ಬೀದರ್(ಅಕ್ಟೋಬರ್. 05): ಬೀದರ್ ನಗರ ಸಭೆ ವ್ಯಾಪ್ತಿಯಲ್ಲಿ ನೂರಾರು ತೆರೆದ ಬಾವಿಗಳಿದ್ದು, ಬಲಿಗೆ ಬಾಯ್ತೆರೆದು ಕೂಳಿತಿವೆ. ಈಗಾಗಲೇ ಬಹುಮನಿ ಸಾಮ್ರಾಜ್ಯದ ಪ್ರಧಾನಮಂತ್ರಿ ಮಹ್ಮದ್ ಗವಾನ ಕಾಳದ ಈ ಕರೇಜುಗಳಲ್ಲಿ (ಬಾವಿ) ಬಿದ್ದು ಈಗಾಗಲೇ ಹತ್ತಾರು ಪ್ರಾಣಿ ಪಕ್ಷಿಗಳು ಸಾವಿಗೀಡಾಗಿವೆ. ಈ ಬಾವಿಗಳಲ್ಲಿ ಹಸು, ಆಡು, ಸೇರಿದಂತೆ ಇನ್ನೀತರ ಪ್ರಾಣಿಗಳು ಬಿದ್ದು ಜೀವ ಹಾನಿ ಮುಂದುವರಿದಿದ್ದರೂ ನಗರಸಭೆ ತೆರೆದ ಬಾವಿಗಳ ಸುತ್ತ ತಡೆಗೋಡೆ ನಿರ್ಮಿಸಲು ಯೋಜನೆ ರೂಪಿಸಿಲ್ಲ. ಕೆಲ ವರ್ಷಗಳ ಹಿಂದೆ ಜಿಲ್ಲಾ ನಗರ ಅಭಿವೃದ್ಧಿ ಕೋಶದ ಮೂಲಕ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಹೂಳು ತೆಗೆದ ಭೂಕಾಲುವೆಯ ಕೆಲ ಬಾವಿಗಳಿಗೆ ಮಾತ್ರ ತಡೆಗೋಡೆ ನಿರ್ಮಿಸಲಾಗಿದೆ. ನಗರಸಭೆಯು ತನ್ನ ವ್ಯಾಪ್ತಿಯಲ್ಲಿನ ತೆರೆದ ಬಾವಿಗಳ ಮೇಲೆ ಕನಿಷ್ಠ ಗ್ರಿಲ್ ಹಾಕಿ ಮುಚ್ಚುವ ಪ್ರಯತ್ನವನ್ನೂ ಕೂಡಾ ಮಾಡಿಲ್ಲ. ಸಾಕಷ್ಟು ಅನಾಹುತಗಳು ಸಂಭವಿಸಿದ್ದರೂ ಸಹ ಬಾವಿಗೆ ತಡೆಗೋಡೆ ನಿರ್ಮಾಣ ಮಾಡಿ ಮುಚ್ಚಳಿಕೆ ಹಾಕುವ ಗೋಜಿಗೆ ಹೋಗಿಲ್ಲ ಎಂದು ಇಲ್ಲಿನ ಜನರು ಅಸಮಾದಾನ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ಈ ಬಗ್ಗೆ ಜಿಲ್ಲಾಧಿಕಾರಿ ಅವರನ್ನ ಕೇಳಿದರೆ ಬೀದರ್ ನಲ್ಲಿ ಇನ್ನು ಬಾವಿಗಳಿವೆ ಸೂತ್ತ ಮುತ್ತಲು ಸುರಕ್ಷೆಯನ್ನ ಯಾವ ರೀತಿಯಾಗಿ ಮಾಡಬೇಕು ಮತ್ತು ಬಾವಿಗಳು ಮತ್ತು ದೊಡ್ಡ ಪ್ರಮಾಣದಲ್ಲಿ ಅಂಡರ್ ಗ್ರೌಂಡ್ ಕರೇಜ್ ಸಿಸ್ಟಮ್ ಇದೆ. ಮಹ್ಮದ ಗವಾನ್ ಕಾಲದ ಯೋಜನೆ ಇದಾಗಿದ್ದು, ಇದರಿಂದ ಅಂತರ್ಜಲ ಹೆಚ್ಚುವ ಉಪಯೋಗವಿದೆ. ಆದರೆ, ಅದರ ಜೊತೆಗೆಯೇ ಬಾವಿಗಳ ಸುತ್ತಲೂ ಮಕ್ಕಳು ಆಟ ಆಡುತ್ತಾರೆ. ಇದರಿಂದ ಆತಂಕ ಹೆಚ್ಚಾಗಿದೆ. ಸಂಬಂಧಪಟ್ಟ ಇಲಾಖೆಯವರು ಬಾವಿಗಳನ್ನು ಮುಚ್ಚುವುದು ಬೇಡ. ಮೇಲ್ಮೈ ಮುಚ್ಚಳಿಕೆ ಹಾಕಿದರೂ ಸಾಕು ಎನ್ನುತ್ತಾರೆ.
ಬೀದರ್ ನಗರದ ನೌಬಾದ್, ಆಟೋ ನಗರ ಸುತ್ತಮುತ್ತಲೂ ಇಂತಹ ನೂರಾರು ಬಾವಿಗಳಿವೆ. ಜನ ವಾಸಿಸುವ ಮನೆ ಎದುರುಗಡೆಯಲ್ಲೇ ಸಾಕಷ್ಟು ತೆರೆದ ಬಾವಿಗಳಿರುವುದರಿಂದ ಮಕ್ಕಳು ಬಾವಿಗಳ ಅಕ್ಕಪಕ್ಕದಲ್ಲೇ ಆಟ ಆಡುತ್ತಾರೆ. ರಸ್ತೆ ಪಕ್ಕವೂ ಹಲವು ಬಾವಿಗಳಿರುವುದರಿಂದ ಅಪರಿಚಿತರಿಗೆ ಬಾವಿಗಳಿರುವುದೇ ಕಾಣಿಸದಷ್ಟು ಭೂಮಿಯ ಮಟ್ಟಕ್ಕೆ ಹೊಂದಿಕೊಂಡಿವೆ.
ಇದನ್ನೂ ಓದಿ : ಈಶಾನ್ಯ ವಲಯ ಶಿಕ್ಷಕರ ವಿಧಾನ ಪರಿಷತ್ ಚುನಾವಣೆ ; ಟಿಕೆಟ್ ಸಿಗದ್ದಕ್ಕೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಂಬಲಗಿ ರಾಜೀನಾಮೆ
ಆಗಿನ ಕಾಲದಲ್ಲಿ ಭೂಮಿಯಲ್ಲಿ ಅಂತರ್ಜಲ ಹೆಚ್ಚಿಸಲು ಈ ಕರೇಜುಗಳನ್ನು ನಿರ್ಮಿಸಲಾಗಿತ್ತು. ಇದರಿಂದ ಕುಡಿಯುವ ನೀರಿನ ಸೌಕರ್ಯವಿದ್ದು ಬಾವಿಗಳನ್ನು ಮುಚ್ಚುವುದು ಬೇಡ. ಬಾವಿಯ ಮೇಲ್ಮೈಗೆ ಕಬ್ಬಿಣದ ಸರಳುಗಳನ್ನು ಹಾಕಿಸಿದರೂ ಸಾಕು. ಅಪಾಯದಿಂದ ದೂರವಿರಬಹುದು.
ಆದರೆ, ಪದೇ ಪದೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಈ ಬಗ್ಗೆ ಯಾರೂ ಕ್ಯಾರೇ ಅಂದಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು. ಅನಾಹುತ ಘಟಿಸುವ ಮುಂಚೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ