ ಹೆಚ್ಚು ಮನೆಗಳನ್ನು ಕೊಡಲು ಬಿಜೆಪಿ ನಿರ್ಧರಿಸಿದೆ. ಈ ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿದೆ.


ಇನ್ನೂ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಟಿ ಬಿ ಜಯಚಂದ್ರ ಕೂಡ ಕ್ಷೇತ್ರದಲ್ಲಿ ಓಡಾಟ ಮಾಡುತ್ತಿದ್ದಾರೆ. ಅವರು ಕಾರ್ಯಕರ್ತರ ಸಭೆಗಳನ್ನು ನಡೆಸುತ್ತಿದ್ದಾರೆ. ಉಪ ಚುನಾವಣೆ ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರ ಈಗ ಹಣ ಬಿಡುಗಡೆ ಮಾಡುತ್ತಿರುವುದು ಚುನಾವಣೆ ತಂತ್ರ ಹೊರತು ಜನರ ಮೇಲಿನ ಕಾಳಜಿ ಅಲ್ಲಾ ಎಂದು ಪ್ರತಿಪಕ್ಷದವರು ಆರೋಪಿಸುತ್ತಿದ್ದಾರೆ.


ಇದನ್ನೂ ಓದಿ : ಬಿಜೆಪಿ ದಲಿತ ವಿರೋಧಿ ಅಲ್ಲ ಎಂಬ ಸತ್ಯ ಜನರಿಗೆ ಅರಿವಾಗಿದೆ ; ಛಲವಾದಿ ನಾರಾಯಣಸ್ವಾಮಿ


ಸರ್ಕಾರ ಬಂದು ಒಂದು ವರ್ಷ ಆಗಿದೆ. ಯಾವತ್ತೂ ಸರ್ಕಾರಕ್ಕೆ ಶಿರಾ ಕ್ಷೆತ್ರ ಕಂಡಿರಲಿಲ್ಲ. ಏಕಾಏಕಿ ಸರ್ಕಾರಕ್ಕೆ ಶಿರಾ ಕ್ಷೇತ್ರದ ಮೇಲೆ ಪ್ರೀತಿ ಹುಟ್ಟಿದ್ದು, ಚುನಾವಣೆ ತಂತ್ರ. ಈ ತಂತ್ರದಿಂದ ತಾವು ಗೆಲ್ಲುತ್ತೇವೆ ಎಂಬ ಭ್ರಮೆ ಬಿಜೆಪಿಯವರಿಗೆ ಬೇಡ ಎಂದು ಮಾಜಿ ಸಚಿವ ಟಿ ಬಿ ಜಯಚಂದ್ರ ತಿರುಗೇಟು ನೀಡಿದ್ದಾರೆ.


ಒಟ್ಟಾರೆ ಉಪ ಚುನಾವಣೆ ಘೋಷಣೆ ಮುನ್ನವೇ ಕಾವು ಜೋರಾಗಿದೆ. ಬಿಜೆಪಿ ಅನುದಾನ ಬಿಡುಗಡೆ ಮಾಡುವ ದಾಳ ಬೀಸಿದ್ರೆ ಕಾಂಗ್ರೆಸ್ ನ ಮಾಜಿ ಸಚಿವ ಟಿಬಿ ಜಯಚಂದ್ರ ಕೊನೆ ಚುನಾವಣೆ ಎನ್ನುವ ತಂತ್ರವನ್ನು ಇಟ್ಟುಕೊಂಡಿದ್ದಾರೆ. ಇನ್ನೊಂದೆಡೆ ಜೆಡಿಎಸ್ ಅನುಕಂಪದ ಆಧಾರದ ಮೇಲೆ ಮತ ಕೇಳಲು ಅಣಿಯಾಗುತ್ತಿದೆ.

Published by:G Hareeshkumar
First published: