• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಗದಗ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆಂದ ಕುಟುಂಬಸ್ಥರು!

ಗದಗ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆಂದ ಕುಟುಂಬಸ್ಥರು!

ಕುಟುಂಬಸ್ಥರ ಹಾಗೂ ದಲಿತ ಸಂಘಟನೆಗಳು ಹೋರಾಟ

ಕುಟುಂಬಸ್ಥರ ಹಾಗೂ ದಲಿತ ಸಂಘಟನೆಗಳು ಹೋರಾಟ

ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಹಾಗೂ ರೌಡಿ ಶೀಟರ್ ಕೊಲೆ ಪ್ರಕರಣಗಳ ತನಿಖೆಯನ್ನು ಸಿಓಡಿ ಒಪ್ಪಿಸಬೇಕು ಎಂದು ಹೋರಾಟಗಾರರು ಒತ್ತಾಯ ಮಾಡಿದ್ದಾರೆ. ಎರಡು ತಿಂಗಳ ಅಂತರದಲ್ಲಿ ಗದಗ ನಗರದಲ್ಲಿ ನಡೆದ ಒಂದು ಆತ್ಮಹತ್ಯೆ ಕೇಸ್ ಹಾಗೂ ಇನ್ನೊಂದು ಕೊಲೆ ಕೇಸ್ ಗಳಿ ಟ್ವಿಸ್ಟ್ ಸಿಕ್ಕಿವೆ.

  • Share this:

ಗದಗ: ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಬೀಗ್ ಟ್ವಿಸ್ಟ್ ಸಿಕ್ಕಿದೆ. ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿಲ್ಲಾ, ಅವಳನ್ನು ಅತ್ಯಾಚಾರ ಮಾಡಿ, ಭೀಕರವಾಗಿ ಕೊಲೆ ಮಾಡಲಾಗಿದೆಯಂತೆ. ಆದರೆ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಸಿಕೊಂಡು ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಹೀಗಾಗಿಯೇ ಗದಗ ನಗರದಲ್ಲಿ ನಡೆದ ಒಂದು ಆತ್ಮಹತ್ಯೆ ಕೇಸ್, ಮತ್ತೊಂದು ಕೊಲೆ ಕೇಸ್ ಪ್ರಕರಣಗಳನ್ನು ಸಿಓಡಿ ತನಿಖೆಗೆ ಒಪ್ಪಿಸಬೇಕು ಎಂದು ಹೋರಾಟ ನಡೆಯುತ್ತಿದೆ.


ಗದಗ ನಗರದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಪಲ್ಲವಿ ಗೊಲ್ಲರ್, ಆಗಸ್ಟ್ 10 ರಂದು ರೈಲು ಹಳಿಯಲ್ಲಿ ‌ಶವ ಪತ್ತೆಯಾಗಿತ್ತು. ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರೈಲ್ವೆ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದಾರೆ. ಅದರೆ ಇದು ಆತ್ಮಹತ್ಯೆ ಅಲ್ಲಾ, ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಎಂದು ಪಲ್ಲವಿ ಕುಟುಂಬಸ್ಥರ ಗಂಭೀರ ಆರೋಪ ಮಾಡಿದ್ದಾರೆ. ವಿದ್ಯಾರ್ಥಿನಿ ಪಲ್ಲವಿ ಗೊಲ್ಲರ್  ಅನ್ನು ಪ್ರೀತಿ ಮಾಡುತ್ತಿದ್ದ ಅಟೋ ಚಾಲಕ  ಪ್ರಕಾಶ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ನೇರ ಆರೋಪ ಮಾಡಿದ್ದಾರೆ.


ಅವಳ ಮೇಲೆ ಅತ್ಯಾಚಾರ ಮಾಡಿ ಮೊಲ ಹಿಡಿಯುವ ಬಲೆಯಲ್ಲಿ ಹಾಕಿ ರೈಲು ಹಳಿಗೆ ಹಾಕಿದ್ದಾರೆ. ಅವಳೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲಾಗಿದೆ. ಇನ್ನೂ ಈ ಪ್ರಕರಣವನ್ನು ರಾಜೀ ಸಂದಾನದ ಮೂಲಕ ಬಗೆ ಹರಿಸುವಂತೆ ಪೊಲೀಸರು ಒತ್ತಡ ಹಾಕಿದ್ದಾರೆ ಎನ್ನುವ ಅರೋಪ ಕೂಡ ಇದೆ. ಪ್ರಕರಣ ನಡೆದು ಒಂದು ತಿಂಗಳು ಕಳೆಯುತ್ತಾ ಬಂದರು ಆರೋಪಿಗಳನ್ನು ಬಂಧಿಸಿಲ್ಲ ಎಂದು ಪಲ್ಲವಿ ಕುಟುಂಬಸ್ಥರ ಆರೋಪ ಮಾಡಿದ್ದಾರೆ.


ರೌಡಿ ಶೀಟರ್ ಕೊಲೆ ಪ್ರಕರಣಕ್ಕೂ ಟ್ವಿಸ್ಟ್


ಜುಲೈ 19 ರಂದು ರೌಡಿ ಶೀಟರ್ ಮುತ್ತು ಅಲಿಯಾಸ್ ಗೋವಿಂದಪ್ಪ ಚಲವಾದಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹೌದು ರೌಡಿ ಶೀಟರ್ 24 ಬಾರಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿತ್ತು‌. ಅದರೆ ಪೊಲೀಸರ ಕೇವಲ ಮೂರು ಜನ ಆರೋಪಿಗಳನ್ನು ಮಾತ್ರ ಬಂಧಿಸಿದ್ದಾರೆ. ಇನ್ನೂ ಹುಬ್ಬಳ್ಳಿಯಿಂದ ಸುಪಾರಿ ಹಂತಕರನ್ನು ಕರೆದುಕೊಂಡು ಬಂದು ಕೊಲೆ ಮಾಡಲಾಗಿದೆ. ಸುಮಾರು 15 ಜನರು ಸೇರಿಕೊಂಡು ಕೊಲೆ ಮಾಡಿದ್ದಾರೆ. ಆದರೆ ಪೊಲೀಸರು ಮೂರು ಜನ ಆರೋಪಿಯನ್ನು ಮಾತ್ರ ಬಂದಿಸಿದ್ದು, ಅನುಮಾನಕ್ಕೆ ಕಾರಣವಾಗಿದೆ. ಕೊಲೆ ಆರೋಪಿ ಹಾಗೂ ಪೊಲೀಸ್ ಅಧಿಕಾರಿಗಳು ಒಂದೇ ಸಮುದಾಯವರು ಇರುವುದರಿಂದ ನಿಷ್ಪಕ್ಷಪಾತ ತನಿಖೆಯಾಗುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.


ಇದನ್ನು ಓದಿ: Municipal Corporation election Result: ಎಲ್ಲರ ಚಿತ್ತ ಪಾಲಿಕೆ ಫಲಿತಾಂಶದತ್ತ; ರಿಸಲ್ಟ್ ಗೆ ಮುನ್ನವೇ ಅತಂತ್ರದ ಆತಂಕ!


ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಹಾಗೂ ರೌಡಿ ಶೀಟರ್ ಕೊಲೆ ಪ್ರಕರಣಗಳ ತನಿಖೆಯನ್ನು ಸಿಓಡಿ ಒಪ್ಪಿಸಬೇಕು ಎಂದು ಹೋರಾಟಗಾರರು ಒತ್ತಾಯ ಮಾಡಿದ್ದಾರೆ. ಎರಡು ತಿಂಗಳ ಅಂತರದಲ್ಲಿ ಗದಗ ನಗರದಲ್ಲಿ ನಡೆದ ಒಂದು ಆತ್ಮಹತ್ಯೆ ಕೇಸ್ ಹಾಗೂ ಇನ್ನೊಂದು ಕೊಲೆ ಕೇಸ್ ಗಳಿ ಟ್ವಿಸ್ಟ್ ಸಿಕ್ಕಿವೆ. ಆದರೆ ಪೊಲೀಸರು ಮಾತ್ರ ನಿಷ್ಪಕ್ಷಪಾತ ತನಿಖೆ ನಡೆಸುತ್ತಿಲ್ಲಾ ಎಂದು ಕುಟುಂಬಸ್ಥರ ಆರೋಪ. ಹೀಗಾಗಿಯೇ ಎರಡು ಪ್ರಕರಣಗಳನ್ನು ಸಿಓಡಿ ತನಿಖೆಗೆ ಒಪ್ಪಿಸಬೇಕು ಎಂದು ಕುಟುಂಬಸ್ಥರ ಹಾಗೂ ದಲಿತ ಸಂಘಟನೆಗಳು ಹೋರಾಟ ಆರಂಭ ಮಾಡಿವೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.


ವರದಿ: ಸಂತೋಷ ಕೊಣ್ಣೂರ

First published: