HOME » NEWS » District » BIDAR BRIMS HOSPITAL ADMINISTRATION LAY WASTE THE FUNDS GIVEN BY GOVT SSBDR SNVS

ಬೀದರ್ ಜಿಲ್ಲಾಸ್ಪತ್ರೆ ಬೇಜವಾಬ್ದಾರಿ; ಬಡವರಿಗೆ ಸೇರಬೇಕಾದ 1.47 ಕೋಟಿ ಅನುದಾನ ಸರ್ಕಾರಕ್ಕೆ ವಾಪಸ್

ಎಸ್​ಸಿಪಿ ಮತ್ತು ಟಿಎಸ್​ಪಿ ಯೋಜನೆ ಅಡಿ ಮೂರು ವರ್ಷಗಳಲ್ಲಿ ನೀಡಲಾಗಿದ್ದ 2 ಕೋಟಿಗೂ ಅಧಿಕ ಅನುದಾನದ ಹಣದ ಪೈಕಿ 1.47 ಕೋಟಿ ರೂ ಬಳಕೆಯಾಗದೆ ಸರ್ಕಾರದ ಬೊಕ್ಕಸಕ್ಕೆ ವಾಪಸ್ ಹೋಗಿದೆ.

news18-kannada
Updated:November 2, 2020, 7:16 AM IST
ಬೀದರ್ ಜಿಲ್ಲಾಸ್ಪತ್ರೆ ಬೇಜವಾಬ್ದಾರಿ; ಬಡವರಿಗೆ ಸೇರಬೇಕಾದ 1.47 ಕೋಟಿ ಅನುದಾನ ಸರ್ಕಾರಕ್ಕೆ ವಾಪಸ್
ಬೀದರ್​ನ ಬ್ರಿಮ್ಸ್ ಆಸ್ಪತ್ರೆ
  • Share this:
ಬೀದರ್(ನ. 01): ಹಿಂದುಳಿದ ವರ್ಗದ ಬಡ ವೈದ್ಯಕೀಯ ವಿದ್ಯಾರ್ಥಿಗಳ ಕಲ್ಯಾಣಕ್ಕೆ ಹಾಗೂ ಬಡವರ ಚಿಕಿತ್ಸಾ ವೆಚ್ಚಕ್ಕೆ ಸರಕಾರ ಬೀದರ್​ನ ಬ್ರಿಮ್ಸ್ ಮೆಡಿಕಲ್ ಕಾಲೇಜು ಹಾಗೂ ಜಿಲ್ಲಾಸ್ಪತ್ರೆಗೆ ನೀಡಿದ ಹಣ ಬಳಕೆಯಾಗದೆ ಸರಕಾರದ ಬೊಕ್ಕಸಕ್ಕೆ ವಾಪಸ್ಸಾಗಿದೆ.

ಕಳೆದ ಮೂರು ವರ್ಷಗಳಲ್ಲಿ ಬೀದರ್ ಜಿಲ್ಲಾಸ್ಪತ್ರೆ ಬ್ರಿಮ್ಸ್ ಮೇಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಬಳಕೆಗೆಂದು ಸರಿ ಸುಮಾರು ಎರಡೂ ಕೋಟಿಗೂ ಅಧಿಕ ಹಣವನ್ನು ರಾಜ್ಯ ಸರಕಾರ ಎಸ್​ಸಿಪಿ ಹಾಗೂ ಟಿಎಸ್​ಪಿ ಯೋಜನೆಯಡಿ ನೀಡಿತ್ತು. ಹೀಗೆ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಹಣವನ್ನು ಕಾಲೇಜಿನ ಮುಖ್ಯಸ್ಥರು ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿರುವ ಹಿಂದುಳಿದ ವಿದ್ಯಾರ್ಥಿಗಳಿಗೆ ಸ್ಕಾಲರ್​ಶಿಪ್ ನೀಡಲು, ಕಲಿಕಾ ಸಾಮಗ್ರಿ ಕೊಳ್ಳಲು, ಲ್ಯಾಪ್ ಟಾಪ್ ಖರೀದಿಸಲು ಬಳಕೆ ಮಾಡಬೇಕು. ಜೊತೆಗೆ ಈ ಆಸ್ಪತ್ರೆಯಲ್ಲಿ ಹಿಂದುಳಿದ ವರ್ಗದವರಿಗೆ ಚಿಕಿತ್ಸೆಗೆ ಬಂದಾಗ ಸೂಕ್ತ ದಾಖಲೆ ಒದಗಿಸಿದರೆ ಅವರಿಗೆ ಔಷಧಿಗಳು, ದೊಡ್ಡ ಖಾಯಿಲೆಗಳ ಚಿಕಿತ್ಸಾ ವೆಚ್ಚಕ್ಕೆ ಇದೇ ಮೀಸಲಿಟ್ಟ ಹಣವನ್ನು ಬಳಕೆ ಮಾಡಬೇಕು. ಆದರೆ ಕಳೆದ ಮೂರು ವರ್ಷಗಳಲ್ಲಿ ಬೀದರ್ ಬ್ರೀಮ್ಸ್ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು ಇದ್ಯಾವುದೇ ಕೆಲಸವನ್ನು ಸಮರ್ಪಕವಾಗಿ ಮಾಡದ್ದರಿಂದ 1.40 ಕೋಟಿ ರೂ ಹಣ ಬಳಕೆಯಾಗದೆ ಸರಕಾರದ ಬೊಕ್ಕಸಕ್ಕೆ ವಾಪಾಸ್ ಹೋಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಎಂಇಎಸ್​ನಿಂದ ಕರಾಳ ದಿನ; ನಿಯಮಮೀರಿ ರಾಜ್ಯೋತ್ಸವ ಆಚರಿಸಿದ ಕರವೇಗೆ ಲಾಠಿ ರುಚಿ

2017 ರಿಂದ 2020ರವರೆಗೆ ಸರಕಾರ ನೀಡಿದ ಅನುದಾನವನ್ನು ಗಮನಿಸುವುದಾದರೆ ಎಸ್​ಸಿಪಿ ಯೋಜನೆಯಡಿ ರಾಜ್ಯ ಸರಕಾರ ಮೂರು ವರ್ಷಗಳಲ್ಲಿ ಒಟ್ಟು 1.51 ಕೋಟಿ ಅನುದಾನ ನೀಡಿತ್ತು. ಅದರಲ್ಲಿ ಬಳಕೆಯಾಗಿದ್ದು ಕೇವಲ 62 ಲಕ್ಷ ರೂಪಾಯಿ ಮಾತ್ರ. ಇನ್ನು ಟಿಎಸ್​ಪಿ ಯೋಜನೆ ಅಡಿ 86 ಲಕ್ಷ ಅನುದಾನ ನೀಡಿದರೆ ಅದರಲ್ಲಿ ಕೇವಲ 28 ಲಕ್ಷ ರೂಪಾಯಿ ಮಾತ್ರ ವೆಚ್ಚವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಈ ಎರಡೂ ಯೋಜನೆ ಅಡಿ ಒಟ್ಟು 2.37 ಕೋಟಿ ಅನುದಾನ ಬ್ರಿಮ್ಸ್ ಗೆ ಬಂದರೆ ಖರ್ಚಾಗಿದ್ದು ಕೇವಲ 90 ಲಕ್ಷ ರೂಪಾಯಿ ಮಾತ್ರ. ಇದರಿಂದಾಗಿ 2017 ರಿಂದ 2020ರ ಅಕ್ಟೋಬರ್​ವರೆಗೆ ಬಡವರ ಏಳ್ಗೆಗೆ ಬಳಕೆಯಾಗಬೇಕಾದ 1.47 ಕೋಟಿ ರೂಪಾಯಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ವಾಪಾಸ್ ಸರಕಾರದ ಬೊಕ್ಕಸಕ್ಕೆ ಹೋಗಿದೆ. ಈ ಭಾಗದ ಜನಪ್ರತಿನಿಧಿಗಳ ಅಸಮಾಧಾನಕ್ಕೂ ಕಾರಣವಾಗಿದೆ.

ಈ ಬಗ್ಗೆ ಕೂಡಲೇ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಪತ್ರ ಬರೆದು ಸಂಬಂಧಪಟ್ಟವರ ಮೇಲೆ ಕ್ರಮ ತೆಗೆದುಕೊಳ್ಳಲು ಆಗ್ರಹಿಸುತ್ತೇನೆ ಎನ್ನುತ್ತಾರೆ ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ.

ವರದಿ: ಸಿದ್ದಪ್ಪ ಸತ್ಯಣ್ಣನವರ್
Published by: Vijayasarthy SN
First published: November 2, 2020, 7:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading