ನಾಳೆ ರಾತ್ರಿ ಎಂಟು ಗಂಟೆಯಿಂದ ಬೀದರ್ ಜಿಲ್ಲೆ ಕೂಡ ಒಂದು ವಾರ ಲಾಕ್​ಡೌನ್! 

ಲಾಕ್​ಡೌನ್​ ವೇಳೆಯಲ್ಲಿ ದಿನಸಿ, ತರಕಾರಿ, ಹಾಲು, ಪೆಟ್ರೋಲ್ ಬಂಕ್ ಎಂದಿನಂತೆ ಅಬಾಧಿತವಾಗಿರಲಿವೆ. ಬ್ಯಾಂಕ್, ಫೋಸ್ಟ್ ಆಫೀಸ್, ಸರ್ಕಾರಿ ಕಚೇರಿಗಳು ಓಪನ್ ಇರಲಿದ್ದು, ಬಾರ್ ಆ್ಯಂಡ್ ರೆಸ್ಟೋರೆಂಟ್ ಮುಚ್ಚಲಾಗಿದೆ. ಅನಗತ್ಯವಾಗಿ ಹೊರಗೆ ಬಂದು ಲಾಕ್​ಡೌನ್ ನಿಯಮ ಉಲ್ಲಂಘಿಸುವ ಸಾರ್ವಜನಿಕರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವ ಚೌಹಾಣ್ ಸ್ಪಷ್ಟಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೀದರ್; ಗಡಿ ಜಿಲ್ಲೆ ಬೀದರ್​ನಲ್ಲಿ ಕೊರೋನಾ ಆರ್ಭಟ ನಿಲ್ಲದ ಹಿನ್ನೆಲೆಯಲ್ಲಿ ನಾಳೆ ರಾತ್ರಿ ಎಂಟರಿಂದ ಜುಲೈ 22ರವರೆಗೆ ಒಂದು ವಾರ ಲಾಕ್​ಡೌನ್ ಜಾರಿ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ 1103 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 53 ಜನ ಮೃತರಾಗಿದ್ದಾರೆ. ಮಹಾರಾಷ್ಟ್ರ ಲಿಂಕ್ ಜಿಲ್ಲೆಯನ್ನು ಬಿಡದೆ ಕಾಡುತ್ತಿದ್ದು, ಕೊರೋನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಹೇರಲಾಗುತ್ತಿದೆ ಎಂದರು.

ಈ ಬಗ್ಗೆ ನಿನ್ನೆಯೇ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹಾಗೂ ಪ್ರಭು ಚೌಹಾಣ್ ಅವರ ಜೊತೆಗೆ ಸಭೆ ನಡೆಸಿದ್ದರು.‌ ಸಭೆಯಲ್ಲಿ ಲಾಕ್ ಡೌನ್ ಜಿಲ್ಲಾಡಳಿತದ ವಿವೇಚನೆಗೆ ಬಿಟ್ಟ ವಿಚಾರ. ಜಿಲ್ಲೆಯ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯಿರಿ ಎಂದು ಸೂಚಿಸಿದ್ದರು. ಅದರಂತೆ ನಿನ್ನೆಯೇ ಸಭೆ ನಡೆಸಿದ್ದ ಸಚಿವ ಚೌಹಾಣ್, ಇಂದು ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದರು.

ಇನ್ನು ಕಂಟೈನ್ಮೆಂಟ್ ಜೋನ್ ಗಳಲ್ಲಿ ಆಸ್ಪತ್ರೆ ಹಾಗೂ ಔಷಧ ಅಂಗಡಿಗಳಿಗೆ ವಿನಾಯಿತಿ ನೀಡಲಾಗಿದೆ. ಒಂದು ವಾರ ಕಾಲ ಜಿಲ್ಲೆಯಲ್ಲಿ ಜಾತ್ರೆ, ಉತ್ಸವ, ಸಮಾವೇಶ, ಸಮಾರಂಭ ಸೇರಿದಂತೆ ಇತರೆ ಜನ ಚಟುವಟಿಕೆ ಮೇಲೆ ನಿಷೇಧ ಹೇರಲಾಗಿದೆ. ಸರಕಾರಿ ಸಾರಿಗೆ ಸೇರಿದಂತೆ ಖಾಸಗಿ ವಾಹನ ಸಂಚಾರವೂ ಬಂದ್ ಇರಲಿದ್ದು, ತುರ್ತು ಇದ್ದರಷ್ಟೇ ವಿನಾಯಿತಿ ಇರುತ್ತದೆ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದರು.

ಇದನ್ನು ಓದಿ: Bengaluru Lockdown: ನಾಳೆಯಿಂದ 1 ವಾರ ತುರ್ತು ಸೇವೆಗಳಿಗೆ ಮಾತ್ರ ಬಿಎಂಟಿಸಿ ಬಸ್​​​ ಲಭ್ಯ: ಯಾರೆಲ್ಲಾ ಪ್ರಯಾಣಿಸಬಹುದು ಗೊತ್ತೇ?

ಲಾಕ್​ಡೌನ್​ ವೇಳೆಯಲ್ಲಿ ದಿನಸಿ, ತರಕಾರಿ, ಹಾಲು, ಪೆಟ್ರೋಲ್ ಬಂಕ್ ಎಂದಿನಂತೆ ಅಬಾಧಿತವಾಗಿರಲಿವೆ. ಬ್ಯಾಂಕ್, ಫೋಸ್ಟ್ ಆಫೀಸ್, ಸರ್ಕಾರಿ ಕಚೇರಿಗಳು ಓಪನ್ ಇರಲಿದ್ದು, ಬಾರ್ ಆ್ಯಂಡ್ ರೆಸ್ಟೋರೆಂಟ್ ಮುಚ್ಚಲಾಗಿದೆ. ಅನಗತ್ಯವಾಗಿ ಹೊರಗೆ ಬಂದು ಲಾಕ್​ಡೌನ್ ನಿಯಮ ಉಲ್ಲಂಘಿಸುವ ಸಾರ್ವಜನಿಕರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವ ಚೌಹಾಣ್ ಸ್ಪಷ್ಟಪಡಿಸಿದ್ದಾರೆ.
Published by:HR Ramesh
First published: