ಜನ ಉಗಿಯುವ ಮುನ್ನ ರಾಜೀನಾಮೆ ನೀಡುವುದು ಉತ್ತಮ; ವೈರಲ್ ಆಗುತ್ತಿದೆ ಬಿಜೆಪಿ ನಾಯಕನ ರಾಜೀನಾಮೆ ಪತ್ರ

ಅಂದಹಾಗೆ ಇಂತಹ ಹೇಳಿಕೆಯೊಂದಿಗೆ ರಾಜೀನಾಮೆ ನೀಡಿರುವ ನಾಯಕ ಶಿವಮೊಗ್ಗ ಜಿಲ್ಲೆಯ ಬಿಜೆಪಿ ಬೂತ್‌ ಸಮಿತಿ ಅಧ್ಯಕ್ಷರಾಗಿರುವ ಎಲ್​ ಶೇಖರ್​. ಇವರು ತಮ್ಮ ಪಕ್ಷದ ಮುಖಂಡರಿಗೆ ನೀಡಿದ ರಾಜೀನಾಮೆ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಶಿವಮೊಗ್ಗ ಜಿಲ್ಲೆಯ ಬಿಜೆಪಿ ಬೂತ್‌ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಲ್​. ಶೇಖರ್.

ಶಿವಮೊಗ್ಗ ಜಿಲ್ಲೆಯ ಬಿಜೆಪಿ ಬೂತ್‌ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಲ್​. ಶೇಖರ್.

 • Share this:
  ಶಿವಮೊಗ್ಗ (ಆಗಸ್ಟ್​ 28); ಕೇಂದ್ರದಲ್ಲೂ ಬಿಜೆಪಿ (bjp) ಅಧಿಕಾರದಲ್ಲಿದೆ. ಇನ್ನೂ ಕರ್ನಾಟಕದಲ್ಲೂ ಸಹ ಬಿಜೆಪಿ ಪಕ್ಷವೇ ಅಧಿಕಾರದಲ್ಲಿದೆ. ಇಂತಹ ಸನ್ನಿವೇಶದಲ್ಲಿ ಯಾವ ನಾಯಕನೂ ಸಹ ಆಡಳಿತರೂಢ ಪಕ್ಷದ ಪ್ರಮುಖ ಹುದ್ದೆಗೆ ರಾಜೀನಾಮೆ ನೀಡುವ ನಿರ್ಥಾರಕ್ಕೆ ಮುಂದಾಗುವ ಉದಾಹರಣೆ ತೀರಾ ವಿರಳ. ಆದರೆ, ಇಲ್ಲೊಬ್ಬ ಬಿಜೆಪಿ ನಾಯಕ ಬಿಜೆಪಿ ಪಕ್ಷ ಸರಿಯಾಗಿ ಆಡಳಿತ ನಿರ್ವಹಿಸುತ್ತಿಲ್ಲ. ದಿನೋಪ ಯೋಗಿ ವಸ್ತುಗಳ ಬೆಲೆ ಏರಿಕೆಗೆ ಬಿಜೆಪಿಯೇ ಕಾರಣ. ಹೀಗಾಗಿ ಜನರೇ ಮುಂದಾಗಿ ನಮ್ಮನ್ನು ಉಗಿಯುವ ಮುನ್ನ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ" ಎಂದು ಆತ ಹೇಳಿರುವ ಹೇಳಿಕೆ ಮತ್ತು ರಾಜೀನಾಮೆ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ವೈರಲ್ ಆಗುತ್ತಿದೆ. ಅಲ್ಲದೆ, ರಾಜಕೀಯ ವಠಾರಗಳಲ್ಲೂ ಸಾಕಷ್ಟು ಚರ್ಚೆಗೆ ಒಳಗಾಗುತ್ತಿದೆ.

  ಅಂದಹಾಗೆ ಇಂತಹ ಹೇಳಿಕೆಯೊಂದಿಗೆ ರಾಜೀನಾಮೆ ನೀಡಿರುವ ನಾಯಕ ಶಿವಮೊಗ್ಗ ಜಿಲ್ಲೆಯ ಬಿಜೆಪಿ ಬೂತ್‌ ಸಮಿತಿ ಅಧ್ಯಕ್ಷರಾಗಿರುವ ಎಲ್​ ಶೇಖರ್​. ಇವರು ತಮ್ಮ ಪಕ್ಷದ ಮುಖಂಡರಿಗೆ ನೀಡಿದ ರಾಜೀನಾಮೆ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಮ್ಮ ಹುದ್ದೆಯಿಂದ ಕೆಳಗಿಳಿಯಲು ಅವರು ನೀಡಿರುವ ಕಾರಣಗಳು ಸಾಕಷ್ಟು ಗಮನ ಸೆಳೆದಿದ್ದು, ಭಾರಿ ಚರ್ಚೆಯಾಗುತ್ತಿದೆ.

  ಆಗಸ್ಟ್‌ 25 ರಂದು ಶಿವಮೊಗ್ಗದ ಅಶೋಕನಗರದ ವಾರ್ಡ್ ಅಧ್ಯಕ್ಷರಾಗಿರುವ ಎಲ್. ಶೇಖರ್ ಅವರ ಮನೆಗೆ ತೆರಳಿದ್ದ ಬಿಜೆಪಿ ಮುಖಂಡರು ಅವರಿಗೆ ನಾಮಫಲಕವನ್ನು ವಿತರಿಸುವುದಿದ್ದರು. ಆದರೆ ಈ ಸಮಯದಲ್ಲಿ ನಾಮಫಲಕವನ್ನು ತಿರಸ್ಕಾರ ಮಾಡುವುದಲ್ಲದೆ, ನಾಮಫಲಕ ನೀಡಲು ಬಂದವರಿಗೆ ಸ್ಥಳದಲ್ಲಿಯೇ ರಾಜೀನಾಮೆ ಪತ್ರವನ್ನು ಶೇಖರ್ ನೀಡಿದ್ದಾರೆ.

  ಪತ್ರದಲ್ಲಿ ಅವರು, "ಬಿಜೆಪಿ ಜನಪರವಾಗಿ ಕಾರ್ಯ ನಿರ್ವಹಿಸಲು ವಿಫಲವಾಗಿದೆ. ಜನರೇ ಹೇಳುವಂತೆ ಅಗತ್ಯ ವಸ್ತುಗಳಾದ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ದವಸಧಾನ್ಯ, ವಿದ್ಯುತ್‌ ದರಗಳು ದುಪ್ಪಟ್ಟಾಗಿದ್ದು, ಜನರು ಜೀವನ ನಡೆಸುವುದೇ ದುಸ್ತರವಾಗಿದೆ" ಎಂದು ಹೇಳಿದ್ದಾರೆ.

  ಇದನ್ನೂ ಓದಿ: Mysuru Gang Rape Case: ಮೈಸೂರು ಗ್ಯಾಂಗ್​ ರೇಪ್​ ಪ್ರಕರಣ; ಐವರು ಆರೋಪಿಗಳು ಅರೆಸ್ಟ್, ಮಾಹಿತಿ ಬಿಚ್ಚಿಟ್ಟ ಡಿಜಿಪಿ

  "ಪರಿಸ್ಥಿತಿ ಹೀಗಿರುವಾಗ ಬಿಜೆಪಿ ಪರವಾಗಿ ಮಾತನಾಡಲು ಆಗದೆ ಮೌನವಾಗಿರುವೆ. ಪ್ರಸ್ತುತ, ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಪಾಲಿಕೆಯಲ್ಲೂ ಬಿಜೆಪಿ ಪಕ್ಷವೆ ಅಧಿಕಾರ ಹಿಡಿದಿದೆ. ಆದರೆ ಬಿಜೆಪಿ ಪರವಾಗಿ ಮಾತನಾಡಲು ಹೋದರೆ ಜನರು ಉಗಿಯೊವುದೊಂದೆ ಬಾಕಿ. ಆದ್ದರಿಂದ ಮನನೊಂದು ಬೂತ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ" ಎಂದು ಶೇಖರ್‌ ಪತ್ರದಲ್ಲಿ ಬರೆದಿದ್ದಾರೆ. ಶಿವಮೊಗ್ಗ ಬಿಜೆಪಿ ತನ್ನ ಪ್ರತಿ ಬೂತ್ ಅಧ್ಯಕ್ಷರಿಗೆ ಪಕ್ಷದ ಚಿಹ್ನೆಯೊಂದಿಗೆ ನಾಮ ಫಲಕಗಳನ್ನು ವಿತರಿಸುತ್ತಿದೆ. ಈ ಸಮಯದಲ್ಲೆ ರಾಜೀನಾಮೆ ಘಟನೆ ನಡೆದಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: