ಬೀದರ್ ಕಾರಂಜಾ ಡ್ಯಾಂ ಭರ್ತಿ; 5 ಸಾವಿರ ಎಕರೆ ಹೆಚ್ಚುವರಿ ಕೃಷಿ ಜಮೀನಿಗೆ ನುಗ್ಗಿದ ಹಿನ್ನೀರು, ರೈತರು ಕಂಗಾಲು
ಬೀದರ್ ಜಿಲ್ಲೆಯ ರೈತರ ಪರಿಸ್ಥಿತಿ ಯಾತನಮಯವಾಗಿದೆ. ಒಂದು ಕಡೆ ಜಲಾಶಯ ತುಂಬಿದ್ದಕ್ಕೆ ಖುಷಿ ಪಡಬೇಕೋ? ಅದೇ ಜಲಾಶಯದ ಹಿನ್ನೀರು ಜಮೀನಿನಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಸಿರುವುದರಿಂದ ದುಃಖಿಸಬೇಕೋ ಎಂಬುದು ತಿಳಿಯದಂತಾಗಿದೆ. ಮೊದಲಿನ ಪರಿಹಾರವೇ ನ್ಯಾಯಯುತವಾಗಿ ಕೈ ಸೇರಿಲ್ಲ. ಅಷ್ಟರಲ್ಲಿ ಮತ್ತೆ ಹೆಚ್ಚುವರಿ ಜಮೀನು ಮುಳುಗಡೆಯಾಗಿರುವುದು ಸಾವಿರಾರು ರೈತ ಕುಟುಂಬಗಳ ಭವಿಷ್ಯದ ಕರಿನೆರಳಾವರಿಸುವಂತೆ ಮಾಡಿದೆ.
news18-kannada Updated:November 22, 2020, 8:41 PM IST

ಭರ್ತಿಯಾಗಿರುವ ಬೀದರ್ ಕಾರಂಜಾ ಅಣೆಕಟ್ಟೆ.
- News18 Kannada
- Last Updated: November 22, 2020, 8:41 PM IST
ಬೀದರ್; ಜಿಲ್ಲೆಯ ಜೀವನಾಡಿ ಅಂತಲೇ ಹೆಸರಾದ ಜಲಾಶಯ ಕಾರಂಜಾ ಡ್ಯಾಂ. 1972ರಲ್ಲಿ ಈ ಡ್ಯಾಂ ನಿರ್ಮಾಣ ಮಾಡುವಾಗ ಒಟ್ಟು 15000 ಎಕರೆ ಪ್ರದೇಶವನ್ನು ಮುಳುಗಡೆ ಪ್ರದೇಶವೆಂದು ಪರಿಗಣಿಸಲಾಗಿತ್ತು. ಆಗ ಸಮರ್ಪಕ ಜಮೀನು ಸರ್ವೇ ನಡೆಸಿ 7 ಟಿಎಂಸಿ ಸಾಮರ್ಥ್ಯದ ಡ್ಯಾಂ ನಿರ್ಮಿಸಲಾಗಿತ್ತು. ಹಿನ್ನೀರಿನಿಂದ ನೆರೆ ಉಂಟಾಗುವ ರೈತರ ಜಮೀನುಗಳಿಗೆ ಪರಿಹಾರವನ್ನು ನೀಡಲಾಗಿತ್ತು. ಆದರೆ, ನ್ಯಾಯಯುತ ಪರಿಹಾರ ಸಿಕ್ಕಿರಲಿಲ್ಲ. ಅದರ ನಡುವೆಯೇ ಪ್ರಸ್ತುತ ವರ್ಷ ಡ್ಯಾಂ ತುಂಬಿದ್ದು ರೈತರ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಿದೆ.
ಕಣ್ಣು ಹಾಯಿಸಿದಷ್ಟು ದೂರಕ್ಕೂ ನೀರು. ನೋಡಿದ ಕೂಡಲೇ ಇದು ನದಿಯೋ, ಹಳ್ಳವೋ ಎಂಬಂತೆ ಕಾಣುವ ಈ ನೀರೆಲ್ಲ ನಿಂತಿರುವುದು ರೈತರ ಹೊಲಗಳಲ್ಲಿ. ಹೌದು ! ಬೀದರ್ ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಕಾರಂಜಾ ಜಲಾಶಯ ಭರ್ತಿಯಾಗಿದೆ. ಡ್ಯಾಂ ನಿರ್ಮಿಸುವ ಆರಂಭದಲ್ಲೇ 26 ಹಳ್ಳಿಗಳ 15000 ಎಕರೆ ಜಮೀನನ್ನು ಸರ್ವೇ ಮಾಡಲಾಗಿತ್ತು. ಆದರೆ, ಈ ವರ್ಷ ಕಾರಂಜಾ ಜಲಾಶಯಕ್ಕೆ ಒಳಹರಿವು ಜಾಸ್ತಿಯಾಗಿರುವುದರಿಂದ ಹಿನ್ನೀರು ರೈತರ ಹೊಲಗಳಿಗೆ ನುಗ್ಗಿದೆ. ಅಲ್ಲದೆ, ಸರ್ವೇ ಮಾಡಿದ್ದು 15000 ಎಕರೆಯಾದರೆ, ಹೆಚ್ಚುವರಿ 5000 ಎಕರೆಗೂ ನೀರು ನುಗ್ಗಿದ್ದು, ರೈತರ ಶ್ರಮ ನೀರುಪಾಲಾಗಿದೆ. ಬೆಳೆದಿದ್ದ ಕಬ್ಬು, ಉದ್ದು, ಸೋಯಾ, ತೊಗರಿ, ತೋಟಗಾರಿಕೆ ಬೆಳೆಗಳು ನೀರುಪಾಲಾಗಿವೆ. ಇದು ರೈತರನ್ನು ಕಂಗೆಡಿಸಿದೆ. ಮೊದಲು ಸರ್ವೇ ಮಾಡಿದ 15000 ಎಕರೆಗೆ ಸರಕಾರ ಸಮರ್ಪಕವಾದ ಪರಿಹಾರ ನೀಡಿಲ್ಲ. ಅಷ್ಟರಲ್ಲೇ ಹೆಚ್ಚುವರಿ 5000 ಎಕರೆ ಫಲವತ್ತಾದ ಭೂಮಿ ಮುಳುಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ಓದಿ: ಸಕ್ಕರೆನಾಡು ಮಂಡ್ಯದಲ್ಲಿ ಜೋಡೆತ್ತುಗಳ ಕಮಾಲ್;15 ಟನ್ ಭಾರದ ಕಬ್ಬಿನ ಗಾಡಿ ಎಳೆದ ಎತ್ತುಗಳು
ಕಾರಂಜಾ ಜಲಾಶಯ ನಿರ್ಮಿಸಿದಾಗಿನಿಂದಲೂ ಪ್ರಸ್ತುತ ವರ್ಷ ಶೇಖರಣೆಯಾದಷ್ಟು ನೀರು ಸಂಗ್ರಹವಾಗಿರಲಿಲ್ಲ. ಇದು ರೈತರನ್ನು ಕಂಗೆಡಿಸಿದೆ. ಮೊದಲೇ ಭೂಮಿ ಕಳೆದುಕೊಂಡವರಿಗೆ ಪರಿಹಾರ ನ್ಯಾಯುತವಾಗಿ ಸಿಕ್ಕಿಲ್ಲ. ಅಷ್ಟರಲ್ಲಿ ಹೆಚ್ಚುವರಿ 5000 ಎಕರೆ ಫಸಲು ಹೊತ್ತ ಜಮೀನಿಗೆ ನೀರು ನುಗ್ಗಿದೆ. ಮೊದಲೇ ಮಳೆಯಿಂದ ತತ್ತರಿಸಿರುವ ಬೀದರ್ ಜಿಲ್ಲೆಯ ರೈತರಿಗೆ ಹೆಚ್ಚಾಗುತ್ತಿರುವ ಕಾರಂಜಾ ಜಲಾಶಯದ ಹಿನ್ನೀರಿನ ಪ್ರಮಾಣ ಆತಂಕಕ್ಕೆ ಕಾರಣವಾಗಿದೆ. ಹೆಚ್ಚುವರಿ ಮುಳುಗಡೆಯಾಗಿರುವ 5000 ಎಕರೆ ಜಮೀನಿನ ಪ್ರದೇಶವನ್ನು ಸರ್ವೇ ಮಾಡಿ ಪರಿಹಾರವನ್ನು ಕೂಡಲೇ ನೀಡಬೇಕೆಂದು ಈ ಭಾಗದ ರೈತರ ಆಗ್ರಹವಾಗಿದೆ.
ಸದ್ಯ ಬೀದರ್ ಜಿಲ್ಲೆಯ ರೈತರ ಪರಿಸ್ಥಿತಿ ಯಾತನಮಯವಾಗಿದೆ. ಒಂದು ಕಡೆ ಜಲಾಶಯ ತುಂಬಿದ್ದಕ್ಕೆ ಖುಷಿ ಪಡಬೇಕೋ? ಅದೇ ಜಲಾಶಯದ ಹಿನ್ನೀರು ಜಮೀನಿನಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಸಿರುವುದರಿಂದ ದುಃಖಿಸಬೇಕೋ ಎಂಬುದು ತಿಳಿಯದಂತಾಗಿದೆ. ಮೊದಲಿನ ಪರಿಹಾರವೇ ನ್ಯಾಯಯುತವಾಗಿ ಕೈ ಸೇರಿಲ್ಲ. ಅಷ್ಟರಲ್ಲಿ ಮತ್ತೆ ಹೆಚ್ಚುವರಿ ಜಮೀನು ಮುಳುಗಡೆಯಾಗಿರುವುದು ಸಾವಿರಾರು ರೈತ ಕುಟುಂಬಗಳ ಭವಿಷ್ಯದ ಕರಿನೆರಳಾವರಿಸುವಂತೆ ಮಾಡಿದೆ.
ಕಣ್ಣು ಹಾಯಿಸಿದಷ್ಟು ದೂರಕ್ಕೂ ನೀರು. ನೋಡಿದ ಕೂಡಲೇ ಇದು ನದಿಯೋ, ಹಳ್ಳವೋ ಎಂಬಂತೆ ಕಾಣುವ ಈ ನೀರೆಲ್ಲ ನಿಂತಿರುವುದು ರೈತರ ಹೊಲಗಳಲ್ಲಿ. ಹೌದು ! ಬೀದರ್ ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಕಾರಂಜಾ ಜಲಾಶಯ ಭರ್ತಿಯಾಗಿದೆ. ಡ್ಯಾಂ ನಿರ್ಮಿಸುವ ಆರಂಭದಲ್ಲೇ 26 ಹಳ್ಳಿಗಳ 15000 ಎಕರೆ ಜಮೀನನ್ನು ಸರ್ವೇ ಮಾಡಲಾಗಿತ್ತು. ಆದರೆ, ಈ ವರ್ಷ ಕಾರಂಜಾ ಜಲಾಶಯಕ್ಕೆ ಒಳಹರಿವು ಜಾಸ್ತಿಯಾಗಿರುವುದರಿಂದ ಹಿನ್ನೀರು ರೈತರ ಹೊಲಗಳಿಗೆ ನುಗ್ಗಿದೆ. ಅಲ್ಲದೆ, ಸರ್ವೇ ಮಾಡಿದ್ದು 15000 ಎಕರೆಯಾದರೆ, ಹೆಚ್ಚುವರಿ 5000 ಎಕರೆಗೂ ನೀರು ನುಗ್ಗಿದ್ದು, ರೈತರ ಶ್ರಮ ನೀರುಪಾಲಾಗಿದೆ. ಬೆಳೆದಿದ್ದ ಕಬ್ಬು, ಉದ್ದು, ಸೋಯಾ, ತೊಗರಿ, ತೋಟಗಾರಿಕೆ ಬೆಳೆಗಳು ನೀರುಪಾಲಾಗಿವೆ. ಇದು ರೈತರನ್ನು ಕಂಗೆಡಿಸಿದೆ. ಮೊದಲು ಸರ್ವೇ ಮಾಡಿದ 15000 ಎಕರೆಗೆ ಸರಕಾರ ಸಮರ್ಪಕವಾದ ಪರಿಹಾರ ನೀಡಿಲ್ಲ. ಅಷ್ಟರಲ್ಲೇ ಹೆಚ್ಚುವರಿ 5000 ಎಕರೆ ಫಲವತ್ತಾದ ಭೂಮಿ ಮುಳುಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.