ಭದ್ರಾವತಿ ಕಬ್ಬಿಣ ಕಾರ್ಖಾನೆ ಅಭಿವೃದ್ಧಿ ಮರೀಚಿಕೆ; ಮುಚ್ಚುವ ಹಂತ ತಲುಪಿದ 102 ವರ್ಷ ಇತಿಹಾಸದ ಕಾರ್ಖಾನೆ
102 ವರ್ಷದ ಇತಿಹಾಸ ಇರುವ ಕಾರ್ಖಾನೆಯನ್ನು ಉಳಿಸಿಕೊಳ್ಳಲು ಈಗ ಹೋರಾಟವೊಂದೇ ದಾರಿ ಎಂಬ ತಿರ್ಮಾನಕ್ಕೆ ಕಾರ್ಮಿಕರು ಬಂದಿದ್ದಾರೆ. ಭದ್ರಾವತಿ ತಾಲೂಕಿನ ಜನರನ್ನು ಒಟ್ಟಿಗೆ ಸೇರಿಸಿಕೊಂಡು ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ರಾಘವೇಂದ್ರ ಸಂಸದರಿದ್ದಾರೆ, ಯಡಿಯೂರಪ್ಪ ಸಿಎಂ ಆಗಿದ್ದಾರೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಈಗಲಾದರೂ ಯಡಿಯೂರಪ್ಪ, ಕೇಂದ್ರದ ಮೇಲೆ ಒತ್ತಡ ಹಾಕಬೇಕು. ಕಾರ್ಖಾನೆ ಉಳಿವಿಗೆ ಮುಂದಾಗಬೇಕು ಎಂಬುದು ಭದ್ರಾವತಿ ತಾಲೂಕಿನ ಜನರ ಮನವಿಯಾಗಿದೆ.
news18-kannada Updated:November 15, 2020, 9:41 PM IST

ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ.
- News18 Kannada
- Last Updated: November 15, 2020, 9:41 PM IST
ಶಿವಮೊಗ್ಗ; ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ (ವಿಐಎಸ್ಎಲ್) ಕೊನೆ ಮೊಳೆ ಹೊಡೆಯವ ಹಂತಕ್ಕೆ ಬಂದು ನಿಂತಿದೆ. ಇಂದೋ ಅಥವಾ ನಾಳೆಯೋ ಕಾರ್ಖಾನೆ ಮುಚ್ಚುವುದು ಗ್ಯಾರಂಟಿಯಾಗಿದೆ. ಈಗಾಗಲೇ ಕೇಂದ್ರ ಸಚಿವರು ಸಂಸತ್ನಲ್ಲಿ ಬಿಡ್ದಾರರು ಕಾರ್ಖಾನೆ ಖರೀದಿಗೆ ಮುಂದೆ ಬಂದಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಾರಂತೆ.
ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ತಯಾರಾದ ಕಬ್ಬಿಣ ಮತ್ತು ಉಕ್ಕು ದೇಶದ ರಕ್ಷಣಾ ಇಲಾಖೆಗೆ ನೀಡಲಾಗುತ್ತಿತ್ತು. ಅಷ್ಟೊಂದು ಉತೃಷ್ಠವಾದ ಕಬ್ಬಿಣ ಮತ್ತು ಉಕ್ಕು ಇಲ್ಲಿ ತಯಾರಾಗುತ್ತಿತ್ತು. ಕಾರ್ಖಾನೆ ಮತ್ತಷ್ಠು ಅಭಿವೃದ್ಧಿ ಕಾಣಲಿ ಎಂದು ರಾಜ್ಯ ಸರ್ಕಾರ 1989-90 ರಲ್ಲಿ ಕೇಂದ್ರ ಸರ್ಕಾರ ಮತ್ತು ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ಕೇವಲ 1 ರೂಪಾಯಿಗೆ ಕಾರ್ಖಾನೆ ಸೇರಿದಂತೆ ಅದರ ಎಲ್ಲಾ ಆಸ್ತಿಗಳನ್ನು ನೀಡಿತ್ತು. ಅದರೆ ಆಗಿದ್ದೇ ಬೇರೆ. ಸೇಲ್ ಇಲ್ಲಿಯವರೆಗೆ 700 ಕೋಟಿ ಹಣ ಹೂಡಿಕೆ ಮಾಡಿದ್ದು ಬಿಟ್ಟರೆ, ಕಾರ್ಖಾನೆ ಬಗ್ಗೆ ನಿರ್ಲಕ್ಷ, ವಹಿಸಿದ್ದೇ ಹೆಚ್ಚು. 1918- 1919 ರಲ್ಲಿ ಆರಂಭವಾದ ಕಾರ್ಖಾನೆಯಲ್ಲಿ 19 ಸಾವಿರಕ್ಕೂ ಹೆಚ್ಚು ಕಾರ್ಮಿಕರಿದ್ದರು. ಸದ್ಯ 220 ಜನ ಖಾಯಂ, 1300 ಜನ ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಉಕ್ಕು ಖಾತೆ ಸಚಿವರಾಗಿದ್ದ ಚೌಧರಿ ಬೀರೇಂದ್ರ ಸಿಂಗ್ 6 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿ ಕಾರ್ಖಾನೆ ಅಭಿವೃದ್ಧಿ ಪಡಿಸುತ್ತೇವೆ ಎಂದು 2018 ವಿಧಾನಸಭೆ ಚುನಾವಣೆ ಸಮಯದಲ್ಲಿ ಬಂದು ಆಶ್ವಾಸನೆ ಕೊಟ್ಟು ಹೋಗಿದ್ದರು. ಅದರೆ ಅಲ್ಲಿಂದ ಇಲ್ಲಿಯವರೆಗೆ ಒಂದೇ ಒಂದು ರೂಪಾಯಿ ಬಂದಿಲ್ಲ. 2016 ನವೆಂಬರ್ 29 ರಲ್ಲಿ ಕೇಂದ್ರ ಸರ್ಕಾರದ ಸಂಸದೀಯ ಆರ್ಥಿಕ ವ್ಯಾವಹಾರ ಸಮಿತಿ ಈ ಕಾರ್ಖಾನೆ ನಷ್ಟದಲ್ಲಿದೆ. ಬಂಡವಾಳ ಹಿಂಪಡೆಯುವ ಸಲಹೆ ಮತ್ತು ಸೂಚನೆ ನೀಡಿತ್ತು. ಅದರೂ ಚುನಾವಣೆ ಸಮಯದಲ್ಲಿ ಬಂದಿದ್ದ ಕೇಂದ್ರ ಸಚಿವರು ಕೇಂದ್ರದ ಹಣಕಾಸು ವ್ಯವಹಾರ ಸಂಸದೀಯ ಸಮಿತಿ ಸೂಚನಾ ಪತ್ರವನ್ನು ವಾಪಸ್ ಪಡೆಯುತ್ತೇವೆ ಎಂದು ಭರವಸೆ ನೀಡಿದ್ದರು. ಅದರೆ ಅದು ಆಗಲೇ ಇಲ್ಲ.
ಯಾವಾಗ ಲೋಕಸಭೆ ಚುನಾವಣೆ ಹತ್ತಿರ ಬರುತ್ತೇ ಆಗ ಕೇಂದ್ರದಿಂದ ಸಚಿವರುಗಳು ಬಂದು ಈ ಕಾರ್ಖಾನೆ ನಾಳೆಯೇ ಉದ್ಧಾರ ಮಾಡುತ್ತೇವೆ. 5, 6 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುತ್ತೇವೆ ಎಂದು ಹೇಳಿ ಹೋಗುತ್ತಾರೆ. ಚುನಾವಣೆ ಮುಗಿದು ಫಲಿತಾಂಶ ಬಂದ ಮೇಲೆ ಇದರ ಬಗ್ಗೆ ಯೋಚನೆ ಸಹ ಮಾಡಲ್ಲ. ಯಡಿಯೂರಪ್ಪ ಅವರು ಸಹ ಕಾರ್ಖಾನೆ ಉಳಿಸುತ್ತೇವೆ ಎಂದು ಎರಡು ಮೂರು ಬಾರಿ ಕೇಂದ್ರ ಸಚಿವರನ್ನು ಭದ್ರಾವತಿಗೆ ಕರೆ ತಂದರು. ಭರವಸೆಗಳನ್ನು ನೀಡಿದರು. ಚುನಾವಣೆ ಬಂದ ಸಮಯದಲ್ಲಿ ಕೇಂದ್ರದಿಂದ ಸಚಿವರು ಬಂದು ಕಾರ್ಖಾನೆಗೆ ಅಭಿವೃದ್ಧಿಗೆ ಹಣ ಹೂಡಿಕೆ ಮಾಡುತ್ತೇವೆ ಎಂಬ ಭಾಷಣ ಬಿಗಿದಿದ್ದು ಬಿಟ್ಟರೆ ಹಣ ಮಾತ್ರ ಬರಲಿಲ್ಲ.
ಇದನ್ನು ಓದಿ: ಸತತ 4ನೇ ಅವಧಿಗೆ ನಿತೀಶ್ ಕುಮಾರ್ ಬಿಹಾರದ ಸಿಎಂ; ಬಿಜೆಪಿಯ ಸುಶೀಲ್ ಮೋದಿ ಡಿಸಿಎಂ
ಈಗ ಸಾವಿರಾರು ಕೋಟಿ ಹಣ ಬೇಡವೇ ಬೇಡ. ನಮಗೆ ಕೇವಲ 19 ಕೋಟಿ ಹಣ ಕೊಡಿ. ಇರುವಂತ ಯಂತ್ರಗಳನ್ನೇ ಅಭಿವೃದ್ಧಿ ಪಡಿಸಿಕೊಂಡು, ವರ್ಷಕ್ಕೆ ಸುಮಾರು 200 ಕೋಟಿ ರೂಪಾಯಿ ವ್ಯವಹಾರ ಮಾಡುತ್ತೇವೆ ಎಂದು ಕಾರ್ಮಿಕರು ಬೇಡಿಕೊಂಡರು, ಒಂದೇ ಒಂದು ಪೈಸೆ ಕೊಟ್ಟಿಲ್ಲ. ಗುತ್ತಿಗೆ ನೌಕರರಿಗೆ ತಿಂಗಳಿಗೆ 12 ರಿಂದ 13 ದಿನ ಮಾತ್ರ ಕೆಲಸ ನೀಡಲಾಗುತ್ತಿದೆ. ಬರುವಂತ ಅಲ್ಪ ಸ್ವಲ್ಪ ದುಡಿಮೆಯಲ್ಲೇ ಜೀವನ ನಡೆಸುವಂತಹ ಪರಿಸ್ಥಿತಿ ಬಂದಿದೆ.
102 ವರ್ಷದ ಇತಿಹಾಸ ಇರುವ ಕಾರ್ಖಾನೆಯನ್ನು ಉಳಿಸಿಕೊಳ್ಳಲು ಈಗ ಹೋರಾಟವೊಂದೇ ದಾರಿ ಎಂಬ ತಿರ್ಮಾನಕ್ಕೆ ಕಾರ್ಮಿಕರು ಬಂದಿದ್ದಾರೆ. ಭದ್ರಾವತಿ ತಾಲೂಕಿನ ಜನರನ್ನು ಒಟ್ಟಿಗೆ ಸೇರಿಸಿಕೊಂಡು ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ರಾಘವೇಂದ್ರ ಸಂಸದರಿದ್ದಾರೆ, ಯಡಿಯೂರಪ್ಪ ಸಿಎಂ ಆಗಿದ್ದಾರೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಈಗಲಾದರೂ ಯಡಿಯೂರಪ್ಪ, ಕೇಂದ್ರದ ಮೇಲೆ ಒತ್ತಡ ಹಾಕಬೇಕು. ಕಾರ್ಖಾನೆ ಉಳಿವಿಗೆ ಮುಂದಾಗಬೇಕು ಎಂಬುದು ಭದ್ರಾವತಿ ತಾಲೂಕಿನ ಜನರ ಮನವಿಯಾಗಿದೆ.
ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ತಯಾರಾದ ಕಬ್ಬಿಣ ಮತ್ತು ಉಕ್ಕು ದೇಶದ ರಕ್ಷಣಾ ಇಲಾಖೆಗೆ ನೀಡಲಾಗುತ್ತಿತ್ತು. ಅಷ್ಟೊಂದು ಉತೃಷ್ಠವಾದ ಕಬ್ಬಿಣ ಮತ್ತು ಉಕ್ಕು ಇಲ್ಲಿ ತಯಾರಾಗುತ್ತಿತ್ತು. ಕಾರ್ಖಾನೆ ಮತ್ತಷ್ಠು ಅಭಿವೃದ್ಧಿ ಕಾಣಲಿ ಎಂದು ರಾಜ್ಯ ಸರ್ಕಾರ 1989-90 ರಲ್ಲಿ ಕೇಂದ್ರ ಸರ್ಕಾರ ಮತ್ತು ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ಕೇವಲ 1 ರೂಪಾಯಿಗೆ ಕಾರ್ಖಾನೆ ಸೇರಿದಂತೆ ಅದರ ಎಲ್ಲಾ ಆಸ್ತಿಗಳನ್ನು ನೀಡಿತ್ತು. ಅದರೆ ಆಗಿದ್ದೇ ಬೇರೆ. ಸೇಲ್ ಇಲ್ಲಿಯವರೆಗೆ 700 ಕೋಟಿ ಹಣ ಹೂಡಿಕೆ ಮಾಡಿದ್ದು ಬಿಟ್ಟರೆ, ಕಾರ್ಖಾನೆ ಬಗ್ಗೆ ನಿರ್ಲಕ್ಷ, ವಹಿಸಿದ್ದೇ ಹೆಚ್ಚು.