• Home
  • »
  • News
  • »
  • district
  • »
  • ಕೋಲಾರ ಜಿ.ಪಂ​​ ಸ್ಥಾಯಿ ಸಮಿತಿ ಚುನಾವಣೆ: ಅಧಿಕಾರಕ್ಕಾಗಿ ಕಾಂಗ್ರೆಸ್​​, ಬಿಜೆಪಿ, ಜೆಡಿಎಸ್​​ ಹೊಂದಾಣಿಕೆ

ಕೋಲಾರ ಜಿ.ಪಂ​​ ಸ್ಥಾಯಿ ಸಮಿತಿ ಚುನಾವಣೆ: ಅಧಿಕಾರಕ್ಕಾಗಿ ಕಾಂಗ್ರೆಸ್​​, ಬಿಜೆಪಿ, ಜೆಡಿಎಸ್​​ ಹೊಂದಾಣಿಕೆ

ಕೋಲಾರ ಜಿ.ಪಂ ಸ್ಥಾಯಿ ಸಮಿತಿ ಚುನಾವಣೆ

ಕೋಲಾರ ಜಿ.ಪಂ ಸ್ಥಾಯಿ ಸಮಿತಿ ಚುನಾವಣೆ

ಒಟ್ಟಿನಲ್ಲಿ ರಾಜ್ಯ ರಾಜಕಾರಣದಲ್ಲಿ ಅಧಿಕಾರಕ್ಕಾಗಿ ಸೆಣಸಾಟ ನಡೆಸಿ ಚುನಾವಣೆ ಫಲಿತಾಂಶ ನಂತರ ಒಂದಾಗಿದ್ದನ್ನ ನಾವು ನೋಡಿದ್ದೇವೆ. ಇದೀಗ ಜಿಲ್ಲಾ ಮಟ್ಟದಲ್ಲು ಅಧಿಕಾರದ ಚುಕ್ಕಾಣಿ ಹಿಡಿಯಲು ಮೂರು ಪಕ್ಷಗಳ ಸದಸ್ಯರು ಒಂದಾಗಿದ್ದು, ರಾಜಕೀಯದಲ್ಲಿ ಎಂದು ಏನು ಬೇಕಾದರೂ ಆಗಬಹುದು ಎಂಬುದನ್ನ ತೋರಿಸಿಕೊಟ್ಟಂತಿದೆ.

ಮುಂದೆ ಓದಿ ...
  • Share this:

ಕೋಲಾರ(ಜೂ.16): ತೀವ್ರ ಕೊರೋನಾ ನಡುವೆಯೇ ಬಯಲುಸೀಮೆ ಕೋಲಾರ ಜಿಲ್ಲೆಯಲ್ಲಿ ರಾಜಕೀಯ ಗರಿಗೆದರಿದೆ. ಜಿಲ್ಲಾ ಪಂಚಾಯತಿಯ ಉಳಿದ 10 ತಿಂಗಳ ಅವಧಿಗೆ ನಡೆದ ವಿವಿಧ ಸ್ಥಾಯಿ ಸಮಿತಿಗಳ ಚುನಾವಣೆಯಲ್ಲಿ,  ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಅಧಿಕಾರ ಹಂಚಿಕೊಂಡಿದೆ. ಅಧಿಕಾರಕ್ಕಾಗಿ ರಾಜಕೀಯ ವೈಷ್ಯಮ್ಯ ಮರೆತು ಮೂರು ಪಕ್ಷಗಳು ಒಂದಾಗಿವೆ. 


ಜಿಲ್ಲಾ ಪಂಚಾಯತ್​​​ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಕಾಂಗ್ರೆಸ್ ಪಕ್ಷದ ಅರುಣ್ ಪ್ರಸಾದ್, ಶಿಕ್ಷಣ ಮತ್ತು ಆರೋಗ್ಯ ಸಮಿತಿಗೆ  ಜೆಡಿಎಸ್​​ನ ಚಿನ್ನಸ್ವಾಮಿಗೌಡ, ಕೃಷಿ ಮತ್ತು ಕೈಗಾರಿಕಾ ವಿಭಾಗಕ್ಕೆ ಬಿಜೆಪಿ ಸದಸ್ಯೆ ನಿರ್ಮಲಾ ಅವಿರೋಧವಾಗಿ ಅಧ್ಯಕ್ಷ್ಯರಾಗಿ ಆಯ್ಕೆಯಾಗಿದ್ದಾರೆ. ಮೊದಲೇ ಮೂರು ಪಕ್ಷದ ತಲಾ ಒಬ್ಬರಿಗೆ ಸ್ಥಾಯಿ ಸಮಿತಿ ವಿವಿಧ ವಿಭಾಗಗಳ ಅಧ್ಯಕ್ಷ್ಯ ಸ್ಥಾನ ಹಂಚಿಕೆ ಸಂಬಂಧ ಚರ್ಚೆ ನಡೆಸಿಯೇ ಈಗ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಬಿಜೆಪಿ ಒಂದು ಬಣಕ್ಕೆ  ಅಧಿಕಾರ, ಸದಸ್ಯ ಬಿವಿ ಮಹೇಶ್​ಗೆ ನಿರಾಸೆ


ಜಿಲ್ಲಾ ಪಂಚಾಯತ್​​ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಮೂರು ಪಕ್ಷಗಳ ಹೊಂದಾಣಿಕೆಯಿಂದ ಒಮ್ಮತದಿಂದ ಅವರೋಧ ಆಯ್ಕೆ ನಡೆದಿದೆ ಎಂದು ಜಿಲ್ಲಾ ಪಂಚಾಯತ್​​ ಅಧ್ಯಕ್ಷ್ಯ ಸಿಎಸ್ ವೆಂಕಟೇಶ್ ತಿಳಿಸಿದ್ದಾರೆ. ಆದರೆ ಬಂಗಾರಪೇಟೆಯ ಬಿಜೆಪಿಯ ಸದಸ್ಯ ಬಿವಿ ಮಹೇಶ್ ಸ್ಥಾಯಿ ಸಮಿತಿಗೆ ಅವಕಾಶ ನೀಡುವಂತೆ ಕೇಳಿದ್ದರು, ಇದಕ್ಕೆ ಸಮ್ಮತಿ ಸಿಕ್ಕಿಲ್ಲ, ಕೇವಲ ಬೇತಮಂಗಲ ಬಿಜೆಪಿ ಸದಸ್ಯೆ ನಿರ್ಮಲಾರನ್ನು ಆಯ್ಕೆ ಮಾಡುವಂತೆ ಒಮ್ಮತಕ್ಕೆ ಬರಲಾಯಿತು. ಈ ಮೂಲಕ ಮಾಜಿ ಶಾಸಕ ವರ್ತೂರು ಪ್ರಕಾಶ್ ಆಪ್ತರಾಗಿದ್ದ ಅಂಬರೀಶ್ ತನ್ನ ಪತ್ನಿ ನಿರ್ಮಲಾ ಅವರಿಗೆ ಸ್ಥಾನಮಾನ ಕೊಡಿಸಲು ಯಶಸ್ವಿಯಾಗಿದ್ದಾರೆ.


ಇದನ್ನೂ ಓದಿ: ಒಬ್ಬ ವ್ಯಕ್ತಿಯಿಂದ ಒಂದೇ ಗ್ರಾಮದ 23 ಜನರಿಗೆ ಕೊರೋನಾ ಸೋಂಕು!


ಇನ್ನು, ಈ ಹಿಂದೆ ಕಾಂಗ್ರೆಸ್​ನ ಸಿಎಸ್ ವೆಂಕಟೇಶ್ ಅವರು ಅಧ್ಯಕ್ಷ್ಯ ಚುನಾವಣೆಗೆ ಪೈಪೋಟಿ ನಡೆಸಿದಾಗ ಬಿಜೆಪಿ ಸದಸ್ಯರು ಬಹಿರಂಗ ಬೆಂಬಲ‌ ನೀಡಿದ್ದರು. ಜೊತೆಗೆ ಮೊದಲ ಅವಧಿಯಲ್ಲಿ ಅಧ್ಯಕ್ಷ್ಯರಾಗಿದ್ದ ಗೀತಮ್ಮ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಸದಸ್ಯರು  ಕಾಂಗ್ರೆಸ್ ಜೆಡಿಎಸ್​​ಗೆ ಬೆಂಬಲ ನೀಡಿದ್ದರು. ಇತ್ತ ಕಡೆವಯರೆಗೂ ಅಧ್ಯಕ್ಷ್ಯ ಸ್ಥಾನ ಪಡೆಯಲು ಕಸರತ್ತು ನಡೆಸಿದ್ದ ಬಿ.ವಿ ಮಹೇಶ್​​ಗೆ ಮಾತ್ರ ನಿರಾಸಿಯಾಗಿರುವುದು ಸುಳ್ಳಲ್ಲ.


ಒಟ್ಟಿನಲ್ಲಿ ರಾಜ್ಯ ರಾಜಕಾರಣದಲ್ಲಿ ಅಧಿಕಾರಕ್ಕಾಗಿ ಸೆಣಸಾಟ ನಡೆಸಿ ಚುನಾವಣೆ ಫಲಿತಾಂಶ ನಂತರ ಒಂದಾಗಿದ್ದನ್ನ ನಾವು ನೋಡಿದ್ದೇವೆ. ಇದೀಗ ಜಿಲ್ಲಾ ಮಟ್ಟದಲ್ಲು ಅಧಿಕಾರದ ಚುಕ್ಕಾಣಿ ಹಿಡಿಯಲು ಮೂರು ಪಕ್ಷಗಳ ಸದಸ್ಯರು ಒಂದಾಗಿದ್ದು, ರಾಜಕೀಯದಲ್ಲಿ ಎಂದು ಏನು ಬೇಕಾದರೂ ಆಗಬಹುದು ಎಂಬುದನ್ನ ತೋರಿಸಿಕೊಟ್ಟಂತಿದೆ.

Published by:Ganesh Nachikethu
First published: