ಸಂಚಾರಿ ಪೊಲೀಸರ ತಪಾಸಣೆ ವೇಳೆ ಬಿದ್ದು ಬೈಕ್ ಸವಾರ ಸಾವು: ರೊಚ್ಚಿಗೆದ್ದ ಜನರಿಂದ ಪೊಲೀಸರಿಗೆ ಹಿಗ್ಗಾಮುಗ್ಗ ಥಳಿತ!

ದೇವರಾಜ್ ಓಡಿಸುತ್ತಿದ್ದ ಹಿರೋ ಹೋಂಡಾ ಸ್ಪೇಂಡರ್ ವಾಹನದ ಮೇಲೆ ಯಾವುದೇ ನಿಯಮ ಉಲ್ಲಂಘನೆ ಕೇಸ್‌ಗಳು ದಾಖಲಾಗಿರಲಿಲ್ಲ. ಕರ್ನಾಟಕ ಸರ್ಕಾರದ ಅಧಿಕೃತ ಆ್ಯಪ್ ಕರ್ನಾಟಕ ಒನ್‌ ವೆಬ್‌ಸೈಟ್‌ನಲ್ಲಿ ಬಿತ್ತರವಾದಂತೆ ಆ ವಾಹನ ಸಂಖ್ಯೆಯ ಮೇಲೆ ಯಾವುದೇ ಕೇಸ್ ಇಲ್ಲದಿದ್ದರೂ, ಹಾಗೂ ಹೆಲ್ಮೆಟ್ ಧರಿಸಿದ್ದರೂ ಸಹ ಈ ಅವಘಢಕ್ಕೆ ಸಾವನ್ನಪ್ಪಿದ್ದು ಈ ಸಾವಿಗೆ ಹೊಣೆ ಯಾರು ಅನ್ನೋ ಚರ್ಚೆ ಆರಂಭವಾಗಿದೆ.

ರೊಚ್ಚಿಗೆದ್ದ ಸಾರ್ವಜನಿಕರು ಪೊಲೀಸ್ ವಾಹನ ಜಖಂಗೊಳಿಸಿರುವುದು.

ರೊಚ್ಚಿಗೆದ್ದ ಸಾರ್ವಜನಿಕರು ಪೊಲೀಸ್ ವಾಹನ ಜಖಂಗೊಳಿಸಿರುವುದು.

  • Share this:
ಮೈಸೂರು: ಸಂಚಾರಿ ಪೊಲೀಸರ ತಪಾಸಣೆ ವೇಳೆ ಅಪಘಾತ ಸಂಭವಿಸಿ, ಬೈಕ್ ಸವಾರನೊಬ್ಬ ಆಯತಪ್ಪಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿ ಘಟನೆ ಮೈಸೂರಿನಲ್ಲಿ ನಡೆದಿದೆ. ಘಟನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು, ಪೊಲೀಸರಿಗೆ ಬಟ್ಟೆ ಹರಿದು ಥಳಿಸಿದ್ದು, ಸಾರ್ವಜನಿಕರಿಂದ ಧರ್ಮದೇಟು ತಿಂದ ಇಬ್ಬರು ಪೊಲೀಸರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೈಸೂರಿನ ವಿ.ವಿ.ಪುರಂ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ಮಾಡುವಾಗ ಈ ಘಟನೆ ಸಂಭವಿಸಿದ್ದು, ಹಿನಕಲ್ ರಿಂಗ್ ರಸ್ತೆಯಲ್ಲಿ ತಪಾಸಣೆ ನಡೆಸುತ್ತಿದ್ದ ಸಂಚಾರಿ ಪೊಲೀಸರು, ವಾಹನಗಳನ್ನು ತಡೆದು ದಾಖಲಾತಿ ಪರಿಶೀಲಿಸುತ್ತಿದ್ದರು. ಈ ವೇಳೆ ಬೈಕ್ ಸವಾರನನ್ನು ತಪಾಸಣೆ ನಡೆಸಲು ಮುಂದಾದಾಗ ಬೈಕ್ ಸವಾರ, ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ತಕ್ಷಣ ಹಿಂಬಂದಿಯಿಂದ ಬರ್ತಿದ್ದ ಟ್ರಕ್ ಒಂದು ಸವಾರನ ಮೇಲೆ  ಹರಿದಿದೆ, ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಈ ಅಮಾಯಕ ಬೈಕ್ ಸವಾರನ ಸಾವಿನಿಂದ ರೊಚ್ಚಿಗೆದ್ದ ಸ್ಥಳದಲ್ಲಿದ್ದ ಸಾರ್ವಜನಿಕರು, ಪೊಲೀಸರನ್ನು ಪ್ರಶ್ನಿಸಲು ಆರಂಭಿಸಿದರು. ನೋಡನೋಡುತ್ತಿದ್ದಂತೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ, ಪೊಲೀಸರ ವಿರುದ್ದ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದರು. ಹೆಲ್ಮೇಟ್ ಧರಿಸಿದ್ದ ಬೈಕ್ ಸವಾರನನ್ನು ಪೊಲೀಸರು ಅಡ್ಡಗಟ್ಟಿದ್ದಾರೆ. ಆಗ ಬೈಕ್ ಸವಾರ ಬೈಕಅನ್ನು ಸ್ವಲ್ಪ ಬಲಭಾಗಕ್ಕೆ ಎಳೆದುಕೊಂಡಿದ್ದಾರೆ. ಈ ವೇಳೆ ಪೊಲೀಸ್ ಪೇದೆ ಲಾಠಿ ಬೀಸಿದ ಪರಿಣಾಮ ಬೈಕ್ ನ ಹ್ಯಾಂಡಲ್ ಗೆ ಲಾಠಿ ಸಿಲುಕಿ ಆತ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಹಿಂದಿನಿಂದ ಬಂದ ಟ್ರಕ್ ಬೈಕ್ ಸವಾರನ ಮೇಲೆ ಹರಿದಿದ್ದು, ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸಾವಿಗೆ ಪೊಲೀಸರೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಗಸ್ತು ವಾಹನ ಜಖಂಗೊಳಿಸಿದ ಸಾರ್ವಜನಿಕರು, ವಾಹನ ತಪಾಸಣೆ ಮಾಡುತ್ತಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಹಿಗ್ಗಾಮುಗ್ಗ ಥಳಿಸಿ ಆಸ್ಪತ್ರೆ ಪಾಲಾಗುವಂತೆ ಮಾಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು, ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದು, ಸ್ಥಳಕ್ಕೆ ಡಿಸಿಪಿಗಳಾದ ಪ್ರಕಾಶ್ ಗೌಡ ಹಾಗೂ ಗೀತಾ ಪ್ರಸನ್ನ ಭೇಟಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನು ಓದಿ: ಕಾಫಿನಾಡಲ್ಲಿ ಹೆಚ್ಚಾದ ಗಂಧದ ಮರ ಕಳ್ಳತನ; ಕಾಡಿನ ಒಂದು ಭಾಗಕ್ಕೆ ಬೆಂಕಿ ಹಚ್ಚಿ, ಶ್ರೀಗಂಧ ಕದಿಯುತ್ತಿರುವ ಖತರ್ನಾಕ್ ಖದೀಮರು!

ಇನ್ನು ತನ್ನ ವಾಹನದ ಮೇಲೆ ಒಂದೇ ಒಂದು ಕೇಸ್ ಇಲ್ಲದಿದ್ದರೂ ಪ್ರಾಣವನ್ನೇ ದಂಡತ್ತೆತ್ತ ಬೈಕ್ ಸವಾರನ ಮಾಹಿತಿ ಪತ್ತೆಯಾಗಿದ್ದು, ಮೃತ ವ್ಯಕ್ತಿ ಹೆಸರು ದೇವರಾಜು (46). ಮೃತ ದೇವರಾಜು ಸಿವಿಲ್ ಇಂಜಿನಿಯರ್ ಆಗಿದ್ದು,  ಹೆಚ್‌ಡಿ‌.ಕೋಟೆಯ ಕನ್ನೆನಹಳ್ಳಿ ನಿವಾಸಿಯಾಗಿದ್ದರು ಎಂದು ತಿಳಿದುಬಂದಿದೆ. ಈ ಘಟನೆ ವಿಜಯನಗರ ಪೊಲೀಸ್  ವ್ಯಾಪ್ತಿಯಲ್ಲಿ ನಡೆದಿದ್ದು, ಅಂತಿಮವಾಗಿ ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನೆ ಮಾಡಲಾಗಿದೆ. ಪೊಲೀಸರ ವಿರುದ್ದ ಕುಟುಂಬಸ್ಥರು ಸಹ ಆಕ್ರೋಶ ಹೊರಹಾಕಿದ್ದು,  ಪೊಲೀಸ್ ತಪಾಸಣೆಗೆ ನಿಲ್ಲಿಸಿದ್ದ ಬೈಕ್ ಮೇಲೆ ಒಂದೇ ಒಂದು ಕೇಸ್ ಇಲ್ಲ. ಪೊಲೀಸ್ ಇಲಾಖೆ ದಾಖಲೆಯಲ್ಲು ಯಾವುದೇ ನಿಯಮ ಉಲ್ಲಂಘನೆಯ ದಾಖಲೆ ಇಲ್ಲ, ಯಾವಾಗಲೂ ಹೆಲ್ಮೆಟ್ ಧರಿಸಯೇ ವಾಹನ ಚಾಲನೆ ಮಾಡುತ್ತಿದ್ದ ದೇವರಾಜ್ ಸಂಚಾರ ನಿಯಮ ಪಾಲಿಸಿದ್ರು ಜೀವ‌ ಉಳಿಸಿಕೊಳ್ಳಲಾಗಲಿಲ್ಲ ಅಂತ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ದೇವರಾಜ್ ಓಡಿಸುತ್ತಿದ್ದ ಹಿರೋ ಹೋಂಡಾ ಸ್ಪೇಂಡರ್ ವಾಹನದ ಮೇಲೆ ಯಾವುದೇ ನಿಯಮ ಉಲ್ಲಂಘನೆ ಕೇಸ್‌ಗಳು ದಾಖಲಾಗಿರಲಿಲ್ಲ. ಕರ್ನಾಟಕ ಸರ್ಕಾರದ ಅಧಿಕೃತ ಆ್ಯಪ್ ಕರ್ನಾಟಕ ಒನ್‌ ವೆಬ್‌ಸೈಟ್‌ನಲ್ಲಿ ಬಿತ್ತರವಾದಂತೆ ಆ ವಾಹನ ಸಂಖ್ಯೆಯ ಮೇಲೆ ಯಾವುದೇ ಕೇಸ್ ಇಲ್ಲದಿದ್ದರೂ, ಹಾಗೂ ಹೆಲ್ಮೆಟ್ ಧರಿಸಿದ್ದರೂ ಸಹ ಈ ಅವಘಢಕ್ಕೆ ಸಾವನ್ನಪ್ಪಿದ್ದು ಈ ಸಾವಿಗೆ ಹೊಣೆ ಯಾರು ಅನ್ನೋ ಚರ್ಚೆ ಆರಂಭವಾಗಿದೆ.
Published by:HR Ramesh
First published: