Cauvery Nisargadhama: ಕಾವೇರಿ ನಿಸರ್ಗಧಾಮದ ಸೊಬಗು ಇಮ್ಮಡಿಗೊಳಿಸಿದ ಪಕ್ಷಿಧಾಮ; ಮೈ ಮೇಲೆ ಬಂದು ಕೂರುವ ಗಿಳಿಗಳು!

ತಲಕಾವೇರಿ ತೀರ್ಥೋದ್ಭವ ಹಿನ್ನೆಲೆ ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಮಡಿಕೇರಿ ನಗರದ ವ್ಯಾಪ್ತಿಯಲ್ಲಿ ಇರುವ ಪ್ರವಾಸಿ ತಾಣಗಳನ್ನು ಬಂದ್ ಮಾಡಿ ಆದೇಶ ಮಾಡಿದೆ. ಆದರೆ ಪ್ರವಾಸಿಗರು, ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳೆಲ್ಲವೂ ಬಂದ್ ಆಗಿವೆ ಎಂದು ತಪ್ಪಾಗಿ ಭಾವಿಸಿ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಕ್ಕೂ ಬರುವುದನ್ನು ಕಡಿಮೆ ಮಾಡಿದ್ದಾರೆ.

ನಿಸರ್ಗಧಾಮದಲ್ಲಿ ಕೈಮೇಲೆ ಕುಳಿತಿರುವ ಗಿಳಿ

ನಿಸರ್ಗಧಾಮದಲ್ಲಿ ಕೈಮೇಲೆ ಕುಳಿತಿರುವ ಗಿಳಿ

  • Share this:
ಕೊಡಗು: ಕೊಡಗು ಜಿಲ್ಲೆ ಪ್ರವಾಸಿ ತಾಣಗಳ (Kodagu District Tourist Spot) ತವರೂರು. ಈ ಪ್ರವಾಸಿತಾಣಗಳಲ್ಲಿ ಒಂದಾದ ಕಾವೇರಿ ನಿಸರ್ಗಧಾಮದಲ್ಲಿ (Cauvery Nisargadhama) ಹೊಸದಾಗಿ ನಿರ್ಮಾಣಗೊಂಡಿರುವ ಪಕ್ಷಿಧಾಮ  (Bird Sanctuary) ಮತ್ತು ಸಾಹಸ ಕ್ರೀಡೆಗಳು (Adventure Games) ನಿಸರ್ಗಧಾಮವನ್ನು ಮತ್ತಷ್ಟು ಆಕರ್ಷಣೆಗೊಳಿಸಿವೆ.  ಹೌದು ನೂರಾರು ವರ್ಷಗಳಿಂದ ಬೆಳೆದಿದ್ದ ಬಿದಿರು ಕಳೆದ 10 ವರ್ಷಗಳ ಹಿಂದೆ ಕಟ್ಟೆರೋಗ ಬಂದು ಬುಡಸಮೇತ ಒಣಗಿ ಹೋಗಿತ್ತು. ಆದರೆ ಕಟ್ಟೆರೋಗ ಬಂದು ಒಣಗಿಹೋದ ವರ್ಷದಲ್ಲಿ ಹೊಸದಾಗಿ ಬೆಳೆದ ಬಿದಿರು ಈಗ ಇಡೀ ನಿಸರ್ಗಧಾಮವನ್ನು ಆವರಿಸಿ ಹಚ್ಚಹಸಿರಿನ ದಟ್ಟಾರಣ್ಯದಂತೆ ಮಾಡಿದೆ. ಮತ್ತೊಂದೆಡೆ ಅರಣ್ಯ ಇಲಾಖೆ ಖಾಸಗಿಯವರ ಸಹಭಾಗಿತ್ವದಲ್ಲಿ ಆರಂಭಿಸಿರುವ ಪಕ್ಷಿ ಕೇಂದ್ರ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಹೊಸದಾಗಿ ಪಕ್ಷಿ ಕೇಂದ್ರವನ್ನು ಮಾಡಲಾಗಿದ್ದು ವಿದೇಶಿ ತಳಿಗಳ ನೂರಾರು ಪಕ್ಷಿಗಳ ಕಲರವ ಪ್ರವಾಸಿಗರ ಮೈಮನಗಳಿಗೆ ಮುದ ನೀಡುತ್ತಿದೆ. ಬೇರೆಡೆ ಪಕ್ಷಿಧಾಮಗಳಲ್ಲಿ ನೀವು ದೂರದಿಂದ ಪಕ್ಷಿಗಳನ್ನು ನೋಡಿದರೆ, ನಿಸರ್ಗಧಾಮದಲ್ಲಿ ನೀವು ನೇರವಾಗಿ ಪಕ್ಷಗಳಿಗೆ ಕಾಳುಗಳನ್ನು ನೀಡಬಹುದು. ನೀವು ಪಕ್ಷಿ ಕೇಂದ್ರಗಳ ಒಳಗೆ ಹೋಗುತ್ತಿದ್ದಂತೆ ನಿಮ್ಮ ಮೈಮೇಲೆ ಬಂದು ಕುಳಿತುಕೊಳ್ಳುವ ಕಲರ್ ಫುಲ್ಲಾದ ಮುದ್ದಾದ ಗಿಳಿಗಳು ಹಾರಿ ಬಂದು ನಿಮ್ಮ ಮೈಮೇಲೆಲ್ಲಾ ಕುಳಿತುಕೊಂಡು ಕಾಳುಗಳಿಗಾಗಿ ಹಾತೊರೆಯುತ್ತವೆ. ಆ ಕ್ಷಣದಲ್ಲಿ ಪ್ರವಾಸಿಗರಿಗೆ ಆಗುವ ಸಂತಸ ಅಷ್ಟಿಷ್ಟಲ್ಲ.

ಸಾಹಸ ಕ್ರೀಡೆಗಳಿಂದ ಮತ್ತಷ್ಟು ಮುದ

ಜೊತೆಗೆ ಹೊಸದಾಗಿ ಮಾಡಿರುವ ಅಡ್ವೆಂಚರ್ಸ್ ಗೇಮುಗಳು ಮಕ್ಕಳು, ದೊಡ್ಡವರೆನ್ನದೆ ಎಲ್ಲರನ್ನೂ ಅತ್ಯಾಕರ್ಷಣೆಗೊಳಿಸುತ್ತಿವೆ. ಈ ಸಾಹಸಮಯ ಕ್ರೀಡೆಗಳಲ್ಲಿ ಭಾಗವಹಿಸುವ ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. ಇದರ ಜೊತೆಗೆ ನಿಸರ್ಗಧಾಮದಲ್ಲಿ ಇರುವ ಕೊಡವ ಮತ್ತು ಅರೆಗೌಡ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತಿರುವ ಕಲಾಕೃತಿಗಳು ನೋಡುಗರ ಮನಸೂರೆಗೊಳ್ಳುತ್ತಿವೆ. ಅಲ್ಲಿರುವ ಕೋಲಾಟ, ಕೊಡವತ್ತಿಯರ ನೃತ್ಯ ಮತ್ತು ಆದಿವಾಸಿಗಳ ಜೀವನ ಬಿಂಬಿಸುವ ಕಾಡಿನ ಮಕ್ಕಳ ಜೀವನ ಆನಾವರಣದ ಕಲಾಕೃತಿಗಳು ನೋಡುಗರನ್ನು ಮತ್ತಷ್ಟು ಆಕರ್ಷಿಸುತ್ತಿವೆ. ಇನ್ನು ಜಿಂಕೆ ವನ, ಮಿಯಾವಕಿ ಫಾರೆಸ್ಟ್ ಪ್ರವಾಸಿಗರಿಗೆ ಮುದ ನೀಡುತ್ತಿವೆ.

ಜಿಲ್ಲಾಡಳಿತ ಆದೇಶ ತಪ್ಪಾಗಿ ಅರ್ಥೈಸಿಕೊಂಡಿರುವ ಪ್ರವಾಸಿಗರು

ಒಟ್ಟಿನಲ್ಲಿ ಕೊಡಗಿನ ಪ್ರಮುಖ ಪ್ರವಾಸಿ ಕೇಂದ್ರ ನಿಸರ್ಗಧಾಮಕ್ಕೆ ಹೊಸದಾಗಿ ನಿರ್ಮಾಣವಾಗಿರುವ ಪಕ್ಷಿಕೇಂದ್ರ ಮತ್ತು ಅಡ್ವೆಂಚರ್ಸ್ ಗೇಮುಗಳು ಪ್ರವಾಸಿಗರನ್ನು ಮತ್ತಷ್ಟು ಸಂತಸಗೊಳಿಸುತ್ತಿವೆ. ವಿಪರ್ಯಾಸವೆಂದರೆ ಮಡಿಕೇರಿ ದಸರಾ ಮತ್ತು ತಲಕಾವೇರಿ ತೀರ್ಥೋದ್ಭವ ಹಿನ್ನೆಲೆ ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಮಡಿಕೇರಿ ನಗರದ ವ್ಯಾಪ್ತಿಯಲ್ಲಿ ಇರುವ ಪ್ರವಾಸಿ ತಾಣಗಳನ್ನು ಬಂದ್ ಮಾಡಿ ಆದೇಶ ಮಾಡಿದೆ. ಆದರೆ ಪ್ರವಾಸಿಗರು, ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳೆಲ್ಲವೂ ಬಂದ್ ಆಗಿವೆ ಎಂದು ತಪ್ಪಾಗಿ ಭಾವಿಸಿ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಕ್ಕೂ ಬರುವುದನ್ನು ಕಡಿಮೆ ಮಾಡಿದ್ದಾರೆ. ಹೀಗಾಗಿ ಕೊಡಗಿನ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಒಂದಷ್ಟು ಪ್ರಮಾಣದಲ್ಲಿ ಕಡಿಮೆ ಆಗಿದೆ. ಮತ್ತೊಂದು ವಿಪರ್ಯಾಸವೆಂದರೆ ಬರುತ್ತಿರುವ ಪ್ರವಾಸಿಗರಲ್ಲಿ ಬಹುತೇಕರು ಮಾಸ್ಕ್ ಹಾಕದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಹೀಗಾಗಿ ಕೊಡಗಿನಲ್ಲಿ ಮತ್ತೆ ಕೋವಿಡ್ ಸೋಂಕಿನ ಪ್ರಮಾಣ ಜಾಸ್ತಿ ಆಗೋದಕ್ಕೆ ಕಾರಣ ಆಗಿ ಬಿಡುತ್ತಾ ಎನ್ನೋದು ಆತಂಕಕ್ಕೂ ಕಾರಣವಾಗಿದೆ.

ಇದನ್ನು ಓದಿ: Police Sale Ganja: ಸಿಎಂ ತವರು ಹುಬ್ಬಳ್ಳಿಯಲ್ಲಿ ಪೊಲೀಸರಿಂದಲೇ ಗಾಂಜಾ ಮಾರಾಟ ಆರೋಪ; ಪಿಐ ಸೇರಿ 7 ಸಿಬ್ಬಂದಿ ಅಮಾನತು!

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
Published by:HR Ramesh
First published: