ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಜೂ.15 ರಂದು ಕೋರ್​ ಕಮಿಟಿ ಸಭೆ : ಸಚಿವ ಈಶ್ವರಪ್ಪ

ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ 9 ಸ್ಥಾನ ದೊರೆಯಲಿದೆ. 5 ಸ್ಥಾನ ನಾಮನಿರ್ದೇಶನದ ಮೂಲಕ ಆಯ್ಕೆಯಾದರೇ ಉಳಿದ 4 ಸ್ಥಾನ ಚುನಾವಣೆ ಮೂಲಕ ಬಿಜೆಪಿಗೆ ಸಿಗುತ್ತದೆ

ಸಚಿವ ಕೆ ಎಸ್ ಈಶ್ವರಪ್ಪ

ಸಚಿವ ಕೆ ಎಸ್ ಈಶ್ವರಪ್ಪ

  • Share this:
ಶಿವಮೊಗ್ಗ(ಜೂ.13): ಇದೇ ತಿಂಗಳು 15 ರಂದು ಸಂಜೆ ನಾಲ್ಕು ಗಂಟೆಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಅಲ್ಲಿ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಆಯ್ಕೆ ಬಗ್ಗೆ ತಿರ್ಮಾನ ಕೈಗೊಳ್ಳಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ 9 ಸ್ಥಾನ ದೊರೆಯಲಿದೆ. 5 ಸ್ಥಾನ ನಾಮ ನಿರ್ದೇಶನದ ಮೂಲಕ ಆಯ್ಕೆಯಾದರೇ ಉಳಿದ 4 ಸ್ಥಾನ ಚುನಾವಣೆ ಮೂಲಕ ಬಿಜೆಪಿಗೆ ಸಿಗುತ್ತದೆ ಎಂದು ತಿಳಿಸಿದರು.

ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಸಮಯದಲ್ಲಿ ಕೇಂದ್ರ ನಾಯಕರು ಪಕ್ಷದ ಕಾರ್ಯಕರ್ತರಿಗೆ ಒತ್ತು ನೀಡಿದ್ದರು. ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎಂಬ ಅಂಶವನ್ನು ನೇರವಾಗಿ ಅವರ ಆದೇಶದಲ್ಲಿ ನಾವು ಕಂಡಿದ್ದೇವೆ ಎಂದು ಈಶ್ವರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಯಾರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವುದಕ್ಕೆ ಸಹಕಾರ ಮಾಡಿದ್ದರು. ಅವರನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬ ಅಂಶ ಸಹ ಇದೆ. ಕಾಂಗ್ರೆಸ್, ಜೆಡಿಎಸ್ ನಿಂದ ಯಾರು ಬಿಜೆಪಿಗೆ ಬಂದಿದ್ದರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವುದಕ್ಕೆ ಸಹಕರಿಸಿದ್ದರು ಅವರನ್ನು ಪರಿಗಣನೆ ಮಾಡಬೇಕಿದೆ. ಜೊತೆಗೆ ಪಕ್ಷದ ಕಾರ್ಯಕರ್ತರು ಸಹ ಇದ್ದು, ಅವರನ್ನು ಸಹ ಪರಿಗಣನೆ ಮಾಡಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ : ಟಿಕ್ ಟಾಕ್ ಖಯಾಲಿಯಲ್ಲಿ ವನ್ಯಜೀವಿಗಳ ಬೇಟೆ - ಅರಣ್ಯ ಇಲಾಖೆ ಸಿಬ್ಬಂದಿಯಿಂದ ಓರ್ವನ ಬಂಧನ

ಇನ್ನು  ಎಂಟಿಬಿ ನಾಗರಾಜ್, ಹೆಚ್ ವಿಶ್ವನಾಥ್ ಹಾಗೂ ಶಂಕರ್ ಬಗ್ಗೆಯೂ ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ. ಜೊತೆಗೆ ಮುನಿರತ್ನ, ಪ್ರತಾಪಗೌಡ ಅವರ ಹೆಸರುಗಳು ಸಹ ಕೇಳಿ ಬರುತ್ತಿದೆ. ಅಂತಿಮ ತಿರ್ಮಾನ ಕೋರ್ ಕಮಿಟಿಯಲ್ಲಿ ನಿರ್ಧಾರಿಸಲಾಗುತ್ತದೆ ಎಂದರು.

ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಪಕ್ಷದ ಮುಖಂಡರು ಕುಳಿತು ಚರ್ಚೆ ಮಾಡಿ ತಿರ್ಮಾನ ಮಾಡುತ್ತಾರೆ. ನಂತರ ರಾಜ್ಯ ಕಮಿಟಿಯಲ್ಲಿ ತಿರ್ಮಾನ ಮಾಡಲಾದ ಪಟ್ಟಿಯನ್ನು ಕೇಂದ್ರ ಸಮಿತಿಗೆ ಕಳುಹಿಸಿಕೊಡುತ್ತೇವೆ ಎಂಬ ಮಾಹಿತಿಯನ್ನು ಸಚಿವ ಈಶ್ವರಪ್ಪ ನೀಡಿದರು.
First published: