HOME » NEWS » District » BHATKAL POLICE THEMSELVES PREPARE FOOD TO FEED DESTITUTE HK

ಲಾಠಿ‌ ಹಿಡಿಯುತ್ತಿದ್ದ ಕೈ ಅಡಿಗೆ ಸೌಟು ಹಿಡಿಯಿತು; ನಿರ್ಗತಿಕರ ಹಸಿವಿನ‌ ಹೊಟ್ಟೆಗೆ ಅನ್ನ ನೀಡಿತು

ಈಗಾಗಲೆ ಲಾಕ್ ಡೌನ್ ನಿಂದ ಸಮಸ್ಯೆ ಎದುರಿಸುತ್ತಿರುವ ನೂರಕ್ಕೂ ಹೆಚ್ಚು ಜನರಿಗೆ ದಿನನಿತ್ಯಕ್ಕೂ ಊಟ ಬಡಿಸುವ ಕೆಲಸ ಪೊಲೀಸ್ ಇಲಾಖೆಯಿಂದ ನಡೆಯುತ್ತಿದೆ.

news18-kannada
Updated:May 27, 2020, 3:58 PM IST
ಲಾಠಿ‌ ಹಿಡಿಯುತ್ತಿದ್ದ ಕೈ ಅಡಿಗೆ ಸೌಟು ಹಿಡಿಯಿತು; ನಿರ್ಗತಿಕರ ಹಸಿವಿನ‌ ಹೊಟ್ಟೆಗೆ ಅನ್ನ ನೀಡಿತು
ಊಟ ಬಡಿಸುತ್ತಿರುವ ಪೊಲೀಸರು
  • Share this:
ಕಾರವಾರ(ಮೇ. 27): ಪೊಲೀಸರು ಅಂದಮೇಲೆ ಭಯ ಇದ್ದೆ ಇರುತ್ತದೆ. ಅದರಲ್ಲೂ ಈ ಕೊರೋನಾ ಲಾಕ್​ಡೌನ್ ಸಂದರ್ಭದಲ್ಲಿ ಅವರು ಬೀಸಿದ ಲಾಠಿಗೆ ಎಂತಹವರಿಗೂ ಭಯ ಹುಟ್ಟೇ ಹುಟ್ಟುತ್ತೆ. ಆ ಭಯ ಹುಟ್ಟಿಸುವ ನಡುವೆಯೂ ಮಾನವೀಯತೆ ಇದೆ ಎನ್ನುವುದು ಕೂಡಾ ಅಷ್ಟೆ ಸತ್ಯ. ಇದಕ್ಕೆ ನಿದರ್ಶನ ಎಂಬಂತೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪೋಲಿಸರು ಮಾದರಿ ಆಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪೊಲೀಸರು ಲಾಠಿ ಬೀಸಿ ಬಂದೋ ಬಸ್ತಿಗೂ ಸೈ ಜತಗೆ ರುಚಿ ರುಚಿ ಆದ ಅಡುಗೆ ತಯಾರಿಸಿ ಊಟ ಬಡಿಸುವುದರಲ್ಲೂ ಸೈ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಭಟ್ಕಳ ಈಗಾಗಲೆ ನಿರ್ಬಂಧಿತ ವಲಯ ಎಂದು ಘೋಷಣೆ ಮಾಡಿ ಇಲ್ಲಿ ಎಲ್ಲವೂ ಸ್ತಬ್ದವಾಗಿದೆ. ಹೀಗಿರುವಾಗ ಒಂದೊಪ್ಪೊತ್ತಿನ ಊಟಕ್ಕೆ ಇಲ್ಲಿನ ಕೊರೋನಾ ವಾರಿಯರ್ಸ್‌ ಗಳಾದ ವೈದ್ಯಕೀಯ ಸಿಬ್ಬಂದಿ ಮತ್ತು ಲಾಕ್ ಡೌನ್ ನಿಂದ ಸಮಸ್ಯೆ ಎದುರಿಸುತ್ತಿರುವ ಅದೆಷ್ಟೊ ನಿರ್ಗತಿಕ ಜನರಿಗೆ ಭಟ್ಕಳ ಪೊಲೀಸರು ಅಡಿಗೆ ಮಾಡಿ ಊಟ ಹಾಕುವ ಕೆಲಸ ಮಾಡುತ್ತಿದ್ದಾರೆ ಈ ಕಾರ್ಯ ಕಳೆದ ಒಂದು ತಿಂಗಳಿಂದ ನಡೆದುಕೊಂಡು ಬಂದಿದೆ.

ಇನ್ನು ಪೊಲೀಸರು ಮಾಡುತ್ತಿರುವ ಈ ಮಾವೀಯತೆಯ ಕೆಲಸಕ್ಕೆ ಶ್ಲಾಘನೀಯ ಮಾತು ಕೇಳಿ ಬರುತ್ತಿವೆ. ಕೇವಲ ಲಾಠಿ ಬೀಸುವುದಲ್ಲದೇ ಪೊಲೀಸ್ ಕೆಲಸ ಅವರಲ್ಲಿ ಮಾವೀಯತೆ ಕೂಡಾ ಇದೆ ಎನ್ನುವುದಕ್ಕೆ ಈ ಕಷ್ಟದ ಸಮಯದಲ್ಲಿ ಅನ್ನ ನೀಡುತ್ತಿರುವುದು ಉತ್ತಮ ನಿದರ್ಶನ ಎನ್ನವುದು ಭಟ್ಕಳದ ಗಲ್ಲಿಗಲ್ಲಿಗಳಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ. ಈಗಾಗಲೆ ಲಾಕ್ ಡೌನ್ ನಿಂದ ಸಮಸ್ಯೆ ಎದುರಿಸುತ್ತಿರುವ ನೂರಕ್ಕೂ ಹೆಚ್ಚು ಜನರಿಗೆ ದಿನನಿತ್ಯಕ್ಕೂ ಊಟ ಬಡಿಸುವ ಕೆಲಸ ಪೊಲೀಸ್ ಇಲಾಖೆಯಿಂದ ನಡೆಯುತ್ತಿದೆ.

ಇದನ್ನೂ ಓದಿ : ಸಿದ್ದರಾಮಯ್ಯ, ಡಿಕೆಶಿಗೆ ಶಿವಮೊಗ್ಗ ನಗರಸಭೆಯಲ್ಲಿ ಕಾಂಗ್ರೆಸ್ ಮಾಡಿದ ಕರ್ಮಕಾಂಡ ನೆನಪಿಸಿದ ಈಶ್ವರಪ್ಪ

ಒಟ್ಟಾರೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪೊಲೀಸರ ಈ ಉತ್ತಮ ಕಾರ್ಯ ಇತರ ಪೊಲೀಸ್ ಸಿಬ್ಬಂದಿಗೂ ಮಾದರಿ. ಮಾನವೀಯತೆಯ ನೆಲೆಯಲ್ಲಿ ಕಷ್ಟದ ಜೀವಗಳಿಗೆ ತುತ್ತಿನ ಚೀಲ ತುಂಬಿಸುತ್ತಿರುವ ಭಟ್ಕಳ ಪೋಲಿಸರ ಕಾರ್ಯ ಹೀಗೆ ಮುಂದುವರೆಯಲಿ.
First published: May 27, 2020, 3:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories