ಕೊರೋನಾ ಹಾಟ್ ಸ್ಪಾಟ್ ಕಲಬುರ್ಗಿಯ ಮೋಮಿನಪುರಕ್ಕೆ ಬಿಗ್ ರಿಲೀಫ್ - ಎಲ್ಲ ಪಾಸಿಟಿವ್ ಪ್ರಕರಣಗಳು ಡಿಸ್ಚಾರ್ಜ್

ದಿನೇ ದಿನೇ ಈ ಪ್ರದೇಶದಲ್ಲಿ ಸೋಂಕು ವ್ಯಾಪಕಗೊಂಡಿದ್ದರಿಂದ ಆರೋಗ್ಯ ಇಲಾಖೆ ಹಾಗೂ ಕೇಂದ್ರದ ಐಸಿಎಂಆರ್ ತಂಡದವರೂ ಮನೆ ಮನೆ ಸರ್ವೆ ಮಾಡಿದ್ದರು

news18-kannada
Updated:May 31, 2020, 1:51 PM IST
ಕೊರೋನಾ ಹಾಟ್ ಸ್ಪಾಟ್ ಕಲಬುರ್ಗಿಯ ಮೋಮಿನಪುರಕ್ಕೆ ಬಿಗ್ ರಿಲೀಫ್ - ಎಲ್ಲ ಪಾಸಿಟಿವ್ ಪ್ರಕರಣಗಳು ಡಿಸ್ಚಾರ್ಜ್
ಮೋಮಿನಪುರ
  • Share this:
ಕಲಬುರ್ಗಿ(ಮೇ.31): ಜಿಲ್ಲೆಯ ಕೊರೋನಾ ಹಾಟ್ ಸ್ಪಾಟ್ ಆಗಿದ್ದ ಮೋಮಿನಪುರದ ಜನ ನೆಮ್ಮದಿಯ ನಿಟ್ಟುಸಿರಿ ಬಿಟ್ಟಿದ್ದಾರೆ. ಬಡಾವಣೆಯಲ್ಲಿ 41 ಜನರಿಗೆ ಸೋಂಕು ದೃಢಪಟ್ಟಿದ್ದರೆ, ಈ ಪೈಕಿ ಮೂವರು ಸಾವನ್ನಪ್ಪಿದ್ದರು. ಪಾಸಿಟಿವ್ ಸೋಂಕಿತರೆಲ್ಲರೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲದೆ ಕಳೆದ 14 ದಿನಗಳಿಂದ ಯಾವುದೇ ಹೊಸ ಪಾಟಿಸಿವ್ ಪ್ರಕರಣ ದೃಢಪಡದೇ ಇರುವುದು ಸಮಾಧಾನಕರ ಸಂಗತಿಯಾಗಿದೆ.

ಮೋಮಿನಪುರ ಅಂದ್ರೆ ಕಲಬುರ್ಗಿ ಜನ ಬೆಚ್ಚಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಲಬುರ್ಗಿಯ ಸೂಪರ್ ಮಾರಕಟ್ಟೆಗೆ ಹೊಂದಿಕೊಂಡಿರುವ ಬಡಾವಣೆಯಲ್ಲಿ ಬರೋಬ್ಬರಿ 41 ಜನರಿಗೆ ಪಾಸಿಟಿವ್ ದೃಢಪಟ್ಟಿತ್ತು. ಈ ಪೈಕಿ ಮೂವರು ಮೃತಪಟ್ಟಿದ್ದರು. ಮೋಮಿನಪುರದಲ್ಲಿ ಮೊದಲ ಪ್ರಕರಣ ಪಿ-205 ಆಗಿದ್ದು, 55 ವರ್ಷದ ಬಟ್ಟೆ ವ್ಯಾಪಾರಿ ಏಪ್ರಿಲ್ 10 ರಂದು ಮೃತಪಟ್ಟಿದ್ದ. ತಬ್ಲಿಘಿ ದಾರ್ಮಿಕ ಸಭೆಯಲ್ಲಿ ಭಾಗಿಯಾದಾತನ ಸಂಪರ್ಕದಿಂದ ಈತನಿಗೆ ಸೋಂಕು ವ್ಯಾಪಿಸಿತ್ತು. ಈತನಿಂದ ಬರೋಬ್ಬರಿ 23 ಜನರಿಗೋ ಸೋಂಕು ಹರಡಿತ್ತು. ಅಲ್ಲದೆ ಈ ಬಡಾವಣೆಯಲ್ಲಿ ಇನ್ನಿಬ್ಬರು ಸೋಂಕಿತರೂ ಸಾವನ್ನಪ್ಪಿದ್ದರು.

ಏಪ್ರಿಲ್ 21 ರಂದು 80 ವರ್ಷದ ವೃದ್ಧ ಮೃತಪಟ್ಟಿದ್ದರೆ, ಮೇ 15 ರಂದು 60 ವರ್ಷದ ಪುರುಷ ಮೃತಪಟ್ಟಿದ್ದ. ಜಿಲ್ಲೆಯಲ್ಲಿ ಸಂಭವಿಸಿದೆ 7 ಕೊರೋನಾ ಸಾವುಗಳ ಪೈಕಿ ಮೂವರು ಇದೇ ಪ್ರದೇಶವದರಾಗಿದ್ದರು. ಈ ಪ್ರದೇಶದಲ್ಲಿ 4365 ಮನೆಗಳಿದ್ದು, 24,479  ಜನಸಂಖ್ಯೆಯಿದೆ. ದಿನೇ ದಿನೇ ಈ ಪ್ರದೇಶದಲ್ಲಿ ಸೋಂಕು ವ್ಯಾಪಕಗೊಂಡಿದ್ದರಿಂದ ಆರೋಗ್ಯ ಇಲಾಖೆ ಹಾಗೂ ಕೇಂದ್ರದ ಐಸಿಎಂಆರ್ ತಂಡದವರೂ ಮನೆ ಮನೆ ಸರ್ವೆ ಮಾಡಿದ್ದರು. ಎಲ್ಲರ ಸ್ಕ್ರೀನಿಂಗ್ ಮಾಡುವ ಜೊತೆಗೆ, ಹಲವರ ಥ್ರೋಟ್ ಸ್ಯಾಂಪಲ್ ಸಂಗ್ರಹಿಸಿ ವೈದ್ಯಕೀಯ ಲ್ಯಾಬ್ ಗೆ ಕಳಿಸಲಾಗಿತ್ತು. ಇದರಿಂದಾಗಿ ಸೋಂಕು ಒಂದಷ್ಟು ನಿಯಂತ್ರಣಕ್ಕೆ ಬಂದಿತ್ತು ಇದೀಗ ಎಲ್ಲ ಸೋಂಕಿತರೂ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇದನ್ನೂ ಓದಿ : ಕೆರೆಗಳ ಪುನರುಜ್ಜೀವನಕ್ಕೆ ಮುಂದಾದ ಗ್ರಾಮಸ್ಥರು ; ಭಿಕ್ಷಾಟನೆ ಮೂಲಕ ನಿಧಿ ಸಂಗ್ರಹ

ಪೇಷಂಟ್  -1132 ಹಾಗೂ ಪೇಷಂಟ್ 1134 ರ ಡಿಸ್ಚಾರ್ಜ್ ನೊಂದಿಗೆ ಈ ಪ್ರದೇಶದ ಎಲ್ಲರೂ ಗುಣಮುಖರಾಗಿ ಮನೆಗೆ ವಾಪಸ್ಸಾದಂತಾಗಿದೆ. ಜೊತೆಗೆ ಕಳೆದ 14 ದಿನಗಳಿಂದ ಈ ಪ್ರದೇಶದಲ್ಲಿಯಾವುದೇ ಹೊಸ ಪ್ರಕರಣ ಕಂಡು ಬಂದಿಲ್ಲದಿರೋದು ಆಶಾದಾಯಕ ಬೆಳವಣಿಗೆಯಾಗಿದೆ. ಇನ್ನೂ 14 ದಿನಗಳ ಕಾಲ ಯಾವುದೇ ಹೊಸ ಪ್ರಕರಣ ಪತ್ತೆಯಾಗದೇ ಇದ್ದಲ್ಲಿ ಈ ಪ್ರದೇಶವನ್ನು ಕಂಟೈನ್ ಮೆಂಟ್ ಫ್ರೀ ಝೋನ್ ಆಗಲಿದೆ. ಹೀಗಾಗಿ ಯಾವುದೇ ಹೊಸ ಪ್ರಕರಣಗಳು ದೃಢಪಡದೇ ಇರಲಿ ಎಂದು ಈ ಬಡಾವಣೆ ಜನ ಪ್ರಾರ್ಥಿಸುತ್ತಿದ್ದಾರೆ. ಜೊತೆಗೆ ಎಲ್ಲರೂ ಗುಣಮುಖರಾಗಿ ವಾಪಸ್ಸಾಗಿರೋದುಕ್ಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
First published: May 31, 2020, 1:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading