ಯಾದಗಿರಿ: ಭೀಮಾನದಿ ಪ್ರವಾಹಕ್ಕೆ ತುತ್ತಾಗಿ ಹಾನಿಯಾದರು ಸರಕಾರ ಮಾತ್ರ ಇನ್ನೂ ಸಂತ್ರಸ್ತರಿಗೆ ಸರಿಯಾಗಿ ಪರಿಹಾರದ ಹಣ ನೀಡುವ ಕಾರ್ಯ ಮಾಡಿಲ್ಲ. ಇದರಿಂದ ಸಂತ್ರಸ್ತರು ಪರಿಹಾರದ ಹಣಕ್ಕಾಗಿ ಅಲೆದಾಡುತ್ತಿದ್ದಾರೆ. ಈಗಾಗಲೇ ಪ್ರವಾಹ ಘಟನೆ ಜರುಗಿ ತಿಂಗಳು ಕಳೆದರೂ ನಿರಾಶ್ರಿತರಿಗೆ ಅನುಕೂಲ ಮಾಡಬೇಕಾದ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ.
ಖುದ್ದು ಕಂದಾಯ ಸಚಿವ ಆರ್.ಅಶೋಕ್ ಅವರು ಪ್ರವಾಹದಿಂದ ಮನೆಯೊಳಗೆ ನೀರು ನುಗ್ಗಿ ಹಾನಿಗೊಳಗಾದ ಕುಟುಂಬಸ್ಥರಿಗೆ ಒಂದು ವಾರದೊಳಗೆ 10 ಸಾವಿರ ರೂ. ಪರಿಹಾರ ನೀಡಲು ಸೂಚಿಸಿದ್ದರು. ಅಧಿಕಾರಿಗಳು ಮಾತ್ರ ಸಚಿವರ ಸೂಚನೆಗೂ ಕ್ಯಾರೇ ಎನ್ನುತ್ತಿಲ್ಲ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದ 24 ಸಂತ್ರಸ್ತರ ಕುಟುಂಬಸ್ಥರು ಈಗ ಕಂಗಲಾಗಿದ್ದಾರೆ. ಭೀಮಾನದಿ ಪ್ರವಾಹಕ್ಕೆ ನಾಯ್ಕಲ್ ಗ್ರಾಮದಲ್ಲಿ ಕೂಡ 214 ಮನೆಗಳಿಗೆ ನೀರು ನುಗ್ಗಿ ಅಗತ್ಯ ವಸ್ತುಗಳು ಹಾಗೂ ಧವಸ ಧಾನ್ಯ ನೀರು ಪಾಲಾಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಆದರೆ, ಅಧಿಕಾರಿಗಳು 190 ಸಂತ್ರಸ್ತ ಕುಟುಂಬಸ್ಥರಿಗೆ ಮಾತ್ರ ತಲಾ 10 ಸಾವಿರ ರೂ ಪರಿಹಾರದ ಹಣ ಪಾವತಿ ಮಾಡಲಾಗಿದೆ. ಆದರೆ ಉಳಿದ 24 ಕುಟುಂಬಸ್ಥರು ಅಗತ್ಯ ದಾಖಲೆಗಳನ್ನು ಸಲ್ಲಿಸಿದರೂ ಇನ್ನೂ ಹಣ ಪಾವತಿ ಮಾಡಿಲ್ಲ.
ಇದನ್ನು ಓದಿ: ದೀಪಾವಳಿ ಬಳಿಕ ಶಾಲಾ ಆರಂಭ ದಿನಾಂಕ ನಿಗದಿ?; ಆರ್ಟಿಇ ವಿದ್ಯಾರ್ಥಿ, ಪೋಷಕರ ಸಂಘದಿಂದ ಸರ್ಕಾರಕ್ಕೆ ಸಲಹೆ
ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ನಬೀಸಾಬ್ ಮಾತನಾಡಿ, ನಾವು ಎರಡು ಬಾರಿ ದಾಖಲೆಗಳನ್ನು ಕೊಟ್ಟಿದರೂ ಇನ್ನೂ ಸರಕಾರ ಹಣ ಪಾವತಿ ಮಾಡಿಲ್ಲ ಎಂದು ನೋವು ತೊಡಿಕೊಂಡರು. ಅಧಿಕಾರಿಗಳು ವಿವಿಧ ನೆಪಹೇಳಿ ಹಣ ಪಾವತಿ ಮಾಡುತ್ತಿಲ್ಲ. ಅಧಿಕಾರಿಗಳು ತಾರತಮ್ಯ ತೊರುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ವಡಗೇರಾ ತಹಸೀಲ್ದಾರ ಸುರೇಶ ಅಂಕಲಗಿ ಮಾತನಾಡಿ, ಈಗಾಗಲೇ 190 ಜನರಿಗೆ ತಲಾ 10 ಸಾವಿರ ರೂ. ಪರಿಹಾರ ಹಣ ಪಾವತಿ ಮಾಡಲಾಗಿದೆ. ಇನ್ನೂ 24 ಜನರಿಗೆ ಹಣ ಪಾವತಿ ಮಾಡುವುದು ಕೆಲ ಕಾರಣಗಳಿಂದ ವಿಳಂಬವಾಗಿದ್ದು, ಆದಷ್ಟು ಬೇಗ ಹಣ ಪಾವತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಸರಕಾರ ವಿಳಂಬ ಮಾಡದೆ ಶೀಘ್ರವಾಗಿ ಹಣ ಪಾವತಿ ಮಾಡಿ ಸಂತ್ರಸ್ತರಿಗೆ ಅನುಕೂಲ ಮಾಡಿಕೊಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ