Bhootaradhane: ರಾಕ್ಷಸನನ್ನು ಕೊಂದು ಪರಿಶುದ್ಧತೆಗಾಗಿ ಬೆಂಕಿ ಸ್ನಾನ, ಅಗ್ನಿಯ ಜೊತೆ ದೈವದಾಟ ಕಂಡು ಬೆರಗಾದ ಜನ

ಕರಾವಳಿಯ ಕೆಲ ಭಾಗದಲ್ಲಿ ಮೂಕಾಂಬಿಕಾ ಗುಳಿಗ ದೈವ ಕೋಲ ನಡೆಸಲಾಗುತ್ತದೆ. ಇಲ್ಲಿ ದೈವವು ರಕ್ಷನನ್ನು ಕೊಂದು ಪರಿಶುದ್ಧಿಯಾಗಲು ಬೆಂಕಿ ಸ್ನಾನ ಮಾಡುತ್ತೆ.

ದೈವಾರಾಧನೆ

ದೈವಾರಾಧನೆ

  • Share this:
ದಕ್ಷಿಣ ಕನ್ನಡ (ಮಾ.2):  ಭೂತಾರಾಧನೆಗೆ (Worship) ಕರಾವಳಿಯಲ್ಲಿ ಹೆಚ್ಚಿನ ಮಹತ್ವವಿದ್ದು, ಸುಮಾರು 400 ಕ್ಕೂ ಹೆಚ್ಚು ವಿವಿಧ ಪ್ರಕಾರದ ದೈವಗಳ ಆರಾಧನೆಯನ್ನು ಇಲ್ಲಿನ ಜನ ಆಚರಿಸಿಕೊಂಡು ಬರುತ್ತಿದ್ದಾರೆ. ಮುಖ್ಯವಾಗಿ ದಕ್ಷಿಣ ಕನ್ನಡ, ಉಡುಪಿ (Udupi) ಮತ್ತು ಕೇರಳ (Kerala) ಭಾಗದಲ್ಲಿ ಭೂತಾರಾಧನೆಯನ್ನು ಆಚರಿಸಲಾಗುತ್ತಿದೆ. ಒಂದು ದೈವದ ಆಚರಣೆ, ಇನ್ನೊಂದು ದೈವದ ಆಚರಣೆಗಿಂತ ವಿಭಿನ್ನವಾಗಿದ್ದು, ಇದೇ ಜನರ ಆಕರ್ಷಣೆಯ ಪ್ರಮುಖ ಕೇಂದ್ರ ಬಿಂದುವೂ ಆಗಿದೆ. ಮೂಕಾಂಬಿಕ (Mookambika) ಗುಳಿಗ ದೈವದ ಉತ್ಸವ ಕೊಂಚ ವಿಭಿನ್ನವಾಗಿದೆ. ಬೆಂಕಿಯಲ್ಲಿ ದೈವದ ಪಾತ್ರಧಾರಿ ಬೀಳುಯತ್ತಾರೆ. ಬೆಂಕಿಯ ಕೆನ್ನಾಲಿಯಲ್ಲಿ ಹೊರಳಾಗುವುದು ಈ ದೈವದ ಕೋಲದ ವಿಶೇಷತೆಯಾಗಿದೆ. ಅನಾಚಾರಿಗಳನ್ನು ಕೊಂದ ಬಳಿಕ ಬೆಂಕಿಯಲ್ಲಿ ಸ್ನಾನ ಮಾಡಿ ಪರಿಶುದ್ಧವಾಗುವುದು ದೈವಗಳ ಈ ಬೆಂಕಿಯಾಟದ ಉದ್ಧೇಶವೂ ಆಗಿದೆ. 

ದಕ್ಷಿಣ ಕನ್ನಡ, ಉಡುಪಿ, ಕೇರಳವನ್ನು ಕೇಂದ್ರವಾಗಿಸಿಕೊಂಡು ಆಚರಣೆಯಲ್ಲಿರುವ ಭೂತಾರಾಧನೆ ವಿಶೇಷ ಮಹತ್ವವಿದೆ. ರಾಜ್ಯದ ಕರಾವಳಿ ಭಾಗದಲ್ಲಿ ಆಚರಣೆಯಲ್ಲಿರುವ ದೈವಾರಾಧನೆಗೂ, ಕೇರಳ ರಾಜ್ಯದ ಹಲವು ಭಾಗಗಳಲ್ಲಿ ಆಚರಣೆಯಲ್ಲಿರುವ ದೈವಾರಾಧನೆಗೂ ವ್ಯತ್ಯಾಸವಿದ್ದರೂ, ಕೆಲವೊಂದು ವಿಚಾರಗಳಲ್ಲಿ ಸಾಮಿಪ್ಯವೂ ಇದೆ. ದೇವರಿಗಿಂತ ಮುಖ್ಯ ಸ್ಥಾನವನ್ನು ಈ ಭಾಗದಲ್ಲಿ ದೈವಗಳಿಗೆ ನೀಡಲಾಗುತ್ತಿದ್ದು, ದೇವರ ಗಣಗಳ ರೂಪದಲ್ಲಿ ಈ ದೈವಗಳನ್ನು ಆರಾಧಿಸಲಾಗುತ್ತಿದೆ.

ಕರಾವಳಿ ಭಾಗದಲ್ಲಿ ದೈವಾರಾಧನೆ

ಕರಾವಳಿ ಭಾಗದಲ್ಲಿ ಸುಮಾರು 400 ಕ್ಕೂ ಮಿಕ್ಕಿದ ವಿವಿಧ ಪ್ರಕಾರದ ದೈವಗಳನ್ನು ಆರಾಧಿಸಲಾಗುತ್ತಿದ್ದು, ವರ್ಷಕ್ಕೆ ಒಂದು ದಿನ ಈ ದೈವಗಳಿಗೆ ಕೋಲವನ್ನೂ ( ಉತ್ಸವ ) ನೆರವೇರಿಸಲಾಗುತ್ತದೆ. ಹೀಗೆ ಆರಾಧಿಸುವ ಅತ್ಯಂತ ವಿಶೇಷವಾಗಿರುವ ದೈವಗಳಲ್ಲಿ ಮೂಕಾಂಬಿಕಾ ಗುಳಿಗ ದೈವವೂ ಒಂದಾಗಿದೆ. ಕೇರಳದ ಕೆಲವು ಭಾಗದಲ್ಲಿ ಹಾಗೂ ಕರಾವಳಿಯ ಕೆಲವು ಭಾಗದಲ್ಲಿ ಮಾತ್ರ ಈ ಮೂಕಾಂಬಿಕಾ ಗುಳಿಗ ದೈವಕ್ಕೆ ಕೋಲವನ್ನು (ಉತ್ಸವ) ನಡೆಸಲಾಗುತ್ತದೆ'

ಇದನ್ನೂ ಓದಿ: Naveen parents: ‘ಕೊನೇ ಬಾರಿ ನನ್ನ ಮಗನ ಮುಖ ತೋರಿಸಿ’ ಅಗಲಿದ ಮಗನ ನೆನೆದು ಹೆತ್ತ ಕರುಳಿನ ಆಕ್ರಂದನ

ಮೂಕಾಸುರನೆಂಬ ರಾಕ್ಷಸನ ವಧೆ

ಕೊಲ್ಲೂರಿನಲ್ಲಿ ದೇವಿಯು ಅವತಾರವೆತ್ತಿ, ಮೂಕಾಸುರನೆಂಬ ರಾಕ್ಷಸನ ವಧೆ ಮಾಡುವ ಸಂದರ್ಭದಲ್ಲಿ ಮೂಕಾಸುರನ ವಧೆ ಮಾಡಿದ ಮಾರಣಕಟ್ಟೆಯಲ್ಲಿ ಶಿವ ಧೂತನಾದ ಗುಳಿಗ ಅದೇ ಸ್ಥಳದಲ್ಲಿ ನೆಲೆಸಿದ್ದನು. ಶಿವನ ಹಾಗೂ ದೇವಿಯ ಪ್ರೀತಿ ಪಾತ್ರನಾದ ಗುಳಿಗನಿಗೆ ದೇವಿಯ ಅನುಗ್ರಹದಿಂದ ಬ್ರಹ್ಮಲಿಂಗೇಶ್ವರನಾಗಿ ಆರಾಧನೆಗೆ ಪಾತ್ರವಾದ ಮೂಕಾಸುರನ ಬಲಭಾಗದಲ್ಲಿ ಗುಳಿಗನಿಗೂ ಆರಾಧನೆ ಮಾಡುವಂತೆ  ದೇವಿ ಆಜ್ಞೆಯನ್ನೂ ನೀಡಿದ್ದಳಂತೆ ಎನ್ನುತ್ತಾರೆ ದೈವ ನರ್ತಕ ರಾಮ ಖಂಡಿಗೆ.

ಆಚರಣೆ ಹಿಂದಿದೆ ಪೌರಾಣಿಕ ಇತಿಹಾಸ  

ಈ ನಡುವೆ ಕೊಲ್ಲೂರಿನ ತಂತ್ರಿಯೋರ್ವರು ಕೇರಳಕ್ಕೆ ಶಾಂತಿಪೂಜೆ ನೆರವೇರಿಸಲು ತನ್ನ ಪತ್ನಿಯೊಂದಿಗೆ ಹೊರಟಿದ್ದರು. ಈ ಸಂದರ್ಭದಲ್ಲಿ ಗುಳಿಗ ದೈವವೂ ತಂತ್ರಿಯವರ ರಕ್ಷಣೆಗಾಗಿ ಕೇರಳಕ್ಕೆ ಹೊರಟಿದೆ. ಕೇರಳ ಬರುವ ಮಾರ್ಗ ಮಧ್ಯೆ ತಂತ್ರಿಯವರ ಪತ್ನಿ ಮೂಕಾಂಬಿಕೆಯನ್ನು ವ್ಯಕ್ತಿಯೋರ್ವ ಅತ್ಯಾಚಾರ ನಡೆಸಲು ಯತ್ನಿಸುತ್ತಾನೆ.

ಇದನ್ನೂ ಓದಿ: ಅಯೋಧ್ಯೆ ದಾಖಲೆ ಮುರಿದು ಹೊಸ Guinness Record​ ಬರೆದ ಉಜ್ಜಯಿನಿ; 10 ನಿಮಿಷದಲ್ಲಿ ಬೆಳಗಿದ 11. 71 ಲಕ್ಷ ಹಣತೆ

ಇದರಿಂದ ನೊಂದ ಮೂಕಾಂಬಿಕೆ ನೀರಿಗೆ ಹಾರಿ ಆತ್ಮಹತ್ಯೆ ಮಾಡಿದ ಸಂದರ್ಭದಲ್ಲಿ ಆಕೆಯ ಆತ್ಮ ಗುಳಿಗ ದೈವದೊಂದಿಗೆ ಸೇರಿಕೊಳ್ಳುತ್ತದೆ. ಗುಳಿಗನೊಂದಿಗೆ ಸೇರಿಕೊಂಡ ಮೂಕಾಂಬಿಕೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯ ಇಡೀ ಕುಟುಂಬವನ್ನೇ ನಾಶ ಮಾಡಿದ್ದರು. ಆ ಬಳಿಕ ಮೂಕಾಂಬಿಕಾ ಗುಳಿಗನಾಗಿ ಆರಾಧಿಸಲ್ಪಡುವ ಮೂಲಕ ಕರಾವಳಿಯ ಅತ್ಯಂತ ಪ್ರಭಾವಿ ದೈವವಾಗಿ ಹೆಸರು ಪಡೆದುಕೊಂಡಿದೆ.

ಮೂಕಾಂಬಿಕಾ ಗುಳಿಗ ದೈವದ ಉತ್ಸವ

ಈ ಘಟನೆಯ ಚಿತ್ರಣವನ್ನೇ ಮೂಕಾಂಬಿಕಾ ಗುಳಿಗ ದೈವದ ಉತ್ಸವದಂದು ದೈವಗಳು ತೋರಿಸಿಕೊಡುತ್ತವೆ. ಅಡಿಕೆ ಮರಗಳನ್ನು ಕಡಿದು, ಮರದ ನೂರಾರು ತೊಲೆಗಳನ್ನು ಸೇರಿಸಿ, ಅವುಗಳಿಗೆ ಬೆಂಕಿ ಹಚ್ಚಲಾಗುತ್ತದೆ. ಆ ಬೆಂಕಿಯಲ್ಲಿ ದೈವದ ಪಾತ್ರಧಾರಿ ಬೀಳುವ, ಮಲಗುವ, ಕುಳಿತುಕೊಳ್ಳುವ ಹೀಗೆ ಹಲವು ರೀತಿಯಲ್ಲಿ ಬೆಂಕಿಯ ಕೆನ್ನಾಲಿಯಲ್ಲಿ ಹೊರಳಾಗುವುದು ಈ ದೈವದ ಕೋಲದ ವಿಶೇಷತೆಯಾಗಿದೆ. ಅನಾಚಾರಿಗಳನ್ನು ಕೊಂದ ಬಳಿಕ ಬೆಂಕಿಯಲ್ಲಿ ಸ್ನಾನ ಮಾಡಿ ಪರಿಶುದ್ಧವಾಗುವುದು ದೈವಗಳ ಈ ಬೆಂಕಿಯಾಟದ ಉದ್ಧೇಶವೂ ಆಗಿದೆ ಎನ್ನುವುದು ದೈವಾರಾಧನೆಯಿಂದ ತಿಳಿದು ಬರುತ್ತದೆ.
Published by:Pavana HS
First published: